Puttakkana Makkalu ; ಆ ಕಡೆ ಮ್ಯಾಕ್ಸ್ ಈ ಕಡೆ ಕಾಳಿ ಅಡಕತ್ತರಿಯಲ್ಲಿ ಸಿಲುಕಿದ ಸಹನಾ..!

By ಪೂರ್ವ

ಕಂಠಿ ಗೆ ಇದೀಗ ಸ್ನೇಹಾ ಬಳಿ ಮಂಡಿಯೂರಿ ಕ್ಷಮೆ ಕೇಳುವ ಪರಿಸ್ಥಿತಿ ಬಂದೊದಗಿದೆ. ತನ್ನ ಸೊಸೆ ಸತ್ತು ಹೋಗಿದ್ದಾಳೆ ಎನ್ನುವ ವಿಚಾರ ಬಂಗಾರಮ್ಮಗೆ ಇನ್ನು ತಿಳಿದಿಲ್ಲ. ಆಕೆಗೆ ತನ್ನ ಸೊಸೆ ಬದುಕಿದ್ದಾಳೆ, ಯಾವುದೋ ಕರ್ತವ್ಯದ ಮೇರೆಗೆ ದೂರದೂರಿಗೆ ತೆರಳಿದ್ದಾಳೆ ಆದಕಾರಣ ಆಕೆಗೆ ಬರಲು ಸಾಧ್ಯವಾಗಿಲ್ಲ, ಆದರೆ ಯಾವತ್ತೂ ಕೂಡ ಸ್ನೇಹ ನನಗೆ ಫೋನ್ ಮಾಡುತ್ತಿದ್ದಳು. ಇವತ್ತು ಯಾಕೆ ನನಗೆ ಸ್ನೇಹ ಫೋನ್ ಮಾಡಿಲ್ಲ ಎಂದು ಮನದಲ್ಲಿಯೇ ಕೊರಗುತ್ತಿರುತ್ತಾಳೆ. ಸ್ನೇಹ ನನಗೆ ಫೋನ್ ಮಾಡಿಲ್ಲ. ಹಾಗೆಯೇ ಆಕೆಯ ಫೋನ್ ಬಂದ ಬಳಿಕವಷ್ಟೇ ನಾನು ಊಟ ಮಾಡುತ್ತೇನೆ ಎಂದು ತನ್ನ ಮಗಳ ಬಳಿ ಬಂಗಾರಮ್ಮ ಹೇಳುತ್ತಾಳೆ.

ಇತ್ತ ವಸುಗೆ ಬಹಳ ಭಯವಾಗುತ್ತದೆ. ಕೂಡಲೇ ಆಕೆ ಕಂಠಿಗೆ ಕರೆ ಮಾಡಿ ಮನೆಗೆ ಬರಲು ಹೇಳುತ್ತಾಳೆ. ತನ್ನ ಅವ್ವ ಯಾರ ಮಾತನ್ನು ಕೂಡ ಕೇಳುತ್ತಿಲ್ಲ ಎಂದು ತಿಳಿದು ಕೂಡಲೇ ಕಂಠಿ ಮನೆಗೆ ಓಡೋಡಿ ಬರುತ್ತಾನೆ. ವಸು ತನ್ನ ಅಣ್ಣನ ಬಳಿ ತನ್ನ ತಾಯಿ ಯೋಚನೆ ಮಾಡುತ್ತಿರುವ ರೀತಿಯ ಬಗ್ಗೆ ಹೇಳಿದಾಗ ಆತನಿಗೆ ಬಹಳ ಕೆಟ್ಟ ಕೋಪ ಬರುತ್ತದೆ. ಸ್ನೇಹಳಿಗೆ ಯಾಕೆ, ಅಮ್ಮನಿಗೆ ಕರೆ ಮಾಡಿ ಮಾತನಾಡಲು ಆಗುವುದೇ ಇಲ್ವಾ ಎಂದು ಹೇಳಿ ಪುಟ್ಟಕ್ಕನ ಮನೆಗೆ ಕಂಠಿ ಹೋಗುತ್ತಾನೆ.

