Puttakkana Makkalu: ಪುಟ್ಟಕ್ಕನ ಹೋರಾಟದ ಪಯಣಕ್ಕೆ ಎರಡು ವರ್ಷ, ವೀಕ್ಷಕರಿಂದ ಮೆಚ್ಚುಗೆ
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರುವಾಗಿ ಇಂದಿಗೆ ಎರಡು ವರ್ಷಗಳು ಸಂದಿದೆ. ಹಾಗೆ ಧಾರಾವಾಹಿ ನೋಡುಗರ ಮನಸ್ಸಿಗೆ ಬಹಳಷ್ಟು ಮುದ ನೀಡಿದೆ. ಬಹುತೇಕರ ನೆಚ್ಚಿನ ಧಾರಾವಾಹಿಯಾಗಿ ಜನರ ಮನ ಗೆದ್ದಿದೆ ಎಂದರೆ ತಪ್ಪಾಗದು. ಪುಟ್ಟಕ್ಕ ಧಾರಾವಾಹಿ ಬಿಟ್ಟು ಹೊರಹೋದರು ಎಂದು ವದಂತಿ ಕೂಡ ಹರಡಿತ್ತು.
ಆ ವೇಳೆ ಧಾರವಾಹಿ ಪ್ರೇಮಿಗಳು ಪುಟ್ಟಕ್ಕ ಇಲ್ಲದೆ ನಾವು ಧಾರವಾಹಿ ನೋಡುವುದೇ ಇಲ್ಲ ಎಂದು ಹೇಳುತ್ತಿದ್ದರು. ಇದೀಗ ರಾಜೀ ಪ್ಲಾನ್ ಆಕೆಗೆ ಉಲ್ಟಾ ಹೊಡೆದಿದೆ. ಪುಟ್ಟಕ್ಕ ಸತ್ತು ಹೋಗಿದ್ದಾರೆ ಎಂದು ಅಂದುಕೊಂಡವರಿಗೆ ಆಶ್ಚರ್ಯ ಆಗಿದೆ. ಪುಟ್ಟಕ್ಕ ಬದುಕಿದ್ದಾರೆ. ಕಂಠಿಯಂತಹ ಅಳಿಯ ಪುಟ್ಟಕ್ಕನಿಗೆ ಸಿಕ್ಕಿರಬೇಕಾದರೆ ಪುಟ್ಟಕ್ಕ ಯಾವುದಕ್ಕೂ ಹೆದರುವ ಅಗತ್ಯವೆ ಇಲ್ಲ.

ರೌಡಿಗಳು ಪುಟ್ಟಕ್ಕನನ್ನು ಅಡ್ಡಗಟ್ಟಿ ಇನ್ನೇನು ಸಾಯಿಸಬೇಕು ಎಂದು ಅಂದುಕೊಂಡಾಗ ಅಲ್ಲಿಗೆ ಬಂದ ಕಂಠಿ ಎಲ್ಲರಿಗೆ ಸರಿಯಾದ ಪಾಠ ಕಲಿಸಿ ರೌಡಿಯನ್ನ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಬಂದು ಎಲ್ಲರಿಗೂ ಶಾಕ್ ನೀಡುತ್ತಾನೆ. ಇನ್ನು ಎಲ್ಲರೂ ಹೋದ ಬಳಿಕ ಪುಟ್ಟಕ್ಕ ಹಾಗೂ ಕಂಠಿ ಮನೆಗೆ ಬರುತ್ತಾರೆ.
ಅಮ್ಮನನ್ನು ನೋಡಿ ಓಡಿ ಬಂದ ಸುಮ ಸಹನಾ
ಕಂಠಿಯನ್ನು ಪುಟ್ಟಕ್ಕ ಜೊತೆ ನೋಡಿ ರಾಜಿ ಬಹಳಷ್ಟು ಭಯದಿಂದ ತತ್ತರಿಸಿ ಬಿಟ್ಟಳು. ಇನ್ನು ಕಾಳಿ ಕೂಡ ಕೊಂಚ ಭಯ ಪಟ್ಟುಕೊಂಡು ಇರುತ್ತಾನೆ. ಇನ್ನು ಬಂಗಾರಮ್ಮ ಹಾಗೂ ಪುಟ್ಟಕ್ಕನ ಮಕ್ಕಳಿಗೆ ಪುಟ್ಟಕ್ಕನನ್ನು ನೋಡಿ ಬಹಳ ಖುಷಿ ಆಗುತ್ತದೆ. ಇನ್ನು ಪುಟ್ಟಕ್ಕ ಇನ್ನಿಲ್ಲ ಎಂದು ವಸು ಮಾತನಾಡುತ್ತಾ ಇರುವುದು ಬಂಗಾರಮ್ಮನ ಗಂಡಗೆ ತಿಳಿಯುತ್ತದೆ. ಆ ಸುದ್ದಿ ಕೇಳಿ ಅವರು ವೀಲ್ ಚೇರ್ ನಿಂದಾ ಕೆಳಗೆ ಬಿದ್ದು ಹೋಗುತ್ತಾರೆ.
ಮಾವನನ್ನು ನೋಡಿ ಗಾಬರಿಯಾದ ಸ್ನೇಹಾ
ಮನೆಗೆ ಬಂದ ಸ್ನೇಹಾ ಮಾವನನ್ನು ನೋಡಿ ಚೀರಿಕೊಳ್ಳುತ್ತಾಳೆ. ಆಗ ಎಲ್ಲರಿಗೂ ವಿಚಾರ ತಿಳಿಯುತ್ತದೆ . ಇನ್ನು ಮಾವನನ್ನು ತರಾತುರಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಪುಟ್ಟಕ್ಕನ ನೆನೆದು ಬಂಗಾರಮ್ಮನ ಗಂಡನಿಗೆ ಆಘಾತ ಆಗಿದೆ.

ಮಕ್ಕಳನ್ನು ಸಮಾಧಾನ ಮಾಡಿದ ಪುಟ್ಟಕ್ಕ
ಸಹನಾ, ಸುಮಾ ಅಮ್ಮ ಇನ್ನೂ ಇಲ್ಲ ಎನ್ನುವ ಸುದ್ದಿ ಕೇಳಿ ಎದೆ ಹೊಡೆಯುವಂತೆ ಅಳುತ್ತಾ ಇರುತ್ತಾಳೆ. ಆದರೆ ಆ ಬಳಿಕ ತನ್ನ ತಾಯಿಯನ್ನು ನೋಡಿ ಬಹಳಷ್ಟು ಖುಷಿ ಪಡುತ್ತಾಳೆ. ದೇವರು ನನಗೆ ಕೊಟ್ಟಿರುವ ಒಂದೇ ಒಂದು ಆಸ್ತಿ ಅದು ತಾಯಿ. ನಮ್ಮನ್ನೆಲ್ಲ ಸಾಕಲು ಅದೆಷ್ಟು ಪರದಾಟ ಪಟ್ಟಿದ್ದಾಳೆ. ಇನ್ನು ಮುಂದೆ ಅಮ್ಮನನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ.


Click it and Unblock the Notifications











