Puttakkana Makkalu: ಸ್ನೇಹಾ ಮನೆಗೆ ಹೊರಟ ಪುಟ್ಟಕ್ಕ ದಂಪತಿ; ಕಂಠಿಗೆ ಸ್ನೇಹಿತರ ಸ್ವಾಗತ
ಸ್ನೇಹ ಗರ್ಭಿಣಿಯಾಗಿರುವ ವಿಚಾರ ಮನೆ ಅವರಿಗೆ ಬಹಳ ಸಂತೋಷ ತಂದಿದೆ. ಪುಟ್ಟಕ್ಕ ತಾನು ಮಗಳನ್ನು ನೋಡಬೇಕು ಎಂದು ಕಾತುರದಿಂದ ಕಾಯುತ್ತಿರುತ್ತಾಳೆ. ತನ್ನ ಗಂಡ ಇರುವವರೆಗೂ ಸ್ನೇಹ ನಮ್ಮ ಮನೆಗೆ ಬರುವುದಿಲ್ಲ ಎಂದುಕೊಂಡ ಪುಟ್ಟಕ್ಕ ತಾನೇ ಸ್ನೇಹನ ನೋಡಲು ಆಕೆಯ ಗಂಡನ ಮನೆಗೆ ಹೋಗುತ್ತಾಳೆ.
ಪುಟ್ಟಕ್ಕ, ಸ್ನೇಹಾ ಮನೆಗೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದು ಎಲ್ಲಾ ಕೆಲಸ ಮಾಡಿ ಹೊರಟು ನಿಂತಿರುತ್ತಾಳೆ. ಆದರೆ ಇದನ್ನು ನೋಡಿದ ಗೋಪಾಲ ಮನೆಯ ಹೊರಗೆ ನಿಂತುಕೊಂಡಿದ್ದಾನೆ. ಆತನಿಗೆ ತಾನು ಕೂಡ ತನ್ನ ಮಗಳನ್ನು ನೋಡಬೇಕು ಎನ್ನುವ ಹಂಬಲ. ತನ್ನ ಮಗಳು ಗರ್ಭಿಣಿ ಆಗಿದ್ದಾಳೆ. ಈಗಲಾದರೂ ನನ್ನನ್ನು ಕ್ಷಮಿಸಿ ಬಿಡುತ್ತಾಳೆ ಎನ್ನುವ ನಂಬಿಕೆ ಗೋಪಾಲನದ್ದು.

ಪುಟ್ಟಕ್ಕ ಮನೆಯ ಹೊರಗೆ ಬಂದಾಗ ಗೋಪಾಲ ನಿಂತುಕೊಂಡು ಇರುತ್ತಾನೆ. ಗಂಡನನ್ನು ನೋಡಿದ ಪುಟ್ಟಕ್ಕ ಮೆತ್ತಗೆ ಕೇಳುತ್ತಾಳೆ ಏನಯ್ಯ ಏನಾದರು ಬೇಕಿತ್ತಾ? ಖರ್ಚ್ ಗೆ ಏನಾದರು ಕಾಸ್ ಬೇಕಿತ್ತಾ? ಮೆಸ್ ಬಳಿ ಹೋಗಿ ತಗೋ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಗೋಪಾಲ ತನ್ನ ಕಿಸೆಯಲ್ಲಿ ಇದ್ದ ಹಣವನ್ನು ಪುಟ್ಟಕ್ಕನಿಗೆ ತೋರಿಸುತ್ತಾನೆ. ಇನ್ನೇನು ಬೇಕು ಎಂದು ಗೋಪಾಲನ ಬಳಿ ಪುಟ್ಟಕ್ಕ ಕೇಳಿದ ವೇಳೆ ನನಗೆ ಸ್ನೇಹಾ ಮನೆಗೆ ಬರಬೇಕು ಎನ್ನುವ ಆಸೆ ಎಂದು ಹೇಳುತ್ತಾನೆ.
