Puttakkana Makkalu: ಮಾಡಿದ ತಪ್ಪಿಗೆ ದೇವರ ಬಳಿ ಕ್ಷಮೆ ಕೇಳಿದ ಪುಟ್ಟಕ್ಕ, ಪುಟ್ಟಕ್ಕನ ಒಳ್ಳೆತನಕ್ಕೆ ಮಾರು ಹೋದ ಬಂಗಾರಮ್ಮ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿಬರುತ್ತಿದ್ದು ನೋಡುಗರಿಗೆ ಖುಷಿ ನೀಡಿದೆ. ಇದೀಗ ಸುಮಾ ಇಂಜಿನಿಯರಿಂಗ್ ಮಾಡಲು ಸಹನಾ ಅಕ್ಕನ ಮನೆಗೆ ಹೋಗಬೇಕಾಗಿದೆ. ಮುರಳಿ ಸಹನಾ ತಂಗಿ ಬರುತ್ತಾ ಇದ್ದಾಳೆ ಎಂದು ಬಹಳ ಖುಷಿ ಪಟ್ಟುಕೊಂಡು ಬೆಂಗಳೂರಿನತ್ತ ಪಯಣ ಬೆಳೆಸಿದರೆ, ಸಹನಾಗೆ ಮಾತ್ರ ಬಹಳ ಭಯ ಆಗುತ್ತದೆ. ಆಕೆಗೆ ತನ್ನ ಅತ್ತೆಯ ಬಗ್ಗೆ ಚೆನ್ನಾಗಿ ತಿಳಿದಿದೆ.
ಮಹಾನ್ ಜಿಪುಣತನದಿಂದಲೇ ಕಾಲ ಕಳೆಯುತ್ತಿರುವ ಈಕೆ ತನ್ನ ತಂಗಿಯ ಓದಿಗೆ ಅಡ್ಡಿ ಬಂದರೆ ಎನು ಮಾಡುವುದು ಹಾಗೆಯೇ ನಾನು ಅತ್ತೆ ಮನೆಯಲ್ಲಿ ಖುಷಿಯಾಗಿ ಇಲ್ಲ ಎನ್ನುವ ವಿಚಾರವೂ ಆಕೆಗೆ ತಿಳಿಯುತ್ತದೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನೂ ಕೌಸಲ್ಯ ಜೋರಾಗಿ ಹೇಳುತ್ತಾಳೆ ಅಕ್ಕನೆ ಬಿಟ್ಟಿ ಕೂಳು ತಿಂದುಕೊಂಡು ಇರುವುದು ಇದೀಗ ತಂಗಿ ಬೇರೆ ಬರುತ್ತಿದ್ದಾಳೆ ಎಂದು.

