Puttakkana Makkalu: ಸಹನಾ - ಮುರಳಿ ಜೋಡಿನ ದೂರ ಮಾಡಲು ಹೊರಟ ಕೌಸಲ್ಯ

By Poorva
Kannada serial Puttakkana Makkalu written update on 10th March

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಸಹನಾ ರಂಗೋಲಿ ಬಿಡಿಸುತ್ತಾ ಇರುವಾಗ ಅಲ್ಲಿಗೆ ಮುರಳಿ ಬರುತ್ತಾನೆ. ಮುರಳಿ ಸಹನಾ ಹತ್ತಿರ ಬರುತ್ತಾ ಇರುವಾಗ ಆಕೆಗೆ ಏನೋ ಒಂದು ತರಹ ದಿಗಿಲು ಆಕೆ ಏನೇನೋ ಸಾಬೂಬು ಹೇಳಿ ಮನೆಯಿಂದ ಓಡಿ ಹೋಗುತ್ತಾಳೆ ಅಡುಗೆ ಮನೆಯಲ್ಲಿ ನಾಚಿಕೆಯಿಂದ ನಿಂತ ಸಹನಾ ಬಳಿ ಪುನಃ ಮುರಳಿ ಬರುತ್ತಾನೆ

ಮುರಳಿ ಬರುವುದನ್ನು ನೋಡಿದ ಸಹನಾ ನಾಚಿ ನೀರಾಗಿದ್ದಳು. ಆದರೆ ಇದೆಲ್ಲವನ್ನೂ ನೋಡಿದ ಕೌಸಲ್ಯ ಮರೆಯಿಂದ ಮುರಳಿ ಎಂದು ಕರೆಯುತ್ತಿದ್ದಳು. ಕೌಸಲ್ಯ ಮನದಲ್ಲಿ ಇರುವುದು ಒಂದೇ ಹೇಗಾದರೂ ಮಾಡಿ ಇಬ್ಬರನ್ನು ದೂರ ಮಾಡಬೇಕು ಎಂಬುದು. ಆದರೆ ಅವರಿಬ್ಬರನ್ನು ದೂರ ಮಾಡಲು ಕೌಸಲ್ಯ ಹರ ಸಾಹಸ ಪಡುತ್ತಿದ್ದಾಳೆ. ಇತ್ತ ಡೈನಿಂಗ್ ಹಾಲ್ ನಲ್ಲಿ ಊಟಕ್ಕೆ ಕುಳಿತ ಸಹನಾಗೆ ಶಾಕ್ ಕಾದಿತ್ತು. ಮುರಳಿ ಹಾಗೂ ಚಿತ್ರ ಕೌಸಲ್ಯ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಆ ವೇಳೆ ಸಹನಾ ಊಟ ಬಡಿಸುತ್ತಾಳೆ. ಆಗ ಕೌಸಲ್ಯ ಬೇಕು ಅಂತೆ ಕ್ಯಾತೆ ತೆಗೆಯುತ್ತಾಳೆ.

ಮುರಳಿ ನೀನು ಇನ್ನೂ ರಜೆ ಹಾಕಿ ಮನೆಯಲ್ಲಿ ಕುಳಿತುಕೊಂಡಿರುವುದು ನನಗೆ ಯಾಕೋ ಇಷ್ಟ ಆಗುತ್ತಿಲ್ಲ ಆದ ಕಾರಣ ನೀನು ದೇವಿ ಪುರಕ್ಕೆ ಹೋಗಬಹುದು ಅಲ್ವಾ ಎಂದು ಕೌಸಲ್ಯ ಹೇಳುತ್ತಾಳೆ. ಇದನ್ನು ಕೇಳಿದ ಮೇಷ್ಟ್ರು ಒಳ್ಳೆಯ ಐಡಿಯಾ ಕೊಟ್ಟೆ ಸರಿ ನಾನು ಮತ್ತು ಸಹನಾ ಇಬ್ಬರು ನಾಳೆಯೇ ಹೊರಡುತ್ತೇವೆ, ಸಹನಾ ನೀನು ಡ್ರೆಸ್ ಎಲ್ಲಾ ಪ್ಯಾಕ್ ಮಾಡಿಕೋ ನಾವು ಹೋಗೋಣ ಎಂದು ಹೇಳುತ್ತಾನೆ ಇದನ್ನು ಕೇಳಿದ ಸಹನಾ ಹಿರಿ ಹಿರಿ ಹಿಗ್ಗುತ್ತಾ ಇರುತ್ತಾಳೆ .

