Puttakkana Makkalu ; ಅಯ್ಯೋ ದೇವರೇ, ಸ್ನೇಹಾ ಜೊತೆ ಕಂಠಿ ಮದುವೆಯಾಗಲು ರೆಡಿ, ಆದರೆ ಮಾಂಗಲ್ಯನೇ ಕಾಣ್ತಿಲ್ಲವಲ್ಲ..!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಮತ್ತು ರಾಧಾ ಮದುವೆ ಇನ್ನೇನು ಆಗಬೇಕಿತ್ತು. ಅಷ್ಟರಲ್ಲಿ ಬಂಗಾರಮ್ಮ ಬಂದು ಮದುವೆ ತಪ್ಪಿಸಿದ್ದಾಳೆ. ಯಾಕೆಂದರೆ ರಾಧಾ ಬಣ್ಣ ಬಯಲಾಗಿದೆ. ಅಗಲಿದ ತನ್ನ ಸೊಸೆ ಹೃದಯವನ್ನು ಸ್ನೇಹಾಗೆ ಅಳವಡಿಸಿರುವ ವಿಷಯ ಬಂಗಾರಮ್ಮಗೆ ಗೊತ್ತಾಗಿದೆ.ರಾಧಾ ಮಾಡಿರುವ ಕೆಲಸಗಳು ಸದ್ಯ ಒಂದೊಂದೇ ಬಯಲಾಗಿದ್ದು, ರಾಧಾ ತಾನು ನಿರಪರಾಧಿ ಎಂದು ಸಾಬೀತು ಮಾಡುವ ಪ್ರಯತ್ನವನ್ನು ಮಾಡುತ್ತಲೇ ಇದ್ದಾಳೆ.

ಆದರೆ, ಬಂಗಾರಮ್ಮನ ಮುಂದೆ ಸತ್ಯ ಅನಾವರಣವಾಗಿದೆ. ಪೊಲೀಸರನ್ನು ಕರೆಸಿ ರಾಧಾಳನ್ನು ಬಂಗಾರಮ್ಮ ಅರೆಸ್ಟ್ ಮಾಡಿಸಿದ್ದಾಳೆ. ಮದುವೆ ನಿಲ್ಲಿಸಿದ್ದಾಳೆ. ಇದೇ ಸಮಯದಲ್ಲಿ ರಾಧಾ ಪೊಲೀಸರಿಂದ ಪಿಸ್ತೂಲ್ ಕಸಿದುಕೊಂಡಿದ್ದಾಳೆ. ಸ್ನೇಹಾಳನ್ನು ಕೊಲ್ಲಲು ಮುಂದಾಗಿದ್ದಾಳೆ. ಯಾರಾದರೂ ಅಲುಗಾಡಿದರೆ ಕೂಡಲೇ ಶೂಟ್ ಮಾಡುವ ಬೆದರಿಕೆಯನ್ನು ಹಾಕಿದ್ದಾಳೆ.

kannada-serial-puttakkana-makkalu-written-update-12th-may

ಮಾಂಗಲ್ಯನೇ ಗಾಯಬ್

ಆಗ ಕಂಠಿ ಅಲ್ಲಿಯೇ ಇದ್ದ ತೆಂಗಿನಕಾಯಿ ತೆಗೆದುಕೊಂಡು ರಾಧಾ ಕಡೆ ಬೀಸುತ್ತಾನೆ. ಕಂಠಿ ಬೀಸಿದ ತೆಂಗಿನ ಕಾಯಿ ರಾಧಾ ಕೈಗೆ ತಗಲುತ್ತೆ. ಪಿಸ್ತೂಲ್ ಕೆಳಗೆ ಬೀಳುತ್ತೆ. ಆಗ ಪೊಲೀಸರು ರಾಧಾಳನ್ನು ಅರೆಸ್ಟ್ ಮಾಡಿಕೊಂಡು ಕರೆದೊಯ್ಯುತ್ತಾರೆ. ಹೀಗಾಗಿ ಕಂಠಿ ಮತ್ತು ಸ್ನೇಹಾ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ.

ಆದರೆ ಇದೇ ಸಮಯದಲ್ಲಿ ಕಳಶದ ಮೇಲೆ ಇದ್ದ ಮಾಂಗಲ್ಯವನ್ನು ಯಾರೋ ಎಗರಿಸಿದ್ದಾರೆ. ಇದರಿಂದ ಅಲ್ಲಿದ್ದ ಗಾಬರಿಯಾಗಿದ್ದಾರೆ. ಆದರೂ ಈ ಅಡೆ ತಡೆಯ ನಡುವೆಯೂ ಕೂಡ ಕಂಠಿ ಮತ್ತು ಸ್ನೇಹಾ ಮದುವೆಯಾಗುತ್ತೆ. ಮದುವೆಯಾದ ಬೆನ್ನಲ್ಲೇ ಅಳಿಯನಾಗಿ ಬಂದು ನೀನು ನನ್ನ ಮಗನಾಗಿದೀಯಾ ಜಗತ್ತಲ್ಲಿ ಇರುವ ಎಲ್ಲ ಸುಖ ಶಾಂತಿ ನೆಮ್ಮದಿ ಎಲ್ಲವನ್ನು ಭಗವಂತ ನಿನ್ನ ಮಡಿಲಲ್ಲಿ ತುಂಬಲಿ ಎಂದು ಕಂಠಿಗೆ ಪುಟ್ಟಕ್ಕ ಹಾರೈಸುತ್ತಾಳೆ.


