Puttakkana Makkalu ; ಪುಟ್ಟಕ್ಕನ ಬೆನ್ನ ಹಿಂದೆ ನಿಂತ ಪುಟ್ನಂಜ, ಮುಂದೆ ಇದೆಯಾ ಮಾರಿ ಹಬ್ಬ..?
ಪುಟ್ಟಕ್ಕನ ಮಕ್ಕಳು ಧಾರವಾಹಿ ನೋಡುಗರಿಗೆ ಇದೀಗ ಖುಷಿಯ ಸುದ್ದಿ ಸಿಕ್ಕಿದೆ. ಧಾರಾವಾಹಿಯಲ್ಲಿ ಈಗಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಆಗಿದ್ದು ಅಭಿಮಾನಿಗಳಿಗೆ ಬಹಳಷ್ಟು ಖುಷಿಯಾಗಿದೆ. ಮಗಳ ಪರ ಅದೆಷ್ಟೇ ಹೋರಾಟ ಮಾಡಿದರು ದಿನದಿಂದ ದಿನಕ್ಕೆ ಹಿನ್ನಡೆ ಆಗುತ್ತಿದೆ ಹೊರತು ಸತ್ಯಕ್ಕೆ ಜಯ ಸಿಗುವುದು ಮಾತ್ರ ಕಾಣಿಸುತ್ತಿಲ್ಲ. ಸ್ನೇಹ ಮೇಲೆ ಬಂದ ಕೆಟ್ಟ ಆಪಾದನೆಯನ್ನು ಹೇಗಾದರೂ ಮಾಡಿ ತೊಲಗಿಸಲೇ ಬೇಕು ಎನ್ನುವ ಆಲೋಚನೆ ಪುಟ್ಟಕ್ಕ ಗೆ ಅದಕ್ಕಾಗಿ ತನ್ನ ಪ್ರಾಣವನ್ನು ಲೆಕ್ಕಿಸದೆ ಹೋರಾಟವನ್ನು ಮಾಡುತ್ತಾಳೆ.
ಯಾರೊಬ್ಬರೂ ಕೂಡ ಪುಟ್ಟಕ್ಕ ಕೊಡುವ ಮನವಿಯನ್ನು ಸ್ವೀಕಾರ ಮಾಡುತ್ತಿಲ್ಲ. ಅಧಿಕಾರಿಗಳು ಇದ್ದರು ಇಲ್ಲ ಎಂದು ಹೊರಗಡೆ ನಿಂತಿರುವ ಸೆಕ್ಯೂರಿಟಿ ಗಾರ್ಡ್ ಗಳನ್ನೂ ನೋಡಿದ ಪುಟ್ಟಕ್ಕ ಗೆ ಬಹಳ ಬೇಸರವಾಗಿ ಬಿಡುತ್ತದೆ. ಇತ್ತ ಸಹನಾ ಪೊಲೀಸರ ಬಳಿ ನಾವು ದೇವಿಪುರದಿಂದ ಬಂದಿದ್ದೇವೆ . ಅದು ಕೂಡ ಕಾಲ್ನಡಿಗೆ ಮೂಲಕ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಹೇಳುತ್ತಾಳೆ. ಪುಟ್ಟಕ್ಕ ಐಏಎಸ್ ಅಸೋಸಿಯೇಶನ್ ಬಿಲ್ಡಿಂಗ್ ಬಳಿಗೆ ಬರುತ್ತಾಳೆ. ಅಲ್ಲಿ ಯಾರನ್ನು ಕೂಡ ಒಳಗಡೆಗೆ ಬಿಡುವುದಿಲ್ಲ.

