Puttakkana Makkalu: ಮುನಿಸು ಮರೆತು ಒಂದಾದ ಪ್ರೇಮಿಗಳು; ಕಂಠಿಗೆ ಸ್ನೇಹಾ ಗಿಫ್ಟ್ ಏನು?
ಸ್ನೇಹಾಗೆ ಕಂಠಿ ಅಂದರೆ ಪ್ರಾಣ. ಕಂಠಿಗೆ ಸ್ನೇಹಾ ಅಂದರೆ ಜೀವ. ಅವರಿಬ್ಬರನ್ನು ದೂರ ಮಾಡಲು ರಾಧ ಹಾಗೂ ಶಶಿಕಲಾ ಸ್ಕೆಚ್ ಹಾಕುತ್ತಾ ಇರುತ್ತಾರೆ. ಆದರೆ ಅದೆಲ್ಲ ವರ್ಕೌಟ್ ಆಗಲ್ಲ . ಏಕೆಂದರೆ ಸ್ನೇಹಾ ಮಾಡಿದ ಕೆಲಸಕ್ಕೆ ಕಂಠಿ ಬಹಳ ಹೆಮ್ಮೆ ಪಡುತ್ತಾನೆ ತನ್ನ ತಂಗಿಯ ಪ್ರಾಣ ಕಾಪಾಡಿದ್ದಿಯಾ ಎಂದು ಕೃತಜ್ಞತೆಯಿಂದ ಇರುತ್ತಾನೆ.
ವಸು ಮನೆ ಬಿಟ್ಟು ಹೋದ ಬಳಿಕ ಸ್ನೇಹಾ ಬಳಿ ಸರಿಯಾಗಿ ಕಂಠಿ ಮಾತನಾಡಿರಲಿಲ್ಲ. ಆದರೆ ಪ್ರೇಮಿಗಳ ದಿನದಂದು ಸ್ನೇಹಾ ಕಂಠಿಯನ್ನು ಕೆರೆಯ ಬಳಿ ಬರಲು ಹೇಳಿ ಇರುತ್ತಾಳೆ. ಇನ್ನು ರಾಧಾ ಬಳಿ ಸ್ನೇಹಾ ಕೇಳುತ್ತಾಳೆ. ನಂಜಮ್ಮನ ಬಳಿ ಏನಾದರೂ ವಸು ವಿಚಾರ ಹೇಳಿದ್ದೀರ ಎಂದು. ಆದರೆ ಇದನ್ನು ಕೇಳಿದ್ದೆ ತಡ ಕೊಂಚ ಜೋರಾಗಿಯೇ ಅತ್ತು ಕರೆದು ರಂಪಾಟ ಮಾಡುತ್ತಾಳೆ.

ಬಂಗಾರಮ್ಮ ಕೂಡ ಕೊಂಚ ಕೋಪ ಮಾಡಿಕೊಂಡು ಇರುತ್ತಾಳೆ. ಹಾಗೆಯೇ ಸ್ನೇಹಾ ಮೇಲೆ ರೇಗಾಡುತ್ತಾಳೆ. ಸ್ನೇಹಾಗೆ ಏನು ಅರ್ಥ ಆಗುವುದಿಲ್ಲ. ಇವರ ಬಳಿ ನಾನು ಜಸ್ಟ್ ಕೇಳಿರುವುದು ಅಷ್ಟೇ . ಅದಕ್ಕೆ ಇಷ್ಟೆಲ್ಲ ರಂಪಾಟ ಮಾಡುತ್ತಿದ್ದಾರೆ ಅಲ್ವಾ? ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ರಾಧಾಗೆ ಇದೀಗ ಎಲ್ಲಾ ಗೊತ್ತಾಗಿದೆ. ಸ್ನೇಹಾ ಹಾಗೂ ಕಂಠಿ ನಡುವೆ ಎನು ಸರಿ ಇಲ್ಲ ಎಂಬುವುದು ತಿಳಿದಿದೆ. ಆದರೆ ಆ ತಿಳುವಳಿಕೆ ತಪ್ಪು ಎನ್ನುವ ಅರಿವು ಆಕೆಗೆ ಇನ್ನೂ ಆಗಿಲ್ಲ ಅನ್ನಿಸುತ್ತದೆ. ಯಾಕೆಂದರೆ ಕಂಠಿ, ಸ್ನೇಹಾ ಪ್ರೀತಿಸಿ ಮದುವೆ ಆದವರು. ರಾಧಾಗೆ ಈಗಲೂ ಕೂಡ ಕಂಠಿ ಮೇಲೆ ಮನಸ್ಸು. ಹೇಗಾದರೂ ಕಂಠಿ ಜೀವನದಿಂದ ಸ್ನೇಹಳನ್ನೂ ಓಡಿಸಿ ಬಿಡಬೇಕು ಎನ್ನುವ ಆಸೆ ರಾಧಾಗೆ. ಆದರೆ ಆ ಆಸೆ ಆಸೆಯಾಗಿಯೇ ಉಳಿಯುವ ಎಲ್ಲಾ ಲಕ್ಷಣ ಕಂಡು ಬರುತ್ತಿದೆ.
ಶಾಲೆ ಉದ್ಘಾಟಿಸಿದ ಬಂಗಾರಮ್ಮ
ಇನ್ನು ಬಂಗಾರಮ್ಮ ರಾತ್ರಿ ಶಾಲೆಯನ್ನು ಉದ್ಘಾಟನೆ ಮಾಡಿದ್ದಾರೆ. ಹಾಗೆಯೇ ಶಾಲೆ ಉದ್ಘಾಟನೆ ಮಾಡಲು ತನ್ನ ತಾಯಿಯನ್ನು ಒಪ್ಪಿಸಿದ ಕಂಠಿ ಮಾತ್ರ ಬಹಳ ಖುಷಿಯಲ್ಲಿ ಇರುತ್ತಾನೆ. ಸ್ನೇಹ ಕಂಠಿಯನ್ನು ಕೊಳದ ಬಳಿ ಬರಲು ಹೇಳಿದ ಪ್ರಕಾರವಾಗಿ ಕಂಠಿ ಅಲ್ಲಿಗೆ ಬಂದು ಸ್ನೇಹಾ ಎಂದು ಕರೆಯುತ್ತಾನೆ. ಹಲವು ಬಾರಿ ಸ್ನೇಹಾ ಎಂದು ಕರೆದರೂ ಸ್ನೇಹಾ ಬಾರದೇ ಇರುವುದನ್ನು ನೋಡಿ ವಾಪಸ್ ಹೋಗಲು ಮುಂದಾಗುತ್ತಾನೆ.

