Puttakkana Makkalu ; ರಾಧಾ ಜೊತೆಗೆ ಕಂಠಿ ನಿಶ್ಚಿತಾರ್ಥ, ಮದುವೆ ತಡೆಯುತ್ತಾಳಾ ಪುಟ್ಟಕ್ಕ ?
ಪುಟ್ಟಕ್ಕ ಗೆ ಕಂಠಿ ಹಾಗೂ ಸ್ನೇಹಾ ಹೇಗಾದರೂ ಮಾಡಿ ಒಂದು ಮಾಡಲೇಬೇಕು ಎನ್ನುವ ಆಸೆ ಬಹಳಷ್ಟು ಕಾಡುತ್ತಿರುತ್ತದೆ. ಇದಕ್ಕಾಗಿ ತನ್ನ ಆಪ್ತ ಗೆಳತಿ ಬಂಗಾರಮ್ಮನವರ ಜೊತೆಗೆ ಕಾದಾಟಕ್ಕೆ ಇಳಿಯುತ್ತಾಳೆ. ಆದರೆ ಇದೀಗ ಅದರ ಪರಿಣಾಮವಾಗಿ ಬಂಗಾರಮ್ಮನ ಮಾತೆ ಗೆದ್ದಿದೆ. ಕಂಠಿ ತನ್ನ ತಾಯಿ ಹೇಳಿದ ಪ್ರಕಾರವಾಗಿ ನಡೆದುಕೊಳ್ಳುತ್ತಿದ್ದಾನೆ. ಆತನಿಗೆ ಸ್ನೇಹಾ ಎಂದರೆ ಬಹಳಷ್ಟು ಪ್ರೀತಿ. ಅದು ತನ್ನ ಹೆಂಡತಿಯ ಹೃದಯವನ್ನು ಸ್ನೇಹಾ ಗೆ ಜೋಡಣೆ ಮಾಡಿದ್ದಾರೆ ಎಂದು ತಿಳಿದ ಬಳಿಕ ಕಂಠಿ ಸ್ನೇಹಾ ಮೇಲೆ ಪ್ರಾಣವನ್ನು ಇಟ್ಟುಕೊಳ್ಳುತ್ತಾನೆ.
ಆದರೆ ರಾಧಾಳಿಂದ ಕಂಠಿ ಹಾಗೂ ಸ್ನೇಹಾ ದೂರ ದೂರ ಆಗುವ ಪ್ರಮೇಯ ಬಂದೊದಗಿದೆ. ಕಂಠಿಗೆ ಬಹಳಷ್ಟು ನೋವು ಕಾಡುತ್ತದೆ. ಆತನಿಗೆ ರಾಧಾ ಜೊತೆ ಮದುವೆ ಆಗುವುದು ಕೊಂಚವೂ ಇಷ್ಟವಿಲ್ಲ.ಅದರಲ್ಲಿ ಇದೀಗ ಇಬ್ಬರಿಗೂ ನಿಶ್ಚಿತಾರ್ಥ ಮಾಡಬೇಕು ಎಂದು ಬಂಗಾರಮ್ಮ ಆಲೋಚನೆ ಮಾಡಿ ರಾಧಾ ಹಾಗೂ ಕಂಠಿಗೆ ನಿಶ್ಚಿತಾರ್ಥ ಮಾಡುತ್ತಾಳೆ. ವಿಪರ್ಯಾಸ ಎಂದರೆ ಅದೇ ದಿನ ಗಂಗಾಧರಯ್ಯ ತನ್ನ ಮಗಳು ಸ್ನೇಹಾಗೆ ಬೇರೆ ಗಂಡಿನ ಜೊತೆಗೆ ನಿಶ್ಚಿತಾರ್ಥ ಮಾಡುತ್ತಾನೆ. ಸ್ನೇಹಗೆ ಬೇರೆ ಹುಡುಗನ ಜೊತೆಗೆ ತಾನು ಬದುಕುವುದು ಸ್ವಲ್ಪ ಕೂಡ ಇಮ್ಯಾಜಿನ್ ಮಾಡಲು ಆಕೆಯಿಂದ ಸಾಧ್ಯ ಆಗುವುದಿಲ್ಲ.

ಆಕೆಗೆ ಬಹಳಷ್ಟು ನೋವು ಆಗುತ್ತದೆ. ಆದರೆ ಅದನ್ನು ಯಾರ ಎದುರಿಗೆ ತೋರಿಸುವುದಿಲ್ಲ. ಇನ್ನು ಕಂಠಿ ಹಾಗೂ ರಾಧಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಾರೆ . ರಾಧಾ ಗೆ ಕಂಠಿ ಎಂದರೆ ಮುಂಚಿನಿಂದಲೂ ಹುಚ್ಚು ಪ್ರೀತಿ. ಆದರೆ ಕಂಠಿಗೆ ರಾಧಾಳನ್ನು ಕಂಡರೆ ಸ್ವಲ್ಪವೂ ಇಷ್ಟವಿಲ್ಲ. ಆದರೂ ರಾಧಾ ಗೆ ಕಂಠಿ ಉಂಗುರ ತೊಡಿಸುತ್ತಾನೆ ಮನಸಿಲ್ಲದ ಮನಸಿನಿಂದ ರಾಧ ಜೊತೆಗೆ ಇರುತ್ತಾನೆ. ನಿಶ್ಚಿತಾರ್ಥ ಮುಗಿದ ಬಳಿಕ ರಾಧ ಮತ್ತು ಕಂಠಿ ನೇರವಾಗಿ ಸ್ನೇಹಾ ಸಮಾಧಿ ಬಳಿ ಬರುತ್ತಾರೆ. ಸ್ನೇಹಾ ಸಮಾಧಿ ಬಳಿ ಬಂದ ರಾಧಾ , ಸ್ನೇಹಾ ಗೋರಿಯ ಮೇಲೆ ದೀಪ ಇಡುತ್ತಾಳೆ. ಹೂವಿನ ಹಾರ ಹಾಕುತ್ತಾಳೆ.
