Puttakkana Makkalu ; ಸಿಂಗಾರಮ್ಮನ ಕಪಿಮುಷ್ಠಿಯಿಂದ ಪಾರಾದ ಬಂಗಾರಮ್ಮ ಕುಟುಂಬ ಉಳಿಸುತ್ತಾಳಾ..?
ಬಂಗಾರಮ್ಮಗೆ ಆಕೆಯ ಜೊತೆಗೆ ಹುಟ್ಟಿದಾಕೆಯಿಂದಲೇ ಆಪತ್ತು ಬಂದೆರಗಿ ಬಿಡುತ್ತದೆ. ಬಂಗಾರಮ್ಮ ಇದೀಗ ಕಿಡ್ನಾಪ್ ಆಗಿದ್ದಾಳೆ ಇದನ್ನು ಮಾಡಿಸಿದ್ದು ಯಾರು ಎನ್ನುವುದು ಆಕೆಗೆ ತಿಳಿದಿದೆ. ಆದರೆ ತನ್ನ ತಂಗಿಯಿಂದಲೇ ಇಷ್ಟು ದೊಡ್ಡ ಆಘಾತ ಆಕೆಗೆ ಆಗದೆ ಇರದು. ಇವತ್ತಿನ ಇಷ್ಟೆಲ್ಲ ಅವಘಡಕ್ಕೆ ಕಾರಣ ಸಿಂಗಾರಮ್ಮ . ಆದರೆ ಬಂಗಾರಮ್ಮ ವಿರುದ್ದ ಸಿಂಗಾರಮ್ಮ ಯಾಕೆ ಒಳ ಸಂಚು ಮಾಡುತ್ತಿದ್ದಾಳೆ ಎನ್ನುವುದು ಮಾತ್ರ ತಿಳಿಯಬೇಕಾಗಿದೆ.
ಸಿಂಗಾರಮ್ಮ ಗುಂಡಾಗಳಿಗೆ ಕರೆ ಮಾಡುತ್ತಾಳೆ. ಬಂಗಾರಮ್ಮ ಹೇಗಿದ್ದಾಳೆ ಆಕೆಯ ಜೊತೆ ಮಾತನಾಡಬೇಕಾಗಿತ್ತು ಎಂದು ಸಿಂಗಾರಮ್ಮ ಗುಂಡಾಗಳಿಗೆ ಹೇಳುತ್ತಾಳೆ. ಇದನ್ನು ಕೇಳಿದ ರೌಡಿಗಳು ಬಂಗಾರಮ್ಮನತ್ರ ಫೋನ್ ತೋರಿಸುತ್ತಾರೆ. ಆ ಕೂಡಲೇ ಸಿಂಗಾರಮ್ಮ ಬಂಗಾರಮ್ಮನ ಗಂಡನ ಮುಖವನ್ನು ತೋರಿಸುತ್ತಾಳೆ. ಹಾಗೆಯೇ ಮಕ್ಕಳ ಮುಖವನ್ನು ಕೂಡ ತೋರಿಸುತ್ತಾಳೆ . ಬಳಿಕ ನೀನು ಇಲ್ಲಿಗೆ ಬರುವ ಮುಂಚೆಯೇ ಇವರೆಲ್ಲರನ್ನ ನಾನು ಸಾಯಿಸಿಬಿಡುತ್ತೇನೆ ಎಂದು ಹೇಳುತ್ತಾಳೆ. ಆ ಬಳಿಕ ಆಸ್ತಿಯೆಲ್ಲ ನನ್ನ ಹೆಸರಿಗೆ ಮಾಡಿಕೊಳ್ಳುತ್ತೇನೆ ಎಂದು ಸಿಂಗಾರಮ್ಮ ಹೇಳಿದಾಗ, ಬಂಗಾರಮ್ಮಗೆ ಬಹಳ ಆತಂಕವಾಗುತ್ತದೆ. ತನ್ನ ಸುಂದರವಾದ ಕುಟುಂಬ ಎಲ್ಲಿ ಸಿಂಗಾರಮ್ಮಗೆ ಸಿಕ್ಕಿ ನಲುಗಿ ಹೋಗುತ್ತೋ ಎನ್ನುವ ಭಯ ಆಕೆಗೆ ಕಾಡುತ್ತಿರುತ್ತದೆ. ಸಿಂಗಾರಮ್ಮ ಬಳಿ ತನ್ನ ಕುಟುಂಬಕ್ಕೆ ಏನು ಮಾಡದಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಆ ಕೂಡಲೇ ಸಿಂಗಾರಮ್ಮ ಫೋನ್ ಕರೆಯನ್ನು ಕಟ್ ಮಾಡುತ್ತಾಳೆ. ಇನ್ನು ಬಂಗಾರಮ್ಮ ಮನದಲ್ಲಿ ಕೊಂಚ ಧೈರ್ಯ ತಂದುಕೊಂಡು ನನಗೆ ವಾಶ್ ರೂಮ್ ಗೆ ಹೋಗಬೇಕಾಗಿದೆ ಎಂದು ಹೇಳುತ್ತಾಳೆ

