Puttakkana Makkalu ; ಅವ್ವನನ್ನು ಕಾಣದೆ ಕಂಗಾಲಾದ ಸುಮಾ, ಸಹನಾಳನ್ನು ನೆನೆದು ಕಣ್ಣೀರಿಟ್ಟ ಪುಟ್ಟಕ್ಕ..!
ಪುಟ್ಟಕ್ಕ ಮನೆ ಬಿಟ್ಟು ಹೋಗಿರುವುದನ್ನು ನೋಡಿ ಸುಮ ಹಾಗೂ ಗೋಪಾಲನಿಗೆ ದಿಕ್ಕೆ ತೋಚದ ಹಾಗೆ ಆಗಿದೆ. ನಾನು ರಾತ್ರಿ ಎಲ್ಲ ಹಬ್ಬನ ಜೊತೆ ಇದ್ದಿದ್ದರೆ ಅವ್ವ ಖಂಡಿತವಾಗಿಯೂ ಅಕ್ಕನ ಹುಡುಕುತ್ತಾ ಹೊರಟು ಹೋಗುತ್ತಿರಲಿಲ್ಲ ಅಕ್ಕ ಸತ್ತಿದ್ದಾಳೆ ಎಂದು ಹೇಳಿದರು ಕೂಡ ಅವ್ವ ನಂಬುತ್ತಿಲ್ಲ ಅವ್ವನಿಗೆ ಸಹನಕ್ಕ ಇನ್ನೂ ಬದುಕಿದ್ದಾಳೆ ಎನ್ನುವ ನಂಬಿಕೆ. ಆದರೆ ಆ ನಂಬಿಕೆಯಿಂದಲೇ ಪುಟ್ಟಕ್ಕ ಮನೆ ಬಿಟ್ಟು ಹೋಗಿದ್ದಾಳೆ
ಅಮ್ಮ ನನ್ನಿಂದಾಗಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಸುಮಾ ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ಹಾಗೆಯೇ ಗೋಪಾಲನಿಗೆ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ. ಸುಮಾ ಆಳುತ್ತಾ ಗೋಪಾಲನ ಬಳಿ ಗೋಪಾಲವರೇ ನೀವು ಕೂಡ ಅಮ್ಮನನ್ನು ಹುಡುಕಲು ಹೋಗಿ ಅಮ್ಮ ಖಂಡಿತವಾಗಿಯೂ ಸಿಕ್ಕೇ ಸಿಗುತ್ತಾರೆ ಎನ್ನುವ ನಂಬಿಕೆ ನನಗಿದೆ ಆದರೆ ಅಕ್ಕನನ್ನು ಹುಡುಕಿಕೊಂಡು ಹೋದ ಅಮ್ಮ ಸಿಗುತ್ತಾರೆ ಎನ್ನುವ ನಂಬಿಕೆ ನನಗಿಲ್ಲ ಎಂದು ಜೋರಾಗಿ ಅಳುತ್ತಾಳೆ.

