Puttakkana Makkalu ; ಅಮ್ಮನಿಗೆ ಉಡುಗೊರೆ ಕೊಡಲು ಮುಂದಾಾದ ಸಹನಾ,ಸಹಾಯದ ಹಸ್ತ ಚಾಚಿದ ಮ್ಯಾಕ್ಸ್ ವೆಲ್..!
ಸಹನಾಗೆ ತನ್ನ ಅಮ್ಮನಿಗೆ ಏನಾದರು ಉಡುಗೊರೆ ಕೊಡಬೇಕು. ಅವ್ವ ನಮ್ಮನ್ನೆಲ್ಲ ಸಾಕಲು ಅದೆಷ್ಟು ಕಷ್ಟ ಪಟ್ಟಿದ್ದಾಳೆ. ಆದರೆ ಆಕೆಗೆ ಕೊಡಲು ನಮ್ಮಲ್ಲಿ ಏನು ಇಲ್ಲ ಆದರೆ ಇದೀಗ ನಾನು ದುಡಿದಿದ್ದಕ್ಕೆ ಪ್ರತಿಫಲವಾಗಿ ನನ್ನ ಸಂಬಳ ಬಂದಿದೆ. ಇದರಿಂದ ಅಮ್ಮನಿಗೆ ಏನಾದರು ಉಡುಗೊರೆ ಕೊಡಬೇಕು ಎಂದುಕೊಂಡು ಅಮ್ಮನಿಗೆ ಸೀರೆಯನ್ನು ತೆಗೆದುಕೊಳ್ಳುತ್ತಾಳೆ. ಮ್ಯಾಕ್ಸ್ ವೆಲ್ ಮೂಲಕ ಅಮ್ಮನಿಗೆ ಸೀರೆ ತಲುಪಿಸಿ ಬಿಡಬೇಕು. ಹುಟ್ಟಿದಾಗಿನಿಂದ ನನ್ನ ಅಮ್ಮನಿಗೆ ನಾನು ಎನು ನೀಡಿಲ್ಲ ಆದರೆ ಇದೀಗ ನಾನು ದುಡಿಯುತ್ತಿದ್ದೇನೆ ಆಕೆಗಾಗಿ ಏನಾದರು ಕೊಟ್ಟರೆ ನನಗೂ ಸಂತಸ ಆಗುತ್ತದೆ ಎಂದು ಅಂದುಕೊಂಡು ಸೀರೆಯ ಅಂಗಡಿಗೆ ತೆರಳುತ್ತಾಳೆ.
ಅಲ್ಲಿ ಪ್ರೀತಿಯ ಅವ್ವನಿಗಾಗಿ ಒಳ್ಳೆಯ ಸೀರೆ ತೆಗೆದುಕೊಳ್ಳುತ್ತಾಳೆ. ಹಾಗೆಯೇ ಅನಾಥನಾಗಿದ್ದ ಹುಡುಗನಿಗೆ ಸಹನಾ ಕೆಲಸ ನೀಡಿರುತ್ತಾಳೆ. ಆತನನ್ನು ಬಹಳ ಪ್ರೀತಿಯಿಂದ ಸಹನಾ ಚೋಟು ಎಂದು ಕರೆಯುತ್ತಾಳೆ. ಸಹನಾ ಚೋಟು ವನ್ನು ಕರೆದುಕೊಂಡು ಮ್ಯಾಕ್ಸ್ ವೆಲ್ ಅಪಾರ್ಟ್ ಮೆಂಟ್ ಬಳಿ ಹೋದಾಗ ಅಲ್ಲಿ ಸೆಕ್ಯೂರಿಟಿ ಗಾರ್ಡ್ ಅಡ್ಡ ಬರುತ್ತಾನೆ. ಮ್ಯಾಕ್ಸ್ ವೆಲ್ ಅವರನ್ನು ಭೇಟಿ ಆಗಬೇಕಿತ್ತು ಎಂದು ಸಹನಾ ಅದೆಷ್ಟೇ ಕೇಳಿಕೊಂಡರು ಸೆಕ್ಯೂರಿಟಿ ಗಾರ್ಡ್ ಮಾತ್ರ ಅವರನ್ನು ಒಳಗೆ ಹೋಗಲು ಬಿಡಲ್ಲಕೊನೆಗೆ ಸಹನಾ ಹಾಗೂ ಚೋಟು ಗೆ ನೀವು ಕಳ್ಳರು, ಖದೀಮರು ಆಗಿರಬೇಕು ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದಾಗ ನಾವು ಖದೀಮರು ಆಗಿದ್ದರೆ ನಿಮ್ಮ ಬಳಿ ನಾವು ಅಡ್ರೆಸ್ ಕೇಳುತ್ತಿರಲಿಲ್ಲ. ಅಥವಾ ಆ ವ್ಯಕ್ತಿಯ ಬಗ್ಗೆ ನಾನು ಕೇಳುತ್ತಿರಲಿಲ್ಲ ಎಂದು ಸಹನಾ ಹೇಳಿದಾಗ ಬಹಳ ಕೋಪದಿಂದ ಸೆಕ್ಯೂರಿಟಿ ಗಾರ್ಡ್ ನಿಮ್ಮ ಯಾವ ಮಾತು ಕೇಳಲು ರೆಡಿ ಇಲ್ಲ. ಮೊದಲು ನೀವು ಇಲ್ಲಿಂದ ಹೋಗಿ ಎಂದು ಹೊರ ದಬ್ಬಲು ನೋಡುತ್ತಾನೆ. ಆಗ ಅಲ್ಲಿಗೆ ಮ್ಯಾಕ್ಸ್ ವೆಲ್ ಬರುತ್ತಾನೆ.

