Puttakkana Makkalu; ಸ್ನೇಹಳನ್ನು ಬಂಗಾರಮ್ಮ ನ ವಿರುದ್ದ ಎತ್ತಿ ಕಟ್ಟಿದ ರಾಧಾ, ಟಾರ್ಗೆಟ್ ಮಾಡಿದ ಸಿಂಗಾರಮ್ಮ ..!

By ಪೂರ್ವ

ಸ್ನೇಹಳನ್ನ ಸಿಂಗಾರಮ್ಮನ ಮೇಲೆ ಎತ್ತಿ ಕಟ್ಟಲು ನೋಡುತ್ತಿದ್ದಾಳೆ ರಾಧಾ. ದೇವಸ್ಥಾನದಲ್ಲಿ ಸ್ನೇಹ ಹಾಗೂ ಕಂಠಿ ಬಂಗಾರಮ್ಮ ಹಾಗೂ ಮಾದೇಗೌಡರನ್ನ ಟಾರ್ಗೆಟ್ ಮಾಡಿದ್ದು ಕಂಠಿ ಮಾವನಿಗೆ ಏನಾಗಬಾರದು ಎಂದು ಗೂಂಡಾಗಳಿಗೆ ಮೊದಲೇ ಹೇಳಿದ್ದಳು ಆದರೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿರುವಾಗ ರಾಧಾಳನ್ನ ಗಮನಿಸಿದ್ದು ಮಾತ್ರ ಸಿಂಗಾರಮ್ಮ .

ಸಿಂಗಾರಮ್ಮನನ್ನ ನೋಡಿ ಬಂಗಾರಮ್ಮ ಎಂದುಕೊಂಡ ರಾಧಾ ಅತ್ತೆಯ ಕೈಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟೆ ಎಂದು ಬಹಳ ಭಯದಿಂದಲೇ ದಿನ ಕಳೆಯುತ್ತಿರುತ್ತಾಳೆ. ಆದರೆ ಇದೀಗ ಸಿಂಗಾರ ಮೆತ್ತಗೆ ರಾಧಾ ಬಳಿಗೆ ಬಂದು ನಮ್ಮನ್ನ ಸಾಯಿಸಲು ಅಂದು ಗೂಂಡಾಗಳನ್ನು ಕಳಿಸಿದ್ದು ನೀನೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ನೀನು ಮಾಡುತ್ತಿರುವ ನಾಟಕವನ್ನು ನೋಡಿ ನನಗೆ ಆಶ್ಚರ್ಯವಾಗಿದೆ ಎಂದು ರಾಧಾ ಬಳಿ ಬಂದು ಹೇಳುತ್ತಾಳೆ. ಇದನ್ನ ಕೇಳಿದ ರಾಧಾ ಮೊದಲಿಗೆ ನಾನು ಆ ರೀತಿ ಮಾಡಿಲ್ಲ ಅತ್ತೆ ಎಂದು ಪರಿಪರಿಯಾಗಿ ಸಿಂಗಾರಮ್ಮನ ಜೊತೆ ಬೇಡಿಕೊಳ್ಳುತ್ತಾಳೆ.ಆದರೆ ಬಂಗಾರಮ್ಮನ ರೂಪದಲ್ಲಿರುವ ಸಿಂಗಾರಮ್ಮಗೆ ಮಾತ್ರ ಹೀಗೆ ನಾಟಕ ಮಾಡುತ್ತಿದ್ದಾಳೆ ಎಂದು ಅನ್ನಿಸದೇ ಇರದು.ಇದೀಗ ರಾಧಾ ಮೆತ್ತಗೆ ಅತ್ತೆಯ ಜೊತೆ ಮಾತನಾಡಿ ಇದಕ್ಕೆಲ್ಲ ಕಾರಣ ಸ್ನೇಹಾ ಅತ್ತೆ. ನಾನು ನಿಮ್ಮ ಸೊಸೆ. ನಿಮ್ಮ ಸೊಸೆಯಾಗಿ ಇದ್ದುಕೊಂಡು ಈ ರೀತಿ ನಾನು ಕೆಲಸ ಮಾಡುತ್ತೇನ? ಎಂದು ಸಿಂಗಾರಮ್ಮನ ಬಳಿ ರಾಧಾ ಹೇಳಿದಾಗ ಆಕೆ ಏನು ಮಾತನಾಡದೆ ಸಿಂಗಾರಮ್ಮ ಮನದಲ್ಲಿಯೇ ಆಲೋಚನೆ ಮಾಡುತ್ತಾಳೆ

