Puttakkana Makkalu: ಪುಟ್ಟಕ್ಕನ ಗಂಡ ಅರೆಸ್ಟ್: ರಾಜೇಶ್ವರಿ ಪ್ಲಾನ್ ಸಕ್ಸಸ್

By Poorva

ಪುಟ್ಟಕ್ಕ ಚಿಕ್ಕ ವಯಸ್ಸಿನಿಂದಲೂ ಕಷ್ಟ ಪಟ್ಟು ಜೀವನ ನಡೆಸಿದಾಕೆ. ಮದುವೆ ಆದ ಬಳಿಕ ಆದರೂ ಖುಷಿಯಾಗಿ ಜೀವನ ನಡೆಸಬೇಕು ಎಂದಾಗ ಗೋಪಾಲ ಕಾಟದಿಂದ ಅದು ಸಾಧ್ಯ ಆಗಲಿಲ್ಲ. ಪುಟ್ಟಕ್ಕ ಮೂವರು ಮಕ್ಕಳನ್ನು ಬೆಳೆಸಿ ದೊಡ್ಡವರು ಮಾಡುವ ತನಕ ಕೂಡ ರಾಜಿ ಹಾಗೂ ಗೋಪಾಲ ಅವರ ಕಿರುಕುಳ ತಪ್ಪಿದ್ದಿಲ್ಲ.

ಜೀವನದಲ್ಲಿ ಎದುರಾದ ಕಷ್ಟಗಳನ್ನೆಲ್ಲಾ ಸಹಿಸಿಕೊಂಡು ಜೀವನ ಸಾಗಿಸುತ್ತಾ ಇದ್ದಾಳೆ. ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಟ್ಟು ಒಳ್ಳೆಯ ಸ್ಥಾನಕ್ಕೆ ಹೋಗಬೇಕು, ಯಾರ ಬಳಿಯೂ ಕೈ ಚಾಚದೇ ಬದುಕಬೇಕು ಎನ್ನುವುದು ಪುಟ್ಟಕ್ಕನ ಆಸೆ. ಇನ್ನು ಪುಟ್ಟಕ್ಕನ ಮೆಸ್ ಮೇಲೆ ರಾಜಿ ವಕ್ರದೃಷ್ಟಿ ಮೊದಲಿನಿಂದಲೂ ಇದೆ. ಪುಟ್ಟಕ್ಕನ ಮನೆ ಮೆಸ್ ನನಗೆ ಸೇರಬೇಕು ಎಂದು ರಾಜಿ ಹೊಂಚು ಹಾಕುತ್ತಲೇ ಇದ್ದಳು.

kannada serial puttakkana makkalu written 29th January episode

ಇದೀಗ ಗೋಪಾಲನ ಸೈನ್ ಅನ್ನು ಫೋರ್ಜರಿ ಮಾಡಿದ ರಾಜಿ, ನನ್ನ ಗಂಡ ನನ್ನ ಹೆಸರಿಗೆ ಈ ಮನೆ ಮೆಸ್ ಎಲ್ಲಾ ಬರೆದು ಕೊಟ್ಟಿದ್ದಾನೆ. ಇನ್ನು ಮೇಲೆ ಇದಕ್ಕೆಲ್ಲ ನಾನೇ ಒಡತಿ ಎಂದು ಪುಟ್ಟಕ್ಕನ ಮನೆ ಬಳಿ ರಾಜಿ ಹಾಗೂ ಕಾಳಿ ಪೊಲೀಸರನ್ನು ಕರೆದುಕೊಂಡು ಬರುತ್ತಾರೆ. ಗೋಪಾಲನಿಗೆ ರಾಜಿಯ ಮಾಸ್ಟರ್ ಪ್ಲಾನ್ ಗೊತ್ತಿರುತ್ತದೆ.

ಗೋಪಾಲ ಆ ಕಾಗದ ಪತ್ರವನ್ನು ನೋಡಿ ಪುಟ್ಟಕ್ಕನ ಬಳಿ ಹೇಳುತ್ತಾನೆ. ಪುಟ್ಟಮ್ಮಿ ಈ ಸೈನ್ ನಂದು ಅಲ್ಲ. ನಾನು ಈ ರೀತಿ ಸೈನ್ ಮಾಡೋದು ಇಲ್ಲ ಎಂದು ಹೇಳಿದಾಗ ಪುಟ್ಟಕ್ಕಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ. ರಾಜೇಶ್ವರಿ ಮಾಸ್ಟರ್ ಪ್ಲಾನ್ ಮಾತ್ರ ವರ್ಕ್ ಆಗುತ್ತಿದೆ.

