Puttakkana Makkalu :ಕಂಠಿಗೆ ಮರು ಮದುವೆ ಮಾಡಲು ಮುಂದಾದ ಬಂಗಾರಮ್ಮ,ಮರು ಮದುವೆಗೆ ಕಂಠಿ ಉತ್ತರವೇನು?

By ಪೂರ್ವ

ಬಂಗಾರಮ್ಮನ ಮನೆಯಲ್ಲಿ ಉದಕ ಶಾಂತಿಯನ್ನು ಇಟ್ಟುಕೊಳ್ಳಲಾಗಿದೆ. ಈ ಶಾಂತಿಯನ್ನು ಕಂಠಿ ಮಾಡಬೇಕಾಗಿದೆ ಕಂಠಿಗೆ ಸ್ನೇಹ ಎಂದರೆ ಬಹಳ ಪ್ರೀತಿ, ಆದರೆ ಆ ಪ್ರೀತಿಗೆ ಯಾರ ಕಣ್ಣು ಬಿತ್ತು ಗೊತ್ತಿಲ್ಲ . ಸ್ನೇಹ ಎಲ್ಲರನ್ನ ಬಿಟ್ಟು ಬಾರದೂರಿಗೆ ಹೋಗಿದ್ದಾಳೆ. ಸ್ನೇಹ ಸತ್ತ ಬಳಿಕ ಕಂಠಿಯ ಬಾಳಲ್ಲಿ ಕತ್ತಲು ಆವರಿಸಿದೆ ಯಾವತ್ತು ಸ್ನೇಹ ನೆನಪಿನಲ್ಲಿಯೇ ಕಾಲ ಕಳೆಯುತ್ತಿರುತ್ತಾನೆ. ಹಾಗೆಯೇ ಕುಡಿತದ ಚಟಕ್ಕೆ ದಾಸನಾಗುತ್ತಾನೆ.

ಇದೆಲ್ಲವನ್ನು ನೋಡಿದ ಬಂಗಾರಮ್ಮಗೆ ಬಹಳಷ್ಟು ನೋವಾಗುತ್ತದೆ ಸ್ನೇಹ ನಮ್ಮೆಲ್ಲರನ್ನ ಬಿಟ್ಟು ಹೋಗಿದ್ದು ನಿಜ ಆದರೆ ಯಾವತ್ತೂ ಕೂಡ ಆಕೆಯ ನೆನಪಲ್ಲಿ ತನ್ನ ಮಗ ಇರುವುದು ಬಂಗಾರಮ್ಮ ಗೆ ಸರಿ ಬರುತ್ತಿಲ್ಲ. ತನ್ನ ಮಗ ಯಾವತ್ತೂ ಕೂಡ ನೋವಿನಲ್ಲಿ ಇರಬಾರದು ಆತ ಚೆನ್ನಾಗಿರಬೇಕು ಎಂದುಕೊಂಡು ಕಂಠಿಗೆ ಮರುಮದುವೆ ಮಾಡಲು ನಿರ್ಧಾರ ಮಾಡುತ್ತಾರೆ. ಕಂಠಿ ಇನ್ನೊಂದು ಮದುವೆ ಎಂದು ಹೇಳಿದಾಗಲೇ ಎಲ್ಲರ ವಿರುದ್ಧ ಸಿಡಿದು ನಿಲ್ಲುತ್ತಾನೆ.

kannada serial puttakkana makkalu written 1th February

ಆತನಿಗೆ ಸ್ನೇಹಾ ಎಂದರೆ ಬಹಳ ಪ್ರೀತಿ. ಸ್ನೇಹ ಜಾಗದಲ್ಲಿ ಮತ್ತೆ ಯಾರನ್ನು ಊಹಿಸಿಕೊಳ್ಳಲು ಕಂಠಿ ಗೆ ಸಾಧ್ಯವಾಗುತ್ತಿಲ್ಲ. ಆದರೆ ಕಂಠಿ ಹೀಗೆ ಇದ್ದರೆ ಖಂಡಿತವಾಗಿಯೂ ಆತನ ಜೀವನ ಹಾಳಾಗುತ್ತದೆ ಎಂದು ಬಂಗಾರಮ್ಮಗೆ ಗೊತ್ತಾಗುತ್ತದೆ. ಈ ಕಾರಣದಿಂದಾಗಿ ಪುಟ್ಟಕ್ಕನ ಬಳಿಗೆ ಬಂದ ಬಂಗಾರಮ್ಮ ಮನದಲ್ಲಿರುವ ನೋವನ್ನ ಅಳುಕನ್ನ ಪುಟ್ಟಕ್ಕನ ಜೊತೆಗೆ ಹೇಳಿಕೊಳ್ಳುತ್ತಾಳೆ . ಪುಟ್ಟಕ್ಕ ಬಹಳಷ್ಟು ನೋವಾಗುತ್ತದೆ ಆದರೆ ಬಂಗಾರಮ್ಮನವರು ಹೇಳುತ್ತಿರುವುದು ಕೂಡ ಸತ್ಯ ಎನ್ನುವುದು ಪುಟ್ಟಕ್ಕಗೆ ತಿಳಿದಿದೆ. ಬಂಗಾರಮ್ಮ ಏನೇ ಹೇಳಿದರೂ ಅದರಲ್ಲಿ ಏನಾದರು ನಿಜ ಇರುತ್ತದೆ ಎಂದು ಪುಟ್ಟಕ್ಕ ಕೂಡ ಕಂಠಿ ಗೆ ಮದುವೆ ಮಾಡುವುದು ಉತ್ತಮ ಎಂದು ಹೇಳುತ್ತಾಳೆ.

