Puttkana Makkalu: ಕಂಠಿ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ ಹೇಳದ ಸ್ನೇಹಾ!

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ನೋಡುಗರಿಗೆ ಇದೀಗ ಮುದ ನೀಡುತ್ತಿದೆ. ಸ್ನೇಹಾ ಮಾಡಿದ ಪಜೀತಿಗೆ ಇದೀಗ ಕಂಠಿ ಸರಿಯಾಗಿ ಪಾಠ ಕಲಿಸುತ್ತ ಇದ್ದಾನೆ. ಸ್ನೇಹಾ ಕಂಠಿಯನ್ನು ಹುಡುಕುತ್ತಾ ತೋಟದ ಮನೆಗೆ ಬರುತ್ತಾಳೆ. ಆದರೆ ಅಲ್ಲಿ ಯಾರೂ ಇರುವುದಿಲ್ಲ, ತೋಟದ ಮನೆಗೆ ಬೀಗ ಹಾಕಿರುತ್ತಾರೆ. ಇನ್ನು ಸ್ನೇಹಾ ತೋಟ ಎಲ್ಲಾ ಸುತ್ತಾಡುತ್ತಾ ಇರಬೇಕಾದರೆ ಸಿದ್ದ ಹಾಗೂ ಆತನ ಗೆಳೆಯರು ಸ್ನೇಹಾಗೆ ಹೆದರಿಸಿ ಬಿಡುತ್ತಾರೆ.

ಆ ಬಳಿಕ ಸಿದ್ದೇಶ್ ಸ್ನೇಹಾ ಬಳಿ ಅಣ್ಣ ಇಲ್ಲ ಎಂದು ಹೇಳಿದ್ದೆ ಅಲ್ವಾ ಸಿಸ್ಟರ್ ಆದರೂ ಬಂದಿದ್ದೀರಿ ಅಲ್ವಾ ಎಂದಾಗ ಸ್ನೇಹಾ ಮುಖ ಬಾಡಿ ಹೋಗುತ್ತದೆ. ಆ ಬಳಿಕ ಅಲ್ಲಿಂದ ಸ್ನೇಹಾ ಹೋಗುತ್ತಾಳೆ. ಇನ್ನು ಮಾರ್ಕೆಟ್ ಬಳಿ ಕಂಠಿ ಹಾಗೂ ಆತನ ಗೆಳೆಯರು ಮಾತನಾಡುತ್ತಾ ಇರುತ್ತಾರೆ. ಸಿದ್ದೇಶ್ ಕಂಠಿ ಬಳಿ .. ಅತ್ತಿಗೆಗ ನಿನ್ನ ಮೇಲೆ ಲವ್ ಆಗಿದೆ ಯಾಕೆ ಎಂದರೆ ಇವತ್ತು ನೀನು ಮೆಸ್ ಗೆ ಕೂಡ ಬರಲಿಲ್ಲ ಹಾಗೆಯೇ ತೋಟದ ಮನೆಯಲ್ಲೂ ನೀನು ಇಲ್ಲದನ್ನು ಕಂಡು ಬಹಳ ಬೇಸರ ಪಟ್ಟುಕೊಂಡರು ಎಂದು ಹೇಳುತ್ತಾನೆ. ಇದನ್ನು ಕೇಳಿದ ಕಂಠಿಗೆ ಖುಷಿ ಆಗುತ್ತದೆ. ಆ ಬಳಿಕ ಕಂಠಿಗೆ ಎಲ್ಲರೂ ಹುರಿದುಂಬಿಸುತ್ತಿದ್ದಾರೆ.