ಪುಟ್ಟಕ್ಕ ಹೇಗಾದರೂ ಮಾಡಿ ತನ್ನ ಮಗಳ ಮೇಲೆ ಬಂದಿರುವ ಕಳಂಕವನ್ನು ತಪ್ಪಿಸಬೇಕು ಇಲ್ಲವಾದರೆ ಖಂಡಿತವಾಗಿಯೂ ನನ್ನ ಮಗಳ ಮೇಲೆ ಇದೆ ರೀತಿ ಆಪಾದನೆಗಳು ಹೆಚ್ಚಾಗುತ್ತೆ ಹೊರತು ಕಡಿಮೆ ಆಗುವುದಿಲ್ಲ ಅಂದುಕೊಳ್ಳುತ್ತಾಳೆ. ಸಹನಾ ಪೊಲೀಸರ ಜೊತೆ ಮಾತಿಗೆ ನಿಲ್ಲುತ್ತಾಳೆ. ಆಗ ಪುಟ್ಟಕ್ಕ ಪೊಲೀಸಪ್ಪನ ಜೊತೆ ವಿಚಾರಣೆ ಮಾಡುತ್ತಾಳೆ. ಹೇಗಾದರೂ ಮಾಡಿ ನಮಗೆ ಅಧಿಕಾರಿಗಳನ್ನು ಭೇಟಿಯಾಗಲು ಬಿಡಿ. ನಾವು ನನ್ನ ಮಗಳು ಸ್ನೇಹಾ ಬಗ್ಗೆ ಮಾತನಾಡಲು ಬಂದಿದ್ದೇವೆ ಎಂದು ಹೇಳಿದಾಗ ಗೇಟ್ ಬಳಿ ನಿಂತಿದ್ದ ಪೊಲೀಸ್ ಕೊಂಚ ಗಟ್ಟಿಯಾಗಿಯೇ ಮಾತನಾಡುತ್ತಾರೆ.
ಪುಟ್ಟಕ್ಕನನ್ನು ಆಫೀಸ್ ಒಳಗೆ ಬಿಡದ ಸಿಬ್ಬಂದಿಗಳು
ಇದೆಲ್ಲ ಗಮನಿಸಿದ ಸಹನಾ ನಾವು ಚಿಪ್ ಸೆಕ್ರೆಟರಿ ಮೀಟ್ ಆಗಬೇಕಾಗಿತ್ತು. ಎಂದಾಗ ಪೊಲೀಸ್ ಪರ್ಮಿಷನ್ ಲೆಟರ್ ಕೇಳುತ್ತಾರೆ. ಇದನ್ನು ಕೇಳಿಸಿಕೊಂಡ ಸಹನಾ ಇಲ್ಲ ಎನ್ನುತ್ತಾಳೆ. ಇದೆಲ್ಲವನ್ನೂ ಕೇಳಿದ ಪೊಲೀಸರು ಒಳಗೆ ಬಿಡಲಾಗುವುದು ಇಲ್ಲ ಎನ್ನುತ್ತಾರೆ. ಇದರಿಂದ ಪುಟ್ಟಕ್ಕ ಬೇಸರಗೊಂಡು ನೀನು ಹಾಗೆ ಹೇಳಬೇಡ ಕಣಯ್ಯ . ನನ್ನ ಮಗಳು ಡಿಸಿ ಆಗಿದ್ದವಳು. ಆಕೆಯ ಹೆಸರಿಗೆ ಮಸಿ ಬಳಿಯುವ ಕೆಲಸವಾಗುತ್ತಿದೆ ಈ ಬಗ್ಗೆ ಅಧಿಕಾರಿ ಬಳಿ ಮಾತನಾಡಬೇಕು ಎಂದ ಕೂಡಲೇ ಆ ಭ್ರಷ್ಟ ಅಧಿಕಾರಿ ಡಿಸಿ ಕಡೆಯವರ ಎಂದೆಲ್ಲ ಬಹಳ ಕೆಟ್ಟದಾಗಿ ಮಾತನಾಡುತ್ತಾನೆ .
