Puttakkana Makkalu ; ಸಹನಾ ಹುಡುಕಾಟದಲ್ಲಿ ಪುಟ್ಟಕ್ಕ, ಪೊಲೀಸ್ ವಶದಲ್ಲಿ ಗೋಪಾಲ ಕಂಗಾಲಾದ ಸುಮಾ..!
ಬೆಂಗಳೂರಿನಲ್ಲಿ ಸಹನಾಳನ್ನು ಹುಡುಕಲು ಪುಟ್ಟಕ್ಕ ಬಹಳ ಕಷ್ಟ ಪಟ್ಟು ಬರುತ್ತಾಳೆ. ಆದರೆ ಪುಟ್ಟಕ್ಕ ಗೆ ಕೊನೆಗೂ ತನ್ನ ಮಗಳ ಹೋಟೆಲ್ ಬಳಿ ಬಂದರು ಆಕೆಗೆ ತನ್ನ ಮಗಳನ್ನು ನೋಡುವ ಅದೃಷ್ಟ ಇಲ್ಲವಾಗಿಸಿದೆ. ಸಹನಾ ಹೋಟೆಲ್ ಬಳಿ ಪುಟ್ಟಕ್ಕ ಬರುವಾಗ ಸಹನಾ, ಮ್ಯಾಕ್ಸ್ ವೆಲ್ ಜೊತೆಗೆ ಹಣದ ವ್ಯವಹಾರದ ಬಗ್ಗೆ ತಿಳಿದುಕೊಳ್ಳಲು ಅಲ್ಲಿಂದ ತೆರಳಿರುತ್ತಾಳೆ. ಅಷ್ಟರಲ್ಲಿ ಪುಟ್ಟಕ್ಕ ಕಲ್ಯಾಣಿ ಹೋಟೆಲ್ ಬಳಿ ಬರುತ್ತಾಳೆ.
ಆದರೆ ಪುಟ್ಟಕ್ಕ ಆಗ ಬಹಳ ಆಯಾಸಗೊಂಡು ಇರುತ್ತಾಳೆ. ಆಕೆಗೆ ತಿನ್ನಲು ಏನಾದರು ಸ್ವಲ್ಪ ಸಿಕ್ಕರೂ ಸಾಕು ಎನ್ನುವ ಸ್ಥಿತಿಯಲ್ಲಿ ಪುಟ್ಟಕ್ಕ ಇರುತ್ತಾಳೆ. ಇನ್ನೂ ಕಲ್ಯಾಣಿ ಹೋಟೆಲ್ ಬಳಿಗೆ ಬಂದ ಪುಟ್ಟಕ್ಕ ಚಿತ್ರಾನ್ನ ಕೇಳುತ್ತಾಳೆ ಆ ಕೂಡಲೇ ಚೋಟು ಪುಟ್ಟಕ್ಕ ಗೆ ಚಿತ್ರಾನ್ನ ಕೊಡುತ್ತಾಳೆ. ಆಕೆಯನ್ನು ನೋಡಿದ ಚೋಟು ಗೆ ಎಲ್ಲೋ ನೋಡಿದ ನೆನಪು ಆದರೆ ಎಲ್ಲಿ ನೋಡಿದ್ದೇನೆ ಎನ್ನುವುದು ಮಾತ್ರ ಆಲೋಚನೆ ಮಾಡುತ್ತಿರುತ್ತಾನೆ. ಇದನ್ನು ನೋಡಿದ ಕಲ್ಯಾಣಿ ಹೋಟೆಲ್ ಮಾಲೀಕರು ಚೋಟು ಅಲ್ಲೇನು ನೋಡುತ್ತಿದ್ದಿಯ ಹೋಗು ಕಸ್ಟಮರ್ಸ್ ತುಂಬಾ ಜನ ಇದ್ದಾರೆ ಎಂದು ಹೇಳುತ್ತಾರೆ .

