Puttakkana Makkalu ; ಸಹನಾಗೆ ಸಹಾಯ ಮಾಡಿದ ರಾಮ, ಅಪಾಯದ ಅಂಚಿನಲ್ಲಿ ವಸು ಮಗು
ಸಹನಾ ರಸ್ತೆ ಬದಿ ತಿಂಡಿ ಅಂಗಡಿ ಇಟ್ಟಿದ್ದಾಳೆಈ ತಿಂಡಿ ಸ್ಟಾಲ್ ಬಹಳ ಫೇಮಸ್ ಕೂಡ ಆಗುತ್ತಿದೆ. ಇದರಿಂದಾಗಿ ಅನೇಕ ಜನರು ಸಹನಾ ಅಂಗಡಿಯ ಮುಂದೆ ತಿಂಡಿಗಾಗಿ ಜಮಾಯಿಸುತ್ತಾರೆ. ಇದೆಲ್ಲವನ್ನೂ ನೋಡಿದ ಸಹನಾ ಗೆ ಬಹಳ ಖುಷಿ ಆಗುತ್ತದೆ. ಆಕೆ ಬಹಳ ಖುಷಿಯಿಂದ ತಿಂಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ.ಇತ್ತ ಮ್ಯಾಕ್ಸ್ ವೆಲ್ ಮಾತ್ರ ದೇವಿಪುರಕ್ಕೆ ತೆರಳಿ ಅಲ್ಲಿ ಸಹನಾ ಫೋಟೋ ನೋಡಿ ಶಾಕ್ ಆಗ್ತಾನೆ. ಸಹನಾ ಬೇರೆ ಯಾರೂ ಅಲ್ಲ ಪುಟ್ಟಕ್ಕನ ಮಗಳು ಎಂದು ತಿಳಿದಾಗ ಮಾತ್ರ ಮ್ಯಾಕ್ಸ್ ಗೆ ಬಹಳ ಬೇಸರ ಮಾಡಿಕೊಳ್ತಾನೆ.
ಇನ್ನೂ ಸಹನಾ ಪುಟ್ಟಕ್ಕನ ಪಾಲಿಗೆ ಬದುಕಿದ್ದು ಸತ್ತ ಹಾಗೆಯೇ. ಇನ್ನೂ ಸಹನಾ ಅಂಗಡಿಯಲ್ಲಿ ತಿಂಡಿ ತಿಂದವರು ಆಕೆಯ ಅಡುಗೆಯ ಬಗ್ಗೆ ಖುಷಿ ವ್ಯಕ್ತ ಪಡಿಸುತ್ತಿರುತ್ತಾರೆ. ಇದೇ ಸಮಯದಲ್ಲಿ ಸಹನಾ ಅಂಗಡಿ ಎಂದು ತಿಳಿಯದ ರಾಮ್ ಅದೇ ಅಂಗಡಿಯ ಬಳಿ ಇದೇನಿದು ಇಲ್ಲಿ ನೀವು ಸರ್ಪ್ರೈಸ್ ಆಗಿದ್ದೇನೆ ನಾನು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಹನಾ ಮಾತ್ರ ಏನು ಮಾತನಾಡದೆ ಅಲ್ಲಿ ಇರುತ್ತಾಳೆ.

