Puttakkana Makkalu: ಕಂಠಿಯನ್ನು ಪ್ರೀತಿಸುತ್ತಿರುವ ವಿಷಯ ಹೇಳಿಯೇಬಿಟ್ಟ ಸಹನಾ!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಉತ್ತಮವಾಗಿ ಮೂಡಿ ಬರುತ್ತಿದ್ದು ನೋಡುಗರ ಗಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸಹನಾ ಗೆಳತಿ ರೋಡಿನಲ್ಲಿ ಆಕೆಯ ಗೆಳತಿಯೊಂದಿಗೆ ನಡೆದುಕೊಂಡು ಹೋಗುತ್ತ ಇರುವಾಗ ರೋಡ್ ರೋಮಿಯೋಗಳು ಚುಡಾಯಿಸುತ್ತಾರೆ. ಮುಂಚೆ ಎಲ್ಲಾ ಸಹನಾ ನನ್ನ ಜೊತೆ ಇದ್ದರೂ ಆದರೆ ಈಗ ಯಾರು ಇಲ್ಲ ಎಂದೆಲ್ಲ ಹೇಳುತ್ತ ಇರುತ್ತಾಳೆ. ರೋಡಲ್ಲಿ ಸಹನಾ ಗೆಳತಿಗೆ ಚುಡಾಯಿಸುತ್ತ ಇರುತ್ತಾರೆ.

ಆ ವೇಳೆ ಅಲ್ಲಿಗೆ ಬಂದ ಬಂಗಾರಮ್ಮ ನೋಡಿ ರೋಡ್ ರೋಮಿಯೋಗಳು ಓಡಿ ಹೋಗುತ್ತಾರೆ. ಬಂಗಾರಮ್ಮ ಸಹನಾ ಗೆಳತಿಯನ್ನು ಪುಟ್ಟಕ್ಕನ ಮಗಳು ಎಂದು ಮಾತನಾಡಿಸುತ್ತಾರೆ. ಏನಮ್ಮ ಚೆನ್ನಾಗಿ ಇದ್ದೀಯಾ, ಚೆನ್ನಾಗಿ ಓದಿಕೊ, ಬಾ ಮನೆಯವರೆಗೆ ನಿನ್ನ ಬಿಡುತ್ತೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಹನಾ ಗೆಳತಿ ಬೇಡಮ್ಮ ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿದಾಗ ಬಂಗಾರಮ್ಮ ಅಲ್ಲಿಂದ ತೆರಳುತ್ತಾಳೆ. ಇನ್ನು ಸ್ನೇಹ ಬಳಿ ಸುಮಾ ಬಾಯಿ ಬಿಡಿಸುತ್ತಾ ಇರುತ್ತಾಳೆ. ಅಕ್ಕನಿಗೆ ಕೂಡ ಲವ್ ಆಗಿದೆ ಶ್ರೀ ಮೇಲೆ ಎಂದೆಲ್ಲ ಯೋಚನೆ ಮಾಡುತ್ತಾ ಸ್ನೇಹ ಬಳಿ ಹಲವು ಪ್ರಶ್ನೆಗಳನ್ನು ಇಡುತ್ತಾಳೆ. ಇದನ್ನು ಕೇಳಿಸಿಕೊಂಡ ಸ್ನೇಹಾ ಕೊನೆಗೆ ಸುಮಾ ಬಳಿ ಶ್ರೀಯನ್ನು ನಾನು ಪ್ರೀತಿ ಮಾಡುತ್ತಾ ಇದ್ದೇನೆ ಎಂದು ನಿಜ ವಿಚಾರವನ್ನು ಬಿಚ್ಚಿ ಇಡುತ್ತಾಳೆ. ಇದನ್ನು ಕೇಳಿಸಿಕೊಂಡ ಸುಮಾಗೆ ಬಹಳ ಖುಷಿ ಆಗುತ್ತದೆ