ರಾಜಿಗೆ ಗಂಡನಿಗಿಂತ ಆತನ ಆಸ್ತಿಯೇ ಮುಖ್ಯ . ಅದಕ್ಕಾಗಿ ಏನು ಬೇಕಾದರೂ ಮಾಡಲು ಹೊರಟಿದ್ದಾಳೆ. ಆಕೆಯ ಮಗನನ್ನು ಹೇಗಾದರೂ ಮಾಡಿ ತನ್ನತ್ತ ಸೆಳೆದು ಬಿಟ್ಟಿದ್ದಾಳೆ. ಇದೀಗ ಗಂಡನ ಸರದಿ , ಗಂಡ ಯಾಕೆ ನನ್ನ ಜೊತೆ ಬರುವುದಿಲ್ಲ ಎನ್ನುವುದನ್ನು ನಾನು ನೋಡುತ್ತೇನೆ ಎಂದು ಬಹಳ ಹಠದಿಂದ ಇರುತ್ತಾಳೆ.

kannada serial puttakkana makkalu written 29th January episode

ಪೊಲೀಸರನ್ನು ಕರೆದುಕೊಂಡು ಬಂದ ರಾಜೀ

ಬಳಿಕ ರಾಜಿ ಪೊಲೀಸರ ಬಳಿ ಹೇಳಿ ಗೋಪಾಲನನ್ನು ಅರೆಸ್ಟ್ ಮಾಡಿಸುತ್ತಾಳೆ. ಗೋಪಾಲ ಅರೆಸ್ಟ್ ಆಗಿರುವುದನ್ನು ಕಂಡ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗುತ್ತದೆ. ಇತ್ತ ರಾಧಾ ಹಾಗೂ ಶಶಿಕಲಾ ಮಾಸ್ಟರ್ ಪ್ಲಾನ್ ಮಾಡುತ್ತಾ ಇರುತ್ತಾರೆ. ಹೇಗಾದರೂ ಮಾಡಿ ಸ್ನೇಹಾ ಹೊಟ್ಟೆಯಲ್ಲಿ ಇರುವ ಮಗುವನ್ನು ತೆಗೆದು ಹಾಕಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾರೆ. ಇನ್ನು ಶಶಿಕಲಾ ಕಿವಿಗೆ ಪುಟ್ಟಕ್ಕನ ಮನೆಯಲ್ಲಿ ನಡೆದ ವಿಚಾರ ತಿಳಿಯುತ್ತದೆ. ಈ ನೆಪವನ್ನು ಇಟ್ಟುಕೊಂಡು ಬಂಗಾರಮ್ಮನ ಬಳಿಗೆ ಹೋಗುತ್ತಾರೆ.

ಶಶಿಕಲಾ ಪ್ಲಾನ್ ಫ್ಲಾಪ್

ಅತ್ತಿಗೆಯ ಬಳಿ ಏನು ಮಾತನಾಡಬೇಕು ಎಂದು ತಿಳಿಯದೇ ಶಶಿಕಲಾ ಸುಮ್ಮನೆ ಕುಳಿತುಕೊಂಡಿರುತ್ತಾಳೆ. ಶಶಿಕಲಾ ಈಗ ಬಂದ್ಯಾ? ಏನಾದರು ಮಾತನಾಡುವುದು ಇತ್ತ ಎಂದು ಕೇಳುತ್ತಾಳೆ ಬಂಗಾರಮ್ಮ. ಇದನ್ನು ಕೇಳಿ ಶಶಿಕಲಾ, ಸ್ನೇಹ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ . ಆ ಮಗು ಹೊಟ್ಟೆಯಲ್ಲಿ ಇರಬೇಕಾದರೆ ಇಷ್ಟೆಲ್ಲ ಅನಾಹುತ ಸಂಭವಿಸಿದೆ. ಹಾಗಾಗಿ ಸ್ನೇಹಾ ಹೊಟ್ಟೆಯಲ್ಲಿ ಇರುವ ಮಗುವನ್ನು ತೆಗೆಸಿ ಬಿಡಿ ಅತ್ತಿಗೆ ಎಂದು ಹೇಳಿದಾಗ ಬಂಗಾರಮ್ಮ ಮಾತ್ರ ಶಶಿಕಲಾ ಮಾತಿಗೆ ಗರಂ ಆಗುತ್ತಾಳೆ.

ಶಶಿಕಲಾ ಮಾತಿಗೆ ಕೋಪಗೊಂಡ ಬಂಗಾರ ಮ್ಮ

ಏನು ಮಾತನಾಡುತ್ತಾ ಇದ್ದೀಯಾ? ಎನ್ನುವ ಪ್ರಜ್ಞೆ ಇದೆಯಾ ಶಶಿಕಲಾ ಎಂದೆಲ್ಲ ಬಂಗಾರಮ್ಮ ಬೈಯ್ಯುತ್ತಾಳೆ. ಶಶಿಕಲಾ ಮಾತುಗಳನ್ನು ಕೇಳಿದಾಗಲೇ ಬಹಳ ಕೋಪ ಬರುತ್ತದೆ. ಹಾಗೆಯೇ ಎದುರಿನಲ್ಲಿ ಸ್ನೇಹಾ ಹಾಗೂ ಕಂಠಿ ಮೇಲೆ ಎಷ್ಟೇ ಕೋಪ ಇದ್ದರೂ ಮನದಲ್ಲಿ ಬಹಳ ಪ್ರೀತಿಯನ್ನು ಇಟ್ಟುಕೊಂಡು ಇರುತ್ತಾಳೆ. ಹುಟ್ಟುವ ಮಗುವನ್ನು ಸಾಯಿಸುವಷ್ಟು ಕೀಳು ಮಟ್ಟಕ್ಕೆ ಹೋಗಿದ್ದಾಳೆ ಶಶಿಕಲಾ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾಳೆ.

More from Filmibeat

English summary
Puttakkana makkalu today episode update;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X