ಡ್ರೆಸ್ ಪ್ಯಾಕ್ ಮಾಡಿಕೊಳ್ಳಲು ಸಹನಾ ಹೊರಟಾಗ ಕೌಸಲ್ಯ ತಡೆಯುತ್ತಾರೆ. ಕೌಸಲ್ಯ ಸಹನಾ , ಮುರಳಿ ಹೋಗುವುದು ಒಳ್ಳೆಯದು ಆದರೆ ನೀನು ಮದುವೆ ಆದ ಕೂಡಲೇ ಅಲ್ಲಿಗೆ ಹೋದರೆ ಸಾವಿರಾರು ಮಾತುಗಳನ್ನು ಕೇಳಬೇಕಾಗುತ್ತದೆ, ಆ ಕಾರಣದಿಂದ ನೀನು ಸುಮ್ಮನೆ ಮನೆಯಲ್ಲಿ ಇರುವುದು ಒಳ್ಳೆಯದು ಎಂದಾಗ ಸಹನಾ ಮುಖ ಬಾಡಿ ಹೋಗುತ್ತದೆ. ಇನ್ನು ನಂಜವ್ವ ಪುಟ್ಟಕ್ಕನ ಮನೆಗೆ ಹೋಗುತ್ತಾ ಇರುತ್ತಾಳೆ. ಚಂದ್ರು ಜೊತೆ ಮಾತನಾಡುತ್ತಾ ಇರುತ್ತಾರೆ ನಂಜವ್ವ . ನನಗೆ ಕೂಡ ವಯಸ್ಸು ಆಗುತ್ತಾ ಬಂತು, ಇನ್ನ ನನ್ನ ಕೈಯಲ್ಲಿ ದುಡಿಯಲು ಸಾಧ್ಯ ಇಲ್ಲ. ನಿನ್ನ ತಂಗಿನ ಮದುವೆ ಮಾಡಿ ಕೊಟ್ಟ ಬಳಿಕ ನಾನು ಒಬ್ಬಳೇ ಇರಬೇಕಾಗುತ್ತದೆ, ಆ ಕಾರಣಕ್ಕೆ ನೀನು ಬೇಗ ಮದುವೆ ಆಗು ಎಂದು ಹೇಳುತ್ತಾ ಇರುವಾಗ ಚಂದ್ರು ಸುಮ್ಮಗಾಗುತ್ತಾನೆ.

ಪುಟ್ಟಕ್ಕನ ಬಳಿ ಮಾತನಾಡಲು ಮನೆಗೆ ಬರುತ್ತಾಳೆ ನಂಜಮ್ಮ. ನಂಜಮ್ಮ ಬಂದಿರುವುದನ್ನು ನೋಡಿ ಪುಟ್ಟಕ್ಕಗೆ ಬಹಳ ಖುಷಿ ಆಗುತ್ತದೆ. ನಂಜಮ್ಮ ಮಾತನಾಡುತ್ತಾ ಮಾತನಾಡುತ್ತಾ ಬಂಗಾರಮ್ಮನ ಮಗನ ಬಗ್ಗೆ ಮಾತನಾಡುತ್ತಾಳೆ ಸಹನಾ ಮದುವೆಯಲ್ಲಿ ಓಡಾಡಿಕೊಂಡು ಇದ್ದಿದ್ದನ್ನು ಪ್ರಸ್ತಾಪ ಮಾಡುತ್ತಾಳೆ ಇದನ್ನು ಕೇಳಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಸ್ನೇಹಾ ಬಳಿ ಮಾತನಾಡಲು ಬರುತ್ತಾನೆ ಚಂದ್ರು. ಚಂದ್ರು ಮೊದಲು ಕೇಳಿದ್ದು ಕಂಠಿ ಬಗ್ಗೆನೇ ಇದನ್ನು ಏಕ್ಷ್ಪೇಕ್ಟ್ ಮಾಡಿದ್ದಳು ಸ್ನೇಹಾ.. ಇನ್ನೂ ಒಂದು ಮಾತು ಆಡದೆ ಚಂದ್ರು ಅಮ್ಮನನ್ನು ಕರೆದುಕೊಂಡು ಹೋಗುತ್ತಾನೆ .

ಇನ್ನು ಮೇಲೆ ಸ್ನೇಹಾಳಿಂದಾಗಿ ಮುತ್ತುಗೆ ಸಂಕಟ ಕಾದಿದೆ ದೊರೆ ಎಂದು ಹೇಳಮಾಡಲಾಗಿತ್ತು, ಯಾಮಾರಿಸಲು ಯತ್ನ ಮಾಡಲಾಗಿತ್ತು ಆದರೆ ಮೊಬೈಲ್ ಕೆಳಗೆ ಬಿದ್ದ ಕೂಡಲೇ ವಾಯ್ಸ್ ಮುತ್ತುದೆ ಬರುತ್ತದೆ . ಅದನ್ನು ಕೇಳಿದ ಸಿದ್ದೇಶ್ ಅಣ್ಣ ಇದು ಮುತ್ತು ವಾಯ್ಸ್ ಎಂದು ಹೇಳುತ್ತಾನೆ. ಆಗ ಕೋಪಗೊಂಡ ಕಂಠಿ ಎಲ್ಲಿದ್ದರೂ ಮುತ್ತುನ ಕರೆದುಕೊಂಡು ಬನ್ನಿ ಎಂದು ಹೇಳುತ್ತಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial Puttakkana Makkalu written update on 10th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X