Puttakkana Makkalu: ಮೇಷ್ಟ್ರ ಮೇಲೆ ಅನುಮಾನ ಪಟ್ಟ ಸಹನಾ

By Poorva

ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನಸೆಳೆಯುವ ಹಾಗೆ ಮಾಡುತ್ತಿದೆ. ಪುಟ್ಟಕ್ಕನನ್ನು ಮದುವೆ ಮಾತುಕತೆಗಾಗಿ ಕೌಸಲ್ಯ ಮನೆಗೆ ಕರೆಯುತ್ತಾಳೆ. ಪುಟ್ಟಕ್ಕನ ಬಳಿ ಇರುವ ಹಣವನ್ನು ಹೇಗಾದರೂ ಮಾಡಿ ತೆಗೆದುಕೊಳ್ಳಬೇಕು ಎಂಬುವುದು ಆಕೆಯ ಆಸೆ. ಇನ್ನು ಕೌಸಲ್ಯ ಕರೆದಳು ಎಂದು ಪುಟ್ಟಕ್ಕ ಆದಷ್ಟು ಬೇಗ ಅವರ ಮನೆಗೆ ಹೋಗುತ್ತಾಳೆ. ಪುಟ್ಟಕ್ಕಳನ್ನು ನೋಡಿದ ಕೌಸಲ್ಯ ಆಗಬಹುದು ಬಾರಿ ಬೇಗ ಬಂದ್ರಿ ಮನೆಯಲಿ ಏನೋ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದಿರಿ ಎಂದು ಹೇಳುತ್ತಾಳೆ.

ಆಗ ಪುಟ್ಟಕ್ಕ ಮನೆಯಲ್ಲಿ ಸುಣ್ಣ ಬಣ್ಣ ಬಳಿಯುತ್ತ ಇದ್ದೆ ಎಂದಾಗ ಹಿಂದುಗಡೆಯಿಂದ ರಾಜೇಶ್ವರಿ ಅದ್ರಲ್ಲೂ ದುಡ್ಡು ಉಳಿಸಿಕೊಳ್ಳುತ್ತಾ ಇದ್ದೀಯಾ ಪುಟ್ಟಕ್ಕ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಆಕೆಗೆ ರಾಜೇಶ್ವರಿ ಇರುವುದು ತಿಳಿದುರುವುದಿಲ್ಲ. ರಾಜೇಶ್ವರಿ ಪುಟ್ಟಕ್ಕನನ್ನು ಒಳಗೆ ಬರಲು ಹೇಳುತ್ತಾಳೆ. ಅದನ್ನು ಕೇಳಿದ ಪುಟ್ಟಕ್ಕ ಮೆತ್ತಗೆ ಒಳಗೆ ಬರುತ್ತಾಳೆ. ಕೌಸಲ್ಯ ಮದುವೆ ಮಾತುಕತೆಗೆ ರಾಜೇಶ್ವರಿ ಅವರು ಇರಲಿ ಎಂದು ಕರೆದಿದ್ದೆ ಎಂದು ಹೇಳುತ್ತಾಳೆ.

