Puttakka Makkalu: ಮನೆಗೆ ಬಂದ ಗೋಪಾಲ: ಸ್ನೇಹಾ ಕೆಂಡಾಮಂಡಲ

By Poorva

ಗೋಪಾಲ ಗಂಡು ಮಗುವಿಗಾಗಿ ರಾಜೇಶ್ವರಿಯನ್ನು ಮದುವೆ ಆಗುತ್ತಾನೆ. ಆದರೆ ಆತನಿಗೆ ಅಪಘಾತ ಆದ ಬಳಿಕ ಜ್ಞಾಪಕ ಶಕ್ತಿಯೇ ಕಳೆದುಕೊಂಡು ಬಿಡುತ್ತಾನೆ. ಗಂಡನಿಗೆ ಅಪಘಾತ ಆಗಿದೆ, ಆತನನ್ನು ಹೇಗಾದರೂ ಮಾಡಿ ಮೊದಲಿನಂತೆ ಮಾಡಬೇಕು ಮನೆಗೆ ಕರೆದುಕೊಂಡು ಬರಬೇಕು. ಅಥವಾ ಆತನನ್ನು ಒಂದು ಬಾರಿ ಆದರೂ ನೋಡಬೇಕು ಎಂದು ಯೋಚನೆ ಕೂಡ ರಾಜಿಗೆ ಬರದೇ ಹೋಯಿತು.

ಪುರುಷೋತ್ತಮ ತಂದೆಯನ್ನು ನೋಡಲು ಹೋಗುತ್ತೇನೆ ಎಂದು ಹೇಳಿದಾಗ ರಾಜೀ ಮಗನನ್ನು ತಡೆಯುತ್ತಾಳೆ. ಹೊರಗೆ ಹೋಗುವುದು ಬೇಡ ಎಂದರೂ ಪುರುಷೋತ್ತಮ ಅಮ್ಮನ ಯಾವ ಮಾತನ್ನು ಕೇಳುವುದಿಲ್ಲ. ಬದಲಾಗಿ ನೇರವಾಗಿ ತಂದೆಯನ್ನು ನೋಡಲು ಬರುತ್ತಾನೆ. ಆದರೆ ತಂದೆಗೆ ನಾನು ಯಾರೂ ಎಂಬುವುದೇ ಗೊತ್ತಿಲ್ಲ ಎಂದು ತಿಳಿದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ.

Kannada serial puttakkana makkalu written update 3rd January

ಪುಟ್ಟಕ್ಕನ ಮೆಸ್ ಉದ್ಘಾಟನೆಗೆ ರೆಡಿ ಆಗಿದೆ. ಪೂಜೆ ಮಾಡಲು ಪುಟ್ಟಕ್ಕ ಬರುತ್ತಾಳಾ ಅಥವಾ ಇಲ್ಲವೇ ಅನ್ನೋದು ದೊಡ್ಡ ಪ್ರಶ್ನೆ ಆಗಿದೆ. ಸ್ನೇಹಾ ಮನದಲ್ಲಿ ಅಂದುಕೊಂಡು ಇರುತ್ತಾಳೆ, ಅಮ್ಮ ಒಬ್ಬಳೇ ಬಂದರೆ ಸಾಕು. ಊರಿನ ಜನರು ಮೆಸ್‌ಗೆ ಊಟ ಮಾಡಲು ಬರಲಿ, ಆದರೆ ಆ ಗೋಪಾಲ ಒಬ್ಬನನ್ನು ಬಿಟ್ಟು ಎಂದು ಅಂದುಕೊಂಡು ಇರುತ್ತಾಳೆ.