ಇನ್ನು ಗೋಪಾಲನಿಗೆ ಒಂದೇ ಚಿಂತೆ ನಾನು ಇದೀಗ ಪುಟ್ಟಕ್ಕನನ್ನು ಹುಡುಕುತ್ತಾ ಹೊರಟರೆ ಮನೆಯಲ್ಲಿ ಸುಮಳನ್ನು ನೋಡಿಕೊಳ್ಳುವವರು ಯಾರು ಎನ್ನುವ ಆತಂಕ ಆತನಿಗೆ. ಎನು ಮಾಡಬೇಕು ಎಂದು ಯೋಚನೆ ಮಾಡುತ್ತಿರುವಾಗ ಸುಮಾ ಅಪ್ಪನ ಬಳಿ ನೀವು ಹೋಗಿ ಅಮ್ಮನನ್ನು ಹುಡುಕಿಕೊಂಡು ಬನ್ನಿ ನಾನು ಎಲ್ಲಾ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಇನ್ನೂ ಸುಮಾ ಕಂಠಿ ಗೆ ಕರೆ ಮಾಡಿದಾಗ ಅಲ್ಲಿಯೇ ಸ್ನೇಹಾ ಇರುತ್ತಾಳೆ. ಸುಮಾ ಯಾಕೆ ನಿಮಗೆ ಕರೆ ಮಾಡುತ್ತಿದ್ದಾಳೆ ಎಂದು ಪ್ರಶ್ನೆ ಮಾಡಿ ಆಕೆಗೆ ಫೋನ್ ರಿಸಿವ್ ಮಾಡಿ ಮಾತನಾಡುತ್ತಾಳೆ ಆಗ ಸುಮಾ ಸುಮ್ಮನೆ ಅಕ್ಕನ ಬಳಿ ತಾಳ್ಮೆಯಿಂದ ಮಾತನಾಡುತ್ತಾಳೆ.
ಭಾವನ ಬಳಿ ಅಳಲು ತೋಡಿಕೊಂಡ ಸುಮಾ
ಹಾಗೆಯೇ ಬಾವನಿಗೆ ಫೋನ್ ಕೊಡಲು ಹೇಳುತ್ತಾಳೆ. ಇದನ್ನು ಕೇಳಿದ ಸರಿ ಎಂದು ಕಂಠಿ ಗೆ ಫೋನ್ ಕೊಡುತ್ತಾಳೆ. ಸುಮಾ ಭಾವನಾ ಬಳಿ ಅಳುತ್ತಾ ಭಾವ ಎನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಒಂದಾ ನೀವು ಅವ್ವನನ್ನು ಹುಡುಕಬೇಕು ಇಲ್ಲವಾದರೆ ನಾವು ಪೊಲೀಸ್ ಕಂಪ್ಲೇಂಟ್ ಕೊಡಬೇಕು. ಅವ್ವನನ್ನು ಪೊಲೀಸರು ಹುಡುಕಬಹುದು ಎಂದು ಹೇಳಿದಾಗ ಕಂಠಿ ಮತ್ತೆ ಕರೆ ಮಾಡುತ್ತೇನೆ ಎಂದು ಹೇಳುತ್ತಾನೆ.
ಯಾಕೆಂದರೆ ಪಕ್ಕದಲ್ಲಿ ಸ್ನೇಹಾ ಇಂಟರ್ ವ್ಯೂಗೆ ಹೊರಟಿರುತ್ತಾರೆ.
ಸಂದರ್ಶನಕ್ಕೆ ಹೊರಟ ಸ್ನೇಹಾ ಗೆ ಅವನದ್ದೇ ಚಿಂತೆ
ಆಕೆಗೆ ಎಲ್ಲಾದರೂ ಈ ವಿಚಾರ ತಿಳಿದರೆ ಪರೀಕ್ಷೆಗೆ ಖಂಡಿತವಾಗಿಯೂ ಹೋಗುವುದು ಇಲ್ಲ ಎಂದು ತಿಳಿಯುತ್ತದೆ. ಇನ್ನೂ ಪುಟ್ಟಕ್ಕ ಬೆಂಗಳೂರಿನಂತಹ ದೊಡ್ಡ ಸಿಟಿಯಲ್ಲಿ ಸಹನಾ ಎಲ್ಲಿದ್ದಾಳೆ ಎಂದು ಹುಡುಕುತ್ತಾ ಇರುತ್ತಾಳೆ. ಅನೇಕ ಜನರಿಗೆ ಫೋಟೋ ತೋರಿಸಿ ಈಕೆಯನ್ನು ಎಲ್ಲಾದರೂ ನೋಡಿದ್ದೀರಾ ಎಂದು ಕೇಳುತ್ತಿರುತ್ತಾಳೆ. ಬೆಂಗಳೂರಿನಲ್ಲಿ ವಾಹನ ಚಲಾಯಿಸುವ ಹಲವು ಮಂದಿಗೆ ತಾಳ್ಮೆ ಎಂಬುವುದನ್ನು ಬದಿಗೆ ಇಟ್ಟಿರುತ್ತಾರೆ.

ಅವ್ವನನ್ನು ಸದಾ ನೆನಪು ಮಾಡಿಕೊಳ್ಳುತ್ತಿರುವ ಸಹನಾ
ಪುಟ್ಟಕ್ಕ ರಸ್ತೆ ದಾಟುವಾಗ ಬೈಕಿನಾತ ಒಬ್ಬ ಬಂದು ಸಾಯಲು ನನ್ನ ಗಾಡಿಯೇ ಬೇಕಿತ್ತಾ ನಿನಗೆ ಎಂದು ಕೊಂಚ ಜೋರಾಗಿಯೇ ಮಾತನಾಡುತ್ತಾನೆ. ಆದರೂ ಪುಟ್ಟಕ್ಕ ಎನು ಮಾತನಾಡದೆ ಬದಿಯಿಂದ ಹೋಗುತ್ತಾಳೆ. ಇನ್ನೂ ಆಕೆಗೆ ಒಂದು ಕಡೆ ದುಃಖ. ಒಂದು ಕಡೆ ಮಗಳು ಸಿಕ್ಕೆ ಸಿಗುತ್ತಾಳೆ ಎನ್ನುವ ಭರವಸೆ ಆಕೆಗೆ. ಮಗಳು ಸಿಗದೇ ಬೆಂಗಳೂರು ಬಿಟ್ಟು ಹೋಗುವುದು ಇಲ್ಲ ಎನ್ನುವ ಆಲೋಚನೆ . ಇನ್ನೂ ಸಹನಾ ತನ್ನ ಅವ್ವ ಮಾಡುತ್ತಿದ್ದ ಒಳ್ಳೆಯ ಕೆಲಸದ ಬಗ್ಗೆ ಚೋಟು ಬಳಿ ಹೇಳುತ್ತಿರುತ್ತಾರೆ. ನನ್ನ ಅವ್ವ ಅದೆಷ್ಟೇ ವ್ಯಾಪಾರ ಮಾಡಿದರು ಮನೆಗೆ ಬಂದೆ ಊಟ ಮಾಡುತ್ತಿದ್ದಳು. ಆಕೆಯ ಧೈರ್ಯ ಹಾಗೆಯೇ ಆಕೆ ನಡೆದುಕೊಳ್ಳುತ್ತಿದ್ದ ರೀತಿ ನನಗೆ ಸ್ಫೂರ್ತಿ. ನಾನು ದೊಡ್ಡ ಹೋಟೆಲ್ ನ ಮಾಲಿಕಳು ಆದ ಬಳಿಕ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಹೆಬ್ಬಯಕೆ ಇದೆ ಎಂದು ಚೋಟು ಬಳಿ ಹೇಳುತ್ತಿರುತ್ತಾರೆ.


Click it and Unblock the Notifications











