Puttakkana Makkalu: ಪುಟ್ಟಕ್ಕನ ಬಳಿ ಹಣ ಕೀಳಲು ಬಂದ ಕೌಸಲ್ಯಗೆ ಪಾಠ ಕಲಿಸಿದ ಕಂಠಿ

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಬಂಗಾರಮ್ಮ ಹಾಗೂ ನಂಜಮ್ಮನ ನಡುವೆ ಜಗಳ ಆಗುತ್ತಾ ಇದೆ. ಬಂಗಾರಮ್ಮ ತನ್ನ ಮಗಳ ಜೀವನ ಹಾಳು ಮಾಡಿ ಬಿಟ್ಟು ಇದೀಗ ಮಗನ ಜೀವನ ಕೂಡ ಹಾಳು ಮಾಡಲು ನೋಡುತ್ತಿದ್ದೀರಿ, ಇದು ಸರಿ ಅಲ್ಲ ನಾನು ಇದಕ್ಕೆ ಆಸ್ಪದ ಕೂಡ ಮಾಡಿಕೊಡುವುದಿಲ್ಲ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ನಂಜಮ್ಮಗೆ ಯಾರ ಬಗ್ಗೆ ಏನು ಹೇಳುತ್ತ ಇದ್ದಾಳೆ ನಾನು ಯಾಕೆ ಇವರ ಮಗನ ಬಗ್ಗೆ ಯೋಚನೆ ಮಾಡಲಿ ಎಂದೆಲ್ಲ ಹೇಳುತ್ತ ಇರುತ್ತಾಳೆ. ಇನ್ನು ನಂಜಮ್ಮ ಅರ್ಥ ಆಗದೆ ಇರುವ ಹಾಗೆ ಬಂಗಾರಮ್ಮನ ಮುಖ ನೋಡಿದಾಗ ಆಕೆ ಪ್ರೋಫ್ ತೋರಿಸುತ್ತಾಳೆ. ಅದರಲ್ಲಿ ಕಂಠಿ ಸ್ನೇಹಾಗೆ ಲವ್ ಪ್ರಪೋಸ್ ಮಾಡುತ್ತಾ ಇದ್ದ ವಿಡಿಯೋ ಇರುತ್ತದೆ.

Kannada serial Puttakkana Makkalu written update on 14th april

ಆಗ ನಂಜಮ್ಮಗೆ ಅರೆ ಇದು ಪುಟ್ಟಕ್ಕನ ಮಗಳು ಸ್ನೇಹಾ ಅಲ್ವಾ, ಈ ಬಂಗಾರಮ್ಮಗೆ ಪುಟ್ಟಕ್ಕನ ಮಗಳು ಯಾರು ಎಂಬುವುದು ತಿಳಿದಿಲ್ಲ ಅನ್ನಿಸುತ್ತದೆ ಎಂದು ಆಲೋಚನೆ ಮಾಡುತ್ತಾ ಇರುವಾಗ ಬಂಗಾರಮ್ಮ ಕೊಂಚ ಏರು ಧ್ವನಿಯಲ್ಲಿ ಮಾತನಾಡುತ್ತಾಳೆ. ಬಳಿಕ ಅಲ್ಲಿಂದ ಹೊರ ನಡೆದು ಬಿಡುತ್ತಾಳೆ. ನಂಜಮ್ಮ ಮನದಲ್ಲಿ ಅದೇ ಅಂದುಕೊಂಡೆ ಕಂಠಿ ಪುಟ್ಟಕ್ಕನ ಮನೆಯಲ್ಲಿ ಜಾಂಡ ಹೂರುತ್ತ ಇರುವುದನ್ನು ನೋಡಿ ಎಂದು ಕೊಂಡೆ ಇಲ್ಲಿ ಏನೋ ನಡೆಯುತ್ತಿದೆ ಎಂದು ಆದರೆ ಯಾರು ಎನು ನನ್ನ ಬಳಿ ಹೇಳಲಿಲ್ಲ ಎಂದುಕೊಳ್ಳುತ್ತಾಳೆ.

ಇನ್ನು ಸ್ನೇಹಾಗೆ ಓದಲು ಕಂಠಿ ಸಹಾಯ ಮಾಡುತ್ತಾ ಇರುತ್ತಾನೆ. ಆ ವೇಳೆ ಪುಟ್ಟಕ್ಕ ಕೌಸಲ್ಯ ಬಂದಿರುವ ವಿಚಾರವನ್ನು ಕಂಠಿ ಬಳಿ ಹೇಳುತ್ತಾಳೆ. ಕಂಠಿ ಸ್ನೇಹಾ ಬಳಿ ನನಗೆ ಒಂದು ಕೆಲಸ ಬಂತು ನಾನು ಹೋಗುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನು ಪುಟ್ಟಕ್ಕ ಕೌಸಲ್ಯ ಬಳಿ ಮಾತನಾಡುತ್ತಾ ಇರುತ್ತಾಳೆ. ಇವತ್ತು ದುಡ್ಡು ಬರುತ್ತೆ ಅಲ್ವಾ ಎಂದು ಹೇಳಿದಾಗ ಪುಟ್ಟಕ್ಕ ಭಯ ಪಟ್ಟುಕೊಂಡು ಕುಳಿತಿರುತ್ತಾಳೆ.

