Puttakkana Makkalu ; ಕಂಠಿ ಮದುವೆ ವಿಚಾರಕ್ಕೆ ಮುರಿದು ಬೀಳುತ್ತಾ ಪುಟ್ಟಕ್ಕ ಮತ್ತು ಬಂಗಾರಮ್ಮನ ಸಂಬಂಧ ?

By ಪೂರ್ವ

ಬಂಗಾರಮ್ಮ ಯಾವತ್ತೂ ಪುಟ್ಟಕ್ಕ ಗೆ ಎದುರಾಗಿ ನಿಂತಿರಲಿಲ್ಲ. ಪುಟ್ಟಕ್ಕ ಎಂದರೆ ಬಂಗಾರ ಮ್ಮ ಗೆ ಅದೇನೋ ಪ್ರೀತಿ. ಆದರೆ ಇದೀಗ ರಾಧ ಮಾಡಿದ ಕಿತಾಪತಿ ಕೆಲಸದಿಂದಾಗಿ ಪುಟ್ಟಕ್ಕ ಹಾಗೂ ಬಂಗಾರಮ್ಮ ಕಿತ್ತಾಟ ನಡೆಸುವ ಹಾಗೆ ಆಗಿದೆ. ಪುಟ್ಟಕ್ಕ ಗೆ ಕಂಠಿ ಪ್ರೀತಿ ವಿಚಾರ ತಿಳಿದಿರುತ್ತದೆ. ಹಾಗೆಯೇ ತನ್ನ ತಾಯಿಯ ಬಳಿ ಇದೆಲ್ಲವನ್ನೂ ಹೇಳಿ ಒಪ್ಪಿಸಲು ಹೇಳಿರುತ್ತಾನೆ.

ಕಂಠಿ ಮಾತಿಗೆ ಪುಟ್ಟಕ್ಕ ಆಯಿತು ಎನ್ನುವ ಉತ್ತರವನ್ನು ಕೊಟ್ಟಿರುತ್ತಾಳೆ. ಇದೆಲ್ಲದರ ಮಧ್ಯೆ ರಾಧಾ ತನ್ನ ಅತ್ತೆ ಬಂಗಾರಮ್ಮನ ಬಳಿ ಮಾತು ತೆಗೆದುಕೊಂಡಿರುತ್ತಾಳೆ. ತಾನು ಕಂಠಿ ಮಾವನನ್ನು ಬಹಳ ಪ್ರೀತಿ ಮಾಡುತ್ತಿದ್ದೇನೆ. ದಯವಿಟ್ಟು ನನ್ನನ್ನು ಆತನ ಜೊತೆಗೆ ಮದುವೆ ಮಾಡಿ ಕೊಡಿ. ಇಲ್ಲವಾದರೆ ಖಂಡಿತವಾಗಿಯೂ ನಾನು ಬದುಕುವುದಿಲ್ಲ ಎನ್ನುವ ಮಾತನ್ನು ಬಂಗಾರಮ್ಮನವರ ಬಳಿ ರಾಧ ತೆಗೆದುಕೊಂಡಿರುತ್ತಾಳೆ.

kannada serial puttakkana makkalu written 22th April

ರಾಧಾ ಮಾತಿಗೆ ಕರಗಿದ ಬಂಗಾರಮ್ಮ ಖಂಡಿತವಾಗಿಯೂ ನಿನ್ನನ್ನು ಕಂಠಿಯ ಜೊತೆಗೆ ಮದುವೆ ಮಾಡಿಸುತ್ತೇನೆ ಎನ್ನುವ ಮಾತು ಕೊಡುತ್ತಾರೆ. ಸ್ನೇಹಾ ಇದೆಲ್ಲವನ್ನೂ ನೋಡಿ ತನ್ನ ಮನಸ್ಸಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾಳೆ. ನನಗೆ ಯಾರು ಬೇಡ , ನಾನು ಯಾರನ್ನೂ ಕೂಡ ಪ್ರೀತಿ ಮಾಡುತ್ತಿಲ್ಲ ಎನ್ನುವ ವಿಚಾರವನ್ನು ಹೇಳಿಕೊಂಡಿದ್ದಾಳೆ. ಇದೆಲ್ಲವನ್ನೂ ಕೇಳಿದ ಕಂಠಿ ಮನಸ್ಸು ಒಡೆದು ಹೋಗಿದೆ.