ಬಂಗಾರಮ್ಮನನ್ನು ಸಂತೈಸಿದ ಪುಟ್ಟಕ್ಕ

ಪುಟ್ಟಕ್ಕಗೆ ಬಂಗಾರಮ್ಮನವರನ್ನು ಸಂತೈಸಲು ಸಾಧ್ಯವಾಗುವುದಿಲ್ಲ. ಆದರೂ ಕೂಡ ಬಹಳ ಸಮಾಧಾನದ ಮಾತುಗಳನ್ನು ಅಮ್ಮವರ ಬಳಿ ಪುಟ್ಟಕ್ಕ ಹೇಳುತ್ತಾಳೆ. ಬಂಗಾರಮ್ಮ ಪುಟ್ಟಕ್ಕನ ಬಳಿ ಬಹಳ ಬೇಸರದಿಂದ ಹೇಳುತ್ತಾಳೆ ಪುಟ್ಟಕ್ಕ ನನ್ನ ಮೊದಲಿಗೆ ಇನ್ನೊಂದು ಮದುವೆ ಮಾಡೋಣ ಎಂದು ಅಂದುಕೊಂಡಿದ್ದೇನೆ ನನ್ನ ಮಗ ಯಾವತ್ತೂ ಕೂಡ ಒಬ್ಬಂಟಿಯಾಗಿ ಇರಬಾರದು ಸಂಗಾತಿ ಎನ್ನುವುದು ಜೀವನದಲ್ಲಿ ಬಹಳ ಮುಖ್ಯ ಯಾಕೆಂದರೆ ನಾವು ಸತ್ತ ಬಳಿಕ ಅವರನ್ನು ನೋಡಿಕೊಳ್ಳುವುದು ಸಂಗಾತಿ. ಆದರೆ ಕಂಠಿ ಗೆ ಸ್ನೇಹನ ಬಿಟ್ಟು ಬೇರೆ ಯಾರನ್ನು ಮದುವೆಯಾಗಲು ಇಷ್ಟವಿಲ್ಲ ಎನ್ನುತ್ತಾರೆ

ಬಂಗಾರಮ್ಮನವರ ಮಾತಿಗೆ ಮೌನಿಯಾದ ಪುಟ್ಟಕ್ಕ

ಮಾತು ಮುಂದುವರಿಸಿದ ಬಂಗಾರಮ್ಮ, ನನ್ನ ಮಗ ಮದುವೆ ಆಗುವುದಿಲ್ಲ ಎಂದು ಹೇಳಿದರು ನಾನು ಸುಮ್ಮನೆ ಇದ್ದು ಬಿಡುವುದಿಲ್ಲ ಕಂಠಿಗೆ ಮರು ಮದುವೆಯನ್ನು ಮಾಡಬೇಕು. ಇದಕ್ಕೆ ನನಗೆ ನಿನ್ನ ಸಹಕಾರ ಬೇಕು ಎಂದು ಪುಟ್ಟಕ್ಕನ ಬಳಿ ಬಂಗಾರಮ್ಮ ಕೇಳುತ್ತಾಳೆ. ಪುಟ್ಟಕ್ಕಗೆ ಬಹಳಷ್ಟು ಭಯವಾಗುತ್ತದೆ. ಯಾಕೆಂದರೆ ಕಂಠಿ ಮರು ಮದುವೆಯ ಪ್ರಸ್ತಾಪ ಎತ್ತಿದಾಗಲೆಲ್ಲಾ ಬಹಳ ಉಗ್ರ ರೂಪವನ್ನು ತಾಳುತ್ತಾನೆ. ಕಂಠಿ ಉದಕಶಾಂತಿಯನ್ನು ಮಾಡುತ್ತಿರುವಾಗ ಆತನಿಗೆ ಸ್ನೇಹಾ ಫೋಟೋ ನೋಡಲಾಗದೆ ಬಹಳ ನೋವಾಗುತ್ತದೆ. ಅಮ್ಮ ನನಗೆ ಉದಕ ಶಾಂತಿಯನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಎದ್ದು ಹೊರ ನಡೆಯಲು ಮುಂದಾಗುತ್ತಾನೆ. ಇದನ್ನು ನೋಡಿದ ಬಂಗಾರಮ್ಮ ಉದಕ ಶಾಂತಿ ನೀನೇ ಮಾಡಬೇಕು ಎಂದು ಮನವಿ ಮಾಡುತ್ತಾರೆ. ತಾಯಿಯ ಮಾತಿಗೆ ಮನದಲ್ಲಿ ಸಹಿಸಲಾರದಷ್ಟು ನೋವಾಗುತ್ತಿದ್ದರು ತಡೆದುಕೊಂಡ ಕಂಠಿ ಉದಕ ಶಾಂತಿ ಮಾಡುತ್ತಾನೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X