Puttakkana Makkalu: ತಾನು ಇಷ್ಟಪಡುತ್ತಿರುವ ಹುಡುಗಿ ತೋರಿಸುತ್ತೇನೆ ಎಂದು ಸ್ನೇಹಾ ಹೊಟ್ಟೆ ಉರಿಸುತ್ತಿರುವ ಕಂಠಿ!
ಪುಟ್ಟಕ್ಕನ ಮಕ್ಕಳು ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುವ ಹಾಗೆ ಮಾಡುತ್ತಿದೆ. ಇದೀಗ ಸ್ನೇಹಾಳನ್ನು ಕಂಠಿ ಸಖತ್ ಆಗಿ ಆಟ ಆಡಿಸುತ್ತಿದ್ದಾನೆ. ತನ್ನ ಹುಡುಗಿಯನ್ನ ಮೀಟ್ ಮಾಡಿಸಲು ಆಕೆಯ ಪರ್ಮಿಷನ್ ತೆಗೆದುಕೊಳ್ಳಬೇಕು ಎಂದು ಹೇಳಿದಾಗಿನಿಂದ ಆಕೆಯ ಮನಸ್ಸಿಗೆ ಬಹಳ ಬೇಸರವಾಗಿದೆ. ಏನು ಮಾಡುವುದಕ್ಕೂ ಆಕೆಗೆ ಇಷ್ಟ ಇಲ್ಲ, ಶ್ರೀಯ ಧ್ಯಾನದಲ್ಲಿ ಇರುತ್ತಾಳೆ. ಇನ್ನು ಸ್ನೇಹಾ ಸೋಫಾ ಮೇಲೆ ಕುಳಿತುಕೊಂಡು ಯೋಚನೆ ಮಾಡುತ್ತಾ ಇರುತ್ತಾಳೆ.
ನಾನು ಶ್ರೀ ಅವರಿಗೆ ಕೇವಲ ಫ್ರೆಂಡ್ ಮಾತ್ರ ಅವರ ಗೆಳತಿ ಅಷ್ಟೇ ಆದರೆ ಜೀವನ ಸಂಗಾತಿ ಬೇರೆಯವಳೆ ಇದ್ದಾಳೆ ಎಂದೆಲ್ಲ ಬೇಸರ ಪಟ್ಟುಕೊಂಡು ಇರುವಾಗ ಆಕೆಯನ್ನು ಸುಮಾ ಸಮಾಧಾನ ಮಾಡುತ್ತ ಇರುತ್ತಾಳೆ. ಇದೆಲ್ಲ ಕಾಮನ್ ಇದಕ್ಕೆಲ್ಲ ಬೇಸರ ಪಟ್ಟುಕೊಳ್ಳುವ ಅಗತ್ಯ ಇಲ್ಲ, ಏನು ಮಾಡಲು ಆಗುವುದಿಲ್ಲ, ನೀನು ಪ್ರೀತಿ ವಿಚಾರವನ್ನು ಕೊಂಚ ಬೇಗ ಹೇಳಿದ್ದರೆ ಚೆನ್ನಾಗಿರುತ್ತಿತ್ತು ಎಂದು ಗುಸು ಗುಸು ಮಾತನಾಡುತ್ತಾ ಇರುವ ವೇಳೆ ಪುಟ್ಟಕ್ಕ ಅಲ್ಲಿಗೆ ಬರುತ್ತಾಳೆ.

