Puttakkana Makkalu: ಒಂದೇ ಕಾರಿನಲ್ಲಿ ಮದುಮಕ್ಕಳು; ಮದುವೆ ಮಂಟಪದ ಬ್ಯಾನರ್ ಕಂಡು ಮನೆಮಂದಿ ಶಾಕ್!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸ್ನೇಹಾ ಹಾಗೂ ಕಂಠಿ ಮದುವೆ ಒಂದೇ ಜಾಗದಲ್ಲಿ ನಡೆಯುತ್ತಿದೆ. ಕಂಠಿ ಮನೆಯಲ್ಲೂ ಮದುವೆ ಹಬ್ಬ ಬಹಳ ಜೋರಾಗಿದೆ.
ಬಂಗಾರಮ್ಮನಿಗೆ ಬಹಳ ಖುಷಿ, ನಾನು ಮೆಚ್ಚಿದ ಸೊಸೆ ನನ್ನ ಮನೆ ಬೆಳಗುತ್ತಿದ್ದಾಳೆ ಎನ್ನುವ ಖುಷಿ. ಇದೀಗ ಕಂಠಿ ಮನೆಯಲ್ಲಿ ಮದುವೆ ಛತ್ರಕ್ಕೆ ಹೋಗಬೇಕಾಗಿರುವ ಕಾರಣಕ್ಕೆ ಎಲ್ಲರೂ ಕಾರು ಹತ್ತಲು ನೋಡುತ್ತಾರೆ. ಈ ವೇಳೆ ಬಂಗಾರಮ್ಮ ಗಂಡು ಹೆಣ್ಣು ಮಾತ್ರ ಕಾರಲ್ಲಿ ಬರಲಿ ಎಂದು ಹೇಳುತ್ತಾರೆ. ಆ ಕಾರಣದಿಂದ ಗಂಡು ಹೆಣ್ಣು ಮಾತ್ರ ಕಾರಲ್ಲಿ ಹೋಗುತ್ತಾರೆ.

ಇನ್ನು ಬಂಗಾರಮ್ಮ ಹಾಗೂ ಕುಟುಂಬದವರು ಬೇರೆ ಕಾರಲ್ಲಿ ಮದುವೆ ಮಂಟಪಕ್ಕೆ ಹೋಗುತ್ತಾರೆ. ಇನ್ನು ಸ್ನೇಹಾ ಮನೆಯಲ್ಲಿ ಕೂಡ ಮದುವೆಯ ಸಂಭ್ರಮ ಜೋರಾಗಿತ್ತು. ಆದರೆ ಸ್ನೇಹಾಗೆ ಮಾತ್ರ ಬಹಳ ಬೇಸರ ತಾನು ಪ್ರೀತಿ ಮಾಡಿದವನನ್ನು ಬಿಟ್ಟು ಬೇರೆ ಹುಡುಗ ಜೊತೆ ಮದುವೆ ಆಗುತ್ತಿದ್ದೆನಲ್ಲ ಎಂದು ಬಹಳ ಬೇಸರ ಮಾಡಿಕೊಂಡಿರುತ್ತಾಳೆ. ಆದರೆ ಯಾರಿಗೂ ಅದನ್ನು ತೋರಿಸಿಕೊಳ್ಳದೆ ಭುವನ್ ಜೊತೆ ಮದುವೆ ಮಂಟಪಕ್ಕೆ ತೆರಳಲು ಕಾರಿನಲ್ಲಿ ಹೋಗುತ್ತಾ ಇರಬೇಕಾದರೆ ಭುವನ್ ಕಾರು ಎಳೆದ ಹಾಗೆ ಆಗುತ್ತದೆ ಎಂದು ಕೆಳಗೆ ಇಳಿದು ನೋಡಿದಾಗ ಕಾರು ಪಂಕ್ಚರ್ ಆಗಿರುತ್ತದೆ. ಇನ್ನು ಭುವನ್ ಹಾದಿಯಲ್ಲಿ ಸಾಗುತ್ತಿದ್ದ ವಾಹನಗಳಿಗೆ ಕೈ ಒಡ್ಡಿ ಸಹಾಯ ಕೇಳುತ್ತಾನೆ.
