Puttakkana Makkalu ; ಪುಟ್ಟಕ್ಕನಿಗೆ ಧೈರ್ಯ ಹೇಳಿದ ಕಂಠಿ, ಮಗುವಿಗೆ ನಾಟಿ ಔಷಧಿ ಮಾಡಿಕೊಟ್ಟ ಪುಟ್ಟಕ್ಕ..!
ಪುಟ್ಟಕ್ಕನನ್ನ ಯಾರೇ ದೂಷಿಸಿದರೂ ಕೂಡ ಕಂಠಿ ಮಾತ್ರ ನನ್ನ ಅತ್ತೆ ಯಾವತ್ತೂ ತಪ್ಪು ಕೆಲಸ ಮಾಡಿದವರು ಅಲ್ಲ ಅವರನ್ನು ಈ ಸಮಯದಲ್ಲಿ ದೂಷಣೆ ಮಾಡುವುದು ಸರಿಯಲ್ಲ ವಸುವಿನ ಕಷ್ಟದ ಸಮಯದಲ್ಲಿ ಮಗು ಹಾಗೂ ಆಕೆಯನ್ನು ರಕ್ಷಣೆ ಮಾಡಿದ್ದಾರೆ ನನ್ನ ಅತ್ತೆ. ಆದರೆ ಈಗ ಮಗುವಿಗೆ ನಂಜು ಏರಿದೆ ಇದರಿಂದ ಮಗು ಸಾವು ಬದುಕಿನ ಹೋರಾಟದಲ್ಲಿದೆ. ಆದರೆ ಈಗ ನನ್ನ ಅತ್ತೆಯನ್ನು ದೂಷಣೆ ಮಾಡುವುದು ತಪ್ಪು. ಪುಟ್ಟಕ್ಕ ಮನೆಯಲ್ಲಿ ಹೆರಿಗೆ ಮಾಡಿಸಿ ಮಗುವನ್ನು ಹಾಗೂ ವಸುವನ್ನು ಬಹಳ ಜಾಗರೂಕತೆಯಿಂದನೇ ನೋಡಿಕೊಂಡಿದ್ದಾಳೆ
ಆದರೆ ನಂತರ ಬಂದ ಸ್ನೇಹ , ನಂಜಮ್ಮ , ಚಂದ್ರು ಇವರೆಲ್ಲರೂ ಸೇರಿಕೊಂಡು ತಾಯಿ ಮಗುವನ್ನು ಆಸ್ಪತ್ರೆಗೆ ಸೇರಿಸಿದರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ ಅವರಿಬ್ಬರೂ ಇನ್ನು ಕ್ಷೇಮವಾಗಿ ಇರುತ್ತಿದ್ದರು ಆದರೆ ಅಪಾಯದ ಅಂಚಿನಲ್ಲಿದ್ದ ಗರ್ಭಿಣಿ ವಸುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲಿಯೇ ಡೆಲಿವರಿ ಮಾಡಿಸಿದಳು ಎನ್ನುವ ಕಾರಣಕ್ಕೆ ಪುಟ್ಟಕ್ಕ ಆಸ್ಪತ್ರೆಗೆ ವಸು ಹಾಗೂ ಆಕೆಯ ಮಗುವನ್ನು ಡೆಲಿವರಿ ಆದ ಕೂಡಲೇ ಸೇರಿಸಬೇಕಿತ್ತು. ಹಾಗಿದ್ದಾಗ ಅವರಿಬ್ಬರು ಕ್ಷೇಮವಾಗಿ ಇರುತ್ತಿದ್ದರು ಎಂದು ಎಲ್ಲರೂ ಸೇರಿ ಆಪಾದನೆ ಮಾಡುತ್ತಾರೆ . ಆದರೆ ಆಪಾದನೆ ಮಾಡುವ ಮುಂಚೆ ತಾವು ಆ ಕೆಲಸವನ್ನು ಮಾಡಬಹುದು ಎನ್ನುವ ಆಲೋಚನೆ ಅವರು ಮಾಡುವುದಿಲ್ಲ. ಇನ್ನು ಪುಟ್ಟಕ್ಕಳ ಮನಸ್ಸನ್ನು ಆಕೆಯ ಮಗಳೇ ಅರ್ಥಮಾಡಿಕೊಂಡಿಲ್ಲ ಸ್ನೇಹ ಕೂಡ ಎಲ್ಲರ ತರ ನೀನು ಮಾಡಿದ್ದು ತಪ್ಪು ಎಂದು ತನ್ನ ತಾಯಿಗೆ ಹೇಳಿದಾಗ ಪುಟ್ಟಕ್ಕಗೆ ನೋವಾಗುತ್ತದೆ. ನಾನು ಮಾಡಿದ್ದು ತಪ್ಪು ಆದರೆ ಆ ಸಮಯದಲ್ಲಿ ನಾನು ಮಾಡಿದ್ದು ಸರಿಯಾಗಿ ಇತ್ತು, ತಾಯಿ ಮಗು ಕ್ಷೇಮವಾಗಿಯಿತು ಆದರೆ ಆ ಬಳಿಕ ಏನಾಯಿತು ಎನ್ನುವ ಆಲೋಚನೆ ಪುಟ್ಟಕ್ಕಗೆ ಆಗುತ್ತದೆ.

