Puttakkana Makkalu: ಸ್ನೇಹಾ ಗರ್ಭಿಣಿ ಎಂದು ಸುಳ್ಳು ಹೇಳಿದ ಶಶಿಕಲಾ
ಸ್ನೇಹಾ ಗರ್ಭಿಣಿ ಆಗಿದ್ದಾಳೆ ಎಂದು ಹೇಳಿ ಶಶಿಕಲಾ ಬಹಳ ಮಸಲತ್ತಿನಿಂದ ಸ್ನೇಹ ಹಾಗೂ ವಸುವನ್ನ ಎಲ್ಲರೆದುರು ಸಿಕ್ಕಿಹಾಕಿಸಿದ್ದಾಳೆ. ವಸು ಗರ್ಭಿಣಿ ಎನ್ನುವ ವಿಚಾರ ಶಶಿಕಲಾಗೆ ಯಾವಾಗ ತಿಳಿಯಿತೋ ಅದನ್ನು ಯಾರ ಬಳಿಯೂ ಕೂಡ ಹೇಳದೆ ಮುಚ್ಚಿಟ್ಟು ತನ್ನ ಬೇಳೆ ಬೇಯಿಸಿಕೊಳ್ಳಲು ಸ್ನೇಹ ಗರ್ಭಿಣಿಯಾಗಿದ್ದಾಳೆ ಎಂದು ಸುಳ್ಳು ಸುದ್ದಿಯನ್ನ ಹಬ್ಬಿಸಿದ್ದಾಳೆ.
ಈ ವಿಚಾರ ತಿಳಿದು ಬಂಗಾರಮ್ಮ ಬಹಳ ಬೇಸರಗೊಂಡಿದ್ದಾರೆ. ಯಾಕೆಂದರೆ ಕಂಠಿ, ಬಂಗಾರಮ್ಮಗೆ ಒಂದು ಮಾತು ಕೊಟ್ಟಿರುತ್ತಾನೆ . ತನ್ ಅಕ್ಕನ ಜೀವನ ಸರಿಹೋದ ಬಳಿಕವೇ ನಾನು ನನ್ನ ಜೀವನವನ್ನು ಶುರು ಮಾಡುತ್ತೇನೆ ಎಂದು ಹೇಳಿರುತ್ತಾನೆ. ಹಾಗೆಯೇ ಆ ರೀತಿಯೇ ನಡೆದುಕೊಂಡು ಇರುತ್ತಾನೆ. ಆದರೆ ಕಂಠಿಯನ್ನ ತಪ್ಪಾಗಿ ತಿಳಿದುಕೊಂಡ ಬಂಗಾರಮ್ಮ ಬಹಳ ಬೇಸರ ಹಾಗೂ ಕೋಪ ಮಾಡಿಕೊಂಡಿದ್ದಾಳೆ.

ಸ್ನೇಹ ಬೇಕಂತಲೇ ಜಿದ್ದಿಗೆ ಬಿದ್ದು ಮಗು ಮಾಡಿಕೊಂಡಿದ್ದಾಳೆ ಎನ್ನುವುದು ಬಂಗಾರಮ್ಮನ ವಾದ. ಸ್ನೇಹ ಗರ್ಭಿಣಿಯಾಗಿರುವ ವಿಚಾರ ಪುಟ್ಟಕ್ಕನ ಮನೆಗೂ ತಲುಪಿದೆ . ಸ್ನೇಹಾಗೆ ಕರೆ ಮಾಡಿ ಆರೋಗ್ಯ ವಿಚಾರಣೆ ಮಾಡುತ್ತಾಳೆ. ಹಾಗೆಯೇ ಗರ್ಭಿಣಿ ಸಂದರ್ಭದಲ್ಲಿ ಏನೆಲ್ಲ ಆರೋಗ್ಯದಲ್ಲಿ ಏರುಪೇರು ಆಗುತ್ತದೆ ಎಂಬುವುದನ್ನು ಹೇಳುತ್ತಾಳೆ. ತನ್ನ ಹೆಂಡತಿ ಮಗಳಿಗೆ ಹೇಳುತ್ತಿದ್ದ ವಿಚಾರಗಳನ್ನು ಕೇಳಿ ಗೋಪಾಲನಿಗೂ ಬಹಳ ಖುಷಿಯಾಗುತ್ತದೆ..
ತಾಯಿಯ ಮಾತಿಗೆ ಕೋಪಿಸಿಕೊಂಡ ಬಂಗಾರಮ್ಮ
ಸ್ನೇಹಾಗೆ ತನ್ನ ತಾಯಿ ಕರೆ ಮಾಡಿ ತನ್ನ ಆರೋಗ್ಯದ ಬಗ್ಗೆ ವಿಚಾರಣೆ ಮಾಡುತ್ತಿರುವುದನ್ನು ನೋಡಿ ಬಹಳ ಕಿರಿಕಿರಿಯಾಗುತ್ತದೆ ಎಂದು ಎಷ್ಟೇ ಬಾಯಿ ತೆಗೆದರು ಅದನ್ನು ಮಾತ್ರ ಕೇಳುವ ಸ್ಥಿತಿಯಲ್ಲಿ ಪುಟ್ಟಕ್ಕ ಇರುವುದಿಲ್ಲ. ಇದನ್ನು ನೋಡಿದ ಸ್ನೇಹಾಗೆ ಕೋಪ ಬರುತ್ತದೆ. ಅಮ್ಮ ನನ್ನ ಬಗ್ಗೆ ನೀನು ಯಾವುದೇ ಟೆನ್ಷನ್ ತೆಗೆದುಕೊಳ್ಳಬೇಡ . ನೀನು ಇಷ್ಟಪಟ್ಟವರು ನಿನ್ನ ಜೊತೆ ಇದ್ದಾರೆ ಅಲ್ಲವೇ ನೀನು ಖುಷಿಯಾಗಿರು ಎಂದು ಹೇಳಿ ಕರೆ ಕಟ್ ಮಾಡುತ್ತಾರೆ.

