Puttakkana Makkalu ; ರಾಧಾ ಕೈಯಲ್ಲಿ ಪಿಸ್ತೂಲ್, ಕಂಠಿ ಮತ್ತು ಸ್ನೇಹಾ ಒಂದಾಗುತ್ತಾರಾ ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭದಿಂದಲೂ ಪ್ರೇಕ್ಷಕರ ಫೇವರಿಟ್ ಧಾರಾವಾಹಿಗಳಲ್ಲೊಂದು. ಪುಟ್ಟಕ್ಕ ಹಾಗೂ ಆಕೆಯ ಮೂರು ಹೆಣ್ಣು ಮಕ್ಕಳ ಸುತ್ತ ಸುತ್ತುವ ಈ ಧಾರಾವಾಹಿಯ ಕಥೆ ಜನಮನ ಗೆದ್ದಿದೆ. ಹಿರಿಯ ನಟಿ ಉಮಾಶ್ರೀ ಅವರು ಪುಟ್ಟಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಅಂತೂ ಸಿನಿ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ ಬಹಳ ಸಂತಸ ತಂದಿದೆ. ಕಿರುತೆರೆ ಅಭಿಮಾನಿಗಳ ಹೃದಯವನ್ನು ಗೆದ್ದಿದೆ.
ಇಂತಹ ಪುಟ್ಟಕ್ಕನ ಮಕ್ಕಳು ಈಗ ರೋಚಕ ಘಟ್ಟ ತಲುಪಿದೆ. ಕಂಠಿ ಮತ್ತು ರಾಧಾಳ ಮದುವೆಗೆ ಸಕಲ ಸಿದ್ಧತೆ ನಡೆದಿದೆ.ಮತ್ತೊಂದೆಡೆ ಕಂಠಿ ಮತ್ತು ಸ್ನೇಹಾ ಲವ್ ಟ್ರ್ಯಾಕ್ ಶುರುವಾಗಿದೆ. ಆದರೆ ರಾಧಾ ಜೊತೆ ಕಂಠಿ ಮದುವೆಯಾಗುವ ಸಂದರ್ಭ ಎದುರಾಗಿದೆ. ಇದರ ನಡುವೆ ಅಗಲಿದ ತನ್ನ ಸೊಸೆ ಹೃದಯವನ್ನು ಸ್ನೇಹಾಗೆ ಅಳವಡಿಸಿರುವ ವಿಷಯ ಬಂಗಾರಮ್ಮಗೆ ಗೊತ್ತಾಗಿದೆ.

ಕಳಚಿತು ರಾಧಾ ಮುಖವಾಡ
ರಾಧಾ ಮಾಡಿರುವ ಕೆಲಸಗಳು ಸದ್ಯ ಒಂದೊಂದೇ ಬಯಲಾಗಿದ್ದು, ರಾಧಾ ತಾನು ನಿರಪರಾಧಿ ಎಂದು ಸಾಬೀತು ಮಾಡುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾಳೆ. ಆದರೆ, ಬಂಗಾರಮ್ಮನ ಮುಂದೆ ಸತ್ಯ ಅನಾವರಣವಾಗಿದೆ. ಹೀಗಾಗಿ ಮದುವೆಯ ಮಂಟಪದಲ್ಲಿ ಪೊಲೀಸರು ಪ್ರತ್ಯಕ್ಷರಾಘಿದ್ದಾರೆ. ರಾಧಾಳನ್ನು ಅರೆಸ್ಟ್ ಮಾಡುವಂತೆ ಬಂಗಾರಮ್ಮ ಹೇಳಿದ್ಧಾಳೆ.