ಕಂಠಿ ಬಳಿ ಬಂದ ಸ್ನೇಹಾ
ಸ್ನೇಹಾ ಮೆತ್ತಗೆ ಹತ್ತಿರಕ್ಕೆ ಬಂದು ಯಾವತ್ತೂ ಮಿಸ್ಸು ಎಂದು ಕರೆಯುತ್ತಾ ಇದ್ದೀರಾ. ಹಾಗೆಯೇ ಇವತ್ತು ಕರೆಯಿರಿ ಎಂದು ಹೇಳಿದಾಗ ಕಂಠಿ ಮಾತನಾಡದೆ ಸುಮ್ಮನೆ ಇರುತ್ತಾನೆ. ಕಂಠಿಯನ್ನು ಆದಷ್ಟು ಸಮಾಧಾನ ಮಾಡಲು ಮುಂದಾಗುತ್ತಾಳೆ. ಆದರೆ ಕಂಠಿ ಮಾತ್ರ ಸ್ನೇಹಾ ಮುಖ ನೋಡಿ ಒಳಗೊಳಗೆ ನಗುತ್ತಾ ಇರುತ್ತಾನೆ. ಸ್ನೇಹಾ ಮಾತ್ರ ಕಂಠಿ ಮುಖ ನೋಡಿ ಭಯ ಪಟ್ಟುಕೊಂಡು ಇರುತ್ತಾಳೆ.
ಕಂಠಿ ಮಾತಿಗೆ ಬೇಸರಗೊಂಡ ಸ್ನೇಹಾ
ನೀವು ಯಾಕೆ ನನ್ನ ಬಳಿ ಸುಳ್ಳು ಹೇಳಿರುವುದು. ನಾನು ಅವತ್ತು ಸುಳ್ಳು ಹೇಳಿದ್ದ ವೇಳೆ ನೀವು ಹೇಗೆ ನನ್ನ ಬಳಿ ಕಠೋರವಾಗಿ ನಡೆದುಕೊಂಡು ಇದ್ದೀರಾ ಎಂದಾಗ ಸ್ನೇಹಾ ಹೇಳುತ್ತಾಳೆ. ನಾನು ನೀವು ಸುಳ್ಳು ಹೇಳಿರುವುದು ಒಂದೆನಾ?... ಕಂಠಿ ಮಾತ್ರ ಏನು ಮಾತನಾಡದೆ ಸುಮ್ಮನಾಗುತ್ತಾನೆ. ಬಳಿಕ ತಾನು ಮಾಡಿಕೊಂಡಿದ್ದು ನಾಟಕ ಎನ್ನುವ ವಿಚಾರ ಸ್ನೇಹಾಗೆ ತಿಳಿಯುವ ಹಾಗೆ ಮಾಡುತ್ತಾನೆ. ಇದನ್ನು ನೋಡಿದ ಸ್ನೇಹಾ ಕಂಠಿಯನ್ನು ಓಡಿಸಿಕೊಂಡು ಹೋಗಿ ಬಿಡುತ್ತಾಳೆ. ಬಳಿಕ ಸ್ನೇಹಾ, ಕಂಠಿಗೆ ಬಹಳ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡುತ್ತಾಳೆ.


Click it and Unblock the Notifications