ಇದನ್ನು ಕೇಳಿದ ರಾಜೀ ನಾಟಕೀಯವಾಗಿ ಅರೆ ಕೌಸಲ್ಯ ಅವರೇ ನೀವೇನು ಕಾರಣ ಕೊಡಬೇಡಿ ಪುಟ್ಟಕ್ಕಗೆ ಎಲ್ಲಾ ತಿಳಿಯುತ್ತದೆ ಎಂದಾಗ ಮುರಳಿ ಮೇಷ್ಟ್ರ ತಂದೆ ಪುಟ್ಟಕ್ಕನನ್ನು ಕುಳಿತುಕೊಳ್ಳಲು ಹೇಳಿದರೂ ಪುಟ್ಟಕ್ಕ ಮಾತ್ರ ನಿಂತೇ ಇರುತ್ತಾಳೆ. ಬಳಿಕ ಎಲ್ಲರೂ ಒತ್ತಾಯ ಮಾಡಿ ಕುಳಿತುಕೊಳ್ಳಲು ಹೇಳಿದ ಬಳಿಕ ಕುಳಿತುಕೊಂಡು ಭೀಗರ ಮಾತುಗಳನ್ನು ಕೇಳುತ್ತಾರೆ. ಅವರು ಇಡುವ ಡಿಮ್ಯಾಂಡ್ ಗಳನ್ನೂ ಕೇಳಿ ಪುಟ್ಟಕ್ಕಗೆ ಏನು ಮಾಡಬೇಕು ತಿಳಿಯದಂತೆ ಆಗುತ್ತದೆ. ಇದೀಗ ವರದಕ್ಷಿಣೆ ರೂಪದಲ್ಲಿ ಕಾರು, ಒಡವೆ , ಬಟ್ಟೆ ಇವೆಲ್ಲವನ್ನೂ ಕೊಡಬೇಕು ಎಂದು ಮೇಷ್ಟ್ರ ಮನೆಯಲ್ಲಿ ಡಿಮ್ಯಾಂಡ್ ಇಟ್ಟಿದ್ದಾರೆ.. ಇದನ್ನು ಕೇಳಿದ ಪುಟ್ಟಕ್ಕಗೆ ಬಹಳ ಭಯ ಆಗುತ್ತದೆ.

ಕೌಸಲ್ಯಗೆ ರಾಜೇಶ್ವರಿ ಸಾಥ್

ಕೌಸಲ್ಯಗೆ ರಾಜೇಶ್ವರಿ ಸಾಥ್

ಇದಕ್ಕೆ ರಾಜೇಶ್ವರಿ ಸಾಥ್ ಬೇರೆ ಇದ್ದುದರಿಂದ ಸುಮ್ಮನೆ ಇರುತ್ತಾರೆ. ಬಳಿಕ ಎಲ್ಲಾ ಸೇರಿ ಎಷ್ಟು ಆಗಬಹುದು ಎಂದು ಪುಟ್ಟಕ್ಕ ಹೇಳಿದಾಗ 15 ಲಕ್ಷ ಆಗುತ್ತದೆ ಉಳಿದದ್ದು ಮತ್ತೆ ಹೇಳುತ್ತೇವೆ ಎಂದು ಹೇಳಿದಾಗ ಪುಟ್ಟಕ್ಕಾಗೆ ಎನು ಮಾಡಬೇಕು ತಿಳಿಯದೇ ಸುಮ್ಮನೆ ಇರುತ್ತಾರೆ. ಅಳು ಬರುತ್ತದೆ ಅದನ್ನೆಲ್ಲ ಕಂಟ್ರೋಲ್ ಮಾಡಿಕೊಂಡು ಸುಮ್ಮನೆ ಇರುತ್ತಾರೆ. ಇನ್ನೂ ಮನೆಯಲ್ಲಿ ಎಲ್ಲರೂ ಸುಣ್ಣ ಬಳಿಯುತ್ತ ಇರುತ್ತಾರೆ. ಈ ವೇಳೆ ಸ್ನೇಹಾ ಬಳಿ ಸಹನಾ ಬೆಂಕಿ ಪೊಟ್ಟಣ ಕೇಳುತ್ತಾಳೆ. ಆಗ ಮುಂಗುಸಿ ಜೋರಾಗಿ ಸಿಗರೇಟ್ ಎಳೆಯುವವರ ಬಳಿ ಮಾತ್ರ ಇದೆಲ್ಲ ಇರುವುದು ನಮ್ಮಂಥ ಒಳ್ಳೆಯ ಹುಡುಗರ ಬಳಿ ಇರುವುದಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಹನಾ ಸುಮ್ಮನೆ ಇರುತ್ತಾಳೆ.