ಚೋಟು ಎಲ್ಲರಿಗೆ ಕೂಡ ತಿಂಡಿ ಕೊಡುತ್ತಿರುತ್ತಾನೆ. ಇನ್ನೂ ಚಿತ್ರಾನ್ನ ತಿಂದ ಕೂಡಲೇ ಪುಟ್ಟಕ್ಕ ಗೆ ಸಹನಾ ನೆನಪಿಗೆ ಬರುತ್ತಾಳೆ . ಈ ಅಡುಗೆ ಮಾಡಿದ್ದು ಯಾರು ಎಂದು ಕೇಳಿದಾಗ ಕಲ್ಯಾಣಿ ಹೋಟೆಲ್ ಒನರ್ ಇದೆಲ್ಲ ನಾನೇ ಮಾಡಿದ್ದು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕ ಸುಮ್ಮನಾಗುತ್ತಾಳೆ. ಇನ್ನೂ ಆ ಹೋಟೆಲ್ ಗೆ ಬಹಳಷ್ಟು ಜನರು ಬರುತ್ತಾರೆ. ನನಗೆ ಇಡ್ಲಿ ಬೇಕು ಎಂದೆಲ್ಲ ಕೇಳಿದಾಗ ಕಲ್ಯಾಣಿ ಹೋಟೆಲ್ ಮಾಲೀಕರಿಗೆ ಮ್ಯಾನೇಜ್ ಮಾಡಲು ಕಷ್ಟ ಆಗಿ ಚೋಟು ಮೇಲೆ ರೇಗಾಡುತ್ತಾರೆ. ಇನ್ನೂ ಆ ವೇಳೆ ಪುಟ್ಟಕ್ಕ ಬಂದು ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳುತ್ತಾಳೆ
ಸಹನಾ ಹೋಟೆಲ್ ನಲ್ಲಿ ಪುಟ್ಟಕ್ಕ!
ನಾನು ಕೂಡ ಹೋಟೆಲ್ ನಡೆಸುತ್ತಿದ್ದೆ. ಆದರೆ ಇದೀಗ ನಾನು ನನ್ನ ಮಗಳನ್ನು ಹುಡುಕಿಕೊಂಡು ಬಂದಿದ್ದೇನೆ.ತುಂಬಾ ಜನ ಬಂದಿದ್ದಾರೆ ನಾನು ಸಹಾಯ ಮಾಡುತ್ತೇನೆ ಎಂದು ಹೇಳಿ ಬಂದ ಜನರಿಗೆಲ್ಲರಿಗೂ ತಿಂಡಿ ಕೊಡುತ್ತಾಳೆ. ಇನ್ನೂ ಸಹನಾ ಮ್ಯಾಕ್ಸ್ ವೆಲ್ ಜೊತೆ ಮೂರು ಲಕ್ಷ ಹಣ ಕೇಳಲು ಬಡ್ಡಿ ವ್ಯವಹಾರದವರ ಬಳಿ ಬರುತ್ತಾಳೆ. ಆತ ಬಹಳ ದೊಡ್ಡ ಸಂಚುಕೋರ. ಸಹನಾಳನ್ನು ದೊಡ್ಡ ರೌಡಿಯ ಬಳಿ ಕರೆದುಕೊಂಡು ಬಂದಿರುತ್ತಾನೆ. ಆ ರೌಡಿ ಚೆನ್ನಾಗಿರುವ ಹುಡುಗಿ ಇದ್ದರೆ ಅವರಿಗೆ ಮೂರು ಲಕ್ಷ ಅಲ್ಲ ಇನ್ನು ಹೆಚ್ಚು ಹಣ ಕೊಡುವ ಅವರಿಗೆ ಸಾಲ ತೀರಿಸಲು ಆಗಬಾರದು ಕೊನೆಗೆ ಅವರು ನನ್ನ ವಶದಲ್ಲಿ ಇರಬೇಕು ಎಂದು ಹೇಳುತ್ತಾನೆ.

ಅಪಾಯದಂಚಿನಲ್ಲಿ ಸಹನಾ
ಇದನ್ನು ಕೇಳಿದ ಸಹನಾ ಗೆ ಹಣ ಕೊಡಿಸುವಾತ ಆಯಿತು ಎಂದು ಹೇಳುತ್ತಾನೆ. ಸಹನಾ ಗೆ ಈ ವಿಚಾರ ತಿಳಿದೆ ಇರುವುದಿಲ್ಲ. ಆಕೆಗೆ ತಾನು ಬೆಂಗಳೂರಿನಂತಹ ಸಿಟಿಯಲ್ಲಿ ಸುಲಭದಲ್ಲಿ ದೊಡ್ಡ ಹೋಟೆಲ್ ನಡೆಸಬಹುದು ಎಂದುಕೊಂಡು ಇರುತ್ತಾಳೆ. ಆದರೆ ಆಕೆ ಅಂದುಕೊಂಡ ಹಾಗೆ ಯಾವುದು ನಡೆಯುವುದಿಲ್ಲ ಎನ್ನುವ ವಿಚಾರ ಇನ್ನಷ್ಟೇ ಆಕೆಗೆ ತಿಳಿಯಬೇಕಿದೆ. ಇನ್ನೂ ಅವ್ವ ಮನೆಯಲ್ಲಿ ಇಲ್ಲ , ಗೋಪಾಲ ಬೇರೆ ಪೊಲೀಸರ ವಶದಲ್ಲಿ ಇದ್ದಾನೆ ಎಂದು ಸುಮಾ ಬಹಳ ಗಾಬರಿ ಮಾಡಿಕೊಂಡು ಇರುತ್ತಾಳೆ.
ಗಾಬರಿಯಲ್ಲಿರುವ ಸುಮಗೇ ಸಾಂತ್ವಾನ ಹೇಳಿದ ಕಂಠಿ
ಆಕೆಗೆ ತನ್ನ ಅವ್ವ ಬೇರೆ ಎಲ್ಲೂ ಕಾಣಿಸುತ್ತಿಲ್ಲ. ಹಾಗೆಯೇ ತಂದೆ ಕೂಡ ಪೊಲೀಸರ ವಶದಲ್ಲಿ ಇದ್ದಾರೆ ಎಂದು ಕಂಠಿ ಗೆ ಕರೆ ಮಾಡಿ ಸುಮಾ ಹೇಳಿದಾಗ ಆತನಿಗೆ ಶಾಕ್ ಆಗುತ್ತದೆ. ಈ ಕಂಪ್ಲೇಂಟ್ ಯಾರು ಮಾಡಿದ್ದು ಎನ್ನುವುದು ಮಾತ್ರ ಕಂಠಿ ಗೆ ತಿಳಿಯಬೇಕಾಗಿದೆ. ಆತನಿಗೆ ತನ್ನ ಅತ್ತೆಯ ಬಗ್ಗೆ ಈ ರೀತಿ ತಪ್ಪಾಗಿ ಅರ್ಥೈಸಿ ಕೊಂಡು ಆಕೆಯ ಬಗ್ಗೆ ಕಂಪ್ಲೇಂಟ್ ಕೊಟ್ಟಿರಬಹುದು ಎಂದು ಯೋಚನೆ ಮಾಡುತ್ತಿರುತ್ತಾನೆ. ಇನ್ನೂ ಪೊಲೀಸರು ಪುಟ್ಟಕ್ಕನಿಗಾಗಿ ಹುಡುಕಾಟ ಮಾಡುತ್ತಿರುತ್ತಾರೆ


Click it and Unblock the Notifications











