Puttakkana Makkalu: ಪುಟ್ಟಕ್ಕನ ಮನೆಗೆ ವಸು, ಚಂದ್ರು; ಹಲ್ಲು ಮಸೆದ ನಂಜಮ್ಮ

By Poorva

ಸ್ನೇಹ ಮಾಡಿರುವ ತಪ್ಪಿನಿಂದಾಗಿ ಪುಟ್ಟಕ್ಕ ತಲೆತಗ್ಗಿಸುವ ಪರಿಸ್ಥಿತಿ ಬಂದು ಹೋಗಿದೆ. ರಾಧಾ ಹಾಗೂ ಶಶಿಕಲಾ ಹೆಣೆದಂತ ಬಲೆಗೆ ಇದೀಗ ಸ್ನೇಹ ಹಾಗೂ ವಸು ಬಿದ್ದಿದ್ದಾರೆ. ನಂಜಮ್ಮನ ಪ್ರತಿ ಮಾತು ಬಂಗಾರಮ್ಮಗೆ ಈಟಿಯಲ್ಲಿ ತಿಳಿದ ಹಾಗೆ ಅನಿಸುತ್ತದೆ. ನನ್ನ ಮಗ ನನ್ನ ಮಾತು ಕೇಳೇ ಕೇಳುತ್ತಾನೆ ಎನ್ನುವ ಭರವಸೆಯಿಂದ ನಂಜಮ್ಮಗೆ ಇತ್ತು.

ಬಂಗಾರಮ್ಮನ ಮನೆಗೆ ಬಂದ ನಂಜಮ್ಮ ಎಲ್ಲರ ಎದುರು ಸ್ನೇಹ ಗರ್ಭಿಣಿಯಲ್ಲ, ಗರ್ಭಿಣಿ ಆಗಿರುವುದು ವಸು, ಅದು ಯಾರಿಗೋ ಎಂದಾಗೆ ಎಲ್ಲರೂ ಗರಂ ಆಗುತ್ತಾರೆ. ಏಯ್ ನಂಜಮ್ಮ ಎಂದು ಒಟ್ಟಿಗೆ ಕಿರುಚುತ್ತಾರೆ. ಮಾದೇಗೌಡರು ಮಾತ್ರ ಮಗಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದಕ್ಕೆ ನಂಜಮ್ಮನ ವಿರುದ್ದ ಮಚ್ಚು ಎತ್ತಿ ಬಿಡುತ್ತಾರೆ.

Kannada serial Puttakkana makkalu written update 14th February

ನಂಜಮ್ಮ ಭಯ ಬಿದ್ದು ಮನೆಯಿಂದ ಆಚೆ ಹೋಗುತ್ತಾಳೆ ಎಂದು ತಿಳಿದರೆ ಅದು ಬಹಳ ದೊಡ್ಡ ತಪ್ಪು. ಆಕೆ ಮಾತ್ರ ಬಂಗಾರಮ್ಮನ ವಿರುದ್ಧ ಇನ್ನಷ್ಟು ಕೋಪಿಸಿಕೊಂಡು ಬಿಡುತ್ತಾಳೆ. ಸ್ನೇಹಾ ಸುಳ್ಳು ಹೇಳಿದ್ದಕ್ಕೆ ಸಮಜಾಯಿಷಿ ನೀಡುತ್ತಾಳೆ. ಆದರೆ ಇದನ್ನು ಕಂಡ ಕಂಠಿ ಮಾತ್ರ ಮಾತನಾಡಬೇಡಿ ಎಂದು ಕೊಂಚ ಏರು ಧ್ವನಿಯಲ್ಲಿ ಹೇಳುತ್ತಾನೆ. ಯಾಕೆಂದರೆ ಕಂಠಿಗೆ ಬಹಳ ನೋವಾಗಿರುತ್ತದೆ. ನನ್ನ ಮಗು ಇನ್ನೇನು ಸ್ನೇಹಾ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎನ್ನುವ ಕಂಠಿ ಖುಷಿಗೆ ತಣ್ಣೀರು ಎರಚಿದ್ದಾಳೆ.

ಇತ್ತ ವಸು ಬಳಿಗೆ ಓಡಿ ಬಂದ ಚಂದ್ರು ಬಹಳ ಖುಷಿಯಲ್ಲಿ ಇರುತ್ತಾನೆ. ನಾನು ತಂದೆ ಆಗುತ್ತಾ ಇದ್ದಿನಾ? ಎಂದು ಯಾರ ಬಳಿಯೂ ಹೇಳಿಕೊಳ್ಳುವಷ್ಟು ಖುಷಿ ಆತನಿಗೆ. ಆದರೆ ಬಂಗಾರಮ್ಮ ಗೆ ಮಾತ್ರ ತನ್ನ ಮಗಳು ಇಂತಹ ತಪ್ಪು ಮಾಡಿಕೊಂಡು ಬಿಟ್ಟಳು ಎನ್ನುವ ಕೋಪ ಬರುತ್ತದೆ. ಹಾಗೆಯೇ ಚಂದ್ರು, ವಸು ಇನ್ನೂ ಮೇಲೆ ಅವರ ದಾರಿಯನ್ನು ನೋಡಿಕೊಳ್ಳಲಿ. ವಸು ತಾಯಿ ಆಗುತ್ತಿದ್ದಾರೆ. ಈ ಸಂದರ್ಭ ಚಂದ್ರು ವಸು ಜೊತೆಗೆ ಇರಬೇಕು. ಆದರೆ ನಂಜಮ್ಮ ಮಾತ್ರ ವಸುವನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪುವುದಿಲ್ಲ.

