Puttkkana Makkalu: ಸ್ನೇಹಾ - ಕಂಠಿ ದೂರ ದೂರ; ಭಾರವಾದ ಮನಸ್ಸಿನಿಂದ ಮದುವೆಗೆ ಸಜ್ಜಾದ ಜೋಡಿಹಕ್ಕಿಗಳು
ಪುಟ್ಟಕ್ಕನ ಮಕ್ಕಳು ಧಾರವಾಹಿ ನೋಡುಗರ ಮನಸೂರೆಗೊಳ್ಳುವ ಹಾಗೆ ಮಾಡುತ್ತಿದೆ. ಇದೀಗ ಕಂಠಿ ಹಾಗೂ ಸ್ನೇಹಾ ಒಂದೇ ರೂಮ್ ನಲ್ಲಿ ಇದ್ದರು ಎನ್ನುವ ವಿಚಾರ ಬಂಗಾರಮ್ಮ, ರಾಜೇಶ್ವರಿ, ನಂಜಮ್ಮ ಹಾಗೂ ಪುಟ್ಟಕ್ಕಾಗೆ ತಿಳಿದು ಹೋಯಿತು. ಕಂಠಿ ಎಲ್ಲರೂ ಹೋದರೆಂದು ಮೆತ್ತಗೆ ಬಾಗಿಲು ತೆಗೆದು ಬರುತ್ತಾನೆ.
ಆದರೆ ಅಲ್ಲಿಯೇ ನಂಜಮ್ಮ ಇರುತ್ತಾಳೆ. ಆಕೆ ಕಂಠಿಯನ್ನು ನೋಡಿ ಜೋರಾಗಿ ಕೂಗುತ್ತಲೇ ಇರುತ್ತಾಳೆ. ಅಯ್ಯೋ ಕಂಠಿ ನೀನು ಇಲ್ಲಿಯೇ ಇದ್ದೀಯಾ ಇಲ್ಲಿ ಏನು ಮಾಡುತ್ತಾ ಇದ್ದೆ ನೀನು ಎಂದು ಕೇಳಿದಾಗ ಅಲ್ಲಿಯೇ ರಾಜೀ, ಪುಟ್ಟಕ್ಕ, ಬಂಗಾರಮ್ಮಾ ಇರುತ್ತಾರೆ. ಅವರೆಲ್ಲ ಕಂಠಿಯನ್ನು ಸ್ನೇಹಾ ರೂಮ್ ಬಳಿ ನೋಡಿದಾಗ ಶಾಕ್ ಆಗುತ್ತದೆ.

ಇನ್ನು ರಾಜೇಶ್ವರಿ ಪುಟ್ಟಕ್ಕನ ಎದುರೇ ಬಂಗಾರಮ್ಮಳನ್ನು ಎತ್ತಿ ಕಟ್ಟಲು ನೋಡುತ್ತಾ ಇರುತ್ತಾಳೆ. ಆಗ ಕೋಪಗೊಂಡ ಬಂಗಾರಮ್ಮ ಕಂಠಿ ಬಳಿಯೇ ಕೇಳುತ್ತಾಳೆ. ಯಾಕೋ ಇಲ್ಲಿ ಇದ್ದೀಯಾ ಏನಾಯಿತು ಎಂದು ಕೇಳಿದಾಗ ಕಂಠಿ ನಾನು ಇಲ್ಲಿಗೆ ಬರುವ ವೇಳೆ ಕರೆಂಟ್ ಹೋಯಿತು, ಹಾಗೆ ನಾನು ತಪ್ಪಿ ಈ ರೂಮಿನ ಕಡೆ ಬರುವ ಹಾಗಾಯಿತು ಎಂದು ಹೇಳುತ್ತಾನೆ. ಇನ್ನು ಕಂಠಿ ಅಮ್ಮನ ಬಳಿ ನಡೆದ ವಿಚಾರ ತಿಳಿಸಿ ಡ್ರೆಸ್ಸಿಂಗ್ ರೂಮ್ ನತ್ತ ಹೋಗುತ್ತಾರೆ. ರಾಜೀ ಬಂಗಾರಮ್ಮನ ಬಳಿ ಏನೇ ಹೇಳಿದರು ಅದಕ್ಕೆ ಅಡ್ಡ ಬಾಯಿ ಅನ್ನುವ ಹಾಗೆ ನಂಜಮ್ಮ ಮಾತನಾಡುತ್ತಾಳೆ. ಇನ್ನು ನಂಜಮ್ಮ ಹಾಗೂ ರಾಜೀ ಅಲ್ಲಿಂದ ಹೋದ ಬಳಿಕ ಪುಟ್ಟಕ್ಕ ಬಂಗಾರಮಮ್ನ ಬಳಿ ಬರುತ್ತಾಳೆ.