Kannada serial Puttakkana makkalu written update on 13th March

ಆ ವೇಳೆ ಚಂದ್ರು ಸ್ನೇಹಗೆ ಕರೆ ಮಾಡಿ ಏನು ಮಾಡುತ್ತಿದ್ದಿಯಾ ಸ್ನೇಹಾ ಓದಿನತ್ತ ಗಮನ ಹರಿಸು ಬೇರೆ ಯಾವ ಕಡೆಗೆ ಕೂಡ ಗಮನ ಹರಿಸಬೇಡ ಎಂದು ಹೇಳುತ್ತಾನೆ. ಆಗ ಸುಮಾ ಹುಡುಗಾಟ ಆಡಿಕೊಂಡು ಸಹನಾ ಅಕ್ಕನ ಟ್ರ್ಯಾಕ್ ಅನ್ನೆ ಸ್ನೇಹಾ ಅಕ್ಕ ಫಾಲೋ ಮಾಡುತ್ತಾ ಇದ್ದಾರೆ ಅಣ್ಣ ಎಂದಾಗ ಚಂದ್ರುಗೆ ಶಾಕ್ ಆಗುತ್ತದೆ. ಇದನ್ನೆಲ್ಲ ಕೇಳಿಸಿಕೊಂಡ ಸ್ನೇಹ ಏನೇನೋ ಸಬೂಬು ಹೇಳಿ ಸುಮ್ಮನೆ ಆಗುತ್ತಾಳೆ. ಆಗ ಚಂದ್ರುಗೆ ಬಹಳ ಅನುಮಾನ ಆಗುತ್ತದೆ. ಸ್ನೇಹಾ ಕಂಠಿ ಜೊತೆ ಲವ್ ನಲ್ಲಿ ಬಿದ್ದಿದ್ದಾಳ ಎಂದು ಅನುಮಾನ ಕಾಡುತ್ತದೆ. ಸ್ನೇಹಾ ಕರೆ ಕಟ್ ಮಾಡಿದ ಬಳಿಕ ಸುಮಾಳಿಗೆ ಬಯ್ಯುತ್ತಾ ಇರುತ್ತಾಳೆ

ಇದೇನು ಮಾಡುತ್ತಾ ಇದ್ದೀಯಾ ಸುಮಾ ಅಣ್ಣನ ಬಳಿ ಇದೆಲ್ಲ ಯಾಕೆ ಹೇಳುತ್ತ ಇದ್ದೀಯಾ ಎಂದಾಗ ಸುಮಾ ಅಣ್ಣ ಕೂಡ ನನಗೆ ಸಪೋರ್ಟ್ ಮಾಡುತ್ತಾರೆ ಇರಲಿ ಬಿಡು ಎಂದು ಹೇಳುತ್ತ ಯೋಚನೆ ಮಾಡುತ್ತಾ ಇರುತ್ತಾಳೆ. ಬಳಿಕ ಸುಮಾಗೆ ಸ್ನೇಹಾ ವಾರ್ನಿಂಗ್ ಮಾಡುತ್ತಾಳೆ. ಸುಮಾ ನೀನು ಮಾಡಿದ ಕಿತಾಪತಿ ಅಮ್ಮನಿಗೆ ಗೊತ್ತಾದರೆ ನಾನು ಸುಮ್ಮನೆ ಇರಲ್ಲ ಎಂದು ಹೇಳುತ್ತಾಳೆ. ಇನ್ನು ಇತ್ತ ಕಂಠಿ ಮುತ್ತುಗೆ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾನೆ.

Kannada serial Puttakkana makkalu written update on 13th March

ಮುತ್ತು ಭಯ ಪಟ್ಟುಕೊಂಡು ಕುಳಿತಿರುತ್ತಾನೆ. ಅಣ್ಣ ನನ್ನದು ಏನೂ ತಪ್ಪಿಲ್ಲ ಅಣ್ಣ ನನ್ನ ಯಾಕೆ ಇಲ್ಲಿ ಕರೆದುಕೊಂಡು ಬಂದಿದ್ದೀರಿ ಎಂದು ಭಯದಿಂದ ಮುತ್ತು ಕೇಳಿದಾಗ ಕೋಪಗೊಂಡ ಕಂಠಿ ಮುತ್ತು ಮುಖವನ್ನೇ ನೋಡುತ್ತಾ ಇರುತ್ತಾನೆ. ಆ ವೇಳೆ ಮುಂಗುಸಿ ಕುಡಿದ ಮತ್ತಿನಲ್ಲಿ ಅಣ್ಣನಿಗೆ ನಾವು ಏನು ಹೇಳುತ್ತ ಇದ್ದೇವೆ ಎಂಬುವುದು ತಿಳಿಯುತ್ತಿಲ್ಲ ಎಂದಾಗ ಕೋಪಗೊಂಡ ಕಂಠಿ ಮುತ್ತು ಮುಖ ನೋಡಿದಾಗ ಮುತ್ತು ಬಾಯಿ ಬಿಡುತ್ತಾನೆ.