ರಾಧಾಳನ್ನು ಬಂಧಿಸಿದ ಪೊಲೀಸರು
ಆದರೆ ಇದೇ ಸಮಯದಲ್ಲಿ ರಾಧಾ ಪೊಲೀಸರಿಂದ ಪಿಸ್ತೂಲ್ ಕಸಿದುಕೊಂಡಿದ್ದಾಳೆ. ಸ್ನೇಹಾಳನ್ನು ಕೊಲ್ಲಲು ಮುಂದಾಗಿದ್ದಾಳೆ. ಯಾರಾದರೂ ಅಲುಗಾಡಿದರೆ ಕೂಡಲೇ ಶೂಟ್ ಮಾಡುವ ಬೆದರಿಕೆಯನ್ನು ಹಾಕಿದ್ದಾಳೆ. ಆಗ ಕಂಠಿ ಅಲ್ಲಿಯೇ ಇದ್ದ ತೆಂಗಿನಕಾಯಿ ತೆಗೆದುಕೊಂಡು ರಾಧಾ ಕಡೆ ಬೀಸುತ್ತಾನೆ. ಕಂಠಿ ಬೀಸಿದ ತೆಂಗಿನ ಕಾಯಿ ರಾಧಾ ಕೈಗೆ ತಗಲುತ್ತೆ. ಪಿಸ್ತೂಲ್ ಕೆಳಗೆ ಬೀಳುತ್ತೆ. ಆಗ ಪೊಲೀಸರು ರಾಧಾಳನ್ನು ಅರೆಸ್ಟ್ ಮಾಡಿಕೊಂಡು ಕರೆದೊಯ್ಯುತ್ತಾರೆ.
ಇನ್ನು ರಾಧಾ ಪೊಲೀಸರ ಅತಿಥಿಯಾದ ಬೆನ್ನಲ್ಲೇ ಕಂಠಿ ಮತ್ತು ಸ್ನೇಹಾ ಮದುವೆ ನಡೆಯುತ್ತಾ ಎನ್ನುವ ಪ್ರಶ್ನೆ ಕಿರುತೆರೆ ಪ್ರೇಕ್ಷಕರನ್ನು ಕಾಡುತ್ತಿದೆ. ಇದರ ನಡುವೆ ಇಬ್ಬರ ಮದುವೆ ಮಾಡಿಸುವ ಮೂಲಕ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮಂಗಳ ಹಾಡಲಾಗುತ್ತೆ ಎನ್ನುವ ಅಭಿಪ್ರಾಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
ಮುಕ್ತಾಯವಾಗುತ್ತಾ ಪುಟ್ಟಕ್ಕನ ಮಕ್ಕಳು ?
ಯಾಕೆಂದರೆ ಈ ಹಿಂದೆ ಸ್ನೇಹಾ ಪಾತ್ರವನ್ನು ಸಂಜನಾ ಬುರ್ಲಿ ನಿರ್ವಹಿಸಿದ್ದರು. ಈ ಪಾತ್ರ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿತ್ತು. ಸಂಜನಾಗೆ ಒಳ್ಳೆಯ ಹೆಸರನ್ನು ಕೂಡ ಈ ಪಾತ್ರ ತಂದು ಕೊಟ್ಟಿತ್ತು. ಆದರೆ ಆ ನಂತರ ನಡೆದ ಬೆಳವಣಿಗೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಸೆಡ್ಡು ಹೊಡೆದು ಜಿಲ್ಲಾಧಿಕಾರಿಯಾಗಿದ್ದ ಸ್ನೇಹಾ ಪಾತ್ರವನ್ನು ಏಕಾಏಕಿ ಸಾಯಿಸಲಾಯಿತು. ಅಲ್ಲಿಂದ ಅನೇಕ ಪ್ರೇಕ್ಷಕರು ಪುಟ್ಟಕ್ಕನ ಮಕ್ಕಳು ವಿರುದ್ದ ಮುನಿಸಿಕೊಂಡಿದ್ದರು.
ಹೀಗಾಗಿ ಇದೀಗ ಸ್ನೇಹಾಳ ಹೃದಯವನ್ನ ಟ್ರ್ಯಾನ್ಸ್‌ಪ್ಲಾಂಟ್ ಮಾಡಲಾದ ಹುಡುಗಿಯ ಜೊತೆ ಕಂಠಿಯ ಮದುವೆ ಮಾಡಿಸುವ ಮೂಲಕ ಧಾರಾವಾಹಿಯನ್ನು ಮುಗಿಸಬಹುದು ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಒಟ್ನಲ್ಲಿ ಸದ್ಯ ಪುಟ್ಟಕ್ಕನ ಮಕ್ಕಳು ರೋಚಕ ಹಂತ ತಲುಪಿದ್ದು ಧಾರಾವಾಹಿಯನ್ನು ನಿರ್ದೇಶಕರು ಕೊನೆಗೊಳಿಸುತ್ತಾರಾ ಅಥವಾ ಬೇರೆ ಟ್ವಿಸ್ಟ್ ಇಟ್ಟು ಮತ್ತೆ ಧಾರಾವಾಹಿಯನ್ನು ಮುಂದುವರೆಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications











