ಮುರಳಿ ಮದುವೆಯಲ್ಲಿ ಕಾಣಿಸಿಕೊಂಡ ಸಹನಾ, ನಿಜ ಹೇಳಲು ಹೊರಟ ಕಾಳಿಯನ್ನು ತಡೆದಿದ್ದಾರು ಯಾಕೆ?

By ಪೂರ್ವ

ಪುಟ್ಟಕ್ಕನ ಮಗಳು ಸಹನಾ,ವಿನುತ ಮುರಳಿ ಮದುವೆಗೆ ಬಂದಾಯ್ತು, ಇನ್ನೇನಿದ್ದರೂ ಕೂಡ ತಾನು ಬದುಕಿದ್ದೇನೆ ಎನ್ನುವ ಸತ್ಯವನ್ನು ಎಲ್ಲರ ಜೊತೆಗೂ ಕೂಡ ಹೇಳಬೇಕಾಗಿದೆ. ಆದರೆ ಸಹನಾ ಆ ಕೆಲಸವನ್ನ ಮಾಡುವುದಿಲ್ಲ . ಸಹನಾಗೆ ತಾನು ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು ಹಾಗೆ ನಾನೇನಾದರೂ ಸಾಧಿಸಿ ತೋರಿಸಬೇಕು ಹಾಗೆಯೇ ಮನೆಗೆ ಬಂದರೆ ನಾನು ಇಷ್ಟು ದಿನ ಪಟ್ಟಂತಹ ಶ್ರಮ ಎಲ್ಲಾ ಹಾಳಾಗಿ ಹೋಗುತ್ತದೆ ಎನ್ನುವುದು ಆಕೆಯ ತಲೆಯಲ್ಲಿರುತ್ತದೆ, ಇನ್ನು ಸಹನಾ, ಮುರಳಿ ಹಾಗೂ ವಿನುತಾ ಮದುವೆಗೆ ಊಟದ ವ್ಯವಸ್ಥೆಯನ್ನು ಮಾಡಿರುತ್ತಾಳೆ.

ಆಗ ಅಲ್ಲಿಗೆ ಕಾಳಿ ಬರುತ್ತಾನೆ. ಕಾಳಿಗೆ ಸಹನಾ ಬದುಕಿರುವ ವಿಚಾರ ಗೊತ್ತಿರುತ್ತದೆ. ಆದರೆ ಸಹನಾ ವಿನುತಾ ಹಾಗೂ ಮುರಳಿ ಮದುವೆಯ ಊಟದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾಳೆ. ಆಕೆಯ ಹೋಟೆಲ್ ನಿಂದ ಫುಡ್ ಸರ್ವಿಸ್ ಎಂದು ಕಾಳಿ ಗೆ ಗೊತ್ತಾಗುವುದಿಲ್ಲ. ಮುರಳಿ ಮದುವೆಯಲ್ಲಿ ಕಾಳಿ ಕುಡಿದು ತೂರಾಡುತ್ತಾ ಬರುತ್ತಿರಬೇಕಾದರೆ ಕಾಳಿಯ ಕಣ್ಣಿಗೆ ಸಹನಾ ಕಾಣಿಸುತ್ತಾಳೆ . ಆ ಕೂಡಲೇ ಎರಡು ಕಣ್ಣನ್ನು ಒರೆಸುತ್ತಾ ಒಮ್ಮೆ ಇದು ಸಹನಾನ ಎಂದು ನೋಡುತ್ತಾನೆ. ಆದರೆ ಆತ ನೋಡುತ್ತಿರುವ ವಿಚಾರ ಸರಿಯಾಗಿಯೇ ಇತ್ತು. ಆಕೆ ಸಹನಾ ಆಗಿದ್ದಳು. ಕಾಳಿಯನ್ನು ನೋಡಿ ಸಹನಾ ಗೆ ಕೊಂಚ ಶಾಕ್ ಆಗುತ್ತದೆ. ಇದೇನಪ್ಪಾ ಕಾಳಿ ಇಲ್ಲಿ ಏನು ಮಾಡುತ್ತಿದ್ದಾನೆ ಎಂದು ಆಲೋಚನೆ ಮಾಡುತ್ತಾಳೆ ಸಹನಾ.