ಇದನ್ನು, ಕೇಳಿ ಸಹನಾಗೆ ಎನು ಮಾಡುವುದು ಎಂದು ತಿಳಿಯದ ಹಾಗೆ ಆಗುತ್ತದೆ. ಅಷ್ಟರಲ್ಲಿ ಸ್ನೇಹಾ ಹಾಗೂ ಸುಮಾ ಅಕ್ಕ.... ಎಂದು ಕರೆಯುತ್ತಾರೆ. ಅವರಿಬ್ಬರೂ ಹೊಸ್ತಿಲಲ್ಲಿ ನಿಂತಿರುವುದನ್ನು ಕಂಡು ಸಹನಾ ಹಾಗೂ ಕೌಸಲ್ಯ ಹಾಗೆಯೇ ಮನೆಮಂದಿ ಶಾಕ್ ಆಗುತ್ತಾರೆ. ಆ ಕೂಡಲೇ ಸಹನಾ ಅದ್ಯಾವುದನ್ನೂ ತನ್ನ ತಂಗಿಯಂದಿರ ಎದುರು ತೋರ್ಪಡಿಸದೆ ಇರುತ್ತಾಳೆ.
ಬಂಗಾರಮ್ಮನ ಹೆಸರಲ್ಲಿ ಅರ್ಚನೆ
ಇತ್ತ, ಪುಟ್ಟಕ್ಕ ದೇವರ ಸನ್ನಿಧಿಗೆ ಹೋಗಿ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹಾಗೆಯೇ ಬಂಗಾರಮ್ಮ ಅವರ ಹೆಸರಿಗೆ ಅರ್ಚನೆಯನ್ನು ಮಾಡಿಸುತ್ತಾ ಇರುತ್ತಾಳೆ. ಅಮ್ಮವರು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುವ ಹಾಗೆ ಆಯಿತಲ್ವ ಅವರು ಯಾವತ್ತೂ ಚೆನ್ನಾಗಿ ಇರಬೇಕು ಇದು ನನ್ನ ಆಸೆ. ಹಾಗೆಯೇ ನಾನು ಮಾಡಿದ ತಪ್ಪನ್ನು ಅವರು ಕ್ಷಮಿಸಲಿ ದೇವರೇ ಎಂದು ಪ್ರಾರ್ಥನೆ ಮಾಡಿದಾಗ ಅಲ್ಲಿಗೆ ಬಂದ ಪೂಜಾರಪ್ಪ ಹೇಳುತ್ತಾರೆ. ಏನಾಯಿತು ಪುಟ್ಟಕ್ಕ ಯಾಕೆ ಹೀಗೆ ಯೋಚನೆ ಮಾಡುತ್ತಾ ಇದ್ದೀಯಾ.. ಮೆಸ್ ಗೆ ಬೆಂಕಿ ಹತ್ತಿದ್ದು ಇದೆಲ್ಲ ನಿನ್ನ ಕೈ ಮೀರಿ ನಡೆದು ಹೋಗಿದೆ. ಎನು ಮಾಡಲು ಆಗುವುದು ಇಲ್ಲ. ಇನ್ನೂ ಬಂಗಾರಮ್ಮ ಅವರು ಚೆನ್ನಾಗಿ ಇರಲಿ ಎಂದು ಪ್ರಾರ್ಥನೆ ಕೂಡ ಮಾಡಿದಿರಿ ಎನ್ನುತ್ತಾರೆ.
ಸ್ವಾಮಿಗಳ ಮಾತಿಗೆ ತಲೆಬಾಗಿದ ಪುಟ್ಟಕ್ಕ
ಇದಕ್ಕೆ ಪುಟ್ಟಕ್ಕ ಹೌದು ಸ್ವಾಮಿಗಳೇ ಆದರೆ ಅಂದು ಬಂಗಾರಮ್ಮ ಅವರು ಮನೆಗೆ ಬಂದು ನನ್ನದೇನೂ ತಪ್ಪು ಇಲ್ಲ. ಆದರೂ ನಾನು ಅವರ ಮೇಲೆ ಅನುಮಾನ ಪಟ್ಟೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ ಅವರ ಮನಸನ್ನು ನೋಯಿಸಿ ಬಿಟ್ಟಿದ್ದೇನೆ. ಆದರೆ ಇದೀಗ ಅವರು ನನ್ನನ್ನು ಖಂಡಿತ ಕ್ಷಮಿಸಲಾರರು. ಎಂದೆಲ್ಲ ಹೇಳಿದಾಗ ಸ್ವಾಮಿಗಳು ಪುಟ್ಟಕ್ಕಳನ್ನು ಸಾಂತ್ವನ ಮಾಡುತ್ತಾ ಇದ್ದರು.

ಪುಟ್ಟಕ್ಕನ ಮಾತು ಕೇಳಿಸಿಕೊಂಡ ಬಂಗಾರಮ್ಮ
ಇದೇ ವೇಳೆ ಅಲ್ಲಿಗೆ ಬಂದ ಬಂಗಾರಮ್ಮ ಇಬ್ಬರ ಮಾತುಕತೆಯನ್ನು ಕೇಳಿಸಿಕೊಂಡಿದ್ದಾರೆ. ಬಂಗಾರಮ್ಮ ಪುಟ್ಟಕ್ಕನ ಮುಗ್ಧತೆ, ಒಳ್ಳೆತನವನ್ನು ಅರಿತುಕೊಂಡು ಖುಷಿ ಪಡುತ್ತಾರೆ. ಹಾಗೆಯೇ ನನಗೇನು ಬೇಸರವಿಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ.


Click it and Unblock the Notifications