ತನ್ನ ಹೆಂಡತಿಯ ಹೃದಯ ಗಂಗಾಧರಯ್ಯನ ಮಗಳಿಗೆ ಕಸಿ ಮಾಡಿದ್ದಾರೆ ಎಂದು ಕಂಠಿಗೆ ಯಾವಾಗ ತಿಳಿಯುತ್ತೋ ಅವತ್ತಿನಿಂದ ಕಂಠಿ ಗೆ ಸ್ನೇಹಾ ಸತ್ತಿಲ್ಲ ಆಕೆ ಗಂಗಾಧರಯ್ಯನ ಮಗಳ ರೂಪದಲ್ಲಿದ್ದಾಳೆ. ಆಕೆಯನ್ನು ನಾನು ಪಡೆದುಕೊಂಡೆ ಪಡೆದುಕೊಳ್ಳುತ್ತೇನೆ ಎಂದು ಅಂದುಕೊಂಡು ಬಹಳ ಖುಷಿಯಲ್ಲಿರುತ್ತಾನೆ.

ತನ್ನ ತಾಯಿಯ ಬಳಿ ಕಂಠಿ ಎಲ್ಲಾ ವಿಚಾರವನ್ನೂ ಕೂಲಂಕುಷವಾಗಿ ಬಿಡಿಸಿ ಹೇಳುತ್ತಾನೆ. ಆದರೆ ಬಂಗಾರಮ್ಮ ಕಂಠಿಯ ಮಾತನ್ನು ಒಪ್ಪಲು ರೆಡಿ ಇರುವುದಿಲ್ಲ. ಯಾಕೆಂದರೆ ಬಂಗಾರಮ್ಮನವರ ಪಾಲಿಗೆ ಸ್ನೇಹಾ ಸತ್ತು ಎಷ್ಟು ದಿನವಾಗಿವೆ. ಆಕೆಯ ಹೃದಯವನ್ನು ಯಾರಿಗೂ ಕಸಿ ಕೂಡ ಮಾಡಿಲ್ಲ. ನೀನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಿಯಾ ಎಂದು ಬುದ್ದಿ ಮಾತು ಹೇಳುತ್ತಾಳೆ ಆದರೆ ಕಂಠಿ ಬಂಗಾರಮ್ಮನವರ ಮಾತು ಕೇಳಲು ರೆಡಿ ಇರುವುದಿಲ್ಲ. ಇತ್ತ ಬಂಗಾರಮ್ಮ ಪುಟ್ಟಕ್ಕನ ಮನೆಗೆ ಬರುತ್ತಾಳೆ. ಹಾಗೆಯೇ ಕಂಠಿ ಮತ್ತು ರಾಧ ಮದುವೆಯ ಬಗ್ಗೆ ಪ್ರಸ್ತಾಪ ಮಾಡುತ್ತಾಳೆ.