kannada serial puttakkana makkalu written 3th September

ಅಷ್ಟರಲ್ಲಿ ಸಹನಾ ಬಳಿಗೆ ಬಹಳ ನೋವಿನಿಂದ ಕಾಳಿ ಬರುತ್ತಾನೆ. ಸಹನಾ ನೀನು ಇಲ್ಲಿದ್ದಿಯಾ. ನಿನಗೆ ಇಲ್ಲಿ ಏನು ನಡೆಯುತ್ತಿದೆ ಎನ್ನುವುದು ತಿಳಿದಿದೆಯಾ?. ಎಂದು ಕಾಳಿ ಕೇಳಿದಾಗ ಸಹನಾ ಗೆ ಎನು ಹೇಳಬೇಕು ಎನ್ನುವುದು ತಿಳಿಯುವುದಿಲ್ಲ. ಆಗ ಸಹನಾ ಕಾಳಿ ಯಾಕೆ ಹೀಗೆ ಮಾತನಾಡುತ್ತಿದ್ದಿಯಾ? ನೀನು ಕುಡಿದಿದ್ದಿಯಾ ಎಂದಾಗ ಕಾಳಿ ಇವತ್ತು ನಿನ್ನ ಗಂಡ ಮುರಳಿ ಮದುವೆ. ಎಂದಾಗ ಸಹನಾ ಗೆ ಭೂಮಿ ಅದುರಿದ ಹಾಗೆ ಆಗುತ್ತದೆ.

ಗಟ್ಟಿ ಮನಸ್ಸು ಮಾಡಿ ದೃಢ ನಿರ್ಧಾರ ತೆಗೆದುಕೊಂಡ ಸಹನಾ

ಆಕೆಗೆ ಬಹಳ ನೋವು ಆಗುತ್ತದೆ. ಆದರೆ ಕಾಳಿ ಏನೋ ಕುಡಿದು ಮಾತನಾಡುತ್ತಿದ್ದಾನೆ ಎಂದು ಅಂದುಕೊಂಡು ಇರುತ್ತಾಳೆ. ಆಗ ಕಾಳಿ ಸಹನಳನ್ನು ಕರೆದುಕೊಂಡು ಮದುವೆ ನಡೆಯುವ ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಿ ಪುಟ್ಟಕ್ಕ ಹಾಗೆಯೇ ಗೋಪಾಲ ನಿಂತಿರುತ್ತಾನೆ. ಇದನ್ನು ನೋಡಿದ ಸಹನಾ ಗೆ ಜೋರು ಅಳು ಬರುತ್ತದೆ.

ಆಗ ಸಹನಾ ನೀನು ಬದುಕಿರುವ ವಿಚಾರವನ್ನು ಹೇಳುತ್ತೇನೆ ಎಂದು ಕಾಳಿ ಎಂದಾಗ ಸಹನಾ ಮುರಳಿ ಸರ್ ಹಾಗೂ ವಿನುತ ಮೇಡಂ ಮದುವೆ ಆಗಲಿ . ಈ ಮದುವೆಯನ್ನು ತಪ್ಪಿಸಲು ಹೋಗಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಾಳಿಗೆ ಬಹಳ ನೋವಾಗುತ್ತದೆ. ಇನ್ನೂ ಕ್ಯಾಟರಿಂಗ್ ಮಾಡುವ ಬಳಿ ವಿನುತ ಬಂದಾಗ ಆಕೆಗೆ ಸಹನಾಳನ್ನು ನೋಡಿ ಶಾಕ್ ಆಗುತ್ತದೆ. ಸಹನಾ ಅವರೇ ನೀವು ಬದುಕಿದ್ದೀರಾ? ನೀವು ಇಲ್ಲ ಎಂದುಕೊಂಡು ಮುರಳಿ ಹಾಗೂ ನಾನು ಮದುವೆ ಆಗಲು ಹೊರಟಿದ್ದೆವು. ನೀವು ಬನ್ನಿ ಮುರಳಿ ಗೆ ನಿಮ್ಮನ್ನು ನೋಡಿ ಬಹಳ ಖುಷಿ ಆಗುತ್ತದೆ ಎಂದು ಹೇಳುತ್ತಾಳೆ.

kannada-serial-puttakkana-makkalu-written-3th-september

ಆಗ ನಾನು ಎಲ್ಲಿಗೆ ಬರುವುದು ಇಲ್ಲ. ನೀವು ಮುರಳಿ ಸರ್ ಅನ್ನು ಮದುವೆ ಆಗಿಖುಷಿ ಆಗಿ ಇರಿ. ನನ್ನ ಹಣೆಯಲ್ಲಿ ಮದುವೆ ಎನ್ನುವುದು ಬರೆದಿಲ್ಲ. ನೀವು ಏನು ಯೋಚನೆ ಮಾಡಬೇಡಿ. ನಿಮ್ಮ ಜೀವನಕ್ಕೆ ನಾನು ಅಡ್ಡ ಬರುವುದಿಲ್ಲ. ನೀವು ಮದುವೆ ಆಗಿ ಎಂದು ಹೇಳಿ ವಿನುತಳನ್ನು ಮದುವೆ ಮಂಟಪಕ್ಕೆ ಬಹಳ ದುಃಖದಿಂದ ಸಹನಾ ಕಳುಹಿಸುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X