ಪೊಲೀಸರ ಬಳಿ ಬೇಸರ ತೋಡಿಕೊಂಡ ಪುಟ್ಟಕ್ಕ
ಇದೆಲ್ಲವನ್ನೂ ಕೇಳಿದ ಪುಟ್ಟಕ್ಕ ಗೆ ಬಹಳ ಬೇಸರವಾಗುತ್ತದೆ. ತನ್ನ ಮಗಳು ಮಾಡದ ತಪ್ಪಿಗೆ ಭ್ರಷ್ಟ ಅಧಿಕಾರಿ ಎನ್ನುವ ಪಟ್ಟ ಬಂತಲ್ಲ ಎನ್ನುವ ಆಲೋಚನೆ ಆಕೆಗೆ ಮೂಡುತ್ತದೆ. ಆ ಕೂಡಲೇ ಸಾಹೇಬ್ರು ಬಂದ್ರು ಎಂದು ಹೇಳಿದ ಪೊಲೀಸ್ ಬಾಗಿಲು ತೆಗೆಯುತ್ತಾನೆ. ಪುಟ್ಟಕ್ಕ ಕೂಡಲೇ ಓಡಿ ಹೋಗಿ ಕಾರಿನ ಎದುರಾಗಿ ಮಲಗುತ್ತಾಳೆ. ತನ್ನ ಜೀವವನ್ನು ಪಣಕ್ಕಿಟ್ಟು ಪುಟ್ಟಕ್ಕ ಹೋರಾಟ ಮಾಡುತ್ತಾಳೆ. ಪುಟ್ಟಕ್ಕನ ಗೋಳು ಕೇಳಲು ಅಧಿಕಾರಿಗಳು ಮುಂದೆ ಬರುವುದಿಲ್ಲ. ಪುಟ್ಟಕ್ಕನನ್ನ ಕಾರಿನ ಎದುರುಗಡೆಯಿಂದ ಎದ್ದೇಳಿಸಿ ಅಲ್ಲಿಂದ ಕಳುಹಿಸಲು ನೋಡುತ್ತಾರೆ ಆದರೆ ಪುಟ್ಟಕ್ಕ ಅಲ್ಲಿಂದ ಕದಲುವುದಿಲ್ಲ.
ಪುಟ್ಟಕ್ಕ ಗೆ ಸಮಾಧಾನ ಮಾಡಿದ ಪುಟ್ನಂಜ
ತಾನು ತನ್ನ ಮಗಳ ಮೇಲೆ ಇರುವ ಕೆಟ್ಟ ಆಪಾದನೆ ಹೋಗುವವರೆಗೆ ಕೂಡ ಧರಣಿ ಹೂಡುತ್ತೇನೆ ಎಂದು ಹೋರಾಟ ಮಾಡುತ್ತಾಳೆ ಕೊನೆಗೆ ಸೀಮೆ ಎಣ್ಣೆಯನ್ನು ಮೈ ಮೇಲೆ ಸುರಿದುಕೊಂಡು ಇನ್ನೇನು ಬೆಂಕಿ ಹೊತ್ತಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಎಂಟ್ರಿಯಾಗುತ್ತಾರೆ. ಪುಟ್ಟಕ್ಕನನ್ನು ಸಾಯಲು ರವಿಚಂದ್ರನ್ ಬಿಡುವುದಿಲ್ಲ. ಯಾವತ್ತೂ ನಾವು ಸಾವಿನ ಬಗ್ಗೆ ಯೋಚನೆ ಮಾಡಬಾರದು. ನಾವು ಇದ್ದು ಜೈಸಬೇಕು. ನಾವು ಸತ್ತರೆ ಖಂಡಿತ ನಮಗೆ ನ್ಯಾಯ ಸಿಗುವುದಿಲ್ಲ ಎಂದು ರವಿಚಂದ್ರನ್ ಹೇಳಿದಾಗ ಪುಟ್ಟಕ್ಕಗೆ ಮತ್ತಷ್ಟು ಧೈರ್ಯ ಹೆಚ್ಚಾಗುತ್ತದೆ. ಏನೇ ಆಗಲಿ ನನ್ನ ಮಗಳಿಗೆ ಮಾತ್ರ ನ್ಯಾಯ ಒದಗಿಸದೇ ಇಲ್ಲಿಂದ ಕದಲುವುದಿಲ್ಲ ಎನ್ನುವ ಆಲೋಚನೆ ಮಾಡುತ್ತಾಳೆ.


Click it and Unblock the Notifications











