Puttakkana Makkalu: ಅಪಘಾತದಲ್ಲಿ ಸಾವನ್ನಪ್ಪಿದ ಪುಟ್ಟಕ್ಕ!? ಪುಟ್ಟಕ್ಕ ಇಲ್ಲದ ಧಾರಾವಾಹಿ ನೋಡಲ್ಲ ಎಂದ ವೀಕ್ಷಕರು!
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೀಗ ಎಲ್ಲರ ಫೇವರೆಟ್ ಧಾರಾವಾಹಿ ಆಗಿದ್ದು ನೋಡುಗರಿಂದ ಬಹಳಷ್ಟು ಮೆಚ್ಚುಗೆ ಗಳಿಸಿತ್ತು. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಅಪಘಾತಕ್ಕೀಡಾಗಿ ಸತ್ತು ಹೋಗಿರುತ್ತಾರೆ. ಹಾಗೆಯೇ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬರುವ ಹೊಸ ಪ್ರೋಮೋ ಇದೀಗ ಎಲ್ಲೆಡೆ ವೈರೆಲ್ ಆಗುತ್ತಿದೆ.
ಪುಟ್ಟಕ್ಕ ಪ್ರಮುಖ ಪಾತ್ರಧಾರಿಯಾಗಿ ಈ ಧಾರಾವಾಹಿಯಲ್ಲಿ ನಟನೆ ಮಾಡುತ್ತ ಇದ್ದಾರೆ. ಇದೀಗ ಪ್ರಮುಖ ಪಾತ್ರಧಾರಿಯೇ ಸತ್ತು ಹೋದರೆ ಕಥೆ ಹೇಗೆ ಮುಂದೆ ಸಾಗುತ್ತದೆ ಎನ್ನುವುದೇ ಅಭಿಮಾನಿಗಳ ಪ್ರಶ್ನೆ. ಪುಟ್ಟಕ್ಕ ಗಂಡ ಇಲ್ಲದಿದ್ದರೂ ಯಾರ ಸಹಾಯವನ್ನು ತೆಗೆದುಕೊಳ್ಳದೆ ತನ್ನ ಮೂವರು ಮಕ್ಕಳನ್ನು ಸಾಕಿ ಸಲಹಿದ್ದಾರೆ. ಪುಟ್ಟಕ್ಕ ತನ್ನ ಜೀವನ ನಡೆಸಿಕೊಂಡು ಹೋಗಲು ಮೆಸ್ ನಡೆಸುತ್ತಾ ಇದ್ದಳು ಹೀಗೆ ಮಕ್ಕಳನ್ನು ಸಾಕಿ ಸಲಹಿ ಉತ್ತಮವಾದ ಶಿಕ್ಷಣವನ್ನು ಕೊಟ್ಟು ಎಲ್ಲರ ಎದುರು ತಲೆ ಎತ್ತಿ ನಿಂತುಕೊಂಡು ಇರುತ್ತಾಳೆ.