ರಾಧಾ ಮುಂದಿನ ನಿಲುವೇನು?
ಸ್ನೇಹಾ, ಇನ್ನೂ ಮೇಲೆ ಮಾವ ನನ್ನವರು, ಅವರನ್ನು ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ರಾಧಾ ಹೇಳುತ್ತಾಳೆ. ಈ ಮಾತು ಕೇಳಿದ ಕಂಠಿಗೆ ಸಿಕ್ಕಾಪಟ್ಟೆ ನೋವು ಆಗುತ್ತದೆ. ಆದರೆ ಆ ನೋವನ್ನು ಯಾರ ಜೊತೆಗೂ ತೋರಿಸುವುದಿಲ್ಲ. ಕೂಡಲೇ ರಾಧಾ ಮಾತನಾಡುತ್ತಿರುವಾಗ ಸ್ನೇಹಾ ಸಮಾಧಿ ಗೆ ಹಚ್ಚಿದ ದೀಪ ಆರಿ ಹೋಗುತ್ತದೆ. ಇದನ್ನು ನೋಡಿದ ರಾಧಾ ಗೆ ಕೋಪ ಬರುತ್ತದೆ. ಕಂಠಿ ಒಮ್ಮಿಂದೊಮ್ಮೆಲೆ ಶಾಕ್ ಆಗುತ್ತಾನೆ . ಇದಾದ ಬಳಿಕ ಕಂಠಿ ಹಾಗೂ ರಾಧ ಇಬ್ಬರು ಪುಟ್ಟಕ್ಕನ ಮನೆಗೆ ಹೋಗುತ್ತಾರೆ. ಪುಟ್ಟಕ್ಕ ನನ್ನ ಹಾಗೂ ಮಾವನ ನಿಶ್ಚಿತಾರ್ಥ ಆಯಿತು. ಇನ್ನು ಮೇಲೆ ಮಾವ ನನ್ನವರು ನಿಮ್ಮ ಆಶೀರ್ವಾದ ತೆಗೆದುಕೊಂಡು ಹೋಗಲು ಬಂದೆ ಎಂದು ಹೇಳುತ್ತಾಳೆ. ಈ ಮಾತು ಕೇಳಿದ ಪುಟ್ಟಕ್ಕ ಗೆ ಮಾತೆ ಬಾರದ ಹಾಗೆ ಆಗುತ್ತದೆ.
ಕಂಠಿ ಗೆ ಎದುರಾಗಿ ಸಿಕ್ಕ ಸ್ನೇಹಾ
ಇನ್ನು ರಾಧಾ ಹಾಗೂ ಕಂಠಿ ರಸ್ತೆಯಲ್ಲಿ ಹೋಗಬೇಕಾದರೆ ಸ್ನೇಹಾ ಹಾಗೂ ಆಕೆ ಮದುವೆ ಆಗುವವನ ಜೊತೆಗೆ ಅಡ್ಡಲಾಗಿ ಸಿಗುತ್ತಾಳೆ. ಸ್ನೇಹಳನ್ನು ನೋಡುತ್ತಿದ್ದ ಕಂಠಿ ಗೆ ಬಹಳ ನೋವಾಗುತ್ತದೆ. ಆದರೆ ಆತ ಅದ್ಯಾವುದನ್ನೂ ತೋರಿಸುವುದಿಲ್ಲ . ಆದ್ರೆ ರಾಧಾ ಬಹಳಷ್ಟು ಕಠೋರಿ. ಆಕೆಗೆ ಬಂಗಾರಮ್ಮನ ಮೇಲೆ ಇರುವುದು ಪ್ರೀತಿಯಲ್ಲ ದ್ವೇಷ . ತನ್ನ ತಾಯಿಯನ್ನು ಆ ರೀತಿ ನಡೆಸಿಕೊಂಡಿದ್ದು ತಪ್ಪು ಎಂದು ರಾಧಾ ಆಗಾಗ ಹೇಳುತ್ತಿರುತ್ತಾಳೆ. ಆಕೆಗೆ ಬಹಳಷ್ಟು ನೋವಾಗುತ್ತದೆ. ತನ್ನ ತಾಯಿ ಶಶಿಕಲಾ ಳನ್ನು ಬಂಗಾರಮ್ಮ ಬಹಳ ತುಚ್ಛವಾಗಿ ಕಂಡಿದ್ದರು ಹೇಗಾದರೂ ಮಾವನ ಜೀವನ ಹಾಳು ಮಾಡಬೇಕೆಂದು ಹೊಂಚು ಹಾಕುತ್ತಿದ್ದಾಳೆ. ಮುಂದೆ ಸ್ನೇಹಾ ಹಾಗೂ ಕಂಠಿ ಒಂದಾಗುತ್ತಾರ ಕಾದು ನೋಡಬೇಕಿದೆ.


Click it and Unblock the Notifications