ನರಕದಲ್ಲಿ ನರಳುತ್ತಿರುವ ಬಂಗಾರಮ್ಮ
ಇದನ್ನು ಕೇಳಿದ ರೌಡಿ ಬಂಗಾರಮ್ಮನ ಬಂಧ ಮುಕ್ತ ಮಾಡುತ್ತಾನೆ. ಆ ಕೂಡಲೇ ಅಲ್ಲಿಯೇ ಇದ್ದ ಆಯುಧದಿಂದ ರೌಡಿಯ ತಲೆಗೆ ಹೊಡೆಯುತ್ತಾಳೆ. ಆ ಕೂಡಲೇ ರೌಡಿ ಕೆಳಗೆ ಬೀಳುತ್ತಾನೆ. ಬಂಗಾರಮ್ಮ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. ಹೇಗಾದರೂ ಮಾಡಿ ಸಿಂಗಾರಮ್ಮ ನ ಕೈಯಿಂದ ನನ್ನ ಸಂಸಾರವನ್ನು ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿದ್ದಾಳೆ ಬಂಗಾರಮ್ಮ. ಸಹನ ತನ್ನವರನ್ನೆಲ್ಲ ಬಿಟ್ಟು ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳಲು ನೋಡುತ್ತಿದ್ದಾಳೆ
ಸಹನಳನ್ನು ತಡೆದ ಕೆಂಪಮ್ಮ
ನಾನು ಏನಾದರೂ ಸಾಧನೆ ಮಾಡಬೇಕು ನನ್ನ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವುದು ಸಹನಾ ಮಹಾದಾಸೆ ಆದರೆ ಇದೀಗ ಕೆಂಪಮ್ಮ ಸಹಾಯ ನಡೆಸುತ್ತಿದ್ದ ಕಿರಾಣಿ ಅಂಗಡಿ ನನ್ನದು ಎಂದು ಕಿರುಚಾಡುತ್ತಿದ್ದಾಳೆ. ಕೊನೆಗೆ ಸಹನ ಏನು ಮಾತನಾಡದೆ ಕೆಂಪಮ್ಮನಿಗೆ ಆ ಅಂಗಡಿಯನ್ನು ಬಿಟ್ಟುಕೊಡುತ್ತಾಳೆ ಆಗ ಚೋಟು ಹೇಳುತ್ತಾನೆ ಅಕ್ಕ ತಾನು ಏನಾದ್ರೂ ಸಾಧನೆ ಮಾಡಬೇಕೆಂದು ಮನೆ ಬಿಟ್ಟು ಬಂದರೆ ಆಕೆ ತಿನ್ನುತ್ತಿದ್ದ ಅನ್ನಕ್ಕೆ ನೀವು ಮಾತನಾಡುತ್ತಾನೆ ಆದರೆ ಇದನ್ನೆಲ್ಲಾ ಕೇಳಿದ ಕೆಂಪಮ್ಮಗೆ ಸಹನ ಮೇಲೆ ಕೊಂಚ ಪ್ರೀತಿ ಉಕ್ಕಿ ಹರಿಯುತ್ತದೆ.

ಸಿಂಗಾರಮ್ಮ ನನ್ನು ಕಂಡ ಸಹನಾ ಶಾಕ್
ಇನ್ನು ಅಲ್ಲಿಂದ ಸಹನಾ ಹಾಗೂ ಚೋಟು ಹೊರಡಲು ಮುಂದಾಗುತ್ತಾರೆ ಆಗ ಕೆಂಪಮ್ಮ ಸಹನ ನೀನು ಎಲ್ಲಿಗೂ ಕೂಡ ಹೋಗಬೇಕಾಗಿಲ್ಲ. ಇಲ್ಲಿಯೇ ನನ್ನ ಕಿರಾಣಿ ಅಂಗಡಿಯನ್ನು ನೀನೇ ನೋಡಿಕೋ ಎಂದು ಹೇಳುತ್ತಾಳೆ. ಆಗ ಸಹನಾಗೆ ಖುಷಿಯಾಗುತ್ತದೆ . ಹಾಗೆಯೇ ಕೆಂಪಮ್ಮ ಬಳಿ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ.ಇನ್ನು ಸಿಂಗಾರ ಮ್ಮ ಹಾಗೂ ಆಕೆಯ ಮಗ ಸಹನಾ ಅಂಗಡಿಯ ಬಳಿ ಬರುತ್ತಾರೆ. ಆದರೆ ಸಹನ ಪುಟ್ಟಕ್ಕನ ಮಗಳು ಎನ್ನುವುದು ಸಿಂಗಾರಮ್ಮ ಗೆ ತಿಳಿದಿರುವುದಿಲ್ಲ ಆದರೆ ಸಿಂಗಾರಮ್ಮನ ನೋಡಿದ ಕೂಡಲೇ ಬಂಗಾರಮ್ಮ ಎಂದುಕೊಂಡಿದ್ದ ಸಹನಾ ಗೆ ಮಾತ್ರ ಕೊಂಚ ಶಾಕ್ ಆಗುತ್ತದೆ


Click it and Unblock the Notifications











