Puttakkana Makkalu ; ಸ್ನೇಹಾ ಮುಂದಾಲೋಚನೆಗೆ ಸೆಲ್ಯೂಟ್ ಹೊಡೆದ ಪುಟ್ಟಕ್ಕ, ಬಂಗಾರಮ್ಮನ ಮನೆಯಲ್ಲಿ ಏನಾಗುತ್ತೋ ಏನೋ ?
ಸ್ನೇಹಾ ಸತ್ತ ವಿಚಾರ ಬಂಗಾರಮ್ಮ ಇನ್ನೂ ತಿಳಿದಿಲ್ಲ. ಆಕೆಗೆ ತನ್ನ ಸೊಸೆ ಸ್ನೇಹಾ ಬದುಕಿದ್ದಾಳೇ. ಕರ್ತವ್ಯದ ಮೇರೆಗೆ ಬೇರೆಡೆಗೆ ತೆರಳಿದ್ದಾಳೆ ಎಂದು ಅಂದುಕೊಂಡಿದ್ದಾಳೆ. ಸ್ನೇಹಾ ಧ್ವನಿಯನ್ನು ಒಂದು ದಿನ ಕೇಳದೆ ಇದ್ದರೆ ಆಕೆಗೆ ಆ ದಿನವೇ ಚೆನ್ನಾಗಿ ಇರುವುದಿಲ್ಲ. ಬಂಗಾರಮ್ಮ ಸ್ನೇಹಾ ಧ್ವನಿ ಕೇಳದೆ ಇದ್ದರೆ ಊಟನೆ ಮಾಡುವುದಿಲ್ಲ. ಅಂತಹದರಲ್ಲಿ ಆಕೆಗೆ ಸ್ನೇಹಾ ಬದುಕಿಲ್ಲ ಎಂದು ತಿಳಿದರೆ ಆಕೆಗೆ ಬಹಳಷ್ಟು ಆಘಾತ ಆಗುವುದು ಮಾತ್ರ ಖಂಡಿತ. ಸ್ನೇಹಾ ಇನ್ಶೂರೆನ್ಸ್ ಮಾಡಿರುತ್ತಾಳೆ. ತಾನು ಸತ್ತರೆ ಯಾರಿಗೂ ಕೂಡ ಕಷ್ಟ ಆಗಬಾರದು ಎಂದು ಮನದಲ್ಲಿ ಅಂದುಕೊಂಡು ಪುಟ್ಟಕ್ಕ ಹಾಗೂ ಬಂಗಾರಮ್ಮ ಅವರಿಬ್ಬರ ಹೆಸರಲ್ಲಿ ಇನ್ಶೂರೆನ್ಸ್ ಮಾಡಿರುತ್ತಾಳೆ.
ಪುಟ್ಟಕ್ಕನ ಮನೆಗೆ ಇನ್ಶೂರೆನ್ಸ್ ನವರೂ ಬರುತ್ತಾರೆ. ಅವರೆಲ್ಲರನ್ನೂ ನೋಡಿದ ಪುಟ್ಟಕ್ಕ ಗೆ ತನ್ನ ಮಗಳು ಮುಂದಾಲೋಚನೆ ಮಾಡಿರುವುದರ ಬಗ್ಗೆ ಬಹಳಷ್ಟು ಖುಷಿ ಪಡುತ್ತಾಳೆ. ತಾನು ಹೋದ ಬಳಿಕ ಕೂಡ ಯಾರು ಕಷ್ಟ ಪಡಬಾರದು ಸ್ನೇಹಾ ಇನ್ಶೂರೆನ್ಸ್ ಮಾಡಿದ್ದಾಳಲ್ಲ ಎಂದು ಬಹಳ ನೊಂದುಕೊಳ್ಳುತ್ತಾರೆ. ಆದರೆ ಆಕೆಯ ಹಣವನ್ನು ನಾನು ತೆಗೆದುಕೊಳ್ಳುವುದಿಲ್ಲ. ಆಕೆ ಹೆಸರು ಹೇಳಿ ನಾಲ್ಕಾರು ಜನ ಶಿಕ್ಷಣ ಪಡೆಯಲೀ ಎಂದು ಹೇಳುತ್ತಾರೆ. ಆಗ ಇನ್ಶೂರೆನ್ಸ್ ಆಫೀಸರ್ ಇನ್ಶೂರೆನ್ಸ್ ಇಬ್ಬರ ಹೆಸರಲ್ಲಿ ಮಾಡಿದ್ದಾರೆ. ಒಂದು ನಿಮ್ಮ ಹೆಸರಲ್ಲಿ ಮತ್ತೊಂದು ಬಂಗಾರಮ್ಮ ಅವರ ಹೆಸರಲ್ಲಿ ಎಂದಾಗ ಪುಟ್ಟಕ್ಕ ಗೆ ಬಹಳ ದೊಡ್ಡ ಆಘಾತವೇ ಆಗುತ್ತದೆ.

