Puttakkana Makkalu: ಸ್ನೇಹಾ ರೂಮ್‌ನಲ್ಲಿ ಕಂಠಿಯನ್ನು ಕಂಡು ಶಾಕ್ ಆದ ಬಂಗಾರಮ್ಮ!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಇದೀಗ ನೋಡುಗರ ಮನ ಸೆಳೆಯುತ್ತಿದೆ. ಕಾರಣ ಕಂಠಿ ಹಾಗೂ ಸ್ನೇಹಾ ಮದುವೆ. ಎಲ್ಲರೂ ಕೂಡ ರಾತ್ರಿ 7.30 ಕ್ಕೇ ಸರಿಯಾಗಿ ಟಿವಿ ಮುಂದೆ ಕುಳಿತಿರುತ್ತಾರೆ. ಯಾಕೆಂದರೆ ಕಂಠಿ ಹಾಗೂ ಸ್ನೇಹಾ ಮದುವೆ ನಡೆಯುತ್ತಾ ಎಂದು ಕಾತರದಿಂದ ಧಾರಾವಾಹಿ ವೀಕ್ಷಣೆ ಮಾಡುತ್ತಾ ಇರುತ್ತಾರೆ. ಕಂಠಿ ಸ್ನೇಹಾ ಫೋಟೋ ಬಳಿ ಮಾತನಾಡಿ ನೇರವಾಗಿ ಮದುವೆ ಮಂಟಪದತ್ತ ಬರುತ್ತಾನೆ ಬಂಗಾರಮ್ಮ ಕಂಠಿ ಬರಲಿಲ್ಲ ಎಂದು ಬಹಳ ಭಯ ಪಟ್ಟುಕೊಂಡು ಎದುರು ನೋಡುತ್ತಾ ಇರುತ್ತಾಳೆ.

ಆ ವೇಳೆ ಕಂಠಿ ಅತ್ತೆ ಅಲ್ಲಿಗೆ ಬಂದು ರಾಧ ಹೊರಟು ರೆಡಿ ಆಗಿದ್ದಾಳೆ ಆದರೆ ಕಂಠಿ ಎಲ್ಲಿ ಕಾಣಿಸುತ್ತಿಲ್ಲ ಎಂದು ಕೇಳಿದಾಗ ಬಂಗಾರಮ್ಮ ಏನೇನೋ ಸಬೂಬು ಹೇಳುತ್ತ ಇದ್ದದ್ದನ್ನು ನೋಡಿದ ಕಂಠಿ ಅತ್ತೆಗೆ ಏನೆಂದು ಅರ್ಥ ಆಗದೆ ಸುಮ್ಮನೆ ನಿಂತುಕೊಂಡಿರುತ್ತಾಳೆ. ಆ ಬಳಿಕ ಕಂಠಿ ಮೆತ್ತಗೆ ಬರುತ್ತಿರುವುದನ್ನು ಕಂಡ ಬಂಗಾರಮ್ಮಗೆ ಕೊಂಚ ತಲೆ ನೋವು ಆಗುತ್ತಾ ಇರುತ್ತಿತ್ತು.

Kannada serial Puttakkana Makkalu written update on 15th june

ಬಳಿಕ ಕಂಠಿ ಬಳಿ ಹೊರಟು ಬರಲು ಹೇಳುತ್ತಾಳೆ. ಕಂಠಿ ಆಯಿತು ಎಂದು ಡ್ರೆಸ್ಸಿಂಗ್ ರೂಮ್ ನತ್ತ ಹೋಗುತ್ತಾನೆ. ಆಗ ಕರೆಂಟ್ ಬೇರೆ ಹೋಗುತ್ತದೆ. ಆ ವೇಳೆ ಕಂಠಿಗೆ ಸುಮಾ ಹಾಗೂ ಪುರುಷೋತ್ತಮ ಸಿಗುತ್ತಾರೆ. ಅವರು ಕಂಠಿ ಬಳಿ ಶ್ರೀ ಅವರೇ ರೂಮ್ ಗಾಗಿ ಹುಡುಕಾಟ ಮಾಡುತ್ತಾ ಇದ್ದೀರಾ ಇದುವೇ ನಿಮ್ಮ ರೂಮ್ ಎಂದು ತೋರಿಸುತ್ತಾರೆ.

ಕಂಠಿ ಆ ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡು ಹಿಂದೆ ತಿರುಗಿ ನೋಡಿದಾಗ ಬೆಳಕು ಕಂಡು ಗಾಬರಿ ಆಗುತ್ತಾನೆ. ಯಾರು ಎಂದು ಜೋರಾಗಿ ಕೂಗಿಕೊಂಡಾಗ ಸ್ನೇಹಾ ದೀಪ ಹಿಡಿದು ನಿಂರುತ್ತಾತಿಳೆ. ಸ್ನೇಹಾಳನ್ನು ನೋಡಿದಾಗ ಕಂಠಿಗೆ ಬಹಳ ಖುಷಿ ಆದರೂ ತೋರಿಸಿಕೊಳ್ಳಲ್ಲ. ಕಂಠಿ ವಾಪಸ್ ಬಾಗಿಲು ತೆಗೆಯಲು ನೋಡಿದಾಗ ಬಾಗಿಲು ಎಷ್ಟೇ ತೆಗೆದರು ಬರುತ್ತಿರಲಿಲ್ಲ.

