Puttakkana Makkalu: ಫೋನ್ ಕರೆಯಲ್ಲಿ ಬಂಗಾರಮ್ಮ- ನಂಜಮ್ಮ ವಾಗ್ವಾದ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಾ ಇದ್ದು ನೋಡುಗರ ಮನಸೂರೆಗೊಂಡಿದೆ. ಇದೀಗ ಕೌಸಲ್ಯ ನಾಟಕ ಆಡಿ ಮುರಳಿ ಹಾಗೂ ಸಹನಾ ಪ್ರಸ್ಥ ನಡೆಯದೆ ಇರುವ ಹಾಗೆ ಮಾಡುತ್ತಾಳೆ. ತನಗೆ ಎದು ನೋವು ಬಂದಿದೆ ಎಂದೆಲ್ಲ ಸುಳ್ಳು ಹೇಳುತ್ತಾಳೆ. ಮುರಳಿ ಸಹನಾ ಆಸ್ಪತ್ರೆಯ ಕಡೆಗೆ ಮುಖ ಮಾಡಿರುತ್ತಾರೆ.
ಆದರೆ ಚಿತ್ರ ಪುನಃ ಕರೆ ಮಾಡುತ್ತಾಳೆ. ಆಸ್ಪತ್ರೆಗೆ ಹೋಗುವುದು ಬೇಡ ಮನೆಗೆ ಬನ್ನಿ ಡಾಕ್ಟರ್ ಮನೆಗೆ ಬಂದರು ಎಂದು ಸುಳ್ಳು ಹೇಳುತ್ತಾಳೆ. ಇನ್ನು ಲಘು ಬಗೆಯಿಂದ ಅಲ್ಲಿಗೆ ಸಹನಾ ಹಾಗೂ ಮುರಳಿ ಬಂದಾಗ ಕೌಸಲ್ಯ ತನಗೆ ಏನು ಆಗದೆ ಇರುವ ಹಾಗೆ ನಾಟಕ ಆಡುತ್ತಾಳೆ. ಇದನ್ನು ನೋಡಿದ ಇಬ್ಬರು ಗಾಬರಿ ಆಗುತ್ತಾರೆ. ಇನ್ನು ಸ್ನೇಹಾ ಚಿತ್ರಗೆ ಕರೆ ಮಾಡುತ್ತಾಳೆ. ಅಲ್ಲಿ ಎಲ್ಲಾ ಸರಿಯಾಗಿ ಇದೆಯಾ ಎಂದೆಲ್ಲ ಚೆಕ್ ಮಾಡುತ್ತಾಳೆ.

ಬಳಿಕ ಕೌಸಲ್ಯ ಆರೋಗ್ಯ ವಿಚಾರಣೆ ಮಾಡಿದಾಗ ಚಿತ್ರ ಏನೋ ಒಂದು ಸುಳ್ಳು ಹೇಳಿ ಸುಮ್ಮನೆ ಆಗುತ್ತಾಳೆ. ಇನ್ನು ಬೆಳಗ್ಗೆ ಎದ್ದ ಕೂಡಲೇ ಕೌಸಲ್ಯ ಕಸ ಗುಡಿಸುತ್ತ ಇರುತ್ತಾಳೆ. ಆಗ ಅಲ್ಲಿಗೆ ಬಂದ ಸಹನಾ ಅತ್ತೆಯನ್ನು ಸುಧಾರಿಸಿಕೊಳ್ಳಲು ಹೇಳುತ್ತಾಳೆ. ಕೌಸಲ್ಯ ಮಾತ್ರ ನೀನು ಅತ್ತೆಯ ಮಾತಿಗೆ ಬೆಲೆ ಇದುವರೆಗೂ ನೀಡಲೇ ಇಲ್ಲವಲ್ಲ ಇದು ನನಗೆ ಬಹಳ ಬೇಸರ ತಂದಿದೆ ಎನ್ನುತ್ತಾಳೆ.
