Puttakkana Makkalu: ಎದೆನೋವು ಎಂದು ನಾಟಕ ಮಾಡಿ ಮಗನ ಪ್ರಸ್ಥಕ್ಕೆ ಅಡ್ಡಿ ಮಾಡಿದ ಕೌಸಲ್ಯ

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನ ಗೆಲ್ಲುತ್ತಿದೆ. ಇದೀಗ ಮುರಳಿ ಹಾಗೂ ಸಹನಾಗೆ ತಂಗಿಯರು ಇಬ್ಬರು ಸೇರಿ ಪ್ರಸ್ತದ ಶಾಸ್ತ್ರ ಮಾಡುತ್ತಾ ಇದ್ದಾರೆ. ಗಂಡ ಹೆಂಡತಿಯರಿಗೆ ಮೊದಲ ರಾತ್ರಿ ತವರಿನಲ್ಲೇ ಆಗಬೇಕು ಎಂಬುವುದು ರೂಢಿ. ಆದರೆ ಇದನ್ನೆಲ್ಲ ಕೌಸಲ್ಯ ಉಪಾಯದಿಂದ ತಪ್ಪಿಸಿ ಮನೆಗೆ ಕರೆದುಕೊಂಡು ಹೋಗುತ್ತಾಳೆ.

ಮುರಳಿ ಹಾಗೂ ಸಹನಾಗೆ ಪ್ರಸ್ತ ಶಾಸ್ತ್ರ ಮಾಡದೇ ಜ್ಯೋತಿಷಿ ಹಾಗೆ ಹೇಳಿದರು, ಹೀಗೆ ಹೇಳಿದರು ಎಂದು ಹೇಳುತ್ತ ಇರುತ್ತಾಳೆ. ಇನ್ನು ಸಹನಾ ರೂಮ್‌ನೊಳಗೆ ಬಂದು ಬಾಗಿಲು ಹಾಕಿಕೊಂಡಿರುತ್ತಾಳೆ. ಇದನ್ನು ನೋಡಿದ ಮುರಳಿಗೆ ಖುಷಿ ಆಗುತ್ತದೆ. ಆತ ಕುಳಿತಲ್ಲಿಂದಲೇ ಸಹನಳನ್ನು ನುಂಗಿ ಬಿಡುವ ಹಾಗೆ ನೋಡುತ್ತಾ ಇರುತ್ತಾನೆ.

Kannada serial Puttakkana Makkalu written update on 11th April

ಇದನ್ನೆಲ್ಲ ನೋಡಿದ ಸಹನಾ ನಾಚಿ ನೀರಾಗಿ ಬಿಡುತ್ತಾಳೆ. ಸಹನಾ ಬಳಿಗೆ ಬಂದ ಮುರಳಿ ಆಕೆಯ ಬಳಿ ಇವತ್ತು ನಮ್ಮನ್ನು ಡಿಸ್ಟರ್ಬ್ ಮಾಡಲು ಯಾರು ಇಲ್ಲ, ಬಹಳ ಕಷ್ಟ ಆಗುತ್ತಿತ್ತು ಮನೆಯಲ್ಲಿ ಅಮ್ಮ ಅಪ್ಪ ಎಲ್ಲರೂ ಬಂದು ಏನಾದರು ಕಿರಿ ಕಿರಿ ಮಾಡುತ್ತಾ ಇದ್ದರು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಹನಾ ಅತ್ತೆ ಶಾಸ್ತ್ರದಲ್ಲಿ ನಾವಿಬ್ಬರು ಸೇರಬಾರದು ಎಂದು ಇದೆ ಎಂದಿದ್ದಾರೆ ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.

ಇದನ್ನು ಕೇಳಿದ ಮುರಳಿ ನಾವಿಬ್ಬರು ಇವತ್ತು ಒಂದಾಗಲೇಬೇಕು ಎಂದು ಹೇಳುತ್ತಾ ಇರುತ್ತಾನೆ. ಇನ್ನು ಹತ್ತಿರ ಕುಳಿತುಕೊಂಡು ಇಬ್ಬರು ಮಾತನಾಡುತ್ತ ಇರುತ್ತಾರೆ. ಕೌಸಲ್ಯ ಮಾತ್ರ ಅತ್ತಿದ್ದಿಂತ ಓಡಾಡುತ್ತಾ ಇರುತ್ತಾಳೆ. ನನ್ನ ಮಗ ನನಗೆ ನೇರವಾಗಿ ಕರೆ ಮಾಡದೇ ಸ್ನೇಹಾ ಜೊತೆ ಕರೆ ಮಾಡಲು ಹೇಳಿದ್ದಾನೆ, ಆ ಸಹನಾ ಕೂಡ ಹಾಗೆಯೇ ಮಾಡಿದ್ದಾಳೆ ಎಂದು ಕೋಪಗೊಂಡು ಇರುತ್ತಾಳೆ.

