Puttakkana Makkalu: ಮಗಳ ಮಾತಿಗೆ ನೊಂದ ಗೋಪಾಲ; ಕಂಠಿಗೆ ನಿಜ ಹೇಳುತ್ತಾಳಾ ಸ್ನೇಹಾ ?
ಮಗಳನ್ನು ನೋಡಲು ಪುಟ್ಟಕ್ಕ ಹಾಗೂ ಗೋಪಾಲ ಬಂಗಾರ ಮ್ಮ ನವರ ಮನೆಗೆ ಆಗಮಿಸಿದ್ದಾರೆ. ದಂಪತಿ ಸಮೇತ ಬಂದಿರುವುದನ್ನು ಕಂಡು ಶಶಿಕಲಾ, ಹೋ ಬನ್ನಿ ಬನ್ನಿ ದಂಪತಿ ಸಮೇತ ಬಂದಿದ್ದೀರಾ? ಮಗಳನ್ನು ನೋಡಲು ಬಂದಿದ್ದೀರಾ ಎಂದೆಲ್ಲ ಕೇಳಿ ಅವರನ್ನು ಉಪಚರಿಸಿದಾಗ ಗೋಪಾಲ ಮೆತ್ತಗೆ ಪುಟ್ಟಕ್ಕನ ಬಳಿ ಕೇಳುತ್ತಾನೆ. ಪುಟ್ಟಮ್ಮಿ ಯಾರು ಅದು ಎಂದಾಗ ಅಲ್ಲಿಯೇ ಇದ್ದ ಶಶಿಕಲಾ ಆಕೆಯ ಪರಿಚಯ ಹೇಳುತ್ತಾಳೆ. ಹಾಗೆಯೇ ಮನೆಮಂದಿ ಜೋರಾಗಿ ಕರೆಯುತ್ತಾಳೆ.
ಬಂಗಾರಮ್ಮಗೆ ಪುಟ್ಟಕ್ಕನನ್ನೂ ನೋಡಿ ಬಹಳ ಖುಷಿ ಆಗುತ್ತದೆ. ಪುಟ್ಟಕ್ಕ ನನಗೆ ಗೊತ್ತಾಯಿತು ನಿನಗೆ ಮಗಳನ್ನೂ ನೋಡಬೇಕು ಅನ್ನಿಸಿದೆ ಎಂದು. ನೀನು ಸಹನಾ ಜೊತೆ ಒಟ್ಟಿಗೆ ಬರಬಹುದಿತ್ತು ಎಂದಾಗ ಪುಟ್ಟಕ್ಕ ಕೊಂಚ ಸಬೂಬು ಹೇಳುತ್ತಾಳೆ. ಬಂಗಾರಮ್ಮ, ಗೋಪಾಲನನ್ನು ನೋಡಿ ನಗು ಬೀರುತ್ತಾಳೆ. ಇನ್ನು ಅಲ್ಲಿಗೆ ಬಂದ ಸ್ನೇಹಾ ವ್ಯಂಗ್ಯವಾಗಿ ಓಹ್ ದಂಪತಿ ಸಮೇತ ಬಂದಿದ್ದೀರಿ ಎನ್ನುತ್ತಾಳೆ.

