Puttakkana Makkalu: ಸ್ನೇಹಾಳಿಂದ ಪೇಚಿಗೆ ಸಿಲುಕಿದ ಕಂಠಿ, ಸ್ನೇಹಾ ಬಳಿ ನಿಜ ಹೇಳುತ್ತಾನಾ?
ಪುಟ್ಟಕ್ಕನ ಮಕ್ಕಳು ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ಸ್ನೇಹಾ ಮತ್ತು ಕಂಠಿ ನಿಧಾನವಾಗಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸ್ನೇಹಾಳನ್ನು ಕಂಠಿ ಬಹಳ ಇಷ್ಟಪಡುತ್ತಾನೆ, ಆಕೆಗೋಸ್ಕರ ಏನು ಬೇಕಾದರೂ ಮಾಡಲು ತಯಾರಿದ್ದಾನೆ. ಆದರೆ ಕೆಲವೊಂದು ವಿಚಾರವನ್ನು ಸ್ನೇಹಾ ಬಳಿ ಕಂಠಿ ಮುಚ್ಚಿಡುತ್ತಿದ್ದಾನೆ. ಸ್ನೇಹಾ ಹತ್ತಿರ ಏನಾದರೂ ಹೇಳಿಕೊಂಡರೆ ಆಕೆ ಅದಕ್ಕೆಲ್ಲ ಒಪ್ಪುವುದಿಲ್ಲ ಎಂದುಕೊಂಡು ಆಕೆಯ ಬಳಿ ಏನು ಹೇಳದೆ ಕುಸ್ತಿ ಆಡಲು ಹೋಗುತ್ತಿದ್ದಾನೆ.
ಕುಸ್ತಿಯಲ್ಲಿ ಗೆದ್ದು 10 ಲಕ್ಷವನ್ನು ಹೇಗಾದರೂ ಪಡೆದುಕೊಳ್ಳಬೇಕು ಎನ್ನುವುದು ಕಂಠಿಯ ಬಹುದೊಡ್ಡ ಆಸೆ. ಆದರೆ ಈ ವಿಚಾರವನ್ನು ಸ್ನೇಹಾ ಬಳಿ ಹೇಳಿಕೊಳ್ಳದೆ ಕಂಠಿ ತಪ್ಪು ಮಾಡುತ್ತಿದ್ದಾನ ಎನ್ನುವುದು ಧಾರಾವಾಹಿ ಪ್ರೇಕ್ಷಕರ ಪ್ರಶ್ನೆ?. ಇನ್ನು, ಕಂಠಿ ಕುಸ್ತಿಗಾಗಿ ಬೆಳಗ್ಗೆಯಿಂದಲೇ ವ್ಯಾಯಾಮ ಮಾಡುತ್ತಿರುತ್ತಾನೆ. ಇದನ್ನು ನೋಡಿದ ಸ್ನೇಹಾ ಇದೇನಿದು ಹೊಸದಾಗಿ ಶುರು ಮಾಡಿಕೊಂಡಿದ್ದೀರ ಎಂದು ಪ್ರಶ್ನೆ ಮಾಡುತ್ತಾಳೆ.