kannada serial puttakkana makkalu written 24th December

ಸ್ನೇಹಳನ್ನು ನೋಡಿದ ಕೂಡಲೇ ಕಂಠಿಗೆ ಬಹಳ ಕೋಪ ಬಂದರು ತನ್ನ ತಾಯಿಗಾಗಿ ಸ್ನೇಹಾ ಬಳಿ ಅವ್ವನಿಗೆ ಕರೆ ಮಾಡಿ ಮಾತನಾಡುವಂತೆ ಹೇಳುತ್ತಾನೆ. ಇತ್ತ ಕಾಳಿ ಸಹನಾ ಮೇಲೆ ಜೀವವನ್ನು ಇಟ್ಟುಕೊಂಡು ಇರುತ್ತಾನೆ. ಮ್ಯಾಕ್ಸ್ ಕೂಡ ಸಹನಾಳನ್ನು ಪ್ರೀತಿ ಮಾಡುತ್ತಿರುತ್ತಾನೆ. ಆದರೆ ಇಬ್ಬರ ಪ್ರೀತಿಯ ವಿಚಾರ ಕೂಡ ಸಹನಾ ಗೆ ತಿಳಿದಿರುವುದಿಲ್ಲ. ಇದೀಗ ಧಾರವಾಹಿ ತಂಡ ಪ್ರೊಮೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಅದರಲ್ಲಿ ಸಹನಗೆ ಮ್ಯಾಕ್ಸ್ ವೆಲ್ ಪ್ರಪೋಸ್ ಮಾಡುವ ಸೀನ್ ಇದೆ.

ಸಹನಾ ಮೇಲೆ ಜೀವ ಇಟ್ಟುಕೊಂಡಿರುವ ಮ್ಯಾಕ್ಸ್

ಮ್ಯಾಕ್ಸ್ ತನ್ನ ಹೃದಯದ ಮಾತುಗಳನ್ನು ಹೇಳುತ್ತಿರುವ ವೇಳೆ ಸಹನ ಗೆ ಬಹಳಷ್ಟು ಶಾಕ್ ಆಗುತ್ತದೆ. ಆದರೆ ಇದನ್ನು ದೂರದಲ್ಲಿ ನಿಂತು ನೋಡಿದ ಕಾಳಿ ಮಾತ್ರ ಇನ್ನಷ್ಟು ಶಾಕ್ ಗೆ ಒಳಗಾಗಿದ್ದಾನೆ. ಕಾಳಿ ಸಹನಳನ್ನು ಚಿಕ್ಕ ವಯಸ್ಸಿನಿಂದಲೂ ಪ್ರೀತಿ ಮಾಡುತ್ತಿರುತ್ತಾನೆ. ಆದರೆ ಆಕೆಗೆ ಆತನ ಮೇಲೆ ಯಾವುದೇ ಫೀಲಿಂಗ್ಸ್ ಇರುವುದೇ ಇಲ್ಲ. ಮ್ಯಾಕ್ಸ್ ವೆಲ್ ಪ್ರಪೋಸ್ ಮಾಡುತ್ತಿರುವ ದೃಶ್ಯವನ್ನು ನೋಡಿದ ಅಭಿಮಾನಿಗಳು ಬಹಳಷ್ಟು ಶಾಕ್ ಗೆ ಒಳಗಾಗಿದ್ದಾರೆ. ಅನೇಕ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಸಹನಾ ಅವರೇ ನಿಮಗೆ ಕಾಳಿಯೇ ಉತ್ತಮ ಪ್ರಿಯಕರ, ಆತನ ಪ್ರೀತಿಗೆ ತಣ್ಣೀರು ಎರಚಬೇಡಿ ಎಂದು ಹೇಳಿದ್ದಾರೆ.

ಕಾಳಿ ಪ್ರೀತಿ ಗೆ ಜಯ ಸಿಗುತ್ತಾ?

ಇನ್ನೂ ಕೆಲವರು ವಿದೇಶದವನ ಪ್ರೀತಿಗೆ ಮರುಳಾಗದಿರಿ ಎಂದು ಬುದ್ಧಿವಾದ ಹೇಳಿದ್ದಾರೆ. ಸಹನಾ ಮೊದಲು ಮುರಳಿಯನ್ನ ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಮುರಳಿ ಸಹನಳ ಸಹನೆಯನ್ನೇ ಪರೀಕ್ಷೆ ಮಾಡಲು ಹೊರಟಿದ್ದ ಮುರಳಿಯ ಪ್ರೀತಿಯನ್ನೇ ನಿರಾಕರಿಸಿ ಬಂದ ಸಹನಾ ಗೆ ಯಾರು ಬೇಡ ಎಂದೆ ಅನ್ನಿಸಿದೆ. ಅದರಲ್ಲಿ ಬೇರೆ ಇದೀಗ ಮ್ಯಾಕ್ಸ್ ವೆಲ್ ಪ್ರಪೋಸನ ಸಹನಾ ಒಪ್ಪಿಕೊಳ್ಳುತ್ತಾಳ ಎನ್ನುವ ಕುತೂಹಲದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X