ಸ್ನೇಹಾ ಏನು ಯೋಚನೆ ಮಾಡುತ್ತಾ ಇದ್ದೀಯಾ ಎಂದಾಗ ಸುಮಾ ಏನು ಇಲ್ಲ ಅಮ್ಮ ಈಗ ಮನೆಗೆ ಚಪ್ಪರ ಹಾಕದೆ ಈ ಚಪ್ಪರ ತೆಗೆಯೋ ಮುಂಚೆಯೇ ಎಂದಾಗ ಸ್ನೇಹಾ ಸುಮಾಳ ಬಾಯಿ ಮುಚ್ಚುತ್ತಾಳೆ. ಬಳಿಕ ಸ್ನೇಹಾ ಏನು ಇಲ್ಲ ಅಮ್ಮ ನೀನು ಏನು ಬೇಸರ ಪಟ್ಟುಕೊಳ್ಳಬೇಡ ಈಕೆ ಸುಮ್ಮನೆ ಹೇಳುತ್ತ ಇದ್ದಾಳೆ, ನೀನು ಇದನ್ನೆಲ್ಲ ಕೇಳಿಕೊಳ್ಳಬೇಡ ಎಂದಾಗ ಪುಟ್ಟಕ್ಕ ಸರಿ ಸರಿ ನೀವು ಎಲ್ಲರೂ ಬನ್ನಿ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸ್ನೇಹಾ ಸರಿ ಎಂದು ಹೇಳುತ್ತಾಳೆ. ಇನ್ನು ಸ್ನೇಹಾ ರಾತ್ರಿ ಹೊತ್ತು ಕೂಡ ಶ್ರೀ ಜಪ ಮಾಡುತ್ತಾ ಇರುವಾಗ ಕಂಠಿ ಕರೆ ಮಾಡುತ್ತಾನೆ.
ಶ್ರೀ ಕರೆ ಮಾಡಿದ್ದಾರೆ ಎಂದು ಸ್ನೇಹಾ ಬಹಳ ಖುಷಿ ಪಡುತ್ತಾಳೆ ಆಗ ಸುಮಾ ಬೇಡ ಅಕ್ಕ ಕರೆ ಸ್ವೀಕರಿಸಿ ಬಿಡಬೇಡ . ಕೊಂಚ ಆಟ ಆಡಿಸೋಣ.. ಸ್ವಲ್ಪ ಹೊತ್ತಿನ ಬಳಿಕ ಕರೆ ಸ್ವೀಕರಿಸು ಎಂದು ಹೇಳುತ್ತಾರೆ ಇದನ್ನು ಕೇಳಿದ ಸ್ನೇಹಾ ಆಯಿತು ಎಂದು ಹೇಳಿ ಕೊನೆ ಕ್ಷಣದಲ್ಲಿ ಕರೆ ಸ್ವೀಕರಿಸಬೇಕು ಎನ್ನುವಷ್ಟರಲ್ಲಿ ಕರೆ ಕಟ್ ಆಗುತ್ತದೆ ಇದನ್ನು ನೋಡಿದ ಸ್ನೇಹಾ ಗೆ ಸುಮಾ ಮೇಲೆ ಕೋಪ ಬರುತ್ತದೆ .. ಬಳಿಕ ಕಂಠಿ ಪುನಃ ಕರೆ ಮಾಡುತ್ತಾರೆ ..ಆ ಕೂಡಲೇ ಸ್ನೇಹಾ ಕರೆ ಸ್ವೀಕರಿಸಿ ಮಾತನಾಡುತ್ತಾಳೆ ಅತ್ತ ಕಡೆಯಿಂದ ಕಂಠಿ ಹೇಳುತ್ತಾನೆ..

