Puttakka Makkalu: ರಾಜಿ ಮಸಲತ್ತಿಗೆ ಬಲಿ ಆಗುತ್ತಾ ಪುಟ್ಟಕ್ಕನ ಸಂಸಾರ?
ಪುಟ್ಟಕ್ಕನ ಗಂಡ ಗೋಪಾಲನಿಗೆ ಹಳೆಯದೆಲ್ಲ ಮರೆತು ಹೋಗಿಬಿಟ್ಟಿದೆ. ಆತನಿಗೆ ತನ್ನ ಮಕ್ಕಳು ಇಷ್ಟು ದೊಡ್ಡದಾಗಿ ಬೆಳೆದು ನಿಂತಿದ್ದಾರೆ ಎನ್ನುವ ಕಲ್ಪನೆಯೇ ಇಲ್ಲ. ಆದರೂ ಪುಟ್ಟಕ್ಕನ ಬಳಿ ಎಲ್ಲವನ್ನೂ ಕೇಳಿಕೊಂಡು ತನ್ನ ಮಕ್ಕಳು ಸ್ನೇಹಾ, ಸಹನಾ ಹಾಗೂ ಸುಮಾ ಬಳಿ ಕ್ಷಮೆ ಕೇಳುತ್ತಾನೆ.
ತಾನು ನಿಮ್ಮನ್ನೆಲ್ಲ ಚಿಕ್ಕ ವಯಸ್ಸಿನಲ್ಲಿ ಬಿಟ್ಟು ಹೋಗಿ ಬಿಟ್ಟೆ. ಆದರೆ ಇನ್ನೂ ಮುಂದೆ ಆ ರೀತಿ ಯಾವತ್ತೂ ಆಗುವುದು ಇಲ್ಲ. ನಾನು ಖಂಡಿತವಾಗಿಯೂ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಪ್ರಮಾಣ ಮಾಡುತ್ತಾನೆ. ಹಾಗೆಯೇ ಇಷ್ಟು ದಿನ ಪುಟ್ಟಕ್ಕ ಹಾಗೂ ಆಕೆಯ ಮಕ್ಕಳ ಜೊತೆ ನಾನು ಇರಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಇತ್ತ ಬಂಗಾರಮ್ಮ, ರಾಧಾಗೆ ಒಂದಷ್ಟು ಹುಡುಗರ ಫೋಟೋಗಳನ್ನು ತೋರಿಸಿ ಇವರಲ್ಲಿ ಯಾರಾದರೂ ಇಷ್ಟ ಆದರೆ ಅವರನ್ನೇ ನಾನು ನಿನಗೆ ಮದುವೆ ಮಾಡಿಸುತ್ತೇನೆ ಎಂದು ಹೇಳುತ್ತಾಳೆ.