ಸ್ವಂತ ಮೊಮ್ಮಗು ಮೇಲೆ ದ್ವೇಷ ತೀರಿಸಿಕೊಂಡ ನಂಜಮ್ಮ
ನಂಜಮ್ಮ ತನ್ನ ಸ್ವಂತ ಮೊಮ್ಮಗುವಿಗೆ ನಂಜು ಹೆಚ್ಚಾಗುವ ಯಾವುದೊ ಔಷಧಿಯನ್ನು ರಾಧಾ ಮೂಲಕ ಮಗುವಿಗೆ ಕುಡಿಸುತ್ತಾಳೆ. ನಂಜಮ್ಮ ಗೆ ತನ್ನ ಸ್ವಂತ ಮೊಮ್ಮಗಳು ಬೇಕಾಗಿಲ್ಲ. ಆಕೆಗೆ ವಸು ಮೇಲಿನ ದ್ವೇಷ ಬಂಗಾರಮ್ಮನ ಮೇಲಿರುವ ದ್ವೇಷ ಇದುವೇ ಮುಖ್ಯವಾಗಿರುತ್ತದೆ. ವಸು ಹಾಗೂ ಚಂದ್ರು ಪ್ರೀತಿಸಿ ಮದುವೆಯಾದರು ಎನ್ನುವ ಕಾರಣಕ್ಕಾಗಿ ಅವರಿಬ್ಬರನ ನಂಜಮ್ಮ ದ್ವೇಷ ಮಾಡುತ್ತಾಳೆ. ಇದೀಗ ಮಗುವಿನ ಮೇಲೆ ಕೂಡ ದ್ವೇಷ ತೀರಿಸಿಕೊಂಡಿದ್ದಾಳೆ ಮಗುವಿಗೆ ನಂಜಿ ಏರಿಸುವ ಔಷಧಿ ನೀಡಿದ್ದಲ್ಲದೆ ಇದಕ್ಕೆಲ್ಲ ಕಾರಣ ಪುಟ್ಟಕ್ಕ ಎಂದು ಬಿಂಬಿಸುತ್ತಿದ್ದಾಳೆ.