ಸಹನಾ ಜೊತೆ ಕೆಟ್ಟದಾಗಿ ನಡೆದುಕೊಂಡ ಸೆಕ್ಯೂರಿಟಿ ಗಾರ್ಡ್
ಸೆಕ್ಯೂರಿಟಿ ಗಾರ್ಡ್ ಸಹನಾ ಹಾಗೂ ಚೋಟುವನ್ನು ಹೊರ ದಬ್ಬಲು ನೋಡುತ್ತಿದ್ದನ್ನು ಕಂಡು ಮ್ಯಾಕ್ಸ್ ವೆಲ್ ಗೆ ಬಹಳ ಸಿಟ್ಟು ಬರುತ್ತದೆ. ಹಾಗೇಯೇ ಮ್ಯಾಕ್ಸ್ ವೆಲ್ ಸೆಕ್ಯೂರಿಟಿ ಗಾರ್ಡ್ ಗೆ ಬಯ್ಯುತ್ತಾನೇ. ಯಾಕೆ ಹೀಗೆಲ್ಲ ನಡೆದುಕೊಳ್ಳುತ್ತಿರಿ ಅವರ ಜೊತೆ ಅವರು ನನ್ನ ಗೆಳೆಯರು ಎಂದು ಹೇಳಿದಾಗ ಸೆಕ್ಯೂರಿಟಿ ಗಾರ್ಡ್ ಸಾರಿ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಇನ್ನೂ ಸಹನಾ ಮ್ಯಾಕ್ಸ್ ವೆಲ್ ನನ್ನು ನೋಡಿ ಬಹಳ ಖುಷಿ ವ್ಯಕ್ತಪಡಿಸುತ್ತಾಳೆ.
ಮ್ಯಾಕ್ಸ್ ವೆಲ್ ನೋಡಿ ಖುಷಿ ಪಟ್ಟ ಸಹನಾ
ಹಾಗೇಯೆ ಆತನ ಜೊತೆ ಸಹನಾ ಸೀರೆಯನ್ನು ತೋರಿಸಿ ಮ್ಯಾಕ್ಸ್ ವೆಲ್ ಗೆ ಪುಟ್ಟಕ್ಕನ ಮೆಸ್ ಎಂದು ಹೇಳಿದಾಗ ಚೋಟು ಗೆ ಶಾಕ್ ಆಗುತ್ತದೆ. ಪುಟ್ಟಕ್ಕನ ಮೆಸ್ ಗೆ ಯಾಕೆ ಸಹನಕ್ಕ ಸೀರೆ ಕೊಡಲು ಹೇಳುತ್ತಿದ್ದಾರೆ ಎಂದು ಯೋಚಿಸುತ್ತಿರುವಾಗಲೇ ಆಗ ಮ್ಯಾಕ್ಸ್ ವೆಲ್ ಪ್ರಶ್ನೆಯನ್ನು ಕೇಳುತ್ತಾನೆ. ಅದಕ್ಕೆ
ಸಹನಾ ಪುಟ್ಟಕ್ಕ ನನ್ನ ಅಮ್ಮ ಎಂದು ಹೇಳಿದಾಗ ಮ್ಯಾಕ್ಸ್ ವೆಲ್ ಹಾಗೂ ಚೋಟು ಗೆ ಶಾಕ್ ಆಗುತ್ತದೆ. ತನ್ನ ತಾಯಿಯಿಂದ ಯಾಕೆ ದೂರ ಆಗಿದ್ದು ಹಾಗೆಯೇ ಅಲ್ಲಿ ನಡೆದ ಸಂಗತಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಡುತ್ತಾಳೆ.

ಸಹನಾ ಪರಿಸ್ಥಿತಿಯನ್ನು ಅರಿತುಕೊಂಡ ಮ್ಯಾಕ್ಸ್ ವೆಲ್
ಇದನ್ನೆಲ್ಲ ಕೇಳಿದ ಮ್ಯಾಕ್ಸ್ ವೆಲ್ ಗೆ ಸಹನಾ ಪರಿಸ್ಥಿತಿ ಅರ್ಥ ಆಗುತ್ತದೆ. ಆಕೆ ದಯವಿಟ್ಟು ನನ್ನ ತಾಯಿಯ ಬಳಿ ಬದುಕಿರುವ ವಿಚಾರ ಹೇಳಬೇಡಿ ಎಂದು ಹೇಳಿರುತ್ತಾಳೆ. ಇದನ್ನೆಲ್ಲ ಕೇಳಿದ ಮ್ಯಾಕ್ಸ್ ವೆಲ್ ಆಯಿತು ಎಂದು ಹೇಳಿದಾಗ ಸಹನಾಗೆ ಆದ ಖುಷಿ ಅಷ್ಟಿಷ್ಟಲ್ಲ.


Click it and Unblock the Notifications











