Puttakkana Makkalu ; ವಸು ಮಗುವಿಗೆ ಅಪಾಯ, ಪುಟ್ಟಕ್ಕ ಮೇಲೆ ಅಪವಾದ..!
ಪುಟ್ಟಕ್ಕ ಗೆ ವಸು ಮಗುವಿನ ಚಿಂತೆ ಶುರುವಾಗಿದೆ. ಮಗುವಿಗೆ ಏನಾದರು ಹೆಚ್ಚು ಕಮ್ಮಿ ಆದರೆ ಏನು ಮಾಡುವುದು. ನಾನು ವಸುವಿಗೆ ಡೆಲಿವರಿ ಮಾಡಿಸಿದೆ. ಆದರೆ ವಸು ಹಾಗೂ ಮಗು ಆರೋಗ್ಯವಾಗಿ ಇರುವ ಕಾರಣ ನಾನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಅಗತ್ಯ ಇಲ್ಲ ಎಂದುಕೊಂಡೆ ಆದರೆ ವಸುವನ್ನು ಹಾಗೂ ಆಕೆಯ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ನನಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಬಹಳ ಬೇಸರದಿಂದ ಮನದಲ್ಲಿಯೇ ಮರುಗುತ್ತಿರುತ್ತಾರೆ.
ಇನ್ನೂ ಪುಟ್ಟಕ್ಕ ಕಂಠಿ ಗೆ ಕರೆ ಮಾಡುತ್ತಾಳೆ.ವಸು ಮಗು ಹೇಗಿದೆಯಪ್ಪ, ಡಾಕ್ಟರ್ ಏನು ಹೇಳಿದರು ಎಂದು ಬಹಳ ಆತಂಕದಿಂದ ಪುಟ್ಟಕ್ಕ ಕೇಳುತ್ತಾಳೆ. ಆದರೆ ಆಕೆಯ ಮಾತು ಕೇಳಿದ ಕಂಠಿ ನೀವು ಅಳಬೇಡಿ.ಮಗುವಿನ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ಮಾಹಿತಿ ತಿಳಿದು ಬರಬೇಕಾಗಿದೆ. ನೀವು ಚಿಂತೆ ಮಾಡಬೇಡಿ ಎಂದು ಹೇಳಿದಾಗ ಅಯ್ಯೋ ಆ ಮಗುವಿಗೆ ಯಾಕಾದರೂ ಕಷ್ಟ ಕೊಟ್ಟುಬಿಟ್ಟನೋ ಹುಟ್ಟುವಾಗ ಮಗು ಚೆನ್ನಾಗಿಯೇ ಇತ್ತು ಆದರೆ ಆ ಬಳಿಕ ಏನಾಯಿತು ಎಂದು ತಿಳಿಯುತ್ತಿಲ್ಲ ಎಂದು ಹೇಳಿದಾಗ ಸ್ನೇಹಾ ಕೊಂಚ ಗರಮ್ ಆಗುತ್ತಾಳೆ.