ಪುಟ್ಟಕ್ಕನ ಮಾತಿಗೆ ವಸು-ಚಂದ್ರು ಸಮ್ಮತಿ

ಏನು ಮಾಡುವುದು ಎಂದು ತಿಳಿಯದೇ ಚಂದ್ರುಗೆ ದಿಕ್ಕೇ ತೋಚದಂತಾಗುತ್ತದೆ. ನಂಜಮ್ಮ ಚಂದ್ರುವನ್ನು ಬಾ ಮನೆಗೆ ಹೋಗೋಣ ಚಂದ್ರು ಎಂದಾಗ ಚಂದ್ರು ಮಾತ್ರ ನಿನ್ನ ಜೊತೆ ನಾನು ಬದುಕಲಾರೆ. ನಾನು ನನ್ನ ಹೆಂಡತಿ ಮಗುವಿನ ಜೊತೆ ಇರುತ್ತೇನೆ ಎಂದು ಖಡಕ್ ಆಗಿ ಹೇಳುತ್ತಾನೆ. ಇದನ್ನು ಕೇಳಿದ ನಂಜಮ್ಮಗೆ ಸಿಡಿಲು ಬಡಿದಂತಾಗುತ್ತದೆ. ನಾನು ಏನೋ ಅಂದುಕೊಂಡು ಬಂದೆ. ಆದರೆ ಏನೋ ಆಗಿ ಬಿಟ್ಟಿತಲ್ಲ ಎಂದುಕೊಳ್ಳುತ್ತಾಳೆ.

Kannada serial Puttakkana makkalu written update 14th February

ನಂಜಮ್ಮಗೆ ತಿರುಗೇಟು ಕೊಟ್ಟ ಚಂದ್ರು

ವಸು ಮಾತ್ರ ಚಂದ್ರು ನಿರ್ಧಾರ ಕಂಡು ಬಹಳ ಖುಷಿಯಲ್ಲಿ ಇರುತ್ತಾಳೆ. ಇನ್ನು ಪುಟ್ಟಕ್ಕ ವಸುವನ್ನು ಮನೆಯಿಂದ ಹೊರಗೆ ಹಾಕುವುದು ಸರಿಯಲ್ಲ ಎಂದು ಬಂಗಾರಮ್ಮನ ಬಳಿ ಎಷ್ಟೇ ಹೇಳಿದರೂ ಆಕೆ ಕೇಳಲು ತಯಾರಿಲ್ಲ. ಆ ಕಾರಣಕ್ಕೆ ವಸು ಹಾಗೂ ಚಂದ್ರು ನಮ್ಮ ಮನೆಯಲ್ಲಿ ಇರಲಿ. ಗರ್ಭಿಣಿ ವಸುವನ್ನು ಬೀದೀಲಿ ಬಿಡಲು ನನಗೆ ಇಷ್ಟ ಆಗುತ್ತಿಲ್ಲ ಎಂದು ಪುಟ್ಟಕ್ಕ ಹೇಳುತ್ತಾಳೆ. ಹಾಗೆಯೇ ತನ್ನ ಮನೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾಳೆ. ಆದರೆ ನಂಜಮ್ಮ ಮಾತ್ರ ಪುಟ್ಟಕ್ಕಗೆ ಆವಾಜ್ ಹಾಕುತ್ತಾಳೆ.

ನಂಜಮ್ಮನ ಮಾತಿಗೆ ಕಿವಿಗೊಡದ ಪುಟ್ಟಕ್ಕ

ಯಾವುದಕ್ಕೂ ಪುಟ್ಟಲ್ಲ ಕ್ಯಾರೆ ಎನ್ನುವುದಿಲ್ಲ. ಇಬ್ಬರನ್ನೂ ಮನೆಗೆ ಕರೆದುಕೊಂಡು ಹೋಗಿ ಆತಿಥ್ಯ ನೀಡುತ್ತಾಳೆ ಪುಟ್ಟಕ್ಕ. ಹಾಗೆಯೇ ಮನೆಯಲ್ಲಿ ಇರುವವರನ್ನು ನೋಡಿ ಗೋಪಾಲ ಮಾತ್ರ ಬಹಳ ಖುಷಿ ಪಟ್ಟುಕೊಂಡು ಮನೆ ಒಳಗೆ ಬರಬೇಕು ಅಂದುಕೊಂಡಾಗ ಸ್ನೇಹಾಗೆ ಕೊಟ್ಟಿರುವ ಮಾತು ನೆನಪಾಗಿ ಮನೆಯ ಹೊರಗೆ ನಿಂತು ಬಿಡುತ್ತಾನೆ.

More from Filmibeat

English summary
Puttakkana Makkalu serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X