ಮಗಳ ಬಳಿ ಕ್ಷಮೆ ಕೇಳಬೇಕು ಎಂದ ಗೋಪಾಲ
ನಾನು ನನ್ನ ಮಗಳನ್ನು ನೋಡಬೇಕು. ಆಕೆ ಗರ್ಭಿಣಿ ಎಂದು ತಿಳಿದ ಬಳಿಕ ನನಗೆ ಬಹಳ ಸಂತೋಷ ಆಯಿತು. ಎಂದು ತನ್ನ ಮನದಲ್ಲಿ ಇರುವ ಖುಷಿಯನ್ನು ಹೆಂಡತಿ ಬಳಿ ತೋಡಿಕೊಂಡಾಗ ಪುಟ್ಟಕ್ಕಗೆ ಭಯ ಆಗುತ್ತದೆ. ನೀನು ಈ ಮನೆಯಲ್ಲಿ ಇದ್ದೀಯಾ? ಎಂದು ಈ ಮನೆಗೆ ಕೂಡಾ ಸ್ನೇಹಾ ಬರ್ತಿಲ್ಲ. ಇದೀಗ ನೀನು ಅಲ್ಲಿಗೆ ಬಂದರೆ ಆ ಮನೆಯ ಬಾಗಿಲು ತೆಗೆಯುವುದು ಡೌಟ್. ನೀನು ಬರುವುದು ಬೇಡ ಎಂದಾಗ ಇಲ್ಲ ನಾಣು ಬರುತ್ತೇನೆ ಎಂದು ಹೇಳುತ್ತಾನೆ.

ಪುಟ್ಟಕ್ಕನ ಮಾತಿಗೆ ಒಪ್ಪದ ಗೋಪಾಲ
ಹೆಂಗಸರು ಗೃರ್ಭಿಣಿ ಆದಾಗ ಅವರಲ್ಲಿ ಕ್ಷಮಿಸುವ ಗುಣ ಕೂಡ ಇರುತ್ತದೆ . ಅದರಿಂದಾಗಿ ನಾನು ಬಂದು ಸ್ನೇಹಾ ಬಳಿ ಕ್ಷಮೆ ಕೇಳುತ್ತೇನೆ . ಆಕೆಯ ಕಾಲಿಗೆ ಬೀಳುತ್ತೇನೆ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಪುಟ್ಟಕ್ಕ ಮನಸ್ಸಿಲ್ಲದ ಮನಸ್ಸಿನಿಂದ ಗೋಪಾಲನನ್ನು ಕರೆದುಕೊಂಡು ಹೋಗುತ್ತಾಳೆ. ಇನ್ನು ದಾರಿಯಲ್ಲಿ ಸಿಕ್ಕ ಪುಟ್ಟ ಮಗುವನ್ನು ಆಕೆಯ ತಂದೆ ತಾಯಿಗಳ ಬಳಿ ಸೇಫ್ ಆಗಿ ಬಿಡುತ್ತಾನೆ ಕಂಠಿ.
ಮಗುವಿಗೆ ಕಿವಿ ಮಾತು ಹೇಳಿದ ಕಂಠಿ
ಕಂಠಿ ಆ ಮಗುವಿಗೆ ಒಂದು ಕಿವಿ ಮಾತು ಹೇಳುತ್ತಾನೆ. ಇನ್ನು ಮೇಲೆ ತಂದೆ ತಾಯಿಯನ್ನು ಬಿಟ್ಟು ಯಾರ ಬಳಿಯೂ ನೀನು ಹೋಗಬಾರದು ಎಂದು ಹೇಳುತ್ತಾನೆ. ಮಾಲೆ ತೆಗೆದು ಮನೆಗೆ ಬಂದ ಕಂಠಿಯು ಮನೆಗೆ ಬರುವ ವೇಳೆ ಪಟಕಿ ಸಿಡಿಸಿ ಎಲ್ಲರೂ ಸಂಭ್ರಮ ಪಡುತ್ತಾರೆ. ಕಂಠಿಗೆ ಇದೇನಿದು ಎಂದು ಆಶ್ಚರ್ಯ ಆಗುತ್ತದೆ.
ಯಾಕೆ ಇದೆಲ್ಲ ಎಂದು ಕೇಳಿದ ಕಂಠಿ ಮಾತಿಗೆ ಆತನ ಗೆಳೆಯ ಹೇಳುತ್ತಾನೆ. ವಿಷಯ ಇದೆ ಎಂದು ಜೋರಾಗಿ ಹೇಳುತ್ತಾರೆ. ಇನ್ನು ಬಂಗಾರಮ್ಮಗೆ ತನ್ನ ಮಗನ ಮೇಲಿರುವ ಸಿಟ್ಟು ಇನ್ನೂ ಹೋಗಿಲ್ಲ, ಯಾಕೆಂದರೆ ಬಂಗಾರಮ್ಮ ವಸು ಜೀವನ ಸರಿ ಹೋದ ಬಳಿಕ ನಿಮ್ಮ ಜೀವನ ಶುರು ಮಾಡಿ ಎಂದು ಹೇಳಿದ್ದಳು. ಆದರೆ ಇದೀಗ ಸ್ನೇಹಾ ಗರ್ಭಿಣಿ ಎಂದು ತಿಳಿದು ಬಂಗಾರಮ್ಮ ಮಂಕಾಗಿದ್ದಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