ಇದನ್ನು ನೋಡಿದ ಆಕೆಯ ಮಗಳು ಚಿತ್ರ ನಗುತ್ತಾಳೆ.. ಇರಲಿ ಅಮ್ಮ, ನಾಳೆ ಬರಲಿ ಬಿಡು ಮಲಗಿಕೊ ಎಂದು ಹೇಳುತ್ತಾಳೆ. ಕೌಸಲ್ಯ ಮಾತ್ರ ನನ್ನ ಮಾತು ಕೇಳದ ಅವರಿಗೆ ನಾನು ಏನು ಮಾಡಬೇಕು.ತಿಳಿದಿದೆ ಎಂದು ಯೋಚನೆ ಮಾಡುವಾಗ ಚಿತ್ರ ಗಂಡ ಬಂದು ಬೆಂಕಿಗೆ ತುಪ್ಪ ಸುರಿಯುವ ಹಾಗೆ ಮಾತನಾಡುತ್ತಾ ಇರುತ್ತಾನೆ. ಇನ್ನು ಕೌಸಲ್ಯ ಹೃದಯ ನೋವು ಬಂದವಳ ಹಾಗೆ ನಟನೆ ಮಾಡಲು ಐಡಿಯಾ ಕೊಡುತ್ತಾನೆ.

ಇನ್ನು ಸಹನಾ ಮುರಳಿ ಸರಸ ಸಲ್ಲಾಪದಲ್ಲಿ ತೊಡಗಿರಬೇಕಾದರೆ ಮುರಳಿಗೆ ಫೋನ್ ಬರುತ್ತದೆ. ಅತ್ತ ಕಡೆಯಿಂದ ಚಿತ್ರ ಮಾತನಾಡುತ್ತಾಳೆ. ಮುರಳಿ ಅಮ್ಮನಿಗೆ ಹುಷಾರಿಲ್ಲ ಬೇಗ ಬಾ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮುರಳಿ ಬಹಳ ಆತಂಕಗೊಂಡು ಪುಟ್ಟಕ್ಕನ ಮನೆಯಲ್ಲಿ ಎಲ್ಲರಿಗೂ ಹೇಳಿ ಮನೆಯತ್ತ ಹೋಗುತ್ತಾರೆ.

ಸಹನಾ ಮಾತ್ರ ಅಳುತ್ತಾ ಇರುತ್ತಾಳೆ. ರಸ್ತೆಯಲ್ಲಿ ಮುರಳಿ ಜೊತೆ ಸಹನಾ ಹೋಗಬೇಕಾದರೆ ಸಹನಾ ಮುರಳಿ ಬಳಿ ಮಾತ್ರ ಬೈದುಕೊಂಡು ಹೋಗುತ್ತಾಳೆ. ಯಾಕೆ ಹೀಗೆ ಮಾಡಿದಿರಿ ಎಂದೆಲ್ಲ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾಳೆ. ಆಗ ಕೋಪ ಬಂದ ಮುರಳಿ ನಾನು ಬೇಕು ಅಂತ ಯಾವತ್ತೂ ಹೀಗೆ ಮಾಡಿಲ್ಲ ಎಂದು ಹೇಳುತ್ತಾನೆ. ಸಹನಾ ಅಲ್ಲಿಂದ ಮೆತ್ತಗೆ ಆಗುತ್ತಾಳೆ. ಇನ್ನು ಬಂಗಾರಮ್ಮಗೆ ಕಂಠಿ ಪ್ರೀತಿಯಲ್ಲಿ ಬಿದ್ದಿರುವುದು ಸ್ನೇಹಾ ಜೊತೆ ಎಂಬುವುದು ಬಂಗಾರಮ್ಮಗೆ ಖಾತ್ರಿ ಆಗುತ್ತದೆ. ಬಂಗಾರಮ್ಮ ಸ್ನೇಹಾ ಅವಮಾನ ಮಾಡಿರುವುದು ಎಲ್ಲವನ್ನೂ ಯೋಚನೆ ಮಾಡುತ್ತಾ ಇರುವಾಗ ಸ್ನೇಹಾ ನಿನ್ನ ಸುಮ್ಮನೆ ಬಿಡುವುದಿಲ್ಲ ಎಂದು ಮನದಲ್ಲಿ ಹೇಳಿಕೊಳ್ಳುತ್ತಾಳೆ . ಇನ್ನು ಕಂಠಿ ಬಂದು ಅಮ್ಮನಿಗೆ ಸಮಾಧಾನ ಹೇಳುತ್ತ ಇರುತ್ತಾನೆ. ಆಕೆಗೆ ಊಟ ಮಾಡಿಸುತ್ತಾನೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 11th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X