ಈಕೆಯನ್ನು ನೋಡಿದ ಅನೇಕ ಜನ ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಇದೀಗ ಪುಟ್ಟಕ್ಕ ಇಲ್ಲದ ಧಾರಾವಾಹಿಯನ್ನು ನಾವು ನೋಡುವುದು ಇಲ್ಲ ಎಂದು ಅಭಿಮಾನಿಗಳು ಹಠ ತೊಟ್ಟಿದ್ದಾರೆ. ಇನ್ನು ಟಿಆರ್‌ಪಿ ಗೋಸ್ಕರ ಈ ರೀತಿ ಮಾಡುತ್ತಾ ಇದ್ದಾರಾ ಎನ್ನುವ ಅನುಮಾನವೂ ಕೂಡ ಕಾಡುತ್ತಿದೆ. ಟಿಆರ್‌ಪಿಗಾಗಿ ಹೀಗೆಲ್ಲ ಮಾಡುವುದು ಆದರೆ ದಯವಿಟ್ಟು ನಿಲ್ಲಿಸಿ ಎಂದು ಬೇಡಿಕೊಂಡು ಇದ್ದಾರೆ.
ಪುಟ್ಟಕ್ಕ ಇಲ್ಲದೆ ಧಾರವಾಹಿ ನೋಡಲ್ಲ ಎಂದ ಜನ
ಇನ್ನು ಪುಟ್ಟಕ್ಕ ಇನ್ನಿಲ್ಲ ಎಂದು ತಿಳಿದ ಅಭಿಮಾನಿಗಳು ಕಣ್ಣೀರು ಹಾಕುತ್ತಾ ಇದ್ದಾರೆ. ಪುಟ್ಟಕ್ಕನ ಮನೆಯಲ್ಲಿ ಅಮ್ಮನ ದಾರಿ ಕಾದುಕೊಂಡು ಸಹನಾ ಹಾಗೂ ಸುಮಾ ಇರುತ್ತಾರೆ. ಈ ವೇಳೆ ಅಲ್ಲಿಗೆ ಬಂದ ಪೊಲೀಸ್ ಪುಟ್ಟಕ್ಕ ಅವರಿಗೆ ದಾರಿ ಮಧ್ಯೆ ಅಪಘಾತ ಆಗಿ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಸಹನಾ ಹಾಗೂ ಸುಮಾ ಶಾಕ್ ಆಗುತ್ತದೆ. ತನ್ನ ಹೆತ್ತ ತಾಯಿ ಇನ್ನೂ ಮೇಲೆ ಇಲ್ಲ ಎಂದು ತಿಳಿದ ಮಕ್ಕಳು ಗೋಳಾಡುತ್ತಾರೆ.
ಪುಟ್ಟಕ್ಕನ ಮನೆಗೆ ಓಡೋಡಿ ಬಂದ ಬಂಗಾರಮ್ಮ
ಇತ್ತ ಬಂಗಾರಮ್ಮ ಹಾಲು ಕುಡಿಯುತ್ತಾ ಇರುವ ಸಮಯದಲ್ಲಿ ಲೆಕ್ಕಾಚಾರದ ಕೋದಂಡ ಬಂದು ಪುಟ್ಟಕ್ಕ ಸಾವಿನ ಸುದ್ದಿಯನ್ನು ಮುಟ್ಟಿಸುತ್ತಾರೆ. ಆ ಕೂಡಲೇ ಶಾಕ್ ನಲ್ಲಿ ಬಂಗಾರಮ್ಮ ಕೈ ಯಲ್ಲಿ ಇದ್ದ ಹಾಲಿನ ಗ್ಲಾಸ್ ಕೆಳಗೆ ಬೀಳುತ್ತದೆ. ಬಳಿಕ ಅಲ್ಲಿಂದ ನೇರವಾಗಿ ಪುಟ್ಟಕ್ಕನ ಮನೆಗೆ ಬಂದು ಮಕ್ಕಳಿಬ್ಬರಿಗೂ ಸಮಾಧಾನ ಮಾಡುತ್ತಿರುವ ವೇಳೆ ಆಂಬ್ಯುಲೆನ್ಸ್ ನಲ್ಲಿ ಪುಟ್ಟಕ್ಕ ಮೃತ ದೇಹ ಬರುತ್ತದೆ.

ಪ್ರೋಮೋ ನೋಡಿ ಕೋಪಗೊಂಡ ಜನರು
ಇನ್ನು ಪುಟ್ಟಕ್ಕನ ಮಕ್ಕಳಿಗೆ ಬಂಗಾರಮ್ಮ ನವರೆ ದಿಕ್ಕು ಎಂದು ಪ್ರೊಮೋದಲ್ಲಿ ತೋರಿಸಲಾಗುತ್ತಿದೆ. ಇದನ್ನು ನೋಡಿದ ಜನರು ಕಿಡಿ ಕಾರುತ್ತ ಇದ್ದಾರೆ. ರಾಜೇಶ್ವರಿ ಹಾಗೂ ನಂಜಮ್ಮ ಅವರ ಆಟದಿಂದ ಪುಟ್ಟಕ್ಕ ಸಾವನ್ನಪ್ಪಿದ ಹಾಗೆ ಆಯಿತು. ಜೀವನದಲ್ಲಿ ಯಾರು ಒಳ್ಳೆಯ ಕೆಲಸ ಮಾಡುತ್ತಾರೆ ಅವರಿಗೆ ಯಾವತ್ತೂ ಜಯ ಸಿಗುವುದು ಇಲ್ಲ.. ಯಾರು ಕೆಟ್ಟ ಕೆಲಸ ಮಾಡುತ್ತಾರೆ ಅವರಿಗೆ ಜಯ ಸಿಗುತ್ತದೆ. ಈ ಧಾರಾವಾಹಿಯಲ್ಲಿ ಅದನ್ನೇ ತೋರಿಸುತ್ತಾ ಇದ್ದಾರೆ ಎಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.


Click it and Unblock the Notifications