ಇನ್ನು ಕಂಠಿ ಬಳಿ ಸ್ನೇಹಾ ಮಾತನಾಡುತ್ತಾ ಇರುತ್ತಾಳೆ. ಕಂಠಿ ಮಾದೇಶನಿಗೆ ಕರೆ ಮಾಡಲು ಹೇಳುತ್ತ ಇರುತ್ತಾನೆ. ಯಾಕೆಂದರೆ ಮೊಬೈಲ್ ಸ್ವಿಚ್ ಆಫ್ ಆಗಿ ಹೋಗಿರುತ್ತದೆ ಕಂಠಿ ಸ್ನೇಹಾ ಬಳಿ ಮಾದೇಶನಿಗೆ ಕರೆ ಮಾಡಲು ಹೇಳಿದಾಗ ಯಾವುದೋ ಒಂದು ಮೆಸೇಜ್ ಬರುತ್ತದೆ. ಅದನ್ನು ತೆಗೆದು ನೋಡಿದಾಗ ಅದರಲ್ಲಿ ಕಂಠಿ ಗದ್ದೆಯಲ್ಲಿ ತನ್ನ ಫೋಟೋದ ಮುಂದೆ ಮಾತನಾಡುತ್ತಾ ಇರುವುದನ್ನು ವಿಡಿಯೋ ಮಾಡಿ ಆಕೆಯ ಮೊಬೈಲ್‌ಗೆ ಕಳುಹಿಸಿರುತ್ತಾನೆ

ಕಂಠಿಗೆ ತಾನು ಮಾತನಾಡಿರುವುದನ್ನು ಯಾರು ವಿಡಿಯೋ ಮಾಡಿದ್ದಾರೆ ಎಂಬುವುದು ಗೊತ್ತಾಗದೆ ಬಹಳ ಕಷ್ಟ ಪಡುತ್ತ ಇರುತ್ತಾನೆ. ಇನ್ನು ಸ್ನೇಹಾ ಕೈಯಿಂದ ಮೊಬೈಲ್ ತೆಗೆದುಕೊಳ್ಳಲು ಹರಸಾಹಸ ಪಡುತ್ತಾನೆ. ಆಗಲೇ ಕಂಠಿ ಬಾಹುಗಳಲ್ಲಿ ಬಂಧಿ ಆಗಿ ಹೋಗಿರುತ್ತಾಳೆ ಸ್ನೇಹಾ. ಇನ್ನು ಸ್ನೇಹಾ ಅತ್ತೆ ಚಂದ್ರು ಜೊತೆ ಸ್ನೇಹಳನ್ನು ಕರೆದುಕೊಂಡು ಬನ್ನಿ ಎಂದು ಹೇಳುತ್ತಾಳೆ. ಆಗ ಚಂದ್ರು ಸುಮಾ ಬಳಿ ಸ್ನೇಹಾನಾ ಕರೆದುಕೊಂಡು ಬರಲು ಹೇಳುತ್ತಾಳೆ. ಸುಮಾ ಮೆತ್ತಗೆ ಅಕ್ಕನ ರೂಮ್ ಬಳಿ ಬಂದಾಗ ಡೋರ್ ಲಾಕ್ ಆಗಿರುವುದನ್ನು ನೋಡಿ ಕೊಂಚ ಭಯ ಪಟ್ಟುಕೊಂಡಿರುತ್ತಾಳೆ. ಸುಮಾ ಜೊತೆಗೆ ಇದ್ದ ಪುರುಷೋತ್ತಮ ಜೋರಾಗಿ ಕಿರುಚುತ್ತಾ ಇರುತ್ತಾನೆ. ಆಗ ಅಲ್ಲಿಗೆ ಎಲ್ಲರೂ ಓಡಿ ಬರುತ್ತಾರೆ.

ಸ್ನೇಹಾ ಹಾಗೂ ಕಂಠಿಗೆ ಸಿಕ್ಕಾಪಟ್ಟೆ ಭಯ ಆಗಿದ್ದರೂ ಅದಾವುದನ್ನು ತೋರ್ಪಡಿಸಿಕೊಳ್ಳದೆ ಸುಮ್ಮನೆ ನಿಂತಿರುತ್ತಾಳೆ. ಆ ಬಳಿಕ ಸ್ನೇಹಾ ಮೆತ್ತಗೆ ಡೋರ್ ತೆಗೆದು ಬರುತ್ತಾಳೆ. ಕಂಠಿ ಸ್ನೇಹಾ ಜೊತೆ ಕಾಣಿಸದೆ ಇದ್ದಿದ್ದನ್ನು ಕಂಡು ಪುರುಷೋತ್ತಮ ಕೊಂಚ ತಲೆ ಕೆಡಿಸಿಕೊಂಡಿರುತ್ತಾನೆ.ಸ್ನೇಹಾ ಮೆತ್ತಗೆ ಮದುವೆ ಮಂಟಪದತ್ತ ತೆರಳುತ್ತಾಳೆ. ಇನ್ನು ಎಲ್ಲರೂ ಅವರ ಹಿಂದೆ ಹೋದರೆ ನಂಜಮ್ಮ ಮಾತ್ರ ಅಲ್ಲಿಯೇ ನಿಂತಿರುತ್ತಾಳೆ. ಎಲ್ಲರೂ ಹೋದರು ಎಂದು ತಿಳಿದ ಕಂಠಿ ಮೆತ್ತಗೆ ಹೊರ ಬಂದು ನೋಡುತ್ತಾನೆ. ಆ ವೇಳೆ ಅಲ್ಲಿಯೇ ನಿಂತಿದ್ದ ಬಂಗಾರಮ್ಮಗೆ ಕಂಠಿಯನ್ನ ಕಂಡು ಶಾಕ್ ಆಗುತ್ತದೆ.

More from Filmibeat

English summary
Kannada serial puttakkana makkalu written updated on 15th june
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X