ಈ ವೇಳೆ ಸ್ನೇಹಾಳನ್ನು ನೋಡಿದ ಕಂಠಿ, ಮೈ ಮರೆತು ಹೋಗುತ್ತಾನೆ. ಆಕೆಯನ್ನು ಸೀರೆಯಲ್ಲಿ ನೋಡಿದ ಕಂಠಿ ಖುಷಿ ಪಡುತ್ತಾನೆ. ಕಂಠಿಯನ್ನು ನೋಡಿದ ಸ್ನೇಹಾ ಇದೇನಿದು ಏನಾಗಿದೆ ನಿಮಗೆ ಕೇಳುತ್ತಾಳೆ. ಇದಕ್ಕೆ ಕಂಠಿ ಹಾಗೇನಿಲ್ಲ ಎಂದು ಹೇಳಿ ಸುಮ್ಮನಾಗುತ್ತಾನೆ. ಅವಳು ಬಟ್ಟೆಯನ್ನು ಒಣಗಿಸಲು ತಂದಿದ್ದ ಬಟ್ಟೆಯನ್ನು ಹಗ್ಗದ ಮೇಲೆ ಹರಡಿ ಬಳಿಕ ಕಂಠಿ ಜೊತೆ ಮಾತನಾಡುತ್ತಾಳೆ.
ಸ್ನೇಹಾನನ್ನು ಎತ್ತಿಕೊಂಡ ಕಂಠಿ
ಸ್ನೇಹಾ ನನ್ನನ್ನು ಎತ್ತಿಕೊಂಡು ಪುಷಪ್ ಮಾಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿಗೆ ಶಾಕ್ ಆಗುತ್ತದೆ. ಸ್ನೇಹಾ ಯಾವತ್ತೂ ಕಂಠಿಯ ಜೊತೆ ಆ ರೀತಿ ಮಾತನಾಡಿದವಳೇ ಅಲ್ಲ. ಇನ್ನು ಕಂಠಿ ಏನು ಮಾಡಬೇಕೆಂದು ತೋಚದೆ ಸುಮ್ಮನಿರುವಾಗ ಸ್ನೇಹಾ ಸರಿಯಾಯ್ತು ಹಾಗಾದರೆ ನಾನು ಮನೆ ಒಳಗೆ ಹೋಗುತ್ತೇನೆ ಎಂದು ಹೋದಾಗ ಆಕೆಯ ಕೈಯನ್ನು ಹಿಡಿದುಕೊಂಡು ಪುಷಪ್ ಮಾಡುತ್ತಾನೆ ಇದನ್ನು ನೋಡಿದ ಸ್ನೇಹಾ ಕಳೆದೆ ಹೋಗಿ ಬಿಡುತ್ತಾಳೆ.

ಆಗಾಗ ಕಂಠಿಯನ್ನು ಎಚ್ಚರಿಸುತ್ತಾ ಇರುವ ಗುರುಗಳು
ಇನ್ನು ಕುಸ್ತಿಪಟುಗಳು ಯಾವತ್ತೂ ಹೆಂಡತಿಯರ ಮೋಹಕ್ಕೆ ಒಳಗಾಗಬಾರದೆಂದು ಆಗಾಗ ಕಂಠಿಯ ಗುರುಗಳು ಎಚ್ಚರ ನೀಡುತ್ತಲೇ ಇರುತ್ತಾರೆ. ಆದರೆ ಕಂಠಿ ಮಾತ್ರ ದಿನ ಹೋದ ಹಾಗೆ ಸ್ನೇಹಾಗೆ ಹತ್ತಿರ ಆಗುತ್ತಿದ್ದಾನೆ. ಇನ್ನು ತಿಂಡಿಯಾದ ಬಳಿಕ ಸ್ನೇಹಾ ಓದಲು ಲೈಬ್ರರಿಗೆ ಹೋಗಬೇಕಾಗುತ್ತದೆ. ಆದೇ ಸಮಯದಲ್ಲಿ ಕಂಠಿಯು ಆ ಸಮಯದಲ್ಲಿ ಮನೆಯಿಂದ ಹೊರಟಿರುತ್ತಾನೆ. ಕಂಠಿ ಬೈಕ್ ಹತ್ತುತ್ತಿದ್ದಂತೆಯೇ ಸ್ನೇಹಾ ನನ್ನನ್ನು ಇನ್‌ಸ್ಟಿಟ್ಯೂಟ್‌ಗೆ ಕರೆದುಕೊಂಡು ಹೋಗಿ ಎಂದು ಕೇಳುತ್ತಾಳೆ.
ಕಂಠಿಯನ್ನ ಬಿಗಿದಪ್ಪಿ ಕುಳಿತ ಸ್ನೇಹಾ
ಸ್ನೇಹಾ ಮಾತಿಗೆ ಇಲ್ಲ ಎನ್ನದೆ ಆಯಿತು ಎಂದು ಹೇಳುತ್ತಾನೆ. ಆ ಬಳಿಕ ಕಂಠಿಯ ಬೈಕ್ ಹತ್ತಿದ ಸ್ನೇಹಾ ಕಂಠಿಯನ್ನು ಬಿಗಿದಪ್ಪಿ ಕುಳಿತುಕೊಳ್ಳುತ್ತಾಳೆ. ಈ ಸಮಯದಲ್ಲಿ ನಾನು ಕುಸ್ತಿ ಆಡುವುದನ್ನು ಸ್ನೇಹಾಗೆ ಹೇಳಲೇಬೇಕು ಎಂದು ನಿರ್ಧಾರ ಮಾಡಿಕೊಳ್ಳುತ್ತಾನೆ.


Click it and Unblock the Notifications











