Puttakkana Makkalu: ಸುಮಾಗೆ ಮಾಡರ್ನ್ ಹುಡುಗಿಯ ಕಾಟ, ಮಾರನ ಮಾತಿಗೆ ಶಾಕ್ ಆದ ಸ್ನೇಹಾ!
ಬಂಗಾರಮ್ಮನ ಮನೆಯಲ್ಲಿ ಮಾರನ ಕಾಟ ಆದರೆ, ಸುಮಾಗೆ ಕಾಲೇಜಿನಲ್ಲಿ ಮಾಡರ್ನ್ ಹುಡುಗಿಯ ಕಾಟಾ ಎಂದು ಹೇಳಿದರೆ ತಪ್ಪಾಗದು.. ಹೌದು ಬಂಗಾರಮ್ಮನ ಮನೆಯಲ್ಲಿ ಇದೀಗ ಮಾರ ಶಾಂತಿ ಕದಡುವ ಯೋಚನೆ ಮಾಡುತ್ತಾ ಇದ್ದಾನೆ. ಮಾರ ಸುಖಾ ಸುಮ್ಮನೆ ಸ್ನೇಹಾ ಇದಕ್ಕೆಲ್ಲ ಕಾರಣ ಎಂದು ಆರೋಪ ಮಾಡಿದ ವೇಳೆ ಬಂಗಾರಮ್ಮ ತನ್ನ ಸೊಸೆಯ ಪರ ಮಾತನಾಡಬೇಕಿತ್ತು.
ಆದರೆ ಬಂಗಾರಮ್ಮ ಹಾಗೆ ಮಾಡದೆ ಸೊಸೆಯ ವಿರುದ್ದ ಬುಸುಗುಡುತ್ತಾ ಇರುತ್ತಾರೆ. ಮಾರನ ಮಾತು ಕೇಳಿ ಸ್ನೇಹಾ ಮಾತ್ರ ಶಾಕ್ ಆಗಿದ್ದಾಳೆ. ತನ್ನ ಅಮ್ಮನ ಮೆಸ್‌ಗೆ ನಾನು ಬೆಂಕಿ ಇಡಲು ಹೇಳುತ್ತೇನಾ?. ನನ್ನ ಮೇಲೆ ಇಂತಹ ದೊಡ್ಡ ಆಪಾದನೆ ಬಂದಿದೆ ಎಂದು ತಲೆ ಕೆಡಿಸಿಕೊಂಡಿದ್ದಾಳೆ.