ರಾಧಾಗೆ ಏನು ಮಾಡಬೇಕು ಎಂದು ತಿಳಿಯದೇ ಮೂರ್ಛೆ ಹೋಗುವ ಹಾಗೆ ನಾಟಕ ಮಾಡುತ್ತಾಳೆ. ಬಂಗಾರಮ್ಮಗೆ ಇದರಿಂದ ಶಾಕ್ ಆಗುತ್ತದೆ. ರಾಧಾಗೆ ಎಚ್ಚರ ಆದಾಗ ಎಲ್ಲರ ಬಗ್ಗೆ ಗೊತ್ತಿದ್ದರೂ ಯಾರು ಪರಿಚಯವೇ ಇಲ್ಲ ಎನ್ನುವ ಹಾಗೆ ಇರುತ್ತಾಳೆ. ಇದನ್ನು ಕಂಡ ಬಂಗಾರಮ್ಮಗೆ ಮತ್ತಷ್ಟು ಆತಂಕ ಹೆಚ್ಚುತ್ತದೆ.
ಪುಟ್ಟಕ್ಕನ ಮನೆಯಲ್ಲಿ ಹಬ್ಬದ ವಾತಾವರಣ
ಇನ್ನು ಪುಟ್ಟಕ್ಕನ ಮನೆಯಲ್ಲಿ ಹಬ್ಬದ ವಾತಾವರಣವಿದೆ. ಪುಟ್ಟಕ್ಕನ ಮೆಸ್ ಪುನಾರಾರಂಭಕ್ಕೆ ಎಲ್ಲರೂ ಖುಷಿ ಪಡುತ್ತಾ ಇರುತ್ತಾರೆ. ನಂಜಮ್ಮ ಹಾಗೂ ಕಾಳಿಯ ಕುತಂತ್ರಕ್ಕೆ ಸಿಲುಕಿ ಮೆಸ್ ಸುಟ್ಟು ಭಸ್ಮ ಆಗಿ ಹೋಗಿತ್ತು. ಆದರೆ ಇದೀಗ ಕಂಠಿ ಮಾಡಿದ ಸಹಾಯದಿಂದ ಪುಟ್ಟಕ್ಕ ಮೆಸ್ ಅನ್ನು ರೀ ಓಪನ್ ಮಾಡಿದ್ದಾಳೆ. ಇದರಿಂದ ಎಲ್ಲರೂ ಖುಷಿ ಆಗಿರುತ್ತಾರೆ. ಆದರೆ ರಾಜೀಗೆ ಮಾತ್ರ ಪುಟ್ಟಕ್ಕನ ಖುಷಿ ನೋಡಲು ಆಗುವುದು ಇಲ್ಲ.
ಮನೆಮುಂದೆ ಚೀರಾಡಿದ ರಾಜಿ
ರಾಜೀಗೆ ಪುಟ್ಟಕ್ಕನ ಮನೆಯಲ್ಲಿ ಖುಷಿ ಇರುವುದನ್ನು ಕಂಡರೆ ಇಷ್ಟ ಆಗುವುದಿಲ್ಲ. ಅದನ್ನು ಹೇಗಾದರೂ ಕೆಡಿಸಿ ಬಿಡಬೇಕು ಎನ್ನುವುದು ಅವಳ ಆಸೆ. ಆದರೆ ಇದೀಗ ರಾಜೀ ನೇರವಾಗಿ ಪುಟ್ಟಕ್ಕನ ಮೆಸ್ ಬಳಿ ಬಂದು ತನ್ನ ಗಂಡ ಪುಟ್ಟಕ್ಕನ ಮನೆಗೆ ಬಂದಿದ್ದಾನೆ. ಇದೆಲ್ಲ ಪುಟ್ಟಕ್ಕನ ಹುನ್ನಾರ ಎಂದೆಲ್ಲ ಹೇಳುತ್ತ ಬಾಯಿ ಬಡಿದುಕೊಳ್ಳುತ್ತಾಳೆ .

ಒಳ್ಳೆಯ ಶಾಸ್ತಿ ಆಯಿತು ಎಂದ ಸ್ನೇಹಾ
ಇದನ್ನು ನೋಡಿದ ಪುಟ್ಟಕ್ಕ "ರಾಜವ್ವ ಇವತ್ತು ಮೆಸ್ ಓಪನ್ ಆಗುವ ದಿನ. ನೀನು ಇವತ್ತು ಹೀಗೆ ಕಿರುಚಾಡುತ್ತ ಇರುವುದು ಸರಿ ಅಲ್ಲ. ದಯವಿಟ್ಟು ಸುಮ್ಮನೆ ಇರು ಎನ್ನತ್ತಾಳೆ. ಆದರೆ ರಾಜೀ ಯಾರ ಮಾತನ್ನೂ ಕೇಳಲು ರೆಡಿ ಇರುವುದಿಲ್ಲ. ಇನ್ನು ಬಹಳ ಜೋರಾಗಿ ಮಾತನಾಡುತ್ತಾ ಇರುತ್ತಾಳೆ. ರಾಜೀ ಬಂದು ಗಂಡನ ಬಳಿ ಏನಾಯಿತಯ್ಯ ನಿನಗೆ ಎನ್ನುತ್ತಾಳೆ.
ಬಾಯಿ ಬಡಿದುಕೊಂಡ ರಾಜೀ
ಮೆಸ್‌ನ ಎಲ್ಲಾ ಕಾರ್ಯಕ್ರಮ ಮುಗಿಯಲಿ ಆಮೇಲೆ ಮಾತನಾಡೋಣ ಎಂದು ಪುಟ್ಟಕ್ಕ ಹೇಳುತ್ತಾಳೆ. ಇದನ್ನು ಕೇಳಿದ ರಾಜೀ ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತಾಳೆ. ನನ್ನ ಗಂಡನನ್ನು ಮನೆಗೆ ಕಳುಹಿಸಿ. ಇದೇ ಸಂದರ್ಭ ಇಟ್ಟುಕೊಂಡು ನನ್ನ ಗಂಡನನ್ನು ನನ್ನಿಂದ ದೂರ ಮಾಡಲು ಹೊರಟಿದ್ದೀಯಾ ಎನ್ನುತ್ತಾಳೆ. ಪುಟ್ಟಕ್ಕ ಮುಂದೇನು ಮಾಡುತ್ತಾಳೆ ಕಾದು ನೋಡಬೇಕಿದೆ.


Click it and Unblock the Notifications