ಪುಟ್ಟಕ್ಕನ ಮೇಲೆ ಮುನಿಸಿಕೊಂಡ ಬಂಗಾರಮ್ಮ

ಪುಟ್ಟಕ್ಕ ಮಾತ್ರ ಕಂಠಿಗೆ ಸ್ನೇಹಾ ಮೇಲೆ ಬಹಳಷ್ಟು ಒಲವಿದೆ. ಆಕೆಯ ಜೊತೆಗೆ ಆತ ಮದುವೆ ಮಾಡಿಕೊಳ್ಳುತ್ತೇನೆ ಎಂದರು ನೀವು ಒಪ್ಪುತ್ತಿಲ್ಲ. ಯಾಕೆ ಎಂಬ ಪ್ರಶ್ನೆಯನ್ನು ಬಂಗಾರಮ್ಮಗೆ ಮಾಡಿದ್ದಕ್ಕೆ ಬಂಗಾರಮ್ಮ ಕೊಂಚ ಕೋಪದಲ್ಲಿ ಪುಟ್ಟಕ್ಕ ನಾನು ನನ್ನ ಮಗನ ಮದುವೆಯನ್ನು ರಾಧ ಜೊತೆಗೆ ಮಾಡಬೇಕು ಎಂದುಕೊಂಡಿದ್ದೇನೆ, ಬೇರೆ ಯಾವುದರ ಬಗ್ಗೆ ನಾನು ಹೇಳಲು ಬಂದಿಲ್ಲ ಎಂದಾಗ ಪುಟ್ಟಕ್ಕ ಬಹಳ ಬೇಸರದಿಂದ ನಾನು ಗಂಗಾಧರಯ್ಯ ನವರ ಬಳಿ ಸ್ನೇಹಾ, ಕಂಠಿಯ ಹೆಂಡತಿ ಆಗುತ್ತಾಳೆ ಎನ್ನುವ ಮಾತನ್ನು ನೀಡಿದ್ದೇನೆ ಎಂದಾಗ ಕೋಪಗೊಂಡ ಬಂಗಾರಮ್ಮ ಕೋಪ ಮಾಡಿಕೊಳ್ಳುತ್ತಾಳೆ.

ಅತ್ತೆಯ ಮಾತು ಕೇಳಿ ಖುಷಿ ಪಟ್ಟ ರಾಧಾ

ಕಂಠಿ ಮದುವೆಯ ಬಗ್ಗೆ ನೀವು ನಿರ್ಧಾರ ತೆಗೆದುಕೊಳ್ಳಲು ನೀವು ಯಾರು ? ಆತ ನನ್ನ ಮಗ ನನ್ನ ಮಗನ ಭವಿಷ್ಯದ ಬಗ್ಗೆ ಮಾತನಾಡಲು ನೀನು ಯಾರು ಎಂಬ ಪ್ರಶ್ನೆಯನ್ನು ಮಾಡುತ್ತಾಳೆ ಆ ಮಾತಿಗೆ ಪುಟ್ಟಕ್ಕ ಬಹಳ ಬೇಸರ ಮಾಡಿಕೊಳ್ಳುತ್ತಾಳೆ. ಹಾಗೆಯೇ ಮರೆಯಲಿ ಇದೆಲ್ಲವನ್ನೂ ನೋಡಿದ ರಾಧಾ ಅತ್ತೆಯ ಮಾತು ಕೇಳಿ ಖುಷಿ ಪಡುತ್ತಾಳೆ. ಇತ್ತ ರಾಧಾಗೆ ಕಂಠಿ ಎಂದರೆ ಇಷ್ಟ. ಆದರೆ ಅಷ್ಟೇ ಬಂಗಾರಮ್ಮ ನ ಮೇಲೆ ದ್ವೇಷ ಹೆಚ್ಚಾಗಿದೆ. ಬಂಗಾರಮ್ಮ ತನ್ನ ತಾಯಿಯನ್ನು ಬಹಳ ತುಚ್ಛವಾಗಿ ಕಂಡಿದ್ದಾಳೆ. ಆಕೆಯ ಮಗನನ್ನು ಮದುವೆಯಾಗಿ ಬಂಗಾರಮ್ಮನ ಮನೆಯನ್ನು ಸರ್ವ ನಾಶ ಮಾಡಬೇಕು ಎನ್ನುವ ನಿರ್ಧಾರ ಮಾಡಿರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X