ಆ ನಂತರಅವ್ವ ನೀನು ಡೆಲಿವರಿ ಮಾಡಿಸಲು ನೀನು ಆಸ್ಪತ್ರೆಗೆ ಬರಬೇಕಾಗಿತ್ತು. ನೀನು ಯಾಕೆ ಮಾಡಿಸಿದೆ ಎಲ್ಲಾದರೂ ಏನಾದರು ಹೆಚ್ಚುಕಮ್ಮಿ ಆದರೆ ಎನು ಮಾಡಬೇಕಾಗಿತ್ತು. ನೀನು ಡೆಲಿವರಿ ಮಾಡಿದ ಕೂಡಲೇ ಇಬ್ಬರನ್ನೂ ಆಸ್ಪತ್ರೆ ಗೆ ಕರೆದುಕೊಂಡು ಬಂದಿದ್ದರೆ ಏನು ಆಗುತ್ತಿರಲಿಲ್ಲ. ನೀನು ತಪ್ಪು ಮಾಡಿದೆಯಮ್ಮ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಪುಟ್ಟಕ್ಕ ಗೆ ಮನದಲ್ಲಿ ಕೊಂಚ ನೋವು ಆಗುತ್ತದೆ. ಸುಮಾ ಅಕ್ಕನಿಗೆ ಏನೋ ಹೇಳಬೇಕು ಎನ್ನುವಷ್ಟರಲ್ಲಿ ಗೋಪಾಲ, ಸುಮಾ ನನ್ನು ತಡೆಯುತ್ತಾನೆ. ಆ ಕೂಡಲೇ ಕಂಠಿ ಸ್ನೇಹಾ ಕಡೆಯಿಂದ ಮೊಬೈಲ್ ತೆಗೆದುಕೊಂಡು ನೀವು ಏನು ಸಂಕಟ ಅನುಭವಿಸ್ಬೇಡಿ. ಏನು ಆಗುವುದಿಲ್ಲ. ನೀವು ಇಲ್ಲಸಲ್ಲದ ಆಲೋಚನೆ ಮಾಡುವುದನ್ನು ಬಿಡಿ ಏನು ಆಗೋಲ್ಲ ಎಂದು ಹೇಳುತ್ತಾನೆ
ಮಗುವಿನ ಜೀವಕ್ಕೆ ದೇವರ ಮೊರೆ ಹೋದ ಪುಟ್ಟಕ್ಕ
ಇನ್ನೂ ಪುಟ್ಟಕ್ಕ ಮಾತ್ರ ದೇವರ ಬಳಿಗೆ ಬಂದು ಕೈ ಮುಗಿಯುತ್ತಲೇ ಇರುತ್ತಾರೆ. ದೇವರೇ ನನಗೆ ಸ್ನೇಹಾ, ನಂಜಮ್ಮ , ಬಂಗಾರಮ್ಮ ಹೇಳಿದ ಯಾವ ಮಾತುಗಳು ನನಗೆ ಬೇಸರ ಕೊಡಲಿಲ್ಲ ಆದರೆ ವಸು ಗೆ ಆದ ಕಷ್ಟ ಹಾಗೆಯೇ ಆಕೆಯ ಅನುಭವಿಸುತ್ತಿರುವ ಕಷ್ಟದ ಬಗ್ಗೆ ಸಾಕಷ್ಟು ನೋವು ನನಗೆ ಆಗಿದೆ. ದಯವಿಟ್ಟು ಆ ಮಗುವಿಗೆ ಎನು ಆಗದ ಹಾಗೆ ನೀನೇ ನೋಡಿಕೊಳ್ಳಬೇಕು ಅಮ್ಮ ಎಂದು ದೇವರಿಗೆ ಕೈ ಮುಗಿಯುತ್ತಾಳೆ. ಮಗುವಿನ ಕಂಡಿಷನ್ ಅಷ್ಟಾಗಿ ಚೆನ್ನಾಗಿ ಇಲ್ಲ ಎಂದು ಡಾಕ್ಟರ್ ಹೇಳಿದ ಕೂಡಲೇ ಕಂಠಿ ಪುಟ್ಟಕ್ಕನ ಬಳಿಗೆ ಬರುತ್ತಾನೆ.

ಪುಟ್ಟಕ್ಕನ ಬಳಿಗೆ ಓಡಿ ಬಂದ ಕಂಠಿ
ಅತ್ತೆ ಮಗುವಿಗೆ ಕೊಂಚ ಸೀರಿಯಸ್ ಆಗಿದೆ. ನೀವು ಹೇಗೋ ಮಕ್ಕಳಿಗೆ ನಂಜು ಏರಿದ್ದರೆ ಮದ್ದು ಮಾಡಿ ಕೊಡುತ್ತೀರಾ ಅಂತಹ ಮದ್ದನು ವಸು ಮಗುವಿಗೆ ಕೊಡುತ್ತೀರಾ ಎಂದು ಕೇಳಿದಾಗ ಪುಟ್ಟಕ್ಕಗೆ ಏನು ಮಾಡಬೇಕು ಎಂದು ತೋಚದ ಹಾಗೆ ಆಗುತ್ತದೆ. ಹಾಗೆಯೇ ಆಕೆಗೆ ತಿಳಿಸಿರುವ ಮದ್ದನ್ನು ಮಗುವಿಗೆ ಆದಷ್ಟು ಬೇಗ ಕುಡಿಸಲು ತಯಾರಿ ಮಾಡುತ್ತಿರುತ್ತಾಳೆ. ಹೇಗಾದರೂ ಮಾಡಿ ವಸು ಮಗುವನ್ನು ಉಳಿಸಿಕೊಳ್ಳಲು ಬೇಕು ಎನ್ನುವ ಆಸೆ ಪುಟ್ಟಕ್ಕ ಗೆ ಇರುತ್ತದೆ.
ಬಂಗಾರಮ್ಮ ನ ಮಾತಿಗೆ ಪುಟ್ಟಕ್ಕ ಬೇಸರ
ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮಾ ಇದಕ್ಕೆಲ್ಲ ಪುಟ್ಟಕ್ಕ ನೆ ಕಾರಣ ಎನ್ನುವ ಹಾಗೆ ಮಾತನಾಡುತ್ತಾಳೆ. ಪುಟ್ಟಕ್ಕ ಮೇಲೆ ಯಾವತ್ತೂ ಆ ರೀತಿ ಬಂಗಾರ ಮ್ಮ ಮಾತನಾಡಿದವರು ಅಲ್ಲ. ಅಂತಹದರಲ್ಲಿ ಪುಟ್ಟಕ್ಕ ನ ಬಗ್ಗೆ ಮಾತನಾಡಿದಾಗ ನಂಜಮ್ಮ ಗೆ ಕೊಂಚ ಮನದಲ್ಲಿ ಖುಷಿ ಆಗುತ್ತದೆ.


Click it and Unblock the Notifications