ಮಿಸ್ಸು ನಮ್ಮ ಹುಡುಗಿ ಒಪ್ಪಿಕೊಂಡಿದ್ದಾರೆ ನಿಮ್ಮನ್ನು ಅವರಿಗೆ ಮೀಟ್ ಮಾಡಿಸೋಣ ಎಂದು ಅಂದುಕೊಂಡಿದ್ದೇನೆ ಬರುತ್ತೀರಾ ಎಂದು ಕೇಳುತ್ತಾನೆ. ಇದನ್ನು ಕೇಳಿದ ಸ್ನೇಹಾಗೆ ಮನಸ್ಸು ಇಲ್ಲದೆ ಇದ್ದರೂ ಸರಿ ಆಯಿತು ಎಂದು ಒಪ್ಪಿಕೊಂಡು ಬಿಡುತ್ತಾಳೆ. ಆ ಬಳಿಕ ಕಂಠಿ ಕರೆ ಕಟ್ ಮಾಡುತ್ತಾನೆ. ಇನ್ನು ಸುಮಾ ಸ್ನೇಹಾಗೆ ಬಯ್ಯುತ್ತಲೇ ಇರುತ್ತಾಳೆ. ನೀನು ಯಾಕೆ ಅಕ್ಕ ಅವರ ಹುಡುಗಿಯನ್ನ ನೋಡಲು ಹೋಗಬೇಕು ಎಂದೆಲ್ಲ ಹೇಳಿದಾಗ ಸ್ನೇಹಾ ನಾನು ಆ ಹುಡುಗಿನ ನೋಡಲೇಬೇಕು ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಸುಮಾ ಸರಿ ಹೋಗೋದು ಹೋಗುತ್ತಿಯಾ ಒಳ್ಳೆಯ ಡ್ರೆಸ್ ಹಾಕಿಕೊಂಡು ಹೋಗು, ಆ ಹುಡುಗಿಗೆ ನಿನ್ನ ನೋಡಿ ಚುರುಕ್ ಅನ್ನಬೇಕು, ಹಾಗೆಯೇ ಶ್ರೀ ಅವರಿಗೆ ಕೂಡ ಇಂಥ ಒಳ್ಳೆ ಹುಡುಗಿಯನ್ನು ಮಿಸ್ ಮಾಡಿಕೊಂಡು ಬಿಟ್ಟೆ ಎಂದು ಬೇಸರ ಆಗಬೇಕು ಎಂದು ಹೇಳಿ ರೆಡಿ ಮಾಡಿಸುತ್ತಾಳೆ.
ಇನ್ನು ರಾಜೇಶ್ವರಿ ಮಾತ್ರ ಹಳೆ ಚಾಳಿಯನ್ನು ಮುಂದುವರೆಸಿಕೊಂಡು ಹೋಗುತ್ತಾ ಇದ್ದಾಳೆ. ಬಂಗಾರಮ್ಮಗೆ ಕರೆ ಮಾಡಿ ನಿಮ್ಮ ಮನೆಯನ್ನು ಒಡೆಯಲು ಒಬ್ಬಾಕೆ ಬರುತ್ತಿದ್ದಾಳೆ, ಆಕೆ ನಿಮ್ಮ ಮಗನ ಜೀವನದಲ್ಲಿ ಬರಲು ನೋಡುತ್ತಾ ಇದ್ದಾಳೆ ಎಂದೆಲ್ಲ ಹೇಳಿ ಬಂಗಾರಮ್ಮಗೆ ಆಟ ಆಡಿಸುತ್ತಾಳೆ. ಇದನ್ನು ನೋಡಿದ ಬಂಗಾರಮ್ಮಗೆ ಸಿಕ್ಕಾಪಟ್ಟೆ ಕೋಪ ಬೇಸರ ಆಗುತ್ತದೆ. ಮುರಳಿ ಸಹನಾಗೆ ಕರೆ ಮಾಡಿದಾಗ ಅದನ್ನು ಕೌಸಲ್ಯ ತೆಗೆದುಕೊಂಡು ಸಹನಾ ಮಲಗಿದ್ದಾಳೆ ಆಕೆಗೆ ತಲೆನೋವು ಎಂದಾಗ ಮುರಳಿ ಸರಿ ಎಂದು ಹೇಳಿ ಫೋನ್ ಇಡುತ್ತಾನೆ. ಸಹನಾ ಕೌಸಲ್ಯ ಹತ್ತಿರ ಇರುತ್ತಾಳೆ. ಸಹನಾಗೆ ಕೌಸಲ್ಯ ವರ್ತನೆ ಅದ್ಯಾಕೋ ಇಷ್ಟ ಆಗುವುದಿಲ್ಲ. ಅಳುತ್ತಾ ಕೌಸಲ್ಯಗೆ ಕಾಫಿ ತರಲು ಹೋಗುತ್ತಾಳೆ. ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











