Puttakkana Makkalu: ನಿಜ ತಿಳಿದು ಬಂಗಾರಮ್ಮ ಶಾಕ್, ಮನದಲ್ಲಿ ಸೊಸೆಗೆ ಕೃತಜ್ಞತೆ ತಿಳಿಸಿದ ಅತ್ತೆ!

By Poorva

ಪುಟ್ಟಕ್ಕನ ಮಗಳು ಸ್ನೇಹಾ ಹಾಗೂ ಆಕೆಯ ಅತ್ತೆ ಬಂಗಾರಮ್ಮ ಜೊತೆಗೆ ಕಿತ್ತಾಟವೇ ಆಗಿರುತ್ತದೆ. ಸ್ನೇಹಾ ಏನೇ ಮಾಡಿದರು ಅದರಲ್ಲಿ ಬಂಗಾರಮ್ಮ ತಪ್ಪನ್ನ ಹುಡುಕುತ್ತಿರುತ್ತಾಳೆ. ಸ್ನೇಹಾಳನ್ನು ತಪ್ಪು ತಿಳಿದುಕೊಂಡ ಬಂಗಾರಮ್ಮ ಆಕೆಯ ಮೇಲೆ ಹರಿಹಾಯುತ್ತಾಳೆ. ಆದರೆ ಅದೆಲ್ಲವನ್ನೂ ನೋಡಿದ ಕಂಠಿ ಮೌನಕ್ಕೆ ಶರಣಾಗಿದ್ದಾನೆ. ಅತ್ತ ಕಡೆ ತಾಯಿಯನ್ನು ಬಿಟ್ಟು ಕೊಡಲು ಆಗದೆ ಇತ್ತ ಹೆಂಡತಿಯ ಪರ ಮಾತನಾಡಲು ಆಗದೆ ಒದ್ದಾಡುತ್ತಾ ಇದ್ದಾನೆ.

ಬಂಗಾರಮ್ಮ ಕೋಪದಲ್ಲಿ ಬುಸುಗುಟ್ಟುಕೊಂಡು ನನ್ನ ಗಂಡನನ್ನು ಈ ಆಸ್ಪತ್ರೆಗೆ ಯಾಕೆ ಸೇರಿಸಿದೆ ಎಂದು ಬಹಳ ಗಡುಸಾದ ಧ್ವನಿಯಲ್ಲಿ ಸ್ನೇಹಾ ಬಳಿ ಪ್ರಶ್ನೆ ಮಾಡುತ್ತಾಳೆ. ಆದರೆ ಸ್ನೇಹಾ ಏನೇ ಹೇಳಿದರು ಬಂಗಾರಮ್ಮ ಕೇಳುವ ಗುಂಗಿಗೆ ಹೋಗಿಲ್ಲ. ನನ್ನ ಗಂಡನಿಗೆ ಏನಾದರು ಆದರೆ ನಾನು ಸುಮ್ಮನೆ ಕೂರುವವಳು ಅಲ್ಲ ಎಂದು ಜೋರಾಗಿ ಮಾತನಾಡುತ್ತಾಳೆ.

Kannada Serial Puttakkana Makkalu Written Update 20th December

ಬಂಗಾರಮ್ಮ ತನಗೂ ತಲೆ ನೋವು ತಂದುಕೊಂಡು, ಪುಟ್ಟಕ್ಕನಿಗೂ ಕೂಡ ತಲೆ ನೋವು ಕೊಡುತ್ತಿದ್ದಾಳೆ. ಆದರೆ ಅದಕ್ಕೆಲ್ಲ ಇದೀಗ ಉತ್ತರ ಸಿಕ್ಕಿದೆ. ಸ್ನೇಹಾ ಬಂಗಾರಮ್ಮನ ಎದುರೇ ಕರೆದುಕೊಂಡು ಬಂದು ನಿಜ ವಿಚಾರವನ್ನು ಹೇಳುತ್ತಾಳೆ. ಆದರೆ ಬಂಗಾರಮ್ಮ ಮಾತ್ರ ವಿಚಾರಗಳನ್ನು ಕೇಳಿ ಶಾಕ್‌ಗೆ ಒಳಗಾಗುತ್ತಾರೆ.

