Puttakkana Makkalu: ಉಲ್ಟಾ ಹೊಡೆಯಿತು ಕಂಠಿ ಪ್ಲಾನ್; ನಿಜ ವಿಚಾರ ತಿಳಿದು ಕುಪಿತಗೊಂಡ ಬಂಗಾರಮ್ಮ
ಬಂಗಾರಮ್ಮ ನನ್ನ ಮಗ ಬಡ್ಡಿ ದುಡ್ಡನ್ನು ಈಗ ತೆಗೆದುಕೊಂಡು ಬರುತ್ತಾನೆ ಎಂದು ಕಾಯುತ್ತ ಇರುತ್ತಾಳೆ. ಇದೀಗ ಬಂಗಾರಮ್ಮಗೆ ಬಹಳ ಶಾಕಿಂಗ್ ಆಗಿರುವ ವಿಚಾರ ತಿಳಿಯುತ್ತದೆ. ಯಾರ ಬಳಿಯೂ ಹಣ ಕೇಳದೆ ಯಾರ ಜೊತೆಯೂ ಗಲಾಟೆ ಹೇಗೆ ಹಣ ವಸೂಲಿ ಮಾಡುತ್ತಾನೆ ಕಂಠಿ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ ಬಂಗಾರಮ್ಮ . ಆ ಹೊತ್ತಿನಲ್ಲಿ ಕಂಠಿ ಹಾಗೂ ಆತನ ಗೆಳೆಯರು ಬಂಗಾರಮ್ಮ ನ ಬಳಿ ಬರುತ್ತಾರೆ .
ಬಂಗಾರ ಮ್ಮ ಬಂದ ಕೂಡಲೇ ಬಡ್ಡಿ ವಸೂಲಿ ಇವತ್ತಾದರು ಆಯಿತಾ ಎಂದು ಕೇಳುತ್ತಾಳೆ ಇದನ್ನು ಕೇಳಿದ ಸಿದ್ದೇಶ್ ಇವತ್ತು ಎಲ್ಲಾ ಬಡ್ಡಿ ವಸೂಲಿ ಮಾಡಲಾಯಿತು. ಎಂದು ಲೆಕ್ಕಾಚಾರ ನ ಕೈ ಗೆ ಹಣ ನೀಡುತ್ತಾರೆ. ಆಗ ಲೆಕ್ಕಾಚಾರ ಇವತ್ತು ಬಡ್ಡಿ ವಸೂಲಿ ಸರಿಯಾಗಿ ಆಗಿದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಬಂಗಾರ ಮ್ಮ ಕೊಂಚ ಸಮಾಧಾನಗೊಂಡು ಇರುತ್ತಾರೆ.

ಆಗಲೇ ಹೊರಗಿನಿಂದ ಗೋಪಾಲ ಕರೆಯುತ್ತಾ ಇರುವುದು ಕೇಳಿಸುತ್ತದೆ. ಕೂಡಿದ ಮತ್ತಿನಲ್ಲಿ ಗೋಪಾಲ ಆಸ್ತಾನಾ ಗೆಳೆಯನನ್ನು ಕರೆದುಕೊಂಡು ಬರುತ್ತಾನೆ. ಅಳಿಮಯ್ಯ.. ಅಳಿಮಯ್ಯ ಎಂದು ಜೋರಾಗಿ ಕರೆಯುತ್ತಾ ಇರುತ್ತಾನೆ ಕಂಠಿ . ಕಂಠಿ ಯಾರು ಇರಬೇಕು ನನ್ನ ಈ ತರ ಕರೆಯುತ್ತಿರುವುದು ಅಂದರೆ ಅದು ಗೋಪಾಲ ಮಾತ್ರ ಎಂದು ಮನದಲ್ಲಿ ಅಂದುಕೊಂಡು ಇರುವಾಗ ಸಿದ್ದೇಶ್ ಗೆ ಕೊಂಚ ಆತಂಕ ಆಗುತ್ತದೆ.