ಸರಿ ನೀನು ನೀನಾಗಿರು ಸಹನಾ ನನ್ನ ಮುಂದೆ ನಾಟಕ ಆಡುವುದು ಬೇಡ ಎಂದೆಲ್ಲ ಹೇಳಿದಾಗ ಸಹನಾ ಸಮಜಾಯಿಷಿ ನೀಡುತ್ತಾಳೆ. ಆ ಬಳಿಕ ಪ್ರಸ್ತದ ವಿಚಾರವನ್ನು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಕೌಸಲ್ಯ ಕಿವಿ ನೆಟ್ಟಗೆ ಆಗುತ್ತದೆ. ಏನು ನಡೆದಿಲ್ಲ ಎಂದು ಹೇಳುವ ವೇಳೆ ಮಾತ್ರ ಕೌಸಲ್ಯಗೆ ಜೀವ ಬಂದ ಹಾಗೆ ಆಗುತ್ತದೆ.
ಇನ್ನು ಕಂಠಿ ಪುಟ್ಟಕ್ಕನ ಮೆಸ್ ಗೆ ಬರುತ್ತಾನೆ. ತನ್ನ ಜೀವದ ಗೆಳತಿಯನ್ನು ನೋಡಬೇಕು ಎಂದು ಆತುರದಿಂದ ಬರುತ್ತಾನೆ. ಆದರೆ ಸುಮಾ ಕಂಠಿ ಬಳಿ ಅಕ್ಕ ಮನೆಯಲ್ಲಿ ಇಲ್ಲ ಎಂದು ಹೇಳುತ್ತಾಳೆ. ಆದರೂ ಕಂಠಿ ಅಕ್ಕಿ ತೆಗೆದುಕೊಂಡು ಹೋಗುವ ನೆಪದಲ್ಲಿ ಪುಟ್ಟಕ್ಕನ ಮನೆಗೆ ಬರುತ್ತಾನೆ. ಮನೆಯಲ್ಲಿ ಸ್ನೇಹಾನಾ ಬಹಳ ಹುಡುಕುತ್ತಾನೆ. ಆದರೆ ಸ್ನೇಹಾ ಎಲ್ಲಿಯೂ ಇರದುದನ್ನು ಕಂಡು ವಾಪಸ್ ಆಗಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ಸುಮಾ ಕಂಠಿ ಬಳಿ ಇದ್ದ ವಿಚಾರ ಹೇಳುತ್ತಾಳೆ.
ಸ್ನೇಹಾಗೆ ಪರೀಕ್ಷೆ ಇರುವ ವಿಚಾರ ಆತನ ಬಳಿ ಹೇಳುತ್ತಾಳೆ. ಇನ್ನು ನಂಜಮ್ಮ ತನ್ನ ಮಗನಿಗೆ ಹುಡುಗಿ ಹುಡುಕುವ ಸಲುವಾಗಿ ಫೋನ್ ಮಾಡಿದಾಗ ಆ ಕರೆ ಬಂಗಾರಮ್ಮಗೆ ಹೋಗುತ್ತದೆ. ನಂಜಮ್ಮ ಗಂಡಿನ ಕಡೆಯವರು ಎಂದು ಫೋನ್ ನಲ್ಲಿ ಮಾತನಾಡುತ್ತಾ ಇರುವಾಗ ಅತ್ತ ಬಂಗಾರಮ್ಮನ ಧ್ವನಿ ಕೇಳುತ್ತದೆ. ಆದರೂ ನಂಜಮ್ಮ ಏನೋ ಮಾತನಾಡುತ್ತಾ ಇರುವಾಗ ನೀವೇ ಅಲ್ವಾ ನಮಗೆ ಡೈವರ್ಸ್ ನೋಟಿಸ್ ಕಳುಹಿಸಿದ್ದು ಇದೀಗ ಏನು ಮಾತನಾಡುತ್ತಾ ಇದ್ದೀರಿ ಎಂದು ಜೋರಾಗಿ ಕೇಳಿದಾಗ ನಂಜಮ್ಮ ಕರೆ ತೆಗೆದು ನೋಡಿದಾಗ ಅದರಲ್ಲಿ ಬಂಗಾರಮ್ಮ ಎಂದು ಬರೆದು ಇರುತ್ತದೆ. ಇದನ್ನು ನೋಡಿ ನಂಜಮ್ಮಗೆ ಶಾಕ್ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











