Puttakkana Makkalu: ಮಾವನ ಜೊತೆ ಸೇರಿ ಎಣ್ಣೆ ಹೊಡೆದ ಕಂಠಿ: ಸ್ನೇಹಾಳಿಂದ ತಪ್ಪಿಸಿಕೊಳ್ಳಲು ಹರಸಾಹಸ!

By Poorva

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಕಂಠಿ ಸರಿಯಾಗಿ ನಶೆ ಏರಿಸಿಕೊಂಡಿದ್ದಾನೆ . ಕುಡಿದ ಮತ್ತಿನಲ್ಲಿ ಮನೆಗೆ ಬಂದಿದ್ದಾನೆ. ಆದರೆ ಸ್ನೇಹಾಗೆ ಕಂಠಿ ಎಲ್ಲಿ ಹೋಗಿದ್ದಾನೆ ಎಂಬ ಚಿಂತೆ ಕಾಡುತ್ತಿತ್ತು. ರಾಧಾ ಬಗ್ಗೆ ಮಾತನಾಡುತ್ತಾ ಇರುವಾಗ ಕಂಠಿಗೆ ಬಹಳ ಕೋಪ ಬಂದಿರುತ್ತದೆ ಆತ ಏನು ಮಾತನಾಡುವುದಿಲ್ಲ. ಸ್ನೇಹಾ ಮಾತಿಗೆ ಯಾವ ಪ್ರತಿಕ್ರಿಯೆ ನೀಡದೆ ಸುಮ್ಮನೆ ಇರುತ್ತಾನೆ.

ರಾಧಾ ಮಾತ್ರ ಬಂಗಾರಮ್ಮನ ಬಳಿ ಬಹಳ ಒಳ್ಳೆಯವಳ ಹಾಗೆ ನಟನೆ ಮಾಡಿ ತನ್ನ ಬೇಳೆ ಬೇಯಿಸಿಕೊಳ್ಳವ ಮೂಲಕ ಬಂಗಾರಮ್ಮ ಅವರ ಮನಸ್ಸನ್ನು ಓಲೈಸಿಕೊಳ್ಳುತ್ತಾಳೆ. ತಾನು ಬಂಗಾರಮ್ಮನವರ ಮನಸ್ಸು ಗೆಲ್ಲಬೇಕೆಂದು ರಾಧಾ ಮನಸ್ಸಿನಲ್ಲಿ ಅಂದುಕೊಂಡಿರುತ್ತಾಳೆ. ಆದರೆ ರಾಧಾ ಬಗ್ಗೆ ಬಂಗಾರಮ್ಮ ಹಾಗೂ ಸ್ನೇಹಾ ಮೃದು ಧೋರಣೆಯನ್ನು ತೋರಿದರೆ ಕಂಠಿ ಮಾತ್ರ ಬಹಳ ಕೋಪ ಬರುತ್ತದೆ.

 Kannada serial Puttakkana Makkalu written update on 06th December

ಸ್ನೇಹಾ ಮತ್ತು ಅವ್ವ ಯಾಕೆ ಹೀಗೆ ಮಾಡುತ್ತಾ ಇದ್ದಾರೆ ಎಂದು ಮನದಲ್ಲಿ ಯೋಚನೆ ಮಾಡಿಕೊಂಡು ಇರುತ್ತಾನೆ. ಹಾಗೆಯೇ ರಾಧಾ ಇತ್ತೀಚಿನ ನಡವಳಿಕೆಯಲ್ಲಿ ಬಹಳ ಬದಲಾವಣೆ ಇದೆ ಎನ್ನುವುದು ಕಂಠಿಗೆ ಅರ್ಥ ಆಗುತ್ತಿದೆ. ಆದರೆ ಇದು ಯಾವುದೂ ಸ್ನೇಹಾಗೆ ಅರ್ಥ ಆಗುತ್ತಿಲ್ಲ. ಆಕೆ ರಾಧಾಳನ್ನು ಮನಪೂರ್ವಕವಾಗಿ ತಂಗಿ ಎಂದು ಒಪ್ಪಿಕೊಂಡಿದ್ದಾಳೆ. ಆದರೆ ರಾಧಾ ಸ್ನೇಹಾ ಜೊತೆ ನಾಟಕೀಯವಾಗಿ ನಡೆದುಕೊಂಡು ಇರುತ್ತಾಳೆ. ಇದು ಯಾವುದೂ ಸ್ನೇಹಾಗೆ ಅರ್ಥ ಆಗುತ್ತಿಲ್ಲ.

