Puttakkana Makkalu ; ಬಂಗಾರಮ್ಮ ಗೆ ತಿರುಗೇಟು ನೀಡಿದ ಸಹನಾ? ಸಹನಾ ಮಾತಿಗೆ ಪುಟ್ಟಕ್ಕ ಕಕ್ಕಾಬಿಕ್ಕಿ.!
ಪುಟ್ಟಕ್ಕ ಗೆ ತನ್ನ ಮಗಳದ್ದೇ ಯೋಚನೆ. ತನ್ನ ಮಗಳು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾನೆ ಎಂದು ಹೇಳಿದರು ಕೂಡ ಬಹಳಷ್ಟು ಅಡೆತಡೆಗಳು ಬರುತ್ತಿದೆ. ಅಂತಹದರಲ್ಲಿ ಜೀವನ ಪೂರ್ತಿ ಒಂಟಿಯಾಗಿ ಇರುತ್ತೇನೆ ಎಂದರೆ ಅದೆಷ್ಟು ಜನ ಏನೇನೋ ಅನ್ನುತ್ತಾರೆ ಎನ್ನುವ ಆಲೋಚನೆ ಆಕೆಗೆ. ಸಹನಾ ಬಹಳ ಒಳ್ಳೆಯ ಮನಸ್ಥಿತಿಯವಳು. ಆಕೆಯ ಹೆಸರಿಗೆ ಏನೇನೋ ಕಳಂಕ ತರಬೇಕು ಎಂದು ಅನೇಕರು ಕಾಯುತ್ತಿರುತ್ತಾರೆ. ಆದರೆ ಸಹನಾ ಮಾತ್ರ ಯಾರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ. ಕಾಳಿ ಪಂಚಾಯತಿಯಲ್ಲಿ ಸುಳ್ಳು ಹೇಳದೆ ನಿಜವನ್ನು ಸಹನಾ ಮುಂದೆ ಒಪ್ಪಿಕೊಳ್ಳುತ್ತಾನೆ .
ಹಾಗೆಯೇ ತಾನು ಚಿಕ್ಕ ವಯಸ್ಸಿನಿಂದಲೂ ಸಹನಾ ಜೊತೆಗೆ ಬಹಳ ಪ್ರೀತಿಯಿಂದ ಇರುವುದಾಗಿ ಹೇಳುತ್ತಾನೆ. ಆದರೆ ಇದೇ ವಿಚಾರಕ್ಕೆ ಕಾಳಿಯ ಮೇಲೆ ಸಹನಾ ಮೇಲೆ ಮುನಿಸಿಕೊಂಡಿದ್ದಾಳೆ. ಆಕೆಗೆ ಕಾಳಿ ಮಾಡುತ್ತಿರೋದು ಮಹಾ ದೊಡ್ಡ ತಪ್ಪಿನ ಹಾಗೆ ಕಾಣುತ್ತದೆ. ಆದರೆ ಪಾಪ ಕಾಳಿ ತನ್ನ ಅಕ್ಕನ ದ್ವೇಷದಿಂದಾಗಿ ತನ್ನ ಪ್ರೀತಿಯನ್ನು ಕಳೆದುಕೊಳ್ಳುವ ಅನಿವಾರ್ಯತೆ ಬಂದೊದಗಿದೆ . ಸಹನಾ ತಂದೆಗೆ ಕಾಳಿಯ ಪ್ರೀತಿಯ ಬಗ್ಗೆ ತಿಳಿದಿತ್ತು ಆದರೆ ಆತ ಮೊದಲೇ ಈ ವಿಚಾರವನ್ನು ಪುಟ್ಟಕ್ಕ ಬಳಿ ಹೇಳಿದರೆ, ಇಷ್ಟೆಲ್ಲ ರಾದ್ಧಾಂತ ಆಗುತ್ತಿರಲಿಲ್ಲ.

ಈ ಬಗ್ಗೆ ಪುಟ್ಟಕ್ಕ ತನ್ನ ಗಂಡನ ಬಳಿ ಮಾತನಾಡಿ ಆತನನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ನು ಸಹನಾ ಬಳಿ ಕಾಳಿ ಹಾಗು ಕಂಠಿ ಆಗಮಿಸುತ್ತಾರೆ. ಕಾಳಿ ಪ್ರೀತಿಗೆ ಕಂಠಿ ಸಹಾಯ ಮಾಡುತ್ತೇನೆ ಎಂದು ಹೇಳಿದಾಗ ಕಾಳಿ ಗೆ ಬಹಳಷ್ಟು ಖುಷಿ ಆಗುತ್ತದೆ. ಸಹನಾ ಗೆ ಮನವರಿಕೆ ಮಾಡುವ ಸಲುವಾಗಿ ಕಾಳಿ ಸಹನಾ ಮನೆ ಮುಂದೆ ಬಂದು ನಿಲ್ಲುತ್ತಾನೆ. ಸಹನಾ ಗೆ ಎಲ್ಲಾ ವಿಚಾರ ಹೇಳುವ ಮುನ್ನವೇ ಕಾಳಿಗೆ ಸರಿಯಾಗಿ ಮಂಗಳಾರತಿ ಮಾಡುತ್ತಾಳೆ ಸಹನಾ. ಹಾಗೆಯೇ ಕಂಠಿಗೆ ಕೂಡ ಖಡಕ್ ಆಗಿ ವಾರ್ನಿಂಗ್ ಮಾಡುತ್ತಾಳೆ. ಸಹನಾ ಮಾತು ಕೇಳಿ ಕಂಠಿ ಅಲ್ಲಿಂದ ಹೊರಟು ಹೋದರೆ, ಕಾಳಿ ಮಾತ್ರ ಸಹನಾ ಮುಂದೆ ನಿಂತುಕೊಂಡಿರುತ್ತಾನೆ.
