ಪ್ರಶ್ನೆಗೆ ಒಗಟಿನಲ್ಲೇ ಉತ್ತರಿಸಿದ ಕಂಠಿ ಮನದ ಮಾತನ್ನು ಅರ್ಥ ಮಾಡಿಕೊಳ್ಳುತ್ತಾಳಾ ಸ್ನೇಹಾ ?
ನಂಜಮ್ಮ ಪುಟ್ಟಕ್ಕನ ಮನೆಯಿಂದ ಕೋಪಗೊಂಡು ಹೋಗುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ನಂಜಮ್ಮಗೆ ಕರೆ ಮಾಡುತ್ತಾಳೆ. ಆದರೆ ನಂಜಮ್ಮ ಪುಟ್ಟಕ್ಕನ ಕರೆ ಸ್ವೀಕಾರ ಮಾಡಲೇ ಇಲ್ಲ. ಆದರೂ ಪುಟ್ಟಕ್ಕ ನಂಜಮ್ಮಗೆ ಕರೆ ಮಾಡುತ್ತಾಳೆ. ಕರೆ ಸ್ವೀಕರಿಸಿ ಮಾತನಾಡಿದ ನಂಜಮ್ಮ ಪುಟ್ಟಕ್ಕ ಕರೆ ಸ್ವೀಕಾರ ಮಾಡಲಿಲ್ಲ ಅಂದರೆ ನನಗೆ ನಿನ್ನ ಬಳಿ ಮಾತನಾಡಲು ಇಷ್ಟ ಇಲ್ಲ ಅಂತ ಆದರೂ ನೀನು ನನಗೆ ಕರೆ ಮಾಡಿರುವುದು ಯಾಕೆ ಎಂದೆಲ್ಲ ಹೇಳಿದಾಗ ಪುಟ್ಟಕ್ಕ ನಂಜಮ್ಮಳನ್ನು ಸಮಾಧಾನ ಮಾಡುತ್ತಾಳೆ.
ಆದರೆ ನಂಜಮ್ಮ ಅದಾವುದನ್ನೂ ಯೋಚನೆ ಮಾಡದೆ ಪುಟ್ಟಕ್ಕನ ಕರೆಯನ್ನು ಕಟ್ ಮಾಡುತ್ತಾಳೆ. ಇದನ್ನು ನೋಡಿದ ಪುಟ್ಟಕ್ಕ ಮನದಲ್ಲಿ ನಂಜಮ್ಮ ಬಹಳ ಕೋಪ ಮಾಡಿಕೊಂಡಿದ್ದಾರೆ, ನಾನು ಏನು ಮಾಡಲಿ ಎಂದುಕೊಳ್ಳುತ್ತಾಳೆ. ಇನ್ನು ದೇವಾಲಯದ ಬಳಿ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಕಂಠಿ ಹಾಗೂ ಆತನ ಗೆಳೆಯ ಬಂದು ಏನಮ್ಮ ಸ್ನೇಹಾ ಮನೆಗೆ ಬಂದಳಾ ಎಂದು ಕೇಳುತ್ತಾರೆ.
ಇದನ್ನು ಕೇಳಿ ಇಲ್ಲ ಎಂದು ಪುಟ್ಟಕ್ಕ ಹೇಳುತ್ತಾರೆ. ಪುಟ್ಟಕ್ಕ ಗಾಬರಿಗೊಂಡು ಕಂಠಿಯನ್ನು ನೋಡಿ ಏನು ಇದೆಲ್ಲ ಯಾಕೆ ಹೀಗೆ ನೀರಲ್ಲಿ ನೆಂದಿದೆಯಾ ಎಂದು ಕೇಳಿದಾಗ ಸ್ನೇಹಾ ಅಕ್ಕನನ್ನು ಬಾವಿಯಲ್ಲಿ ಎಲ್ಲಾ ಹುಡುಕಿದರು ಅದಕ್ಕೆ ಬಟ್ಟೆಯೆಲ್ಲಾ ನೆಂದಿದೆ ಎಂದೆಲ್ಲ ಹೇಳುತ್ತಾರೆ. ಇದನ್ನೆಲ್ಲ ಕೇಳಿ ಇನ್ನೂ ಗಾಬರಿಗೊಂಡ ಪುಟ್ಟಕ್ಕ ಯೋಚನೆ ಮಾಡುತ್ತಾ ಇರುವಾಗ ಹಿಂದಿನಿಂದ ಬಂದ ಸ್ನೇಹಾ ಅಮ್ಮ ನಾನು ಇಲ್ಲಿಯೇ ಇದ್ದೇನೆ ಎಂದು ಹೇಳುತ್ತಾಳೆ.
ಸ್ನೇಹಾ ಧ್ವನಿಯನ್ನುಕೇಳಿಸಿಕೊಂಡ ಪುಟ್ಟಕ್ಕ ಜೋರಾಗಿ ತಬ್ಬಿಕೊಂಡು ಅಳುತ್ತಾರೆ. ಇದನ್ನು ನೋಡಿದ ಸ್ನೇಹಾ ಅಮ್ಮನನ್ನು ಸಮಾಧಾನ ಮಾಡುತ್ತಾಳೆ. ಬಳಿಕ ಕಂಠಿ ನೀರಲ್ಲಿ ನೆನೆದಿರುವುದನ್ನು ಕಂಡು ಯಾಕೆ ಏನಾಯಿತು ನೀರಲ್ಲಿ ನೆನೆದು ಬಿಟ್ಟಿದ್ದೀರ ಎಂದಾಗ ಮುಂಗುಸಿ ನಿಮ್ಮನ್ನು ಕೆರೆಯಲ್ಲಿ ಎಲ್ಲಾ ಹುಡುಕಿದರು ಎಂದಾಗ ನೀವು ಸರಿಯಾಗಿ ಲೆಟರ್ ಓದಬೇಕಿತ್ತು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕಂಠಿ ಸುಮ್ಮನೆ ಇರುತ್ತಾನೆ ಬಳಿಕ ಬಟ್ಟೆ ಬದಲಾಯಿಸಲು ಹೋಗುತ್ತಾನೆ.