ಬಳಿಕ ಮಾತು ಮುಂದುವರೆಸಿದ ಆಫೀಸರ್ ಬಂಗಾರಮ್ಮನವರ ಹೆಸರಲ್ಲಿ ಇನ್ಶೂರೆನ್ಸ್ ಮಾಡಲಾಗಿದೆ. ಅದಕ್ಕಾಗಿ ಅವರ ಮನೆಗೆ ಒಂದು ತಂಡ ಹೋಗಿದೆ. ಅವರ ಸಹಿ ನಮಗೇ ಬೇಕಿದೆ ಅದಕ್ಕಾಗಿ ನಾವು ಅಲ್ಲಿಗೆ ಕೂಡ ಹೋಗಲೇ ಬೇಕು ಎಂದು ಹೇಳಿದಾಗ ಪುಟ್ಟಕ್ಕ ಆತಂಕಕ್ಕೆ ಒಳಗಾಗುತ್ತಾಳೆ. ಬಂಗಾರಮ್ಮ ಗೆ ಸ್ನೇಹಾ ಸತ್ತ ವಿಚಾರ ತಿಳಿದರೆ ಮಾತ್ರ ಬಹಳಷ್ಟು ಕಷ್ಟ. ಅವರ ಮನಸ್ಸಿಗೆ ಮತ್ತಷ್ಟು ಘಾಸಿ ಆಗುವ ಲಕ್ಷಣ ಕಾಣಿಸುತ್ತಿದೆ ಏನು ಮಾಡಬೇಕು ಎಂದು ದಿಕ್ಕು ತೋಚದೆ ಸುಮ್ಮನೆ ಕುಳಿತಿರುತ್ತಾಳೆ.
ಸಹನಾ ಗೆ ಪ್ರಪೋಸ್ ಮಾಡಿದ ಮ್ಯಾಕ್ಸ್
ಇತ್ತ ಸಹನಾ ಗೆ ಮ್ಯಾಕ್ಸಿ ಪ್ರಪೋಸ್ ಮಾಡಿದ ವೇಳೆ ಸಹನಾ ಗೆ ಬಹಳಷ್ಟು ನೋವು ಆಗುತ್ತದೆ. ಹುಡುಗಿಯರು ಪ್ರೀತಿಯಿಂದ, ಸಲುಗೆಯಿಂದ ಮಾತನಾಡಿದ ಕೂಡಲೇ ಅದನ್ನು ಪ್ರೀತಿ ಎಂದು ಎಲ್ಲರೂ ಹೇಗೆ ಕರೆಯುತ್ತಾರೆ. ಅವರಿಬ್ಬರ ಜೊತೆ ಪ್ರೀತಿಗೆ ಮೀರಿದ ಬಂಧವು ಇರಬಹುದು ಎಂದು ಸಹನಾ ಹೇಳುತ್ತಾಳೆ. ಮ್ಯಾಕ್ಸಿ ಪ್ರೀತಿಯನ್ನು ನಿರಾಕರಿಸುತ್ತಾಳೆ ಹಾಗೆಯೇ ಬಹಳ ಕಟುವಾಗಿ ಮಾತನಾಡುತ್ತಾಳೆ. ಮ್ಯಾಕ್ಸಿ ಗೆ ಸಹನಾ ಎಂದರೆ ಬಹಳ ಹುಚ್ಚು ಪ್ರೇಮ. ಸಹನಳನ್ನು ಮೊದಲು ನೋಡಿದ ಕೂಡಲೇ ಆಕೆಗೆ ಈಕೆಯೇ ನನ್ನ ಪ್ರೀತಿಯ ಹುಡುಗಿ ಎಂದುಕೊಂಡು ಇರುತ್ತಾನೆ.
ಸಹನಾ ಬಳಿ ಪ್ರೀತಿ ಹೇಳದೆ ಮುಚ್ಚಿಟ್ಟ ಕಾಳಿ
ಆದರೆ ಸಹನಾ ಆತನ ಪ್ರೀತಿಯನ್ನು ತಿರಸ್ಕರಿಸಿ ಬಿಡುತ್ತಾಳೆ. ಇದರಿಂದ ಮ್ಯಾಕ್ಸ್ ಗೆ ಕೊಂಚ ನೋವು ಆಗುತ್ತದೆ. ಇದನ್ನೆಲ್ಲ ದೂರದಿಂದ ನಿಂತು ನೋಡುತ್ತಿದ್ದ ಕಾಳಿ ಮಾತ್ರ , ನಾನು ಸಹನಾ ಜೊತೆ ಪ್ರೀತಿ ವಿಚಾರ ಹೇಳುವುದೇ ಇಲ್ಲ. ಹೇಳಿದರೆ ಖಂಡಿತವಾಗಿಯೂ ಆಕೆಯ ಜೊತೆ ನಾನು ಇರಲು ಸಾಧ್ಯ ಇಲ್ಲ ಎಂದು ಮನದಲ್ಲಿ ಅಂದುಕೊಂಡು ಅಲ್ಲಿಂದ ಹೊರಟು ಬಿಡುತ್ತಾನೆ. ಕಾಳಿ ಗೆ ತನ್ನ ಜೊತೆ ಸಹನಾ ಯಾವತ್ತೂ ಇರಬೇಕು ಎನ್ನುವ ಆಸೆ ಆತನಿಗೆ. ಸಹನಾ ಜೊತೆ ಪ್ರೀತಿ ಹೇಳಿದರೆ ಮ್ಯಾಕ್ಸ್ ನ ಹಾಗೆ ನಾನು ಕೂಡ ದೂರ ಉಳಿಯಬೇಕಾದ ಪರಿಸ್ಥಿತಿ ಬರುತ್ತದೆ. ಅದಕ್ಕೆ ನಾನು ಆಕೆಯ ಜೊತೆ ಪ್ರೀತಿ ವಿಚಾರ ಹೇಳುವುದು ಇಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ.


Click it and Unblock the Notifications