ಮೇಷ್ಟ್ರ ಮೇಲೆ ಅನುಮಾನ ಪಟ್ಟ ಸಹನಾ

ಮೇಷ್ಟ್ರ ಮೇಲೆ ಅನುಮಾನ ಪಟ್ಟ ಸಹನಾ

ಆ ವೇಳೆ ಅಲ್ಲಿಗೆ ಮೇಷ್ಟ್ರು ಹಾಗೂ ಸುಮಾ ಬರುತ್ತಾರೆ. ಮೇಷ್ಟ್ರ ಬಳಿ ಬೆಂಕಿ ಪೊಟ್ಟಣ ಇದೆಯಾ ಎಂದು ಕೇಳಿದಾಗ ಮೇಷ್ಟ್ರು ಬೆಂಕಿ ಪೊಟ್ಟಣ ಇಲ್ಲ, ಆದರೆ ಲೈಟರ್ ಇದೆ ಎಂದು ಕೊಡುತ್ತಾರೆ. ಇದರಿಂದ ಅನುಮಾನ ಬರುತ್ತೆ. ಮೇಷ್ಟ್ರ ಕಾಲೇಜಿನಲ್ಲಿ ಎಕ್ಸ್ಪರಿಮೆಂಟ್ ಇತ್ತು ಅದಕ್ಕೆ ತೆಗೆದುಕೊಂಡು ಹೋಗಿದ್ದೆ ಎಂದು ಹೇಳಿದರು ಸಹನಾ ಮಾತ್ರ ಆಕೆಯ ಗೆಳತಿ ಹೇಳಿದ ವಿಚಾರವನ್ನು ನೆನಪು ಮಾಡಿಕೊಂಡು ಮೇಷ್ಟ್ರು ನನ್ನ ಬಳಿ ಸುಳ್ಳು ಹೇಳುತ್ತಿದ್ದಾರೆ ಎಂದು ಹೇಳಿ ಸ್ವಲ್ಪ ಕಠೋರವಾಗಿ ನಡೆದುಕೊಳ್ತಾಳೆ.‌ಇದನ್ನೆಲ್ಲ ನೋಡಿದ ಸ್ನೇಹಾ ಮೊನ್ನೆ ನೀವು ಮಾಡಿದ ಕೆಲಸಕ್ಕೆ ನನ್ನ ಬಳಿ ಕ್ಷಮೆ ಇದೆ ಎಂದು ಹೇಳುತ್ತಾಳೆ ಆದರೆ ಸಹನಾ ಮಾತ್ರ ಮುಖ ಊದಿಸಿಕೊಂಡು ಇರುತ್ತಾಳೆ..

ಮೇಷ್ಟ್ರ ಮಾತು ಕೇಳದ ಸಹನಾ

ಮೇಷ್ಟ್ರ ಮಾತು ಕೇಳದ ಸಹನಾ

ಏನೇ ಮಾಡಿದರೂ ಸಹನಾ ಮಾತ್ರ ಮೇಷ್ಟ್ರ ಬಳಿ ಮಾತನಾಡದೆ ಕಳುಹಿಸುತ್ತಾಳೆ.. ಆದರೆ ಸ್ನೇಹಾಳ ಕೆಲವು ಮಾತು ಕೇಳಿದ ಕಂಠಿಗೆ ಸ್ನೇಹಾಗೆ ನನ್ನ ಮೇಲೆ ಅನುಮಾನ ಬಂದಿರಬಹುದು ಎಂದು ಅಂದುಕೊಳ್ಳುತ್ತಾ ಇರುತ್ತಾನೆ. ಇತ್ತ ಪುಟ್ಟಕ್ಕ ತನ್ನ ಮಗಳು ಏನು ತಪ್ಪು ಮಾಡಿದಳು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಆಕೆಗೆ ಏನು ಮಾಡಲಿಲ್ಲ. ಇದೀಗ ಆಕೆ ಇಷ್ಟ ಪಟ್ಟಿರುವ ಹುಡುಗನನ್ನು ಮದುವೆ ಮಾಡೋಣ ಎಂದರೆ ಮೇಷ್ಟ್ರ ಮನೆಯವರ ಕಾಟ. ಏನು ಮಾಡುವುದು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ ಪುಟ್ಟಕ್ಕ.

More from Filmibeat

English summary
Kannada serial puttakkana makkalu written updated on 16th January
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X