ಮುರಳಿಗೆ ಸಾಥ್ ನೀಡಿದ ಗೆಳೆಯರು
ಇನ್ನು ಮುರಳಿಗೆ ಕೂಡ ಅರಶಿನ ಶಾಸ್ತ್ರ ಮಾಡುತ್ತಾರೆ. ಇದನ್ನು ನೋಡಿ ಮುರಳಿ ಗೆಳೆಯರು ಆತನ ಕಾಲು ಎಳೆಯುತ್ತಾ ಇರುತ್ತಾರೆ. ಇನ್ನು ಸಾತ್ವಿಕ್ ಬಳಿ ಮುರಳಿ ಅಕ್ಕ ಸೂಟ್ ತರಲು ಹೇಳುತ್ತಾರೆ. ಇದನ್ನು ಕೇಳಿದ ಸಾತ್ವಿಕ್ ಅಕ್ಕ ನೀವು ಯೋಚನೆ ಮಾಡಬೇಡಿ ಇವರನ್ನು ನಾನು ರೆಡಿ ಮಾಡುತ್ತೇನೆ ಎಂದು ಹೇಳುತ್ತಾನೆ. ಬಳಿಕ ಮುರಳಿಯನ್ನು ಆತನ ಗೆಳೆಯರು ಸೇರಿ ರೆಡಿ ಮಾಡುತ್ತಾರೆ.

ಮದುವೆ ತಡೆಯಲು ಕೌಸಲ್ಯ ಶತ ಪ್ರಯತ್ನ
ಇನ್ನು ಕೌಸಲ್ಯ ಮಾತ್ರ ಈ ಮದುವೆ ನಡೆಯಬಾರದು ಎಂದೆಲ್ಲ ಎಷ್ಟೇ ಪ್ರಯತ್ನ ಪಟ್ಟರೂ ಆಗುತ್ತಿಲ್ಲ ಎಂದೆಲ್ಲ ಗಂಡನ ಬಳಿ ಹೇಳಿದಾಗ ಆತ ಪುಟ್ಟಕ್ಕ ನಮಗೆ ನಾವು ಕೇಳಿದಷ್ಟು ಹಣ ಕೊಡಲು ರೆಡಿ ಇರಬೇಕಾದರೆ ನೀನು ಯಾಕೆ ಹೀಗೆಲ್ಲ ಆಡುತ್ತಾ ಇದ್ದೀಯಾ ಮದುವೆ ಬೇಡ ಎಂದೆಲ್ಲ ಯಾಕೆ ಹೇಳುತ್ತ ಇದ್ದೀಯಾ ಎಂದೆಲ್ಲ ಹೆಂಡತಿ ಬಳಿ ಕೇಳುತ್ತಾನೆ . ಇದನ್ನು ಮುರಳಿಯ ಬಾವ ಕೇಳಿಸಿಕೊಳ್ಳುತ್ತಾನೆ.

ಕಂಠಿ ಬಳಿ ಬಂದ ಸ್ನೇಹಾ
ಕಂಠಿ ಕೆಲಸ ಮಾಡುವುದರಲ್ಲಿ ನಿರತನಾಗಿರುತ್ತಾನೆ. ಈ ವೇಳೆ ಸ್ನೇಹಾ ಕಾಲು ಉಳುಕಿದ ಹಾಗೆ ನಾಟಕ ಆಡುತ್ತಾಳೆ. ಇದನ್ನು ನೋಡಿದ ಕಂಠಿ ಸ್ನೇಹಾ ಬಳಿ ಬರುತ್ತಾನೆ. ಆ ವೇಳೆ ಸ್ನೇಹಾ ನಗುತ್ತಾಳೆ. ನಾನು ತಮಾಷೆ ಮಾಡಿದೆ ಎಂದು ಹೇಳುತ್ತಾಳೆ. ಆದರೆ ಇದೆಲ್ಲವನ್ನೂ ನೋಡಿದ ಕಂಠಿ ಹುಸಿ ಮುನಿಸು ಮಾಡಿಕೊಳ್ತಾನೆ. ಬಳಿಕ ಸ್ನೇಹಾ ಕಂಠಿ ಮನದಲ್ಲಿ ಏನಿದೆ ಎನ್ನುವುದನ್ನು ಬಾಯಿ ಬಿಡಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಕಂಠಿ ಮಾತ್ರ ಯೋಚನೆ ಮಾಡಿ ಒಗಟು ಒಗಟಾಗಿ ಉತ್ತರ ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹಗೆ ಏನೂ ಅರ್ಥ ಆಗುವುದಿಲ್ಲ. ಪುಟ್ಟಕ್ಕಗೆ ಕರೆ ಮಾಡಿ ಬಂಗಾರಮ್ಮ ಕ್ಷಮೆ ಕೇಳುತ್ತಾಳೆ. ಆದರೆ ಪುಟ್ಟಕ್ಕ ನಿಮ್ಮಿಂದ ಏನೂ ತಪ್ಪು ಆಗಿಲ್ಲ ಎಂದು ಹೇಳುತ್ತಾಳೆ.


Click it and Unblock the Notifications