ಮರುಜನ್ಮ ನೀಡಿದ್ದು ನೀವೆ ಎಂದ ಸ್ನೇಹಾ ತಂದೆ

ಇನ್ನೊಂದು ಕಡೆ ನಿಮ್ಮ ಇಬ್ಬರ ಪ್ರೀತಿ ಅದೆಷ್ಟು ಪರಿಶುದ್ಧವಾಗಿದೆಯೋ ನಿಮ್ಮ ಸಂಸಾರ ಜೀವನ ಕೂಡ ಅಷ್ಟೇ ಚೆನ್ನಾಗಿರಲಿ ಎಂದು ಬಂಗರಾಮ್ಮ ನವ ಜೋಡಿಗೆ ಶುಭ ಕೋರುತ್ತಾಳೆ. ಇದರ ನಡುವೆ ಸ್ನೇಹಾ ತಂದೆಗೆ ಆಶೀರ್ವಾದ ಮಾಡುವಂತೆ ಪುಟ್ಟಕ್ಕ ಕೇಳುತ್ತಾಳೆ. ಆದರೆ ಇದಕ್ಕೆ ಸ್ನೇಹಾ ತಂದೆ ಜನ್ಮ ಕೊಟ್ಟ ತಂದೆ ನಾನೇ ಆದರೂ ನಮಗೆ ಆಶ್ರಯ ಕೊಟ್ಟು, ಅನ್ನ ಕೊಟ್ಟು, ನನ್ನ ಮಗಳಿಗೆ ಮರುಜನ್ಮ ಕೊಟ್ಟವರು ನೀವೇ ಅದಕ್ಕೆ ನಿಮ್ಮ ಆಶೀರ್ವಾದ ಮುಖ್ಯ ಎಂದು ಹೇಳುತ್ತಾರೆ. ಸದ್ಯ ಕಂಠಿ ಮತ್ತು ಸ್ನೇಹಾ ಮದುವೆ ನಡೆದಿದ್ದು ಮುಂದೇನು ಎನ್ನುವ ಪ್ರಶ್ನೆ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ.

ಸದ್ಯ ಕಂಠಿ ಮತ್ತು ಸ್ನೇಹಾ ಮದುವೆ ನಡೆದಿದ್ದು ಮುಂದೇನು ಎನ್ನುವ ಪ್ರಶ್ನೆ ಸದ್ಯಕ್ಕೆ ಅನೇಕರನ್ನು ಕಾಡುತ್ತಿದೆ. ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಮಂಗಳ ಹಾಡಲಾಗುತ್ತೆ ಎನ್ನುವ ಅಭಿಪ್ರಾಯ ಕೂಡ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.

ಯಾಕೆಂದರೆ ಈ ಹಿಂದೆ ಸ್ನೇಹಾ ಪಾತ್ರವನ್ನು ಸಂಜನಾ ಬುರ್ಲಿ ನಿರ್ವಹಿಸಿದ್ದರು. ಈ ಪಾತ್ರ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿತ್ತು. ಸಂಜನಾಗೆ ಒಳ್ಳೆಯ ಹೆಸರನ್ನು ಕೂಡ ಈ ಪಾತ್ರ ತಂದು ಕೊಟ್ಟಿತ್ತು. ಆದರೆ ಆ ನಂತರ ನಡೆದ ಬೆಳವಣಿಗೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಸೆಡ್ಡು ಹೊಡೆದು ಜಿಲ್ಲಾಧಿಕಾರಿಯಾಗಿದ್ದ ಸ್ನೇಹಾ ಪಾತ್ರವನ್ನು ಏಕಾಏಕಿ ಸಾಯಿಸಲಾಯಿತು. ಅಲ್ಲಿಂದ ಅನೇಕ ಪ್ರೇಕ್ಷಕರು ಪುಟ್ಟಕ್ಕನ ಮಕ್ಕಳು ವಿರುದ್ದ ಮುನಿಸಿಕೊಂಡಿದ್ದರು. ಹೀಗಾಗಿ ಇದೀಗ ಸ್ನೇಹಾಳ ಹೃದಯವನ್ನ ಟ್ರ್ಯಾನ್ಸ್‌ಪ್ಲಾಂಟ್ ಮಾಡಲಾದ ಹುಡುಗಿಯ ಜೊತೆ ಈಗ ಕಂಠಿಯ ಮದುವೆ ಮಾಡಲಾಗಿದ್ದು ಯಾವುದೇ ಕ್ಷಣದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ತೆರೆ ಬೀಳುವ ಸಾಧ್ಯತೆ ಇದೆ.

More from Filmibeat

English summary
kannada-serial-puttakkana-makkalu-written-update-12th-may
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X