ಸಹನಾ ಆರತಕ್ಷತೆಗೆ ಅದ್ದೂರಿ ತಯಾರಿ; ಮದುಮಗನ ವಸ್ತ್ರದಲ್ಲಿ ಕಾಳಿ ಕಂಡ ಎಲ್ಲರೂ ಕಕ್ಕಾಬಿಕ್ಕಿ!
ವಸು ಮನೆಗೆ ಬಂದು ಬಹಳ ಕೋಪ ಮಾಡಿಕೊಂಡು ಬೆಡ್ ಮೇಲೆ ಕುಳಿತಿರುತ್ತಾಳೆ. ಆ ವೇಳೆ ಅಲ್ಲಿಗೆ ಬಂದ ಕಂಠಿ ವಸುಗೆ ಸಮಾಧಾನ ಹೇಳುತ್ತಾನೆ. ಸ್ನೇಹಾ ತಪ್ಪಿಲ್ಲ ಎಂದು ಹೇಳಲು ಬಂದಾಗ ಕಂಠಿಗೆ ಸರಿಯಾಗಿ ಬೈಯುತ್ತಾ ಇರುತ್ತಾಳೆ. ನೀನು ನನಗಾಗಿ ಇಲ್ಲಿ ಬಂದಿಲ್ಲ ಸ್ನೇಹಾ ತಪ್ಪಿಲ್ಲ ಎಂದೆಲ್ಲ ಹೇಳಲು ಬಂದಿದ್ದೀಯಾ ಎಂದು ವಸು ಕೋಪದಿಂದ ಹೇಳುತ್ತಾಳೆ.
ಇದನ್ನು ಕೇಳಿದ ಕಂಠಿ ಅಲ್ಲಿ ನಡೆದ ನಿಜ ವಿಚಾರವನ್ನು ವಸುಗೆ ತಿಳಿಸಿ ಬುದ್ದಿ ಹೇಳುತ್ತಾನೆ. ಬಳಿಕ ಸಮಾಧಾನ ಕೂಡ ಮಾಡುತ್ತಾನೆ. ಚಂದ್ರು ನಿನ್ನ ಬಳಿ ಮಾತನಾಡಲು ಸ್ನೇಹಾ ಬಳಿ ಕೇಳಿಕೊಂಡರು, ಅದಕ್ಕಾಗಿ ಆಕೆ ಬಂದಿದ್ದಳು ಎಂದು ಹೇಳಿದಾಗ ವಸುಗೆ ಕೊಂಚ ಬೇಸರ ಆಗುತ್ತದೆ. ಆದರೂ ಬಳಿಕ ಸುಮ್ಮನೆ ಆಗುತ್ತಾಳೆ. ಕಂಠಿ ಬಳಿ ವಸು ಅಣ್ಣಯ್ಯ ನೀನು ಇಲ್ಲಿಂದ ಬೇಗ ಹೋಗು ಅಮ್ಮ ಏನಾದರು ನಿನ್ನ ನೋಡಿದರೆ ಇನ್ನೂ ಗಲಾಟೆ ಆಗುತ್ತದೆ, ಅಮ್ಮ ನಿನ್ನ ಮೇಲೆ ಬಹಳ ಕೋಪ ಮಾಡಿಕೊಂಡಿದ್ರು ಎಂದು ಹೇಳಿ ಅಲ್ಲಿಂದ ಕಂಠಿಯನ್ನು ಹೊರಗೆ ಕಳುಹಿಸುತ್ತಾಳೆ.
ಇನ್ನು ಸಹನಾ ಮನೆಗೆ ಬಂದ ಕಂಠಿ ಫೋಟೋಗ್ರಫರ್ ಬಳಿ ಮದುಮಗಳ ಫೋಟೋ ಜೊತೆಗೆ ಸ್ನೇಹಾ ಅವರ ಫೋಟೋವನ್ನು ಕೂಡ ತೆಗಿಬೇಕು ಎಂದು ಹೇಳುತ್ತಾನೆ. ಮದುಮಗಳು ಸಹನಾ ರೆಡಿ ಆಗುತ್ತಿರುವ ವೇಳೆ ಆಕೆಯ ಕೋಣೆಯ ಕದವನ್ನು ತಟ್ಟುತ್ತಾರೆ. ಬಳಿಕ ಮದುಮಗಳು ರೆಡಿ ಆಗಿದ್ದಾರ ಒಳಗೆ ಬರಬಹುದಾ, ಫೋಟೋ ತೆಗೆಯಬೇಕು ಅಂತಾ ಹೇಳಿದ ವೇಳೆ ಆಯಿತು ಎಂದು ಒಪ್ಪಿಗೆ ನೀಡಿ ಒಳಗೆ ಬರಲು ಹೇಳುತ್ತಾರೆ.