ಇನ್ನೂ ಇದನ್ನೆಲ್ಲ ಸ್ನೇಹಾ ಮಾಡಿದ್ದು ಎಂದು ಮಾರ ಹೇಳಿದಾಗ ಕಂಠಿಗೆ ಎಲ್ಲಿಲ್ಲದ ಕೋಪ ಬಂದು ಬಿಡುತ್ತದೆ ಯಾಕೆಂದರೆ ಸ್ನೇಹಾ ಇದರಲ್ಲಿ ತಪ್ಪೇ ಮಾಡಿ ಇರಲು ಸಾಧ್ಯ ಇಲ್ಲ ಎನ್ನುವುದು ಅವರ ನಂಬಿಕೆ. ಮಾರ ಅಷ್ಟು ಹೇಳಿದ್ದೆ ತಡ ಆತನ ಕುತ್ತಿಗೆಯ ಪಟ್ಟಿ ಹಿಡಿದು ಅಲ್ಲಾಡಿಸುತ್ತಾ ಇರುತ್ತಾರೆ ಕಂಠಿ. ಕಂಠಿ ಬಳಿ ಆತರ ಮಾಡಬೇಡ ಎಂದು ಎಷ್ಟೇ ಬಂಗಾರಮ್ಮ ಹೇಳಿದರು ಆತ ಮಾತ್ರ ಮಾರನನ್ನು ಹೊಡೆಯುತ್ತಾ ಇರುತ್ತಾನೆ..
ಕೌಸಲ್ಯ ಮಾತಿಗೆ ಸುಮ್ಮನಿರುವ ಸಹನಾ
ಇನ್ನೂ ಸುಮಾ ಕೌಸಲ್ಯ ಮನೆಯಲ್ಲಿ ಕೊಂಚ ಆರಾಮವಾಗಿ ಇರುತ್ತಾಳೆ. ಕೌಸಲ್ಯ ಮಾತು ಕೇಳಿದ ಸಹನಾಗೆ ತಲೆ ಬಿಸಿ ಆಗಿದೆ.. ನನ್ನ ತಂಗಿಯ ಎದುರು ಯಾವಾಗ ಬುಸುಗುಡುತ್ತಾ ಮಾತಾನಡುತ್ತಾರೋ ಎಂದು ತಲೆ ಕೆಡಿಸಿಕೊಂಡು ಇರುತ್ತಾಳೆ. ಇನ್ನೂ ಸುಮಾ ಮಾತ್ರ ಎಂದಿನಂತೆ ಮನೆಯಿಂದ ಕಾಲೇಜಿನ ಕಡೆಗೆ ಹೋಗುತ್ತಾಳೆ..
ಕಾಲೇಜಿನ ಒಳಗಡೆ ಬಂದ ಸುಮಾಗೆ ಎದುರಾಗಿದೆ ಸವಾಲು
ಸುಮಾ ಏನೋ ಗೋಜಿನಲ್ಲಿ ಕಾಲೇಜಿನ ಕ್ಯಾಂಪಸ್ ಒಳಗೆ ಹೆಜ್ಜೆ ಹೇಳಿದರೆ ಕೂಲ್ ಡ್ರಿಂಕ್ಸ್ ಕುಡಿಯುತ್ತಾ ಮಾಡರ್ನ್ ಹುಡುಗಿಯೊಬ್ಬಳು ಸುಮಾ ಬರುವ ನೇರಕ್ಕೆ ಬಂದು ಇಬ್ಬರು ಒಬ್ಬರಿಗೊಬ್ಬರು ತಾಗುತ್ತಾರೆ. ಆ ವೇಳೆ ಜ್ಯೂಸ್ ಆಕೆಯ ಡ್ರೆಸ್ ಗೆ ಬಿದ್ದು ಹಾಳಾಗಿ ಹೋಗುತ್ತದೆ.. ಇದನ್ನು ನೋಡಿದ ಆ ಹುಡುಗಿ ಸುಮಾಳನ್ನೂ ಚೆನ್ನಾಗಿ ತರಾಟೆಗೆ ತೆಗೆದುಕೊಂಡಾಗ ಸುಮಾ ಸಾರಿ ಎಂದು ಹೇಳಿದರು ಕೇಳದೆ ಆ ಹುಡುಗಿ ತುಂಬಾ ಕೋಪ ಮಾಡಿಕೊಳ್ಳುತ್ತಾಳೆ.

ಮಾಡರ್ನ್ ಹುಡುಗಿಯ ಮಾತಿಗೆ ಕೋಪಗೊಂಡ ಸುಮಾ
ನನ್ನ ಡ್ರೆಸ್ ಎಷ್ಟು ಕೊಳೆ ಆಯಿತು.. ನಿನ್ನ ಅಮ್ಮ ಬಂದು ಡ್ರೆಸ್ ವಾಶ್ ಮಾಡಿ ಕೊಡುತ್ತಾಳಾ ಎಂದು ಕೇಳಿದಾಗ ಕೋಪಗೊಂಡ ಸುಮಾ ಮಾತ್ರ ಮಾಡರ್ನ್ ಹುಡುಗಿಗೆ ಸರಿಯಾಗಿ ಪಾಠ ಕಲಿಸುತ್ತಾಳೆ. ಆಕೆಯ ಬಟ್ಟೆಯೇ ಮೇಲೆ ಇನ್ನಷ್ಟು ಜ್ಯೂಸ್ ಚೆಲ್ಲಿ ಹೋಗಿ ನಿನ್ನ ಅಮ್ಮನ ಕೈಯಲ್ಲಿ ವಾಶ್ ಮಾಡಿಸಿಕೊ ಎಂದಾಗ ಮಾಡರ್ನ್ ಹುಡುಗಿ ಸುಮಾಳ ಕೆನ್ನೆಗೆ ಹೊಡೆಯಲು ಕೈ ಎತ್ತುತ್ತಾರೆ. ಆ ವೇಳೆ ಅಲ್ಲಿಗೆ ಬಂದ ಸಹನಾ ಮಾಡರ್ನ್ ಹುಡುಗಿ ಸುಮಾ ಮೇಲೆ ಕೈ ಮಾಡುವುದನ್ನು ತಡೆಯುತ್ತಾಳೆ. ಬಳಿಕ ಸಾರಿ ಕೇಳಿ ಅಲ್ಲಿಂದ ಸುಮಾಳನ್ನು ಕರೆದುಕೊಂಡು ಹೋಗುತ್ತಾಳೆ.


Click it and Unblock the Notifications











