Puttakkana Makkalu: ಪುಟ್ಟಕ್ಕನ ಬಳಿ ದುಡ್ಡು ಕೀಳಲು ಕೌಸಲ್ಯ ತಂತ್ರ; ಮುಂದೇನು ಮಾಡ್ತಾಳೆ ಪುಟ್ಟಕ್ಕ?

ಸ್ನೇಹಾ ಕಂಠಿ ಧ್ಯಾನದಲ್ಲಿ ಮುಳುಗಿದ್ದಾರೆ. ತಾನು ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸದನ್ನು ಕಂಡು ಕೊಂಚ ಬೇಸರ ವ್ಯಕ್ತ ಪಡಿಸುತ್ತಾರೆ. ಆ ವೇಳೆ ಮುರಳಿ ಮೇಷ್ಟ್ರು ಮನೆಗೆ ಬರುತ್ತಾರೆ. ಮೈಸೂರಿನಿಂದ ದೇವಿ ಪುರಕೆ ಬರುವ ವೇಳೆ ಸುಸ್ತು ಆಗಿರುತ್ತಾರೆ. ಇನ್ನು ಮುರಳಿ ಮೆಸ್ ನಲ್ಲಿ ಊಟ ಮಾಡೋಣ ಎಂದು ಹೇಳಿ ಮೆಸ್ ಬಳಿ ಬರುತ್ತಾನೆ. ಮುರಳಿಯನ್ನು ನೋಡಿದ ಪುಟ್ಟಕ್ಕ ನೀವು ಮೆಸ್ ನಲ್ಲಿ ಊಟ ಮಾಡುವುದು ಸರಿಯಲ್ಲ ಎಂದು ಹೇಳಿ ಪುಟ್ಟಕ್ಕ ಮನೆಯಲ್ಲಿ ಊಟ ಕೊಡುತ್ತಾರೆ.

ಊಟ ಮಾಡುತ್ತಾ ಪುಟ್ಟಕ್ಕ ಸಹನಾಳನ್ನು ಯಾವಾಗ ಕರೆದುಕೊಂಡು ಬರುತ್ತೀರಿ ಎಂದೆಲ್ಲ ಕೇಳುತ್ತಾರೆ. ಅದಕ್ಕೆಲ್ಲ ಮುರಳಿ ಉತ್ತರ ನೀಡುತ್ತಾನೆ. ಪರೀಕ್ಷೆ ಎಲ್ಲಾ ಹತ್ತಿರ ಬಂತು ಸಿಲೆಬಸ್ ಕಂಪ್ಲೀಟ್ ಮಾಡಬೇಕು ಆ ಕಾರಣಕ್ಕೆ ನಾನು ಬರಬೇಕಾಯಿತು ಎಂದೆಲ್ಲ ಸಬೂಬು ಹೇಳುತ್ತಾನೆ. ಇದೆಲ್ಲವನ್ನೂ ಕೇಳಿದ ಸ್ನೇಹಾ ಆದರೂ ನೀವು ಮಾಡಿದ್ದು ತಪ್ಪು ಬಾವ ಎಂದಾಗ ಪುಟ್ಟಕ್ಕ ಸ್ನೇಹಾ ಮಾತನ್ನು ಅರ್ಧದಲ್ಲಿ ತಡೆಯುತ್ತಾರೆ.

Kannada serial Puttakkana makkalu written update on 14th March

ಬಳಿಕ ಊಟ ಮಾಡಿ ಮುರಳಿ ಹೋಗುತ್ತಾರೆ. ಮರುದಿನ ಬೆಳಗ್ಗೆ ಶಾಂತಕ್ಕ ಗುಣಗಾಡುತ್ತ ಇರುತ್ತಾಳೆ. ಸಹನ ಇರಬೇಕಾದರೆ ಎಲ್ಲಾ ಕೆಲಸ ಮುಗಿದು ಹೋಗುತ್ತಿತ್ತು ಆದರೆ ಇದೀಗ ಎಂದೆಲ್ಲ ಹೇಳುವಾಗ ಸ್ನೇಹಾ ಆದರೆ ಈಗ ಕೂಡ ಎಲ್ಲಾ ಕೆಲಸ ನಡೆಯುತ್ತಿದೆ ಏನು ಚಿಂತೆ ಮಾಡುವ ಅಗತ್ಯ ಇಲ್ಲ ಎಂದೆಲ್ಲ ಸಮಾಧಾನ ಮಾಡುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಸಿದ್ದೇಶ್ ಹಾಗೂ ಆತನ ಗೆಳೆಯ ಇಬ್ಬರು ಬರುತ್ತಾರೆ.

ಮೆಸ್‌ನಲ್ಲಿ ತಿಂಡಿ ತಿನ್ನಲು ಬಂದು ಕುಳಿತುಕೊಳ್ಳುತ್ತಾರೆ. ಆದರೆ ಸ್ನೇಹಾ ಶ್ರೀ ಬರುವಿಕೆಗೆ ಕಾದು ಕುಳಿತಿರುತ್ತಾಳೆ. ಇದನ್ನು ಕಂಡ ಮುಂಗುಸಿ ಮೆತ್ತಗೆ ನಗುತ್ತಾನೆ. ಇನ್ನು ಸ್ನೇಹಾ ಮುಂಗುಸಿ ಬಳಿ ಶ್ರೀ ಬಗ್ಗೆ ವಿಚಾರ ಮಾಡಿದಾಗ ಮುಂಗುಸಿ ಸುಳ್ಳು ಹೇಳಿ ಭಯ ಬೀಳಿಸುತ್ತಾನೆ. ಇದನ್ನು ನೋಡಿದ ಮುಂಗುಸಿ ಅಕ್ಕನಿಗೆ ಭಯ ಆಗುತ್ತಿದೆ, ಆದಷ್ಟು ಬೇಗ ಇವರಿಬ್ಬರೂ ಒಂದಾಗಲಿ ಎಂದು ಮನದಲ್ಲಿ ಅಂದುಕೊಂಡಿರುತ್ತಾನೆ. ಬಳಿಕ ಅಲ್ಲಿಂದ ಹೊರಟು ಹೋಗುತ್ತಾರೆ.