ಸ್ನೇಹ ಮೇಲೆ ಮುನಿಸಿಕೊಂಡ ಮುರಳಿ ಸ್ನೇಹಿತೆ
ಇನ್ನು ಮುರಳಿ ಜೊತೆ ನಾಟಕ ಮಾಡುತ್ತಿದ್ದ ಆತನ ಗೆಳತಿ ವಿನುತಾಗೆ ಸಹನಳ ಮೇಲೆ ಬಹಳ ಕೋಪ ಬರುತ್ತದೆ. ಯಾಕೆಂದರೆ ಮುರಳಿಯನ್ನು ವಿನುತ ಪ್ರೀತಿ ಮಾಡುತ್ತಾ ಇರುತ್ತಾಳೆ. ಹೇಗಾದರೂ ಮಾಡಿ ಸಹನಾಳನ್ನು ಮುರಳಿಯಿಂದ ದೂರ ಮಾಡಲೇಬೇಕು ಎಂದುಕೊಂಡು ಇರುತ್ತಾಳೆ.
ವಿನುತಾಗೆ ಕಿರಿ ಕಿರಿ
ಇತ್ತೀಚಿನ ದಿನಗಳಲ್ಲಿ ಸಹನ ಹೇಳಿದ ಹಾಗೆ ಮುರಳಿ ಕೇಳುತ್ತಿರುತ್ತಾನೆ. ಇದು ವಿನುತಗೆ ಬಹಳ ಕಿರಿ ಕಿರಿ ಆಗುತ್ತಾ ಇರುತ್ತದೆ. ಆದರೂ ಅದೆಲ್ಲವನ್ನೂ ಸಹಿಸಿಕೊಂಡು ಇರುತ್ತಾಳೆ. ಮುರಳಿ, ಸಹನಾ ಬಳಿ ಹೆಚ್ಚು ಕ್ಲೋಸ್ ಆಗುತ್ತಾ ಇರುವುದನ್ನು ನೋಡಿ ವಿನುತಗೆ ಸಹಿಸಲು ಆಗುವುದು ಇಲ್ಲ. ಕಾಲೇಜಿನಲ್ಲಿ ಬಹಳ ಕೆಲಸ ಇದೆ ಎಂದು ಮುರಳಿಗೆ ಆಗಾಗ ಜ್ಞಾಪಿಸುತ್ತಾ ಇರುತ್ತಾಳೆ ವಿನುತ. ಆದರೆ ಮುರಳಿ ಮಾತ್ರ ನೀನು ಹೋಗಿರು ವಿನುತ ಎಂದು ಹೇಳಿ ಆಕೆ ಒಬ್ಬಳನ್ನೆ ಕಾಲೇಜಿಗೆ ಕಳುಹಿಸುತ್ತಾನೆ.
ಸ್ನೇಹ ಮನೆಗೆ ಹೋದ ಸಹನಾ
ಮುರಳಿ ಹಾಗೂ ಸಹನಾ, ಸ್ನೇಹಾ ಮನೆಗೆ ಬಂದು ಆಕೆಯ ಆರೋಗ್ಯ ವಿಚಾರಣೆ ಮಾಡುತ್ತಾ ಇರುತ್ತಾರೆ. ಹಾಗೆಯೇ ಇನ್ನು ಮೇಲೆ ಸರಿಯಾದ ಸಮಯಕ್ಕೆ ಊಟ ಮಾಡಬೇಕು ಇಲ್ಲವಾದರೆ ಮಗುವಿಗೆ ಬಹಳ ತೊಂದರೆ ಆಗುತ್ತದೆ ಎಂದು ಬುದ್ಧಿ ಮಾತನ್ನ ಹೇಳುತ್ತಾಳೆ. ವಸು ಬಳಿ ಅತ್ತಿಗೆ ನನ್ನ ತಂಗಿಯನ್ನು ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಬಂಗಾರಮ್ಮ ಬರುತ್ತಾಳೆ.
ಸಹನಾಗೆ ತಂಗಿ ತಾಯಿ ಆಗ್ತಿರುವ ಖುಷಿ
ಸ್ನೇಹ ಗರ್ಭವತಿ ಆಗಿದ್ದಾಳೆ ಅದಕ್ಕಾಗಿ ಆಕೆಯನ್ನು ನೋಡಲು ಬಂದೆ ಎಂದು ಹೇಳಿದಾಗ ಬಹಳ ಕೋಪಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾಳೆ. ಆದರೆ ಅದು ಯಾವುದಕ್ಕೂ ಸಹನಾ ತಲೆಕೆಡಿಸಿಕೊಂಡಂತಿಲ್ಲ. ಆಕೆಗೆ ತನ್ನ ತಂಗಿಯ ಜೀವನ ಸರಿ ಹೋಯಿತಲ್ಲ. ಆಕೆಯ ಪ್ರಪಂಚಕ್ಕೆ ಒಂದು ಮುದ್ದಾದ ಮಗು ಬರುತ್ತಿದೆಯಲ್ಲ ಎಂದು ಬಹಳ ಖುಷಿಯಲ್ಲಿದ್ದಾಳೆ.


Click it and Unblock the Notifications











