Puttakkana Makkalu: ಸ್ನೇಹಾ ಸುಳ್ಳಿನ ಗೋಪುರ ಕಳಚಿ ಬಿದ್ದರೆ ಕಂಠಿ ಗತಿ ಏನು?
ಕಂಠಿ ಬಹಳ ಖುಷಿಯಲ್ಲಿ ಇರುತ್ತಾನೆ. ತಾನು ತಂದೆ ಆಗುತ್ತೇನೆ ಎನ್ನುವ ಖುಷಿ ಮನದಲ್ಲಿ ಬಹಳ ಇದೆ. ಆದರೆ ಸ್ನೇಹಾಗೆ ಮಾತ್ರ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಬಹಳ ಬೇಸರ ಇರುತ್ತದೆ. ಆದರೂ ವಸುಗಾಗಿ ಸ್ನೇಹಾ ಸುಳ್ಳು ಹೇಳಲೇಬೇಕು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ನನ್ನ ಹಾಗೆ ನನ್ನ ಮಗು ಆಗಬಾರದು ಆ ಮಗು ವಿದ್ಯೆ ಬುದ್ದಿ ಕಲಿಯಬೇಕು ಎನ್ನುವ ಆಸೆಯನ್ನು ಸ್ನೇಹಾ ಬಳಿ ಹೇಳುತ್ತ ಇರುತ್ತಾನೆ ಕಂಠಿ. ಇದನ್ನು ಕೇಳಿದ ಸ್ನೇಹಾಗೆ ನಾನು ತಪ್ಪು ಮಾಡುತ್ತಾ ಇದ್ದೇನೆ ಎನ್ನುವ ಯೋಚನೆ ಶುರುವಾಗಿದೆ. ಇನ್ನು ವಸು ಹೇಗಾದರೂ ಮಾಡಿ ನಾನು ಪ್ರೆಗ್ನೆಂಟ್ ಎನ್ನುವ ವಿಚಾರವನ್ನು ಚಂದ್ರು ಬಳಿ ಹೇಳಬೇಕು ಎಂದು ಯೋಚನೆ ಮಾಡುತ್ತಾ ಮಲಗುತ್ತಾಳೆ.

ವಸುಗೆ ಕನಸೊಂದು ಬೀಳುತ್ತದೆ. ನಂಜಮ್ಮ ಮನೆಗೆ ಬಂದು ಗಲಾಟೆ ಮಾಡುವುದು ಹಾಗೆಯೇ ಚಂದ್ರು ಇದು ನನ್ನ ಮಗು ಅಲ್ಲ ಎಂದು ಹೇಳುವ ವಿಚಾರ ಕೇಳಿ ಶಾಕ್ ಆಗಿ, ನಾವು ಯಾವತ್ತೂ ಮರ್ಯಾದೆಗೆ ಅಂಜುವವರು ಎಂದು ಹೇಳಿ ಬಂಗರಮ್ಮ ರಿವಾಲ್ವರ್ ಹಿಡಿದು ಶೂಟ್ ಮಾಡಿಕೊಂಡು ಸಾಯುವಂತೆ ಕನಸು ಬೀಳುತ್ತದೆ.
ಕನಸಿನಿಂದ ಎಚ್ಚೆದ್ದ ವಸು ಬೇಡಪ್ಪಾ ಬೇಡ ನಾನು ಗರ್ಭಿಣಿ ಎನ್ನುವ ವಿಚಾರ ಯಾರಿಗೂ ಹೇಳುವುದು ಬೇಡ. ಎಲ್ಲಾ ವಿಚಾರವನ್ನು ಚಂದ್ರು ಒಬ್ಬನೇ ಸಿಗುವ ವೇಳೆ ಹೇಳಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಮಲಗುತ್ತಾಳೆ. ಇನ್ನು ಗೋಪಾಲ ಮಾತ್ರ ಸುಮಾಗೆ ಕಾಲೇಜಿಗೆ ಹೋಗಲು ತಡ ಆಗುತ್ತದೆ ಎಂದು ಯೋಚನೆ ಮಾಡುತ್ತಾನೆ. ಇದೀಗ ಪುರುಷೋತ್ತಮ ಕೂಡ ಪುಟ್ಟಕ್ಕನ ಮನೆಗೆ ಬರುವುದಿಲ್ಲ, ಈ ಕಾರಣಕ್ಕೆ ಗೋಪಾಲ ನಾನೇ ಮಗಳನ್ನು ಕಾಲೇಜಿಗೆ ಬಿಟ್ಟು ಬರುವ ಎಂದು ಯೋಚನೆ ಮಾಡುತ್ತಾನೆ.