ತಂದೆಯ ಮೇಲೆ ಮುನಿಸಿಕೊಂಡ ಸ್ನೇಹಾ

ಆಕೆಗೆ ತಂದೆಯ ಮೇಲೆ ಬಹಳ ಸಿಟ್ಟು. ಚಿಕ್ಕ ವಯಸ್ಸಿನಲ್ಲಿ ನಮ್ಮ ಕಷ್ಟಕ್ಕೆ ಆಗದ ತಂದೆ ಇದ್ದರೆ ಎಷ್ಟು, ಬಿಟ್ಟರೆ ಎಷ್ಟು ಎಂದೆಲ್ಲ ಯೋಚನೆ ಮಾಡುತ್ತಾಳೆ. ಸ್ನೇಹಾ ಈಗಾಗಲೇ ತನ್ನ ತಾಯಿಯ ಬಳಿ ಹೇಳಿತ್ತಾಳೆ. ಈ ಗೋಪಾಲನನ್ನು ಮನೆಗೆ ಕರೆದುಕೊಂಡು ಹೋಗುವುದು ಬೇಡ ಎಂದು. ಪುಟ್ಟಕ್ಕ ಮಾತ್ರ ನಾನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದಿರುತ್ತಾಳೆ.

ಅಮ್ಮನಿಗೆ ಸ್ನೇಹಾ ವಾರ್ನಿಂಗ್

ಸ್ನೇಹಾ ಈ ಗೋಪಾಲ ಮನೆಗೆ ಬಂದರೆ ನಾನು ಯಾವತ್ತೂ ಈ ಮನೆಗೆ ಬರುವುದು ಇಲ್ಲ ಎಂದು ಅಮ್ಮನ ಬಳಿ ಹೇಳಿರುತ್ತಾಳೆ. ಕಂಠಿ, ಪುಟ್ಟಕ್ಕನ ಬಗ್ಗೆ ಯೋಚನೆ ಮಾಡುತ್ತಾ ಇರುವಾಗ ಮೆಸ್ ಬಳಿ ಆಟೋ ರಿಕ್ಷಾ ಬಂದು ನಿಲ್ಲುತ್ತದೆ . ಅದರಿಂದ ಪುಟ್ಟಕ್ಕ ಇಳಿಯುತ್ತಾಳೆ.

Kannada serial puttakkana makkalu written update 3rd January

ಮನೆಗೆ ಬಂದ ಪುಟ್ಟಕ್ಕ

ಸಹನಾ ಹಾಗೂ ಪುರುಷೋತ್ತಮ ಬೈಕ್‌ನಲ್ಲಿ ಬರುತ್ತಾರೆ. ಅವರಿಬ್ಬರನ್ನು ನೋಡಿದ ಸುಮಾ ಹಾಗೂ ಸ್ನೇಹಾಗೆ ಖುಷಿ ಆಗುತ್ತದೆ. ಪುಟ್ಟಕ್ಕನನ್ನು ನೋಡಿ ಅದೇಕೊ ಮನಸ್ಸಿಗೆ ಬಹಳ ಖುಷಿ ನೀಡಿದರು, ಬಳಿಕ ಗೋಪಾಲ ರಿಕ್ಷಾದಿಂದ ಇಳಿದು ಬರುತ್ತಾ ಇರುವುದನ್ನು ನೋಡಿದ ಸುಮಾ, ಸ್ನೇಹಾ ಶಾಕ್ ಆಗುತ್ತಾರೆ. ರಾಜೀ ಮಾತ್ರ ಗೋಪಾಲ ಹೇಗಿದ್ದಾನೆ? ಎಂಬುವುದನ್ನು ವಿಚಾರ ಮಾಡಲೇ ಇಲ್ಲ. ಈಗಾಗಲೇ ಪುರುಷೋತ್ತಮನ ಬಳಿ ಸ್ನೇಹಾ ಹೇಳಿ ಕಳುಹಿಸಿರುತ್ತಾಳೆ. ನಿನ್ನ ಮಮ್ಮಿಗೆ ಇಲ್ಲಿಗೆ ಬರಲು ಹೇಳು, ತಂದೆಯ ಪರಿಸ್ಥಿತಿ ಬಗ್ಗೆ ಸ್ವಲ್ಪ ಹೇಳು ಎಂದಿರುತ್ತಾಳೆ . ಆದರೆ ಗೋಪಾಲ, ಪುಟ್ಟಕ್ಕನ ಮನೆಗೆ ಬಂದಿರುವುದು ಸ್ನೇಹಾಗೆ ಸಹಿದಲಾಗದಷ್ಟು ಕೋಪ ತಂದಿರುತ್ತದೆ.

More from Filmibeat

English summary
Puttakka Makkalu serial today episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X