ಪುಟ್ಟಕ್ಕ ಅಮ್ಮಾವರೇ ನನಗೆ ಈ ವಿಚಾರ ಸತ್ಯಗಳು ಗೊತ್ತಿಲ್ಲ ಎಂದು ಹೇಳಿದಾಗ ಬಂಗಾರಮ್ಮ ಏನು ಪುಟ್ಟಕ್ಕ ಕಂಠಿಯನ್ನು ಸ್ನೇಹಾ ಬೇಕು ಅಂತಲೇ ರೂಮ್‌ಗೆ ಕರೆದುಕೊಂಡು ಬಿಟ್ಟಳ ಎಂದು ಹೇಳಿದಾಗ ಪುಟ್ಟಕ್ಕ ಇಲ್ಲ ಅಮ್ಮಾವರೇ ಅವಳು ನನ್ನ ಮೇಲೆ ಆಣೆ ಮಾಡಿಸಿಕೊಂಡು ಇದ್ದಾಳೆ, ಅವಳು ಖಂಡಿತ ಈ ರೀತಿ ನಡೆದುಕೊಳ್ಳುವುದು ಇಲ್ಲ ಎಂದು ಹೇಳಿದಾಗ ಪುಟ್ಟಕ್ಕನ ಬಳಿ ಬಂಗಾರಮ್ಮ ಕೇಳುತ್ತಾರೆ ಮತ್ತೆ ನನ್ನ ಮಗ ನನ್ನ ಬಳಿ ಸತ್ಯ ಹೇಳಿದಳು
ಆದರೆ ನಿನ್ನ ಮಗಳು ಏನು ಹೇಳದೆ ಹೋದಳಲ್ಲ ಎಂದಾಗ ಪುಟ್ಟಕ್ಕಗೆ ಕೊಂಚ ನೋವು ಆಗುತ್ತದೆ. ಇನ್ನು ಕಂಠಿ ರೆಡಿ ಆದಾಗ ಮುಂಗುಸಿ ಬರುತ್ತಾನೆ. ಸ್ನೇಹಾಗೆ ಆ ವಿಡಿಯೋ ಕಳುಹಿಸಿದರಿಂದ ಕಂಠಿ ಸ್ವಲ್ಪ ಸಿಡುಕುತ್ತಾನೆ. ಬಳಿಕ ಆತನಿಗೆ ನೆನಪಾಗಿ ಕ್ಷಮೆ ಕೇಳಿ ಮಂಟಪಕ್ಕೆ ಹೋಗುತ್ತಾನೆ. ಕಂಠಿ ಮುಖದಲ್ಲಿ ಮದುಮಗನ ಕೆಳೆ ಇಲ್ಲದಾಗಿ ಹೋಗಿದೆ. ಇನ್ನು ರಾಧಾ ಮಾತ್ರ ಲಕ್ಷಣವಾಗಿ ಇರುತ್ತಾಳೆ. ಮೆತ್ತಗೆ ಕಂಠಿ ಕೈಯನ್ನು ಹಿಡಿದು ಹೆಜ್ಜೆ ಹಾಕುತ್ತಾಳೆ. ಕಂಠೀಗೆ ರಾಧಾ ಕೈ ಹಿಡಿದಿದ್ದು ಸ್ವಲ್ಪವೂ ಇಷ್ಟ ಆಗಲೇ ಇಲ್ಲ. ಇನ್ನು ಅವರಿಬ್ಬರನ್ನು ಡಾನ್ಸ್ ಮಾಡಲು ಹೇಳುತ್ತಾರೆ. ಅವರಿಬ್ಬರೂ ಮುದ್ದಾದ ಸಾಂಗ್‌ಗೆ ಡಾನ್ಸ್ ಮಾಡುತ್ತಾರೆ. ಕಂಠಿ ಮಾತ್ರ ಸ್ನೇಹಾ ಜೊತೇನೆ ಡಾನ್ಸ್ ಮಾಡುತ್ತಾ ಇದ್ದೇನೆ ಎನ್ನುವ ಹಾಗೆ ಫೀಲ್ ಮಾಡಿ ಡಾನ್ಸ್ ಮಾಡುವ ಹಾಗೆ ಕಾಣಿಸುತ್ತಿತ್ತು.
ಇನ್ನು ಕಂಠಿಗೆ ಕೊನೆಗೆ ತಾನು ಡಾನ್ಸ್ ಮಾಡಿದ್ದು ಸ್ನೇಹಾ ಜೊತೆ ಅಲ್ಲ ರಾಧಾ ಜೊತೆ ಎನ್ನುವ ಮನವರಿಕೆ ಆಯಿತು. ಇನ್ನು ಸ್ನೇಹಾ ಕೂಡ ಕಂಠಿ ಗುಂಗಲ್ಲೇ ಇರುತ್ತಾಳೆ. ಭುವನ್ ಗೆ ರಿಂಗ್ ಹಾಗೂ ಹಾರ ತೊಡಿಸಲು ಹಿಂದೇಟು ಹಾಕುತ್ತಿದ್ದಾರೆ. ಆ ಬಳಿಕ ತನ್ನ ತಾಯಿಯ ಮುಖ ನೋಡಿ ಭುವನ್ ಕುತ್ತಿಗೆಗೆ ಹಾರ ಹಾಕುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