Kannada serial Puttakkana Makkalu written update on 15th March

ಖಂಡಿತ ಅತ್ತಿಗೆ ನಿನ್ನ ಲವ್ ಮಾಡುತ್ತಾ ಇದ್ದಾರೆ. ಈಗ ನೀನು ಮೆಸ್ ಗೆ ಹೋದ ಕೂಡಲೇ ಅತ್ತಿಗೆ ಮೆಸ್ ನಿಂದಾ ಹೊರಗೆ ಬಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾರೆ,ನಿನ್ನ ಮಾತನಾಡಲು ಬಿಡಲೇ ಇಲ್ಲ ಎಂದು ಆದರೆ ಇದು ಖಂಡಿತವಾಗಿಯೂ ಲವ್ ನೀವು ಆ ಬಗ್ಗೆ ಎನು ಚಿಂತೆ ಮಾಡುವ ಅಗತ್ಯ ಇಲ್ಲ ಎಂದು ಹೇಳುತ್ತಾರೆ. ಇದನ್ನು ಕೇಳಿದ ಕಂಠಿ ನೇರವಾಗಿ ಮೆಸ್ ಬಳಿ.ಹೋಗುತ್ತಾನೆ..

ಕಂಠಿ ಬುಲೆಟ್ ಸೌಂಡ್ ಕೇಳಿದ ಕೂಡಲೇ ಸ್ನೇಹಾ ಮುಖದಲ್ಲಿ ನಗು ಚೆಲ್ಲುತ್ತದೆ. ಆ ಬಳಿಕ ಹೊರಗೆ ಬಂದು ಬಹಳ ಪ್ರಶ್ನೆ ಕೇಳುತ್ತಾಳೆ. ಇದನ್ನು ನೋಡಿದ ಕಂಠಿಗೆ ನಗು ಬರುತ್ತದೆ. ಆದರೂ ಅದನ್ನು ತಡೆದುಕೊಂಡು ಕಂಠಿ ಸುಮ್ಮನೆ ಇರುತ್ತಾನೆ. ಬಳಿಕ ಮಿಸ್ ನೀವು ಹೇಳಿದ್ದೀರಿ ಅಲ್ವಾ ನಿಮಗೆ ಒಳ್ಳೆಯ ಹುಡುಗಿ ಸಿಗುತ್ತಾಳೆ ಅಂತ ಹಾಗೆಯೇ ನನಗೆ ಒಳ್ಳೆಯ ಹುಡುಗಿ ಇದೀಗ ಸಿಕ್ಕಿದ್ದಾಳೆ ಅದಕ್ಕಾಗಿ ನಾನು ಬಹಳ ಖುಷಿಯಿಂದ ಇದ್ದೇನೆ ಎಂದಾಗ ಸಹನಾ ಖುಷಿ ಹಾರಿ ಹೋಗುತ್ತದೆ.

ಕಂಠಿ ಮಾತ್ರ ಯಾರು ಏನು ಎತ್ತ ಎನು ಹೇಳದೆ ಇದ್ದಾಗ ಸ್ನೇಹಾ ಯಾರು ಅವಳು ನನ್ನ ಅವಳಿಗೆ ಮೀಟ್ ಮಾಡಿಸುತ್ತಿರಾ ಎಂದು ಕೇಳಿದಾಗ ಕಂಠಿ ಮೀಟ್ ಮಾಡಿಸಬಹುದು ಆದರೆ ಅವರ ಪರ್ಮಿಷನ್ ಕೇಳಿ ನಿಮಗೆ ಹೇಳುತ್ತೇನೆ ಎಂದಾಗ ಸ್ನೇಹಾ ಅದರ ಅಗತ್ಯ ಇಲ್ಲ ಹಾಗಾದರೆ ಬೇಡ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕಂಠಿ ನಿಮಗೆ ರಾತ್ರಿ ಫೋನ್ ಮಾಡಿ ಹೇಳುತ್ತೇನೆ ಎಂದು ಹೇಳುತ್ತಾನೆ. ಬಳಿಕ ಅಲ್ಲಿಂದ ಮುನಿಸಿಕೊಂಡು ಬಾಯ್ ಎಂದು ಹೇಳಿ ಹೋಗುತ್ತಾಳೆ. ಇದನ್ನು ನೋಡಿದ ಕಂಠಿ ಜೋರಾಗಿ ನಗುತ್ತಾನೆ ..