ಇನ್ನೂ ಸಹನಾ ಜೊತೆ ರಾಮ್ ಮಾತನಾಡುತ್ತಲೇ ಇರುತ್ತಾನೆ. ಇದನ್ನುನೋಡಿದ ಸಹನಾ ರಿಪ್ಲೈ ಕೂಡ ಮಾಡದೇ ಸುಮ್ಮನೆ ಇರುತ್ತಾಳೆ.ಆತನಿಗೆ ಬಹಳ ಬೇಸರ ಇರುತ್ತದೆ . ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ ಎನ್ನುವ ಬೇಸರ ಆತನಿಗೆ ಕಾಡುತ್ತದೆ. ಆದರೂ ಏನು ಮಾಡಲಾಗದ ಸ್ಥಿತಿ ಆತನಿಗೆ ಇರುತ್ತದೆ. ಕೊನೆಗೆ ಸಹನಾ ನೀವು ಇಷ್ಟೆಲ್ಲ ನಮ್ಮ ಅವ್ವನ ಬಗ್ಗೆ ಎಲ್ಲಾ ಮಾತನಾಡುತ್ತೀರಿ ಆದರೆ ನಾನು ಆವತ್ತು ಆಫೀಸ್ ಗೆ ಬಂದಾಗ ಒಂದು ಮಾತು ನೀವು ಏನು ಹೇಳಲಿಲ್ಲ ಅಲ್ವಾ ಎಂದು ಬೇಸರದಿಂದ ಹೇಳುತ್ತಾಳೆ.
ರಾಮನಿಗೆ ನಡೆದ ಘಟನೆ ವಿವರಿಸಿದ ಸಹನಾ
ನನ್ನನ್ನೆ ಮನೆಯಿಂದ ಆಚೆ ಹೋಗುವಂತೆ ಹೇಳಿದ್ದೀರಿ ನೀವು,ನನಗೆ ಬಹಳ ಬೇಸರ ಆಗಿತ್ತು ಎಂದು ಹೇಳಿದಾಗ ರಾಮ, ನನಗೆ ಈ ವಿಚಾರ ನಿಜವಾಗಿಯೂ ತಿಳಿದಿಲ್ಲ ದಯವಿಟ್ಟು ನಾನು ಮಾಡದ ತಪ್ಪಿಗೆ ನನ್ನನ್ನ ಈ ರೀತಿ ಮಾತನಾಡದೆ ನೋಯಿಸಬೇಡಿ ಎಂದು ಹೇಳುತ್ತಾನೆ. ಕೊನೆಗೂ ಸಹನಾ ರಾಮನ ಜೊತೆ ಮಾತನಾಡುತ್ತಾಳೆ. ಹಾಗೆಯೇ ರಾಮ ಕೊಟ್ಟ ಹಣವನ್ನು ಮೊದಲು ನಿರಾಕರಿಸಿದರೆ ಆ ಬಳಿಕ ಆ ಹಣವನ್ನು ತೆಗೆದುಕೊಳ್ಳುತ್ತಾಳೆ.

ರಾಮನ ಒಳ್ಳೆ ಮನಸ್ಸಿಗೆ ಕರಗಿದ ಸ್ನೇಹಾ
ಇನ್ನೂ ವಸು ಮಗು ಜೊತೆಯೇ ಬಹಳ ಸುಂದರವಾದ ಕನಸ್ಸನ್ನು ಹೆಣೆದುಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ ಆಕೆಯ ಸುಂದರವಾದ ಜೀವನದ ಮೇಲೆ ನಂಜಮ್ಮ ನ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಮಗುವಿನ ಜೀವ ತೆಗೆದು ಬಿಡಬೇಕು ಎಂದು ರಾಧಾ ಜೊತೆ ಹೇಳಿ ಆಕೆಯಿಂದ ಕೆಟ್ಟ ಕೆಲಸವನ್ನ ಮಾಡಿಸಿ ಬಿಡುತ್ತಾಳೆ. ಆದರೆ ಇದೆಲ್ಲವನ್ನೂ ನೋಡಿದ ರಾಧಾ ಮಾತ್ರ ಮಗುವಿಗೆ ತೊಂದರೆ ಮಾಡಿರುತ್ತಾರೆ ಇನ್ನೂ ಕಂಠಿ ಮಗುವನ್ನು ಎತ್ತಿಕೊಂಡು ಮುದ್ದಾಡಬೇಕು ಎಂದು ಕಾಯುತ್ತಿರುತ್ತಾನೆ.
ವಸು ಮಗುವಿಗೆ ಅಪಾಯ ತಂದೊಡ್ಡುತ್ತಾಳ ರಾಧಾ..?
ಆಗ ಸ್ನೇಹಾ ಜೊತೆ ಹೀಗೆಯೇ ಮಾತನಾಡುತ್ತಾ ನಿಂತುಕೊಂಡಿರುವಾಗ ಆತನಿಗೆ ವಸು ಜೋರಾಗಿ ಅರಚಾಡುತ್ತಿರುವುದು ಕೇಳಿಸುತ್ತದೆ. ವಸು ಧ್ವನಿ ಕೇಳಿ ವಸು ಬಳಿ ಇಬ್ಬರು ಓಡೋಡಿ ಬರುತ್ತಾರೆ. ಇದನ್ನು ಸ್ನೇಹಾ ಮೆತ್ತಗೆ ವಸು ಜೊತೆ ಕೇಳುತ್ತಾಳೆ ಏನಾಯಿತು ಅತ್ತಿಗೆ ಎಂದಾಗ ನೋಡು ಸ್ನೇಹಾ ಮಗು ಒಂದೇ ಸಮನೆ ಅಳುತ್ತಿದೆ. ಎನು ಮಾಡಿದರು ಅಳು ನಿಲ್ಲಿಸುತ್ತಿಲ್ಲ ಎಂದು ಅಳುತ್ತಾ ಹೇಳಿದಾಗ ಮನೆ ಮಂದಿಗೆ ಆತಂಕ ಆದರೂ ರಾಧಾ ಮಾತ್ರ ಒಳಗೊಳಗೇ ನಗುತ್ತಾಳೆ.


Click it and Unblock the Notifications