kannada-serial-puttakkana-makkalu-written-6th-august

ಸ್ನೇಹಾ ಮೇಲೆ ಸಿಂಗಾರಮ್ಮ ಗೆ ಅನುಮಾನ

ಇದೆಲ್ಲವನ್ನೂ ನೋಡಿದ ಸಿಂಗಾರಮ್ಮ ಗೆ ಸ್ನೇಹ ಆ ರೀತಿ ಮಾಡುತ್ತಾಳೆ ಎಂದು ಹೇಳಿದರೆ ಆಕೆಗೆ ನಂಬಲು ಆಗುವುದಿಲ್ಲ. ಕೊನೆಗೆ ಏನು ಮಾತನಾಡದೆ ಸುಮ್ಮನಾಗುತ್ತಾಳೆ, ಸಿಂಗಾರಮ್ಮ ಇನ್ನೂ ರಾಧಾ ಇದನ್ನೇ ಬಳಸಿಕೊಂಡು, ನನಗೆ ಈ ಮದುವೆ ಇಷ್ಟ ಇಲ್ಲ ಎಂದು ಸಿಂಗಾರಮ್ಮನ ಬಳಿ ಹೇಳಿದಾಗ ಸಿಂಗಾರಮ್ಮ ಆ ಕೂಡಲೇ ಗಂಡಿನ ಕಡೆಯವರಿಗೆ ಕರೆ ಮಾಡಿ ಈ ಮದುವೆ ನಡೆಯುವುದಿಲ್ಲ ಎಂದು ಹೇಳುತ್ತಾಳೆ.

ಅತ್ತೆಯ ಮಾತು ಕೇಳಿ ಸ್ನೇಹಾ ಶಾಕ್

ಇದನ್ನು ಕೇಳಿದ ರಾಧಾ ಗೆ ಬಹಳ ಖುಷಿ ಆಗುತ್ತದೆ. ಇತ್ತ ಗಂಡಿನ ಕಡೆಯವರು ಬರುತ್ತಾರೆ ಎಂದು ಸ್ನೇಹ ಬಗೆ ಬಗೆಯ ಅಡುಗೆಯನ್ನು ಮಾಡಿರುತ್ತಾಳೆ. ಆದರೆ ಸಿಂಗಾರಮ್ಮ ಏನು ಮಾತನಾಡಿದೆ ಸುಮ್ಮನಿರುತ್ತಾಳೆ ಮೆತ್ತಗೆ ಬಂದ ರಾಧ ಮಾತ್ರ ಏನು ಹೇಳದೆ ಎಲ್ಲರ ಮುಖ ನೋಡಿಕೊಂಡು ನಿಂತಿರುತ್ತಾಳೆ ಆಗ ವಸು ಹೇಳುತ್ತಾಳೆ. ಇನ್ನೇನು ಅಡುಗೆ ಇಲ್ಲ ಆಗಿಬಿಡುತ್ತದೆ ಗಂಡಿನ ಕಡೆಯವರು ಇನ್ನೇನು ಬರಬೇಕಷ್ಟೆ ಎಂದು ಹೇಳಿದಾಗ ಮಾದೇಗೌಡರು ಹೇಳುತ್ತಾರೆ ಆ ಅಡುಗೆಯನ್ನು ನಾನೊಮ್ಮೆ ಟೇಸ್ಟ್ ಮಾಡುತ್ತೇನೆ ಎಂದು ಹೇಳಿದಾಗ ಅಲ್ಲಿಯೇ ನಿಂತಿದ್ದ ಸಿಂಗಾರಮ್ಮ ಹೇಳುತ್ತಾಳೆ.

kannada-serial-puttakkana-makkalu-written-6th-august

ಅತ್ತೆ ಮಾತಿಗೆ ಖುಷಿಪಟ್ಟ ರಾಧಾ

ನೀವು ಟೇಸ್ಟ್ ಮಾಡುವುದು ಏನು ಬೇಡ ನೀವೇ ತಿಂದು ಬಿಡಿ ಅದನ್ನು ಎಂದು ಹೇಳುತ್ತಾಳೆ ಹಾಗೆಯೇ ವಸು ಗೆ ಆ ಆಹಾರವನ್ನು ಕೊಡಬೇಡಿ ಉಳಿದವರೆಲ್ಲರೂ ಆಯಾ ಆಹಾರವನ್ನು ತಿನ್ನೀರಿ ಎಂದು ಹೇಳಿದಾಗ ಎಲ್ಲರೂ ಸಿಂಗಾರಮ್ಮ ನ ಮುಖ ನೋಡುತ್ತಾರೆ. ಸಿಂಗಾರಮ್ಮ ಹೇಳುತ್ತಾರೆ ನೀವು ಹಾಗೆ ನೋಡುವುದು ಬೇಡ ಹುಡುಗನ ಕಡೆಯವರು ಇವತ್ತು ಬರುವುದಿಲ್ಲ ಎಂದು ಹೇಳಿದಾಗ ಅಲ್ಲಿದ್ದವರಿಗೆ ಶಾಕ್ ಆದರೆ ರಾಧಾ ಗೆ ಬಹಳ ಖುಷಿ ಆಗುತ್ತದೆ. ಇತ್ತ ತಾಯಿಗೆ ತಾನು ದುಡಿದ ಮೊದಲ ಸಂಬಳದಲ್ಲಿ ಸೀರೆ ಕೊಟ್ಟದ್ದನ್ನು ನೆನಪಿಸಿಕೊಂಡ ಸಹನಾಗೆ ಬಹಳ ಖುಷಿ ಆಗುತ್ತದೆ. ಸಹನಾ ಮಾತ್ರ ಆಗ ಖುಷಿಯಲ್ಲಿ ಇರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X