ಮಗುವಿಗೆ ಏನಾಗಿ ಬಿಡುತ್ತದೋ ಎನ್ನುವ ಭಯದಲ್ಲಿ ಪುಟ್ಟಕ್ಕ
ಪುಟ್ಟಕ್ಕನ ಮನೆಗೆ ಬಂದು ಆಕೆಯನ್ನ ನಿಂದಿಸಿದ್ದಾಳೆ ಆದರೆ ಪುಟ್ಟಕ್ಕ ಮಾತ್ರ ನನ್ನದೇನು ತಪ್ಪಿಲ್ಲ ಎಂದು ಹೇಳಿದರು ಅದ್ಯಾವುದನ್ನ ಕೇಳಿಸಿಕೊಳ್ಳಲು ಯಾರು ರೆಡಿ ಇಲ್ಲ. ಇನ್ನು ಡಾಕ್ಟರ್ ಸ್ನೇಹ ಬಳಿ ಬಂದು ಹೇಳುತ್ತಾರೆ ಮಗುವಿಗೆ ನಂಜು ಏರಿರುವುದರಿಂದ ಮಗು ನಮ್ಮ ಯಾವುದೇ ಟ್ರೀಟ್ಮೆಂಟ್ ಕೂಡ ಸ್ಪಂದನೆ ನೀಡುತ್ತಿಲ್ಲ ಮಗು ಸಾವು ಬದುಕಿನ ನಡುವೆ ಹೋರಾಡುತ್ತಿದೆ ಎಂದು ಡಾಕ್ಟರ್ ಹೇಳಿದ್ದೆ ತಡ ವಸು ಗಳ ಗಳ ಎಂದು ಅತ್ತುಬಿಡುತ್ತಾಳೆ. ಈ ಸಮಯದಲ್ಲಿ ಆಕೆಯ ಜೊತೆ ಆಕೆಯ ಗಂಡ ಚಂದ್ರು ಕೂಡ ಇರುವುದಿಲ್ಲ. ಸ್ನೇಹಾಗೆ ತಲೆ ಮೇಲೆ ಆಕಾಶವೇ ಬಿದ್ದ ಅನುಭವವಾಗುತ್ತದೆ. ಹೇಗಾದರೂ ಮಾಡಿ ಏನು ಅರಿಯದ ಆ ಮುಗ್ಧ ಮಗುವನ್ನ ರಕ್ಷಣೆ ಮಾಡಿ ಎಂದು ಡಾಕ್ಟರ್ ಬಳಿ ಅಂಗಲಾಚುತ್ತಾರೆ.

ಕಂಠಿ ಮಾತಿಗೆ ಸಮ್ಮತಿ ಸೂಚಿಸಿದ ಪುಟ್ಟಕ್ಕ
ಇನ್ನು ಪುಟ್ಟಕ್ಕನ ಬಳಿ ಬಂದ ಕಂಠಿ ಅವ್ವ ನೀವು ಎಲ್ಲಾ ಮಕ್ಕಳಿಗೆ ಹಾಗೂ ಹಿರಿಯರಿಗೆ ನಾಟಿ ಔಷಧಿಯನ್ನು ಮಾಡಿಕೊಡುತ್ತೀರಿ. ಆ ಔಷಧಿಯನ್ನು ಈ ಮಗುವಿಗೂ ಮಾಡಿಕೊಡಿ ಡಾಕ್ಟರ್ ಔಷಧಿಯಿಂದ ಮಗು ಹುಷಾರಾಗದೇ ಇದ್ದರೂ ನೀವು ಕೊಟ್ಟ ಔಷಧಿಯಿಂದಾದರೂ ಮಗು ಹುಷಾರಾಗಿ ಆಗುತ್ತದೆ ಎನ್ನುವ ಭರವಸೆ ನನಗಿದೆ ಆ ಕಾರಣಕ್ಕೆ ನಾನು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಕಂಠಿ ಹೇಳುತ್ತಾನೆ. ಮೊದಲು ಕಂಠಿ ಮಾತಿಗೆ ಕೊಂಚ ತಡವರಿಸಿದ ಈಕೆ ಆ ಬಳಿಕ ಆಯ್ತು ಎಂದು ಸಮ್ಮತಿ ನೀಡಿ ಮಗುವಿಗೆ ಮದ್ದು ಅರೆದು ಕೊಡುತ್ತಾಳೆ. ಬಳಿಕ ಯಾವ ರೀತಿ ಮಗುವಿಗೆ ಅದನ್ನ ಕೊಡಬೇಕು ಎನ್ನುವುದನ್ನು ವಿವರವಾಗಿ ಹೇಳುತ್ತಾಳೆ. ಕಂಠಿ ನಾಟಿ ಔಷಧಿಯನ್ನು ತೆಗೆದುಕೊಂಡು ಆಸ್ಪತ್ರೆಗೆ ಹೋಗುತ್ತಾನೆ. ಇನ್ನು ಇದಕ್ಕೆ ಸ್ನೇಹ ಏನು ಹೇಳುತ್ತಾಳೆ ಆ ನಾಟಿ ಔಷಧಿಯನ್ನ ಆ ಮಗುವಿಗೆ ಕೊಡುತ್ತಾಳೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ


Click it and Unblock the Notifications