Kannada serial Puttakkana Makkalu written update on 14th april

ಅಷ್ಟರಲ್ಲಿ ಅಲ್ಲಿಗೆ ಕಂಠಿ ಬರುತ್ತಾನೆ. ಕಂಠಿಯನ್ನು ನೋಡಿದ ಕೌಸಲ್ಯ ಈತ ಯಾಕೆ ಬಂದ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಇನ್ನು ಕಂಠಿ ನೇರವಾಗಿ ಪುಟ್ಟಕ್ಕನ ಬಳಿ ಬಂದು ಕುಳಿತುಕೊಂಡು ಮಾತನಾಡುತ್ತಾನೆ. ನೋಡಿ ನಿಮಗೆ ಹಣ ಕೊಟ್ಟಿದ್ದೇವೆ ನೀವು ಪದೇ ಪದೇ ಬಂದು ಈ ರೀತಿ ಮಾತನಾಡುವುದು ಸರಿ ಅಲ್ಲ ಎಂದು ಹೇಳುತ್ತಾನೆ. ಆದರೆ ಕೌಸಲ್ಯ ಒಪ್ಪಲು ರೆಡಿ ಇರಲಿಲ್ಲ. ಆಗ ಆಕೆಯ ಗಂಡನನ್ನು ಕರೆಸುತ್ತಾನೆ.

ಆಗ ತನ್ನ ಗಂಡನನ್ನು ನೋಡಿದ ಕೌಸಲ್ಯ ಕಕ್ಕಾಬಿಕ್ಕಿ ಆಗುತ್ತಾಳೆ. ಇನ್ನು ಕೌಸಲ್ಯ ಗಂಡನ ಬಳಿ ಹಣ ಕೊಟ್ಟಿದ್ದಾರ ಇಲ್ಲವೋ ಎಂಬುವುದನ್ನು ತಿಳಿದುಕೊಳ್ಳಲು ಹೇಳಿದಾಗ ಆತ ಹಣ ಕೊಟ್ಟಿದ್ದಾರೆ ಎಂದು ಹೇಳಿದಾಗ ಕೌಸಲ್ಯಗೆ ಶಾಕ್ ಆಗುತ್ತದೆ. ಇನ್ನು ಕಂಠಿ ಮನೆಯಿಂದ ಬೇಗ ಹೋಗುವಂತೆ ಸಿಗ್ನಲ್ ಕೊಟ್ಟಾಗ ಅಲ್ಲಿಂದ ಮೆತ್ತಗೆ ಇಬ್ಬರು ಹೋಗುತ್ತಾರೆ.

ಇನ್ನು ಚಿತ್ರ ಮಾತ್ರ ಸಹನಾ ಡ್ರೆಸ್ ಒಂದು ಬಿಡದ ಹಾಗೆ ಹಾಕಿಕೊಂಡು ಮರೆಯುತ್ತಾ ಇರುತ್ತಾಳೆ. ಇನ್ನು ಬ್ಯೂಟಿ ಪಾರ್ಲರ್‌ಗೆ ಹೋಗುತ್ತೇನೆ ಸಹನಾ ಎಂದು ಹೇಳಿ ಆಕೆಯ ಬಳಿ ಇದ್ದ ಒಡವೆಗಳನ್ನು ಹಾಕಿಕೊಂಡು ಅಲ್ಲಿಂದ ಹೋಗುತ್ತಾಳೆ. ಸಹನಳನ್ನು ಚಿತ್ರ ಬರಲು ಹೇಳಿದಾಗ ನನಗೆ ಕೆಲಸ ಇದೆ ಎಂದೆಲ್ಲ ಸಬೂಬು ಹೇಳಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ. ಇನ್ನು ಚಿತ್ರ ಗಂಡ ಸಹನಾ ಬಳಿ ಬಂದು ಆಕೆಗೆ ಸಹಾಯ ಮಾಡುವ ಹಾಗೆ ನಟಿಸಿ ಆಕೆಯ ಕೈ ಟಚ್ ಮಾಡಿದಾಗ ಸಹನಾಗೆ ಭಯ ಕೂಡ ಆಗುತ್ತದೆ. ಮುಂದೇನು ಕಾದು ನೋಡಬೇಕಿದೆ

More from Filmibeat

English summary
Kannada serial puttakkana makkalu written updated on 14th April
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X