ಕಾಳಿಯ ಮುಖಕ್ಕೆ ಮಂಗಳಾರತಿ ಬೆಳಗಿದ ಸಹನ
ಕೊನೆಗೆ ಕಾಳಿಯ ಮುಖಕ್ಕೆ ಮಂಗಳಾರತಿ ಮಾಡುತ್ತಾಳೆ . ಸಹನಾ ಮಾತು ಕೇಳಲಾಗದೆ ಅಲ್ಲಿಂದ ಹೊರಟು ಹೋಗುತ್ತಾನೆ. ಕಾಳಿ ಗೆ ಸಹನಾ ಎಂದರೆ ಬಹಳಷ್ಟು ಪ್ರೀತಿ. ಆಕೆಯ ಪ್ರೀತಿಯನ್ನು ಹೇಗಾದರೂ ಮಾಡಿ ಪಡೆದುಕೊಳ್ಳಬೇಕು ಎಂದು ಹರ ಸಾಹಸ ಮಾಡುತ್ತಾನೆ. ಇತ್ತ ಬಂಗಾರಮ್ಮ ಪುಟ್ಟಕ್ಕನ ಮನೆಗೆ ಬರುತ್ತಾರೆ. ಆಕೆ ಮನೆ ಮಂದಿಯ ಜೊತೆಗೆ ಬಹಳ ಖುಷಿಯಾಗಿ ಮಾತನಾಡುತ್ತಾರೆ. ಬಳಿಕ ಸಹನಳನ್ನು ನೋಡಿ ಕೊಂಚ ಬುದ್ದಿವಾದವನ್ನು ಬಂಗಾರಮ್ಮ ಹೇಳುತ್ತಾರೆ. ಪುಟ್ಟಕ್ಕ ಒಂಟಿ ಹುಡುಗಿ, ಗಂಡನಿಂದ ದೂರ ಇದ್ದವರನ್ನು ಈ ಸಮಾಜ ಬಹಳ ಕೆಟ್ಟದಾಗಿ ನೋಡುತ್ತಾರೆ. ಇದು ನಿನಗೆ ತಿಳಿದಿರಬಹುದು. ಆದರೆ ಇದೀಗ ಸಹನಾ ಜೀವನದಲ್ಲಿ ಏನೇನೋ ನಡೆಯುತ್ತಿದೆ.
ಅತ್ತೆಯ ಮಾತಿಗೆ ಕೋಪಗೊಂಡ ಸಹನಾ
ಸಹನಾ ಯಾಕೆ ಇನ್ನೊಂದು ಮದುವೆ ಆಗಬಾರದು ಎಂದು ಮದುವೆ ಪ್ರಸ್ತಾಪ ತೆಗೆಯುತ್ತಾರೆ ಬಂಗಾರಮ್ಮ . ಬಂಗಾರಮ್ಮ ನ ಮಾತು ಕೇಳಿದ ಸಹನಾ ಗೆ ಬಹಳಷ್ಟು ಕೋಪ ಬರುತ್ತದೆ. ಆಕೆ ಬಂಗಾರಮ್ಮ ನವರ ವಿರುದ್ಧವಾಗಿ ಮಾತನಾಡುತ್ತಾಳೆ. ಬೇಕಿದ್ದರೆ ನಿಮ್ಮ ಮಗನಿಗೆ ಇನ್ನೊಂದು ಮದುವೆ ಮಾಡುವ ಪ್ರಯತ್ನ ಮಾಡಿ ನನ್ನ ವಿಚಾರ ನಿಮಗೆ ಬೇಡ ಎನ್ನುವ ಮಾತಿನ ಧಾಟಿಯಲ್ಲಿ ಮಾತನಾಡುತ್ತಾಳೆ ಆಕೆಯ ಮಾತನು ಕೇಳಿದ ಬಂಗಾರಮ್ಮಗೆ ಬಹಳ ಬೇಸರ ಆಗುತ್ತದೆ. ಕೂಡಲೇ ಪುಟ್ಟಕ್ಕನ ಮನೆಯಿಂದ ಹೊರಟು ಹೋಗುತ್ತಾರೆ. ಕೊನೆಗೆ ಅಕ್ಕ ತಂಗಿಯಂದಿರು ಮಾತಿನಲ್ಲಿ ಮುಳುಗುತ್ತಾರೆ. ಆಗ ಸ್ನೇಹಾ ಕಾಳಿ ಮಾಡಿದ್ದು ತಪ್ಪಿಲ್ಲ ಎನ್ನುವ ಅರ್ಥದಲ್ಲೇ ಮಾತನಾಡುತ್ತಾಳೆ. ಕಾಳಿ ನಿಜ ಹೇಳಿದ ಕಾರಣದಿಂದ ಆತನಿಗೆ ಅಷ್ಟೊಂದು ಜನರು ಬಯ್ಯುತ್ತಿದ್ದಾರೆ ಹಾಗೆಯೇ ಎಲ್ಲರ ಪಾಲಿಗೆ ವಿರೋಧಿಯಾಗಿ ಕಾಣಿಸುತ್ತಾನೆ. ಆತ ಎಲ್ಲಾದರೂ ಸುಳ್ಳು ಹೇಳಿದರೆ ನಿಮಗೆ ಇಷ್ಟ ಆಗುತ್ತಿತ್ತಾ ಸಹನಾ ಅಕ್ಕ ಎಂದು ಹೇಳುತ್ತಾರೆ.


Click it and Unblock the Notifications