ಗೋಪಾಲ, ನಾನೇ ನಿಮ್ಮ ಅವ್ವನ ಜೊತೆ ಬರುತ್ತೇನೆ ಎಂದು ಹಠ ಹಿಡಿದೆ. ಅದಕ್ಕೆ ಪುಟ್ಟಮ್ಮಿ ಕರೆದುಕೊಂಡು ಬಂದಳು ಎಂದಾಗ ಸ್ನೇಹಾಗೆ ಇನ್ನಷ್ಟು ಕೋಪ ಬಂದು ಬಹಳ ಖಾರವಾಗಿ ಮಾತನಾಡುತ್ತಾಳೆ. ನನಗೆ ತಂದೆ ಎಂಬುವವನು ಇಲ್ಲ. ನನಗೆ ತಾಯಿ ಮಾತ್ರ ಇರುವುದು. ಮಗಳೇ ಎಂದು ನನ್ನ ಬಳಿ ಬರುವ ಎಲ್ಲ ಅಧಿಕಾರ ನನ್ನ ಅಮ್ಮನಿಗೆ ಮಾತ್ರ ಇದೆ. ಬೇರೆ ಯಾರಿಗೂ ಕೂಡ ಆ ಅಧಿಕಾರ ನಾನು ಕೊಟ್ಟಿಲ್ಲ ಎನ್ನುತ್ತಾಳೆ. ಇದನ್ನು ಕೇಳಿದ ಗೋಪಾಲ ಕಣ್ಣಲ್ಲಿ ನೀರು ಬಂದರೆ ಬಂಗಾರಮ್ಮಗೆ ಮಾತ್ರ ಶಾಕ್ ಆಗುತ್ತದೆ.
ಗೋಪಾಲನ ಮಾತಿಗೆ ಕೋಪಗೊಂಡ ಸ್ನೇಹಾ
ಸರಿ ಮಾತುಕತೆ ಎಲ್ಲ ಆಗಿದ್ದರೆ ಇಲ್ಲಿಂದ ಹೊರಡಬಹುದು ಎಂದು ಸ್ನೇಹಾ ಹೇಳುತ್ತಾಳೆ. ಆಗ ಪುಟ್ಟಕ್ಕಗೆ ಏನು ಹೇಳಬೇಕು ಎಂದು ತಿಳಿಯದೇ ಸ್ನೇಹಾ ಕೈ ಹಿಡಿದು ಸರಿ ಬರುತ್ತೇನೆ, ಹುಷಾರು ಎಂದು ಅಳುತ್ತಾ ಪುಟ್ಟಕ್ಕ ಹೊರಟು ನಿಲ್ಲುತ್ತಾಳೆ. ಆ ವೇಳೆ ಅಲ್ಲಿಗೆ ಕಂಠಿ ಬರುತ್ತಾನೆ. ಎಲ್ಲರೂ ಬಹಳ ಖುಷಿಯಲ್ಲಿ ಇರುವುದನ್ನು ಕಂಡ ಕಂಠಿಗೆ ಇದೇನಿದು ಇಷ್ಟೊಂದು ಖುಷಿಯಲ್ಲಿ ಇದ್ದಾರಲ್ಲ ಎಂದುಕೊಳ್ಳುತ್ತಾನೆ.
ಶಾಕ್‌ನಲ್ಲಿರುವ ಕಂಠಿ
ಅಷ್ಟರಲ್ಲಿ ಗೋಪಾಲ, ಅಳಿಯಂದ್ರೆ ನೀವು ಅಪ್ಪ ಆಗ್ತಿದ್ದೀರಾ, ಎಂದಾಗ ಅವನಿಗೆ ಮತ್ತಷ್ಟು ಶಾಕ್ ಆಗುತ್ತದೆ. ಆದರೆ ಸ್ನೇಹಾಗೆ ಕಂಠಿ ಜೊತೆ ಏನು ಹೇಳಬೇಕು ಎಂದು ತಿಳಿಯದೇ ಪರದಾಡುವ ಹಾಗೆ ಆಗುತ್ತದೆ. ಇನ್ನು ಪುಟ್ಟಕ್ಕ ಹಾಗೂ ಗೋಪಾಲ ಹೋದ ಬಳಿಕ ಚಂದ್ರು ಅಣ್ಣ, ಸ್ನೇಹಾಗೆ ಕರೆ ಮಾಡಿ ಶುಭಾಶಯ ಹೇಳಿ ಖುಷಿ ಪಡುತ್ತಾನೆ. ಹಾಗೆಯೇ ಚಂದ್ರು, ತಾಯಿ ನಂಜಮ್ಮ ಕೂಡ ಬಹಳ ಖುಷಿ ಪಡುತ್ತಾಳೆ.

ಚಂದ್ರು ಮೇಲೆ ನಂಜಮ್ಮಗೆ ಅನುಮಾನ
ತನ್ನ ಮಗನ ಮೂಗಿನ ದಾರ ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ಇಲ್ಲವಾದರೆ ನನಗೆ ನನ್ನ ಮಗ ಸಿಗುವುದು ಕಷ್ಟ ಎಂದು ನಂಜಮ್ಮ ಯೋಚನೆ ಮಾಡುತ್ತಾ ಇರುತ್ತಾಳೆ. ಆದರೆ ಮತ್ತೊಂದು ಕಡೆ ರಾಧಾ ಹಾಗೂ ಶಶಿಕಲಾ, ಕಂಠಿ ಹಾಗೂ ಸ್ನೇಹಳನ್ನು ದೂರ ಮಾಡಲು ಮಸಲತ್ತು ನಡೆಸುತ್ತಾ ಇರುತ್ತಾರೆ.


Click it and Unblock the Notifications