ಸಹನಾ ಫೋಟೋ ತೆಗೆಯಲು ಒಪ್ಪಿಗೆ ಕೊಟ್ಟ ಸ್ನೇಹಾ
ಅಲ್ಲಿ ಕಂಠಿಗೆ ಸಹನಳನ್ನು ನೋಡಿ ಸ್ನೇಹಾ ಹೀಗೆ ಇರುತ್ತಿದ್ದರೆ ಎಷ್ಟು ಮುದ್ದಾಗಿ ಕಾಣುತ್ತಿದ್ದಳು ಎಂದು ಯೋಚನೆ ಮಾಡುತ್ತಾ ಇರುತ್ತಾನೆ. ಬಳಿಕ ಫೋಟೋ ತೆಗೆದು ಅಲ್ಲಿಂದ ಹೋಗುತ್ತಾರೆ. ಇನ್ನು ಅಲ್ಲಿಗೆ ಬಂದ ಪುಟ್ಟಕ್ಕ ಗ್ರಾಮ ದೇವರ ಬಳಿ ಪೂಜೆ ಮಾಡಬೇಕಾಗಿದೆ ಹೋಗೋಣ ಎಂದು ಹೇಳಿದ ಬಳಿಕ ಸ್ನೇಹಾ ಸುಮಾ ನೀವು ಹೋಗಿರಿ ನಾನು ಸಹನಾ ಬಳಿ ಮಾತನಾಡಬೇಕು ಎಂದು ಅಲ್ಲಿಂದ ಹೋಗುತ್ತಾರೆ. ಬಳಿಕ ಸಹನಾಗೆ ತುಂಬಾ ಬುದ್ಧಿವಾದ ಹೇಳುತ್ತಾರೆ

ಸಹನಾಗೆ ಬುದ್ದಿ ಮಾತು ಹೇಳಿದ ಪುಟ್ಟಕ್ಕ
ಗಂಡ ಹೆಂಡತಿ ಅಂದರೆ ಸರಸ ವಿರಸ ಇದ್ದಿದ್ದೇ ಅದೆಲ್ಲವನ್ನೂ ಸಮಾನವಾಗಿ ಸರಿದೂಗಿಸಿಕೊಂಡು ಹೋಗಬೇಕು ಎಂದೆಲ್ಲಾ ಬುದ್ದಿ ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಸಹನಾ ಆಯಿತು ಎಂದು ಹೇಳಿ ಸುಮ್ಮನೆ ಆಗುತ್ತಾಳೆ. ಇನ್ನು ಗ್ರಾಮದೇವತೆಗಳ ಬಳಿಗೆ ಬಂದ ಎಲ್ಲರೂ ದೇವರಿಗೆ ಕೈ ಮುಗಿಯುತ್ತಾರೆ. ಪುಟ್ಟಕ್ಕ ದೇವತೆಗಳಿಗೆ ಪೂಜೆ ಮಾಡುತ್ತಾಳೆ. ಆ ವೇಳೆ ಕೌಸಲ್ಯ ಪೂಜೆ ಮಾಡಿಸಲೆ ಬೇಕಿತ್ತಾ ಅಗತ್ಯ ಇರಲಿಲ್ಲ ಅನ್ನಿಸುತ್ತದೆ ಎಂದು ಹೇಳಿದಾಗ ಪುಟ್ಟಕ್ಕ ಗ್ರಾಮ ದೇವರ ಮೇಲೆ ಸಹನಾಗೆ ಇರುವ ಪ್ರೀತಿಯನ್ನು ಎಲ್ಲರಿಗೂ ಹೇಳುತ್ತಾಳೆ.

ಮುರಳಿ ಕಾಲೆಳೆದ ಸುಮ
ಮದುಮಗಳು ಹಾಗೂ ಮದುಮಗನನ್ನು ಮೆರವಣಿಗೆಯ ಮೂಲಕ ಆರತಕ್ಷತೆಗೆ ಕರೆದುಕೊಂಡು ಹೋಗುವ ವೇಳೆ ಕಂಠಿಗೆ ಸ್ನೇಹಾಳನ್ನು ನೋಡಿ ಖುಷಿ ಆಗುತ್ತದೆ. ಕಂಠಿ ಇಷ್ಟೆಲ್ಲ ಅರೇಂಜ್ ಮೆಂಟ್ ಮಾಡಿದ್ದನ್ನು ನೋಡಿ ಬಹಳ ಆಶ್ಚರ್ಯ ಕೂಡ ಆಗುತ್ತದೆ. ಎಲ್ಲವನ್ನೂ ಸಂಪ್ರದಾಯದ ಪ್ರಕಾರ ಮಾಡಿಕೊಂಡು ಹೋಗುತ್ತಾರೆ. ಅದ್ದೂರಿ ಮೆರವಣಿಗೆಯ ಬಳಿಕ ಆರತಕ್ಷತೆ ಬಳಿಗೆ ಬಂದು ಇಬ್ಬರನ್ನೂ ಕುಳ್ಳಿರಿಸಿ ಮಾತನಾಡುತ್ತಾರೆ. ಇದನ್ನು ನೋಡಿದ ಎಲ್ಲರಿಗೂ ಖುಷಿ ಆಗುತ್ತದೆ. ಇನ್ನು ರಾಜಿ ಮನೆಯಿಂದ ಕೂಡ ಎಲ್ಲರೂ ಹೊರಟಿರುತ್ತಾರೆ. ಪುರುಷೋತ್ತಮ ಮದುವೆಗೆ ಹೋಗಲು ಕಾಯುತ್ತಾ ಇದ್ದರೆ ಕಾಳಿ ಮಾತ್ರ ಮದುಮಗನ ಡ್ರೆಸ್ ನಲ್ಲಿ ಬರುತ್ತಾನೆ. ಇದನ್ನು ನೋಡಿದ ಮನೆ ಮಂದಿಗೆ ಗಾಬರಿ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