ಹೆಂಡತಿ ಬಗ್ಗೆ ಮನದಲ್ಲಿ ಖುಷಿ ಪಟ್ಟ ಕಂಠಿ

ಸ್ನೇಹಾ ಮಾಡಿದ್ದು ಸರಿ ನಾನೇ ತಪ್ಪು ಮಾಡಿಬಿಟ್ಟೆ ಎಂದು ಮನದಲ್ಲಿ ಅಂದುಕೊಂಡಿರುತ್ತಾರೆ. ಇನ್ನು ನಿಜ ವಿಚಾರ ಅತ್ತೆಗೆ ತಿಳಿಸಿದ ಸ್ನೇಹಾ ತನ್ನ ತಾಯಿಗೆ ಕರೆ ಮಾಡಿ ಇದ್ದ ವಿಚಾರವನ್ನು ಹೇಳುತ್ತಾಳೆ. ಹಾಗೆ ನಿಜ ಏನೆಂಬುದನ್ನು ನನ್ನ ಅತ್ತೆಗೆ ತೋರಿಸಿಕೊಟ್ಟಿದ್ದೇನೆ ಎಂದು ತನ್ನ ತಾಯಿಯ ಬಳಿ ಹೇಳುತ್ತಾಳೆ. ಆಮೇಲೆ ಪುಟ್ಟಕ್ಕನಿಗೆ ಕೊಂಚ ಸಮಾಧಾನ ಆಗುತ್ತದೆ

Kannada Serial Puttakkana Makkalu Written Update 20th December

ಮಗಳ ಮಾತು ಕೇಳಿ ಪುಟ್ಟಕ್ಕ ನಿರಾಳ

ಸ್ನೇಹಾ ಹೇಳಿದ್ದನ್ನೆಲ್ಲಾ ಕೇಳಿದ ಪುಟ್ಟಕ್ಕ ಇಷ್ಟೆಲ್ಲಾ ಘಟನೆಗಳು ಆಯ್ತಾ ಎಂದು ಮನದಲ್ಲೇ ಅಂದುಕೊಂಡಿರುತ್ತಾಳೆ. ಇಷ್ಟಾದರೂ ಬಂಗಾರಮ್ಮ ನಿನ್ನ ಜೊತೆ ಮಾತನಾಡುತ್ತಿಲ್ಲವ ಎಂದು ಪ್ರಶ್ನೆ ಕೂಡ ಮಾಡುತ್ತಾಳೆ. ಆದರೆ ಸ್ನೇಹಾ ಹೇಳುತ್ತಾಳೆ ಅತ್ತೆ ಈಗ ನನ್ನ ಮೇಲೆ ಕೋಪಿಸಿಕೊಂಡಿರಬಹುದು ಆದರೆ. ಅವರ ಒಳಗೆ ನನ್ನ ಬಗ್ಗೆ ಉತ್ತಮವಾದ ಭಾವನೆ ಇದೆ ಎಂದು ತಾಯಿಗೆ ಸಮಾಧಾನ ಮಾಡುತ್ತಾಳೆ.

ಬಂಗಾರಮ್ಮ ಮತ್ತು ಸ್ನೇಹಾ ಇನ್ನಾದರೂ ಒಂದಾಗುತ್ತಾರ ?

ಇತ್ತ ಕಂಠಿ ಸ್ನೇಹಾ ಬಗ್ಗೆ ಬಹಳ ಹೆಮ್ಮೆಪಡುತ್ತಾನೆ. ನನ್ನ ಹೆಂಡತಿಯ ಕಾರಣದಿಂದಾಗಿ ನನ್ನ ತಂದೆ ಇದೀಗ ನಮಗೆ ಉಳಿದುಕೊಂಡಿದ್ದಾರೆ. ಇಲ್ಲವಾದರೆ ನಾವು ತಂದೆಯನ್ನ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿತ್ತು ಎಂದು ಯೋಚನೆ ಮಾಡುತ್ತಿರುತ್ತಾನೆ. ಬಂಗಾರಮ್ಮನಿಗೂ ಕೂಡ ತನ್ನ ತಪ್ಪಿನ ಅರಿವಾಗಿದೆ ಸುಮ್ಮನೆ ಆಕೆ ಮೇಲೆ ದೂರಿಬಿಟ್ಟೆನಲ್ಲ ಎಂದು ಮನದಲ್ಲೇ ನೊಂದುಕೊಂಡಿದ್ದಾಳೆ.

More from Filmibeat

English summary
Puttakkana Makkalu serial 20th December update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X