ಸಿದ್ದೇಶ್ ಮಾತ್ರ ಕಂಠಿ ಮುಖ ನೋಡಿ ಇವತ್ತು ನಮ್ಮ ಕಥೆ ಮುಗಿದೇ ಹೋಯಿತು ಯೋಚನೆ ಮಾಡುತ್ತಾ ಇರುತ್ತಾನೆ. ಆಗ ಕಂಠಿ ಅಮ್ಮನ ಮುಖ ನೋಡುತ್ತಾನೆ ಬಂಗಾರ ಮ್ಮ ಲೆಕ್ಕಾಚಾರ ಬಳಿ ಯಾರದು ಹಾಗೆ ಜೋರಾಗಿ ಕಿರುಚುತ್ತಾ ಇರುವುದು ಎಂದು ಹೇಳುತ್ತಾಳೆ ಇನ್ನೂ ಹೊರಗೆ ಕಿರುಚಾಟ ಕೇಳಿ ಸ್ನೇಹಾ ಕೂಡ ಹೊರಗೆ ಬರುತ್ತಾಳೆ
ಆ ಬಳಿಕ ಬಂಗಾರ ಮ್ಮ ಹಾಗೂ ಕಂಠಿ ಹಾಗೂ ಆತನ ಗೆಳೆಯರು ಮನೆಯ ಹೊರಗೆ ಬರುತ್ತಾರೆ. ಮನೆಯ ಹೊರಗೆ ಬಂದು ನೋಡಿದಾಗ ಗೋಪಾಲ ಕೂಡಿದ ಮತ್ತಿನಲ್ಲಿ ಕಿರುಚಾ ಡುತ್ತ ಇರುತ್ತಾನೆ. ಇದನ್ನು ನೋಡಿದ ಕಂಠಿ ಗೆ ಶಾಕ್ ಆಗುತ್ತದೆ. ಕಂಠಿ ಏನಯ್ಯ ಯಾಕೆ ಹೀಗೆ ಮನೆ ಎದುರು ಬಂದು ಗಲಾಟೆ ಮಾಡುತ್ತಾ ಇದ್ದೀಯಾ ಎಂದಾಗ ಅಳಿಮಯ್ಯ ಇವತ್ತು ನೀವು ನನ್ನ ಕೈಯಿಂದ ದುಡ್ಡು ತೆಗೆದುಕೊಂಡು ಇದ್ದೀರಾ ಅಂತ ಹೇಳಲು ಬಂದೆ ನನ್ನ ಗೆಳೆಯ ಕೇಳಿದ ಅದಕ್ಕೆ ಅದು ನಿಜ ಎಂದು ಹೇಳಿದ ಆತ ನಂಬಲಿ ಇಲ್ಲ ಅದಕ್ಕೆ ನಾನು ಆತನನ್ನು ನೇರವಾಗಿ ಇಲ್ಲಿಗೆ ಕರೆದುಕೊಂಡು ಬಂದೆ ಎಂದಾಗ ಬಂಗಾರ ಮ್ಮ ಗೆ ನಿಜ ವಿಚಾರ ತಿಳಿಯುತ್ತದೆ.
ಸ್ನೇಹಾ ಗೆ ಕೂಡ ಶಾಕ್ ಆಗುತ್ತದೆ. ಇನ್ನೂ ಬಂಗಾರ ಮ್ಮ ಕೋಪಗೊಂಡು ಇರುವಾಗ ಗೋಪಾಲ ಜೋರಾಗಿ ಹೇಳುತ್ತಾಳೆ ಬೀಗಿತಿಯಮ್ಮ ನಮಸ್ತೆ ಎಂದು ಹೇಳುತ್ತಾನೆ ಇದನ್ನು ಕೇಳಿ ಬಂಗಾರ ಮ್ಮ ಸಿಟ್ಟಿನಿಂದ ಒಳಗೆ ಹೋಗುತ್ತಾಳೆ. ಇನ್ನೂ ಕಂಠಿ ಹಾಗೂ ಗೆಳೆಯರಿಗೆ ಜೀವ ಬಾಯಿಗೆ ಬಂದ ಹಾಗೆ ಆಗುತ್ತದೆ. ಏನೇ ಪ್ಲಾನ್ ಮಾಡಿದರು ತನ್ನ ತಾಯಿಗೆ ಇನ್ನೂ ಕೋಪ ಹೆಚ್ಚಾಗುವಂತೆ ಮಾಡುತ್ತಾ ಇದ್ದೆನಲ್ಲ ಎಂದು ಬೇಸರ ಮಾಡಿಕೊಂಡು ಇರುತ್ತಾನೆ.


Click it and Unblock the Notifications