ಕಂಠಿ ಮನಸ್ಸನ್ನು ಅರ್ಥ ಮಾಡಿಕೊಳ್ಳದ ಸ್ನೇಹಾ

ಕಂಠಿಗೆ ಸ್ನೇಹಾಗೆ ಈ ವಿಚಾರವನ್ನು ಅರ್ಥ ಮಾಡಿಸಲು ಆಗುವುದು ಇಲ್ಲ. ಇನ್ನು ಇದೆಲ್ಲ ಸಹಿಸಿಕೊಳ್ಳದ ಕಂಠಿ ತನ್ನ ಮಾವನ ಜೊತೆಗೂಡಿ ಮದ್ಯಪಾನ ಮಾಡಿ ಇರುತ್ತಾರೆ. ಮದ್ಯಪಾನ ಮಾಡಿ ಮನೆಗೆ ಬರುತ್ತಾನೆ. ಸ್ನೇಹಾನನ್ನು ನೋಡಿದ ಕಂಠಿ ಮಾತ್ರ ಎನು ಮಾತನಾಡದೆ ಮೆತ್ತಗೆ ಬಾಗಿಲು ತೆಗೆಯುತ್ತಾ ಇರುತ್ತಾನೆ. ಇನ್ನು ಸ್ನೇಹಾ ಕಂಠಿಯನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ.

 Kannada serial Puttakkana Makkalu written update on 06th December

ಕುಡಿದ ಮತ್ತಿನಲ್ಲಿ ಸ್ನೇಹಾನನ್ನು ನೋಡಿ ಭಯ ಪಟ್ಟುಕೊಂಡ ಕಂಠಿ

ಕಂಠಿಯನ್ನು ನೋಡಿದ ಸ್ನೇಹಾ ಎನು ಯಾವತ್ತೂ ಸಹಜವಾಗಿ ಮಾತನಾಡುತ್ತಾ ಇದ್ದೀರಿ ಅಲ್ವಾ . ಇವತ್ತು ಯಾಕೆ ಎನು ಮಾತನಾಡದೆ ಸುಮ್ಮನೆ ಇದ್ದೀರಾ ಎಂದೆಲ್ಲ ಪ್ರಶ್ನೆಯ ಮೇಲೆ ಪ್ರಶ್ನೆ ಕೇಳುತ್ತಾ ಇರುತ್ತಾಳೆ . ತಾನು ಕುಡಿದಿರುವುದು ಸ್ನೇಹಾಗೆ ತಿಳಿದು ಹೋದರೆ ಕಷ್ಟ ಎಂದು ಮಾತು ಮರೆಸಲು ನೋಡುತ್ತಾನರ. ಆಗಲೇ ಸ್ನೇಹಾ ಗೆ ಮಾತ್ರ ಕಂಠಿ ಮೇಲೆ ವಿಪರೀತ ಅನುಮಾನ ಶುರು ಆಗುತ್ತದೆ.

ಕಂಠಿ ಬಗ್ಗೆ ಅನುಮಾನ ಪಟ್ಟ ಸ್ನೇಹಾ

ಸ್ನೇಹಾ ಕೈಯಿಂದ ಕಂಠಿ ತಪ್ಪಿಸಿಕೊಳ್ಳಲು ಮಾತ್ರ ಪರದಾಡುತ್ತ ಇರುತ್ತಾರೆ. ಸ್ನೇಹಾ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಇರುತ್ತಾಳೆ. ಆದರೆ ಕಂಠಿ ಮಾತ್ರ ಯಾವುದಕ್ಕೂ ಉತ್ತರ ಕೊಡುವ ಪರಿಸ್ಥಿತಿಯಲ್ಲಿ ಇರುವುದು ಇಲ್ಲ. ಕುಡಿದಿರುವ ವಿಷಯ ತಿಳಿಯದೇ ಇರಲಿ ಎಂದು ಮಲಗುವ ಪ್ರಯತ್ನ ಮಾಡುತ್ತಾನೆ.

More from Filmibeat

English summary
Puttakkana Makkalu serial 06th December upadate.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X