ಕಂಠಿ ಅದನ್ನು ಗಮನಿಸಿ ಕಾರು ನಿಲ್ಲಿಸುತ್ತಾನೆ. ಕಂಠಿ ಬಳಿ ನಡೆದ ವಿಚಾರವನ್ನು ಹೇಳಿದಾಗ ಕಂಠಿ ಸಹಾಯ ಮಾಡಲು ಮುಂದಾಗುತ್ತಾನೆ. ಇನ್ನು ಭುವನ್ ಸ್ನೇಹಾ ಕಂಠಿ ಕಾರಿನಲ್ಲಿ ಕುಳಿತುಕೊಂಡು ಮದುವೆ ಮಂಟಪಕ್ಕೆ ಹೋಗುತ್ತಾ ಇರುವಾಗ ಸ್ನೇಹಾ ಮೆತ್ತಗೆ ಕಂಠಿಯನ್ನು ನೋಡುತ್ತಾ ಇರುತ್ತಾಳೆ. ಇದನ್ನು ಗಮನಿಸಿದ ಕಂಠಿ ಮೆತ್ತಗೆ ಆಕೆಯನ್ನು ನೋಡುತ್ತಾನೆ. ಇದನ್ನು ಗಮನಿಸಿದ ಸ್ನೇಹಾ ತನ್ನ ಗಮನವನ್ನು ಬೇರೆಡೆಗೆ ಸೆಳೆಯುತ್ತಾಳೆ.
ಭುವನ್ ಕಂಠಿ ಹಾಗೂ ಸ್ನೇಹಾ ಮೊದಲಿನಿಂದಲೂ ಗೆಳೆಯರು ಎಂದು ಭವನ್ ಹೇಳುತ್ತ ಇರುವಾಗ ರಾಧಾಗೆ ಆಶ್ಚರ್ಯ ಆಗುತ್ತದೆ. ಮಾವ ಹಾಗೂ ಸ್ನೇಹಾ ಇಬ್ಬರು ಗೆಳೆಯರ, ಅವರಿಬ್ಬರೂ ಏನು ಮಾತನಾಡುತ್ತಾ ಇಲ್ಲವಲ್ಲ ಎಂಬ ಪ್ರಶ್ನೆಯನ್ನು ಮುಂದೆ ಇಡುತ್ತಾಳೆ. ಆಗ ಸ್ನೇಹಾಗೆ ಕೊಂಚ ಬೇಸರ ಆಗುತ್ತದೆ. ಸ್ನೇಹಾ ಅದ್ಯಾವುದನ್ನೂ ಗಮನಿಸದೆ ಏನು ನಡೆದೇ ಇಲ್ಲ ಎನ್ನುವ ಹಾಗೆ ಕಂಠಿ ಬಳಿ ಮಾತನಾಡುತ್ತಾಳೆ.
ಈ ಸಂದರ್ಭದಲ್ಲಿ ಕಂಠಿ ಬಾಯ್ತಪ್ಪಿ ಮಿಸ್ಸು ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಸ್ನೇಹಾಗೆ ದುಃಖ ಉಮ್ಮಳಿಸಿ ಬರುತ್ತದೆ. ಇನ್ನು ರಾಧಾ ಹೇಗೆ ನಿಮ್ಮಿಬ್ಬರ ಸ್ನೇಹ ಬೆಳೆಯಿತು ಎಂದು ಕಂಠಿ ಹಾಗೂ ಸ್ನೇಹಾ ಬಳಿ ಕೇಳಿದಾಗ ಭುವನ್ ಪುಟ್ಟಕ್ಕನ ಮೆಸ್‌ನಿಂದ ಇವರಿಬ್ಬರ ಸ್ನೇಹ ಬೆಳೆಯಿತು ಎಂದು ಹೇಳುತ್ತಾನೆ.
ರಾಧಾ ಪುಟ್ಟಕ್ಕನ ಮೆಸ್ ಗೆ ಊಟಕ್ಕೆ ಕರೆದುಕೊಂಡು ಹೋಗಿ ಎಂದು ಕೇಳುತ್ತಾಳೆ. ಆಗ ಭುವನ್ ನೀವು ಪುಟ್ಟಕ್ಕನ ಮೆಸ್ ಊಟ ಸವಿಯಬಹುದು ಆದರೆ ಸ್ನೇಹಾ ಮಾತ್ರ ಅಲ್ಲಿ ಇರುವುದು ಇಲ್ಲ ಆಕೆ ನನ್ನ ಬಳಿ ಇರುತ್ತಾಳೆ ಎಂದು ಹೇಳಿದಾಗ ಸ್ನೇಹಾ ಕಣ್ಣಾಲಿ ತುಂಬಿಕೊಂಡವು .
ಕಂಠಿಗೆ ಕೂಡ ಬಹಳ ಬೇಸರ ಆಗುತ್ತದೆ. ಇನ್ನು ಮದುವೆ ಛತ್ರದ ಬಳಿ ಬಂದಾಗ ಅಲ್ಲಿ ಸ್ನೇಹಾ ಹಾಗೂ ಕಂಠಿ ಮದುವೆ ಎಂದು ಬ್ಯಾನರ್ ಹಾಕಿತ್ತು. ಇದನ್ನು ನೋಡಿದ ಎರಡೂ ಮನೆಯವರು ಬಹಳ ಶಾಕ್ ಆಗಿದ್ದಾರೆ.


Click it and Unblock the Notifications