Puttakkana Makkalu: ರಾಜಿಗೆ ಕಪಾಳ ಮೋಕ್ಷ ಮಾಡಿದ ಗೋಪಾಲ, ಅತ್ತೆ ಮನೆಗೆ ಹೋಗಲ್ಲ ಎಂದ ಸಹನಾ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪುಟ್ಟಕ್ಕ ಇನ್ನಿಲ್ಲ ಎಂದೆಲ್ಲ ಅಂದುಕೊಂಡು ಇದ್ದವರಿಗೆ ಶಾಕ್ ಆಗಿದೆ. ಪುಟ್ಟಕ್ಕನನ್ನು ಕೊಲೆ ಮಾಡಬೇಕು ಎಂದು ಅದೆಷ್ಟೋ ಜನ ಸಂಚು ರೂಪಿಸಿಕೊಂಡಿರುತ್ತಾರೆ. ಅದರಲ್ಲಿ ರಾಜಿ ಹಾಗೂ ನಂಜಮ್ಮ ಕೂಡ ಸೇರಿದ್ದಾರೆ. ಪುಟ್ಟಕ್ಕನನ್ನೂ ಕಂಡರೆ ರಾಜಿಗೆ ಅಷ್ಟಕಷ್ಟೆ. ಸ್ವಲ್ಪ ಕೂಡ ಪುಟ್ಟಕ್ಕನನ್ನ ಕಂಡರೆ ಆಗಲ್ಲ.
ತಾನು ಮಾಡಿದ ಸಂಚಿಗೆ ಗಂಡನೇ ಅಡ್ಡಿ ಆಗಿದ್ದಾನೆ ಎಂದು ತಿಳಿದರೆ ರಾಜಿ ಮಾತ್ರ ಯಾವತ್ತೂ ಸುಮ್ಮನೆ ಕುಳಿತುಕೊಳ್ಳುವವಳು ಅಲ್ಲ. ರಾಜಿ ಮನೆಗೆ ಬಂದ ನಂಜಮ್ಮ ಪ್ಲಾನ್ ಫ್ಲಾಪ್ ಆದ ಬಗ್ಗೆ ಮಾತನಾಡುತ್ತಾ ಇರುತ್ತಾರೆ. ಕಾಳಿಯ ಬಳಿ ರಾಜಿ ಪ್ರಶ್ನೆಯ ಮೇಲೆ ಪ್ರಶ್ನೆ ಮಾಡುತ್ತಿರುತ್ತಾಳೆ. ಹಾಗೆಯೇ ಈ ಕೊಲೆ ಮಾಡಲು ಯಾಕೆ ಸಾಧ್ಯ ವಾಗಿಲ್ಲ ಎಂದೆಲ್ಲ ಕೇಳುತ್ತಿರುತ್ತಾರೆ.

ಇನ್ನು, ಪುಟ್ಟಕ್ಕನನ್ನೂ ಕೊಲ್ಲುವ ವಿಚಾರ ನಮಗೆ ಮಾತ್ರ ತಿಳಿದಿತ್ತು. ಅಷ್ಟಕ್ಕೂ ಕಂಠಿಗೆ ಯಾರು ಈ ವಿಚಾರ ತಿಳಿಸಿದ್ದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ಆ ವೇಳೆ ಅಲ್ಲಿಗೆ ಗೋಪಾಲ ಬರುತ್ತಾನೆ . ಪುಟ್ಟಕ್ಕನನ್ನೂ ಕೊಲ್ಲುವ ಸಂಚು ಮಾಡಿದುದರ ಬಗ್ಗೆ ಗೋಪಾಲ ಬಹಳ ಸಿಟ್ಟು ಮಾಡಿಕೊಂಡಿರುತ್ತಾನೆ.
ರಾಜಿ ಮೇಲೆ ಕೋಪಗೊಂಡ ಗೋಪಾಲ
ಇಷ್ಟರವರೆಗೆ ರಾಜಿ ಮೇಲೆ ಕೈ ಎತ್ತದ ಗೋಪಾಲ ರಾಜಿ ಕೆನ್ನೆಗೆ ಜೋರಾಗಿ ಹೊಡೆಯುತ್ತಾನೆ. ಇದನ್ನು ಪ್ರಶ್ನೆ ಮಾಡಿದ ಕಾಳಿ ಕೆನ್ನೆಗೆ ಇನ್ನೆರಡು ಪೆಟ್ಟು ಬೀಳುತ್ತದೆ. ಇನ್ನು ಗಂಡನ ಕೋಪ ನೋಡಿದ ರಾಜಿಗೆ ಮಾತ್ರ ಕೊಂಚ ಆಶ್ಚರ್ಯ ಆಗುತ್ತದೆ. ಹಾಗೆಯೇ ಶಾಕ್ ಆಗುತ್ತದೆ. ಗೋಪಾಲನ ಕೋಪ ಕಂಡು ನಂಜಮ್ಮ ಬೆದರಿ ಹೋಗುತ್ತಾಳೆ.
ಧೈರ್ಯದ ಮಾತುಗಳನ್ನು ಹೇಳಿ ಮಕ್ಕಳನ್ನು ಹುರಿದುಂಬಿಸಿದ ಪುಟ್ಟಕ್ಕ
ಇನ್ನು ಪುಟ್ಟಕ್ಕನ ಮಕ್ಕಳು ಮಾತ್ರ ಇನ್ನೂ ಆತಂಕದಿಂದ ಹೊರಗೆ ಬಂದ ಹಾಗೆ ಕಾಣುತ್ತಿಲ್ಲ . ಅಷ್ಟರಲ್ಲಿ ಅಲ್ಲಿಗೆ ಕೌಸಲ್ಯ ಬರುತ್ತಾಳೆ . ಪುಟ್ಟಕ್ಕನ ಆರೋಗ್ಯ ವಿಚಾರಣೆ ಮಾಡಿದ ಬಳಿಕ ಸಹನಳನ್ನು ಮನೆಗೆ ಬರುವಂತೆ ಹೇಳುತ್ತಾಳೆ. ಹಾಗೆಯೇ ಕಾಲೇಜಿನಿಂದ ಮುರಳಿ ಇಲ್ಲಿಗೆ ಕೂಡ ಬರಬೇಕು ಅವನಿಗೆ ಕಷ್ಟ ಆಗುತ್ತದೆ. ನೀನು ಮನೆಗೆ ಬಾ ಎಂದು ಹೇಳಿದಾಗ ಸಹನಾ ಕಡ್ಡಿ ಮುರಿದ ಹಾಗೆ ಮಾತನಾಡುತ್ತಾಳೆ.