ಇನ್ನು ತಾಯಿಯನ್ನು ಕರೆದುಕೊಂಡು ಚಂದ್ರು ಮಾರ್ಕೆಟ್‌ಗೆ ಹೋಗುತ್ತಾನೆ. ಆ ವೇಳೆ ನಂಜವ್ವ ತರಕಾರಿ ತೆಗೆದುಕೊಳ್ಳುತ್ತಾ ಇರುತ್ತಾರೆ. ಚಂದ್ರು ಮಾತ್ರ ಕಂಠಿನ ಏನಾದರು ಸ್ನೇಹಾ ಲವ್ ಮಾಡಲು ಶುರು ಮಾಡಿ ಬಿಟ್ಟರಾ ಅದಕ್ಕಾಗಿ ಏನಾದರು ಸುಮಾ ಹೀಗೆ ಹೇಳಿ ಇರಬಹುದ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾನೆ. ಆದರೆ ನಂಜಮ್ಮ ಚಂದ್ರುವನ್ನು ಮಾರ್ಕೆಟ್ ಒಳಗಿನಿಂದ ಕರೆಯುತ್ತಾರೆ. ಆದರೆ ಚಂದ್ರುಗೆ ಇದ್ಯಾವುದರ ಪರಿಜ್ಞಾನ ಇಲ್ಲದ ಹಾಗೆ ನಿಂತುಕೊಂಡು ಇರುವುದನ್ನು ಚಂದ್ರುವನ್ನೂ ಎಚ್ಚರಿಸಿ ಏನು ಯೋಚನೆ ಮಾಡುತ್ತಾ ಇದ್ದೀಯಾ ಏನೆಲ್ಲ ಹೇಳುತ್ತಾಳೆ. ಆ ಬಳಿಕ ಅಲ್ಲಿಂದ ಹೋಗುತ್ತಾರೆ.

ಇನ್ನು ಕಂಠಿ ಮೆಸ್ ನಿಂದ ಕೊಂಚ ದೂರ ಹೋದಾಗ ಸ್ನೇಹಾಗೆ ಮನಸು ತಡೆಯದೆ ಶ್ರೀ ಎಂದು ಕರೆಯುತ್ತಾಳೆ. ಸ್ನೇಹಾ ಹಿಂದಿರುಗಿ ನೋಡಿಕಂಠಿ ಸ್ನೇಹಾ ಬಳಿ ಬರುತ್ತಾನೆ. ಏನಾಯಿತು ಮಿಸ್ ಎಂದಾಗ ಸಮಾಧಾನ ಮಾಡಿಕೊಂಡ ಸ್ನೇಹಾ ಏನಿಲ್ಲ, ಆಲ್ ದೀ ಬೆಸ್ಟ್ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಕಂಠಿ ಹೋಗುತ್ತಾನೆ. ಇನ್ನು ರಾತ್ರಿ ಮೇಲೆ ಸ್ನೇಹಾಗೆ ಕರೆ ಮಾಡಿದ ಕಂಠಿ ನಾಳೆ ನಿಮ್ಮನ್ನು ಬರಲು ಹೇಳಿದಳು ನನ್ನ ಹುಡುಗಿ ಅದಕ್ಕೆ ಬರುತ್ತೀರಾ ಎಂದು ಕೇಳುತ್ತಾನೆ. ಅದಕ್ಕೆ ಸ್ನೇಹಾ ಸರಿ ಎಂದು ಹೇಳಿ ಫೋನ್ ಇಡುತ್ತಾಳೆ. ಮುಂದೇನು ಕಾದು ನೋಡಬೇಕಿದೆ.

More from Filmibeat

English summary
Kannada serial puttakkana makkalu written updated on 15th March
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X