Kannada serial Puttakkana makkalu written update on 14th March

ಸ್ನೇಹಾ ಮನದಲ್ಲಿ ಆತಂಕ ಮನೆ ಮಾಡಿರುತ್ತದೆ. ಏನು ಮಾಡುವುದು ಎತ್ತ ಎಂದು ತಿಳಿಯುವುದಿಲ್ಲ. ಬಳಿಕ ಸುಮಾ ಜೊತೆ ಸ್ನೇಹ ಕೂಡ ನಡೆದೇ ಹೋಗುತ್ತಾ ಇರುತ್ತಾಳೆ. ಇದನ್ನು ಕಂಡ ಸುಮಾ ಸುಮ್ಮನೆ ಓದುಕೊಳುವ ಹಾಗೆ ನಾಟಕ ಮಾಡುತ್ತ ಇರುತ್ತಾಳೆ. ಇನ್ನು ಸ್ನೇಹಾ ಶ್ರೀ ಗದ್ದೆಗೆ ಹೋಗಿ ಬರುತ್ತೇನೆ ಎಂದಾಗ ಸುಮಾ ಸ್ನೇಹಾ ಕಾಲು ಎಳೆಯುತ್ತಲೇ ಇರುತ್ತಾಳೆ.

ಇನ್ನು ಚಿತ್ರ ರೂಮ್ ನಲ್ಲಿ ಇರುವ ಕಬೋರ್ಡ್ ಓಪನ್ ಮಾಡುವ ವೇಳೆ ಆಕೆಗೆ ಕಂತೆ ಕಂತೆ ಹಣ ಸಿಗುತ್ತದೆ. ಆಕೆ ತನ್ನ ಗಂಡನ ಬಳಿ ಹಣದ ಬಗ್ಗೆ ವಿಚಾರಣೆ ಮಾಡುತ್ತಾಳೆ. ಅದನ್ನು ಕೇಳಿದ ಆಕೆಯ ಗಂಡ ಕೊಂಚ ಗಾಬರಿಗೊಂಡರು ಬಳಿಕ ಮಾವ ಕೊಟ್ಟದ್ದು ಎಂದು ನಿಜ ಬಾಯಿ ಬಿಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಕೌಸಲ್ಯ ಹಾಗೂ ಆಕೆಯ ಗಂಡ ಬರುತ್ತಾರೆ. ಹಣದ ಬಗ್ಗೆ ವಿಚಾರಣೆ ಮಾಡುತ್ತಾಳೆ. ಕೊನೆಗೆ ಪುಟ್ಟಕ್ಕನ ಬಳಿ ಹಣ ಪಡೆದದ್ದು ಎಂಬ ನಿಜ ವಿಚಾರ ಕೌಸಲ್ಯಗೆ ತಿಳಿಯುತ್ತದೆ.

ಬಳಿಕ ಮಾತನಾಡದೆ ಕುಪಿತಗೊಂಡ ಕೌಸಲ್ಯ ಹೀಗೆ ಯಾಕೆ ಮಾಡಿದಿರಿ ಎಂದೆಲ್ಲ ಪ್ರಶ್ನೆ ಮಾಡುತ್ತಾರೆ. ಆದರೂ ಆಕೆಯ ಗಂಡ ದುಡ್ಡು ಸಿಕ್ಕಾಗ ಬಿಡಬಾರದು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ. ಆ ವೇಳೆ ಚಿತ್ರ ಕೂಡ ನನಗೂ ಈ ದುಡ್ಡಿನಲ್ಲಿ ಭಾಗ ಬೇಕು ಎಂದೆಲ್ಲ ಹೇಳಿದಾಗ ಕೌಸಲ್ಯ ಹೊಟ್ಟೆ ಉರಿದು ಹೋಗುತ್ತದೆ. ಬಳಿಕ ಗಂಡ ಒಬ್ಬರನ್ನೇ ಪಾರ್ಕ್ ಗೆ ಕರೆದು ಮಾತನಾಡುತ್ತಾರೆ. ಪುಟ್ಟಕ್ಕ ನಮಗೆ ಹಣ ಕೊಟ್ಟದ್ದಕ್ಕೆ ಏನು ಸಾಕ್ಷಿ ಇಲ್ಲ, ಆದದ ಕಾರಣ ನಾವು 15 ಲಕ್ಷ ಪುನಃ ಹಣ ಕೇಳೋಣ ಆ ಪುಟ್ಟಕ್ಕಗೆ ಸರಿಯಾಗಿ ಪಾಠ ಕಲಿಸೋಣ ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಆಕೆಯ ಗಂಡನಿಗೆ ಏನು ಹೇಳಬೇಕು ಎಂದು ತಿಳಿಯದಾಗಿ ಹೋಗುತ್ತದೆ.

More from Filmibeat

English summary
Kannada serial puttakkana makkalu written updated on 14th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X