ಮುತ್ತು ಸ್ನೇಹಾ ಅಕ್ಕನೆ ಹೇಳಿದ್ದು ನೀನು ದೊರೆ ಆಗಿ ನಾಟಕ ಮಾಡು ಎಂದೆಲ್ಲ ಹೇಳಿ ನಿಮಗೆ ಕರೆ ಮಾಡಲು ಹೇಳಿದಳು, ಆ ಕಾರಣಕ್ಕೆ ನಾನು ನಿಮಗೆ ಕರೆ ಮಾಡಿ ಹಾಗೆ ಮಾತನಾಡಬೇಕಾಯಿತು, ನನ್ನದು ಏನೂ ತಪ್ಪಿಲ್ಲ, ಅಷ್ಟಕ್ಕೂ ಆ ದೊರೆ ಯಾರು ಎಂದು ಗೊತ್ತಾದರೆ ಮಾತ್ರ ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿದಾಗ ಮುಂಗುಸಿ ದೊರೆ ಅಂದರೆ ನಮ್ಮ ಅಣ್ಣ ಎಂದಾಗ ಮುತ್ತುಗೆ ಮತ್ತೊಮ್ಮೆ ಶಾಕ್ ಆಗುತ್ತೆ. ಬಳಿಕ ಅಲ್ಲಿಂದ ಮುತ್ತುಗೆ ವಾರ್ನಿಂಗ್ ಮಾಡಿ ಕಳುಹಿಸುತ್ತಾರೆ.

ಇನ್ನು ಕಂಠಿ ಸ್ನೇಹಾ ಬಗ್ಗೆ ಯೋಚನೆ ಮಾಡುತ್ತಾ ಇರುತ್ತಾನೆ. ಹೀಗೆಲ್ಲ ಯಾಕೆ ಮಾಡಲು ಹೋದರು ನಾನೇ ನಿಜವಾದ ದೊರೆ ಎಂಬುವುದು ಸ್ನೇಹಾ ಅವರಿಗೆ ತಿಳಿದಿದ್ದರೂ ಯಾಕೆ ಹೀಗೆ ಮಾಡಿದರು ಎಂದಾಗ ಮುಂಗುಸಿ ಅಣ್ಣ ಇದು ಬೇರೆ ಎನು ಅಲ್ಲ ಲವ್ವೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಕಂಠಿಗೆ ಎಲ್ಲಾ ಕನ್ಫ್ಯೂಸ್ ಆಗುತ್ತದೆ. ಇನ್ನು ಸಹನಾ ಗಂಡ ದೇವಿಪುರಕ್ಕೆ ಹೋಗಿದ್ದಾನೆ. ಇನ್ನೂ ತಲುಪಿದ್ದಾರಾ ಅಥವಾ ಇಲ್ವಾ ಎಂಬುವುದು ತಿಳಿಯುತ್ತಾ ಇಲ್ಲ ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ತಾಯಿಯ ಕರೆ ಬರುತ್ತದೆ.

ಪುಟ್ಟಕ್ಕ ಮಗಳ ಬಳಿ ಬಹಳ ಖುಷಿಯಿಂದ ಮಾತನಾಡುತ್ತಾಳೆ. ಪುಟ್ಟಕ್ಕ ಸಹನಾ ಬಳಿ ನಾನೇ ನಿನಗೆ ಕರೆ ಮಾಡುತ್ತಾ ಇದ್ದರೆ ನಿಮ್ಮ ಅತ್ತೆ ಏನೇನೋ ಅಂದು ಕೊಳ್ಳುತ್ತಾರೆ ಅದಕ್ಕೆ ಸಮಯ ಆದಾಗ ನೀನೇ ನನಗೆ ಕರೆ ಮಾಡು ಎಂದಾಗ ಸಹನಾಗೆ ಬೇಸರ ಆಗುತ್ತದೆ. ಮೊಬೈಲ್‌ನಲ್ಲಿ ದುಡ್ಡು ಇಲ್ಲ, ಹೇಗೆ ನಾನು ಕರೆ ಮಾಡಲಿ ಎಂದು ಬೇಸರ ವ್ಯಕ್ತ ಪಡಿಸುತ್ತಾ ಇರುತ್ತಾಳೆ. ಸ್ನೇಹಾ ಕಂಠಿ ಕರೆ ಮಾಡುತ್ತಾ ಇರುತ್ತಾರೆ. ಆದರೆ ಕಂಠಿ ಕರೆ ಸ್ವೀಕರಿಸಿ ಮಾತನಾಡುವುದೇ ಇಲ್ಲ. ಇದನ್ನು ನೋಡಿದ ಸ್ನೇಹಾ ಸುಮಾ ಬಳಿ ಸುಮಾ ನಾನು ಅವರಿಗೆ ಬೇಸರ ಮಾಡಿದ್ದೇನೆ ಅದಕ್ಕೆ ಕರೆ ಸ್ವೀಕರಿಸಿ ಮಾತನಾಡಲು ಹಿಂದೇಟು ಹಾಕಿದ್ರಾ ಎಂದೆಲ್ಲ ಯೋಚನೆಯಲ್ಲಿ ಮುಳುಗುತ್ತಾರೆ.

More from Filmibeat

English summary
Kannada serial puttakkana makkalu written update on 13th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X