ಸಹನಳನ್ನು ನೋಡಿ ಮೂಗು ಮುರಿದ ಕೌಸಲ್ಯ
ಕೌಸಲ್ಯ ಮಾತ್ರ ಸಹನಾಳನ್ನು ಮನೆಯ ಸೊಸೆ ಎಂದು ಅವತ್ತು ಒಪ್ಪಿಕೊಂಡಿಲ್ಲ, ಈಗಲೂ ಒಪ್ಪಿಕೊಂಡಿಲ್ಲ. ಮುರಳಿಗೆ ಮಾತ್ರ ಈ ವಿಚಾರ ತಿಳಿದಿಲ್ಲ. ಸಹನಾ ಹಾಗೂ ಮುರಳಿ, ಕೌಸಲ್ಯ ಮನೆಗೆ ಬರಬೇಕಾದರೆ ಇಬ್ಬರನ್ನೂ ನೋಡಿ ನಾಟಕೀಯವಾಗಿ ಹೊಸ್ತಿಲಲ್ಲಿ ನಿಲ್ಲಿಸಿ, ನಿಂತುಕೊಳ್ಳಿ ಎಂದು ಹೇಳಿ ವಿನುತಳನ್ನು ಕರೆಸಿ ಮುರಳಿ ಹಾಗೂ ಸಹನಾಗೆ ಆರತಿಯನ್ನು ಎತ್ತುತ್ತಾರೆ. ಇನ್ನು ವಿನುತಗೆ ಮಾತ್ರ ಮುರಳಿ ಅಂದರೆ ಬಹಳ ಪ್ರೀತಿ. ಮುರಳಿ ನನ್ನ ಕೈಗೆ ಸಿಗುವುದಿಲ್ಲ ಎಂದು ತಿಳಿದ ಬಳಿಕ ಆತನನ್ನು ಪಡೆದುಕೊಳ್ಳಬೇಕು ಎನ್ನುವ ಆಸೆ ಇನ್ನಷ್ಟು ಜಾಸ್ತಿ ಆಗುತ್ತಾ ಹೋಯಿತು.
ಮುರಳಿ ಮಾತಿಗೆ ಬೆದರಿದ ವಿನುತ
ಮುರಳಿಗೆ ವಿನುತ ಮನದಲ್ಲಿ ಇರುವ ಆಸೆ ಬಗ್ಗೆ ತಿಳಿದಿಲ್ಲ. ಆತ ವಿನುತ ಗೆ ಹುಷಾರಿಲ್ಲ. ಆಕೆಗೆ ಯಾರು ಇಲ್ಲ ನಾನು ಆಕೆಯ ಜೊತೆ ಇದ್ದರೆ ನೂರನೇ ಬಲ ಇದ್ದ ಹಾಗೆ ಎಂದು ಯೋಚನೆ ಮಾಡುತ್ತಾನೆ. ಇನ್ನು ಮುರಳಿ, ಸಹನಾ ಮನೆಯ ಒಳಗೆ ಬಂದ ಕೂಡಲೇ ವಿನುತ ಮನೆಯಿಂದ ಹೊರಡಲು ಮುಂದಾಗುತ್ತಾಳೆ. ಸಹನಾ ಅದೆಷ್ಟೇ ಬೇಡ ಎಂದು ಹೇಳಿದರು. ನಾನು ಹೋಗುತ್ತೇನೆ ಎಂದು ಹೇಳುತ್ತಾಳೆ ಆ ಬಳಿಕ ಮುರಳಿ ಹೇಳುತ್ತಾನೆ. ನಾನು ಹೇಳುವುದನ್ನು ಹೇಳಿದ್ದೇನೆ, ಇನ್ನುಮೇಲೆ ನಿಮ್ಮ ಇಷ್ಟ ಎಂದಾಗ ವಿನುತಗೆ ಏನು ಮಾಡಬೇಕು ಎಂದು ತಿಳಿಯದೇ ಕೌಸಲ್ಯ ಮುಖ ನೋಡುತ್ತಾಳೆ.
ಬೇಸಾಯ ಮಾಡಲು ಹೊರಟ ಕಂಠಿ
ಕಂಠಿ ಬೇಸಾಯ ಮಾಡಲೇಬೇಕು ಎನ್ನುವ ಹಠದಲ್ಲಿ ಇರುತ್ತಾನೆ. ಆತನಿಗೆ ತನ್ನ ತಾಯಿಗೆ ಕೊಟ್ಟ ಮಾತು ಬಹಳ ಮುಖ್ಯ ಆಗಿರುತ್ತದೆ. ಹಾಗೆಯೇ ಮನೆಯವರ ನಂಬಿಕೆ ಉಳಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಆಗುತ್ತದೆ. ಒಳ್ಳೆ ಬೇಸಾಯವನ್ನು ಮಾಡಿ ಜೀವನ ಕಟ್ಟಿಕೊಳ್ಳಬೇಕು, ಹಾಗೆಯೇ ಸ್ನೇಹಾ ಮನದಲ್ಲಿ ಸ್ವಲ್ಪ ಮಟ್ಟಿಗೆ ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಾನೆ.


Click it and Unblock the Notifications