ಅತ್ತೆ ಮನೆಗೆ ಹೋಗಲು ಒಪ್ಪದ ಸಹನಾ
ಖಂಡಿತವಾಗಿ ನಾನು ಬರುವುದಿಲ್ಲ ಎಂದು ಹೇಳಿದಾಗ ಪುಟ್ಟಕ್ಕಗೆ ಆತಂಕ ಆಗುತ್ತದೆ. ಇನ್ನು ಕೌಸಲ್ಯ ಮನೆಯಿಂದ ಹೋದ ಬಳಿಕ ಪುಟ್ಟಕ್ಕ ಮಕ್ಕಳಿಗೆ ಸಮಾಧಾನ ಮಾಡುತ್ತಾಳೆ . ಹಾಗೆಯೇ ಇನ್ನೂ ಅಮ್ಮನನ್ನು ಹೆಚ್ಚು ಅವಲಂಬಿತರಾಗಿರಬಾರದು. ಸವಾಲುಗಳನ್ನು ಎದುರಿಸಬೇಕು . ನಾನು ಯಾವಾಗ ಬಿದ್ದು ಹೋಗುತ್ತೇನೆ ಗೊತ್ತಿಲ್ಲ ಆದ ಕಾರಣ ಎಲ್ಲವನ್ನೂ ಎದುರಿಸಬೇಕು ಎಂದಾಗ ಸಹನಾ ಬಹಳ ದುಃಖ ಪಡುತ್ತಾಳೆ.
ಅಮ್ಮನ ಮಾತಿಗೆ ದುಃಖ ಪಟ್ಟ ಸಹನಾ
ಆಕೆ ಅಮ್ಮನ ಜೊತೆಯೇ ಇದ್ದವಳು. ಇದೀಗ ಅಮ್ಮನನ್ನು ಬಿಟ್ಟು ಬೇರೆ ಹೋಗಬೇಕು ಎಂದು ಅಂದುಕೊಂಡಾಗ ದುಃಖ ಆಗುತ್ತದೆ. ಬಳಿಕ ಸುಮಾ ಮುರಳಿ ಬಗ್ಗೆ ಮಾತನಾಡುತ್ತಾ ಇರುತ್ತಾ.ಳೆ ಆದರೆ ಮುರಳಿ ಬೇರೆ ಹೆಂಗಸಿನ ಜೊತೆ ಇದ್ದಿದ್ದನ್ನು ಕಂಡು ಸಹನಾ ಮಾತ್ರ ಬಹಳ ಕೋಪ ಮಾಡಿಕೊಂಡಿರುತ್ತಾಳೆ. ಇನ್ನು ಆ ಹೆಂಗಸಿನ ಬಗ್ಗೆ ಮಾತನಾಡಿದಾಗ ಸಹನಾ ಮುಖದಲ್ಲಿ ಇದ್ದ ದುಃಖವನ್ನು ಪುಟ್ಟಕ್ಕ ಅರಿತುಕೊಂಡು ಆತಂಕ ಪಡುತ್ತಾರೆ